ಅಂಗವಿಕಲತೆ ಕುರಿತು ಅರಿವು ಜಾಥಾ

ಅಂಗವಿಕಲತೆ ಕುರಿತು ಅರಿವು ಜಾಥಾ

ಅಂಗವಿಕಲತೆ ಕುರಿತು ಅರಿವು ಜಾಥಾ


ಕೋಲಾರ: ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ, ವಾಕ್ ಮತ್ತು ಶ್ರವಣ ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು, ವಾಕ್ ಮತ್ತು ಶ್ರವಣ ಸಂಬAಧ ಪಟ್ಟ ದೋಷಗಳ ಕುರಿತು ಪಾದಯಾತ್ರೆ ಮತ್ತು ಭಿತ್ತಿಪತ್ರಗಳನ್ನು ಹಂಚುವ ಮೂಲಕ ಅರಿವು ಮೂಡಿಸಿದರು. 
ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲೆಯ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಮುನಿರಾಜಪ್ಪ ಮತು ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಸಿ.ಡಿ ದಯಾನಂದರವರು ಚಾಲನೆ ನೀಡಿದರು. ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥರಾದ ಡಾ. ಎಮ್. ಜಯರಾಮ್ ಮತ್ತು ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಪ್ರೊ. ಸಾರುಲತರವರು ಭಾಗಿಯಾಗಿದ್ದರು. 
 ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ವಾಕ್ ಮತ್ತು ಶ್ರವಣ ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು, ಕೋಲಾರ ಜಿಲ್ಲೆಯ ರಾಮಸಂದ್ರ ಗ್ರಾಮದ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರ ಸಭಾಂಗಣದಲ್ಲಿ, ಮಾತು ಮತ್ತು ಕಿವಿ ಸಮಸ್ಯೆಗಳು ಹಾಗು ಅದರ ಚಿಕೆತ್ಸೆಯ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕವನ್ನು ಪ್ರದರ್ಶಿಸಿದರು.