ವ್ಯಕ್ತಿ-ವ್ಯಕ್ತಿತ್ವ ಡಾ.ಪ್ರಿಯಾಂಕ ಎಂ.ಜಿ. ಅಮೃತಾ ಪ್ರೀತಂ :ಬದುಕು-ಬರಹ ಮೈ ತೆನೂ ಫಿರ್ ಮಿಲೇಂಗಿ...  ನಾ ನಿನಗೆ ಮತ್ತೆ ಸಿಗುವೆ...

ವ್ಯಕ್ತಿ-ವ್ಯಕ್ತಿತ್ವ  ಡಾ.ಪ್ರಿಯಾಂಕ ಎಂ.ಜಿ.   ಅಮೃತಾ ಪ್ರೀತಂ :ಬದುಕು-ಬರಹ ಮೈ ತೆನೂ ಫಿರ್ ಮಿಲೇಂಗಿ...  ನಾ ನಿನಗೆ ಮತ್ತೆ ಸಿಗುವೆ...

ವ್ಯಕ್ತಿ-ವ್ಯಕ್ತಿತ್ವ

ಡಾ.ಪ್ರಿಯಾಂಕ ಎಂ.ಜಿ.

ಜೀವನವೆAದರೆ ಪ್ರೀತಿಯ ಹುಡುಕಾಟ! ನಿರಂತರ ಅನ್ವೇಷಣೆ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್ ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಇಲ್ಲಿ ಸಾಹಿರ್ ಯಾರು ಅಂತ ನಿಮಗೆ ಇನ್ನೂ ಸ್ಪಷ್ಟವಾಗಿ ಹೇಳೋದಾದರೆ, ಬಾಲಿವುಡ್‌ನಲ್ಲಿ 1976ರಲ್ಲಿ ಬಿಡುಗಡೆಯಾದ ಕಭೀ ಕಭೀ ಸಿನೆಮಾದಲ್ಲಿ ಬರುವ ಬಹಳ ಪ್ರಸಿದ್ಧವಾದ ಹಾಡು ಕಭೀ ಕಭೀ ಮೆರೆ ದಿಲ ಮೇ ಖಯಾಲು ಆತಾಹೇ.. ಈ ಹಾಡಿನ ಕವಿಯೇ ಈ ನಮ್ಮ ಸಾಹಿರ್ ಲೂಧಿಯಾನ್ವಿ. ಮುಂದೆ ಇದೇ ಕಾರಣಕ್ಕೆ ಪತಿ ಪ್ರೀತಂ ಸಿಂಗ್ ಅವರೊಂದಿಗೆ ಅಮೃತಾರ ಮನಸ್ಸು ಬೆಸಗೊಳ್ಳಲೇ ಇಲ್ಲ.


ಅಮೃತಾ ಪ್ರೀತಂ :ಬದುಕು-ಬರಹ
ಮೈ ತೆನೂ ಫಿರ್ ಮಿಲೇಂಗಿ... 
ನಾ ನಿನಗೆ ಮತ್ತೆ ಸಿಗುವೆ...


 ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು, ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ, ನಾ ಯಾವ ಸ್ವರೂಪದಲ್ಲಾದರೂ ಮತ್ತೆ ಸಿಗುವೆ’ ಎಂದು ತಮ್ಮ ಸಂಗಾತಿ ಇಮ್ರೋಜ್‌ರಿಗೆ ಮಾತು ಕೊಟ್ಟು ಹೋದ ಅಮೃತಾ ಹೆಸರು ಯಾರಿಗೆ ಗೊತ್ತಿಲ್ಲ! ಅಮೃತಾ ಪ್ರೀತಂ 20ನೇ ಶತಮಾನದ ಸಂವೇದನಾಶೀಲ ಮತ್ತು ದೇಶದ ಬಹುಸಮ್ಮಾನಿತ ಖ್ಯಾತ ಕವಿ. ಅಮೃತಾ ಏಕಕಾಲಕ್ಕೆ ಭಾರತದ ಶ್ರೇಷ್ಠ ಕವಯತ್ರಿ, ಕಾದಂಬರಿಕಾರ್ತಿ, ಕತೆಗಾರ್ತಿಯಾಗಿ, ಅನುವಾದಕಿ, ಸಂಪಾದಕಿ, ಚಿಂತಕಿ, ಹಾಗೂ ಪಂಜಾಬಿ-ಹಿAದೀ ಸಾಹಿತ್ಯಲೋಕದಲ್ಲಿ ಅಮೃತಾ ಪ್ರೀತಂ ಅಗ್ರಗಣ್ಯರು. ಅವರ ಸಾಹಿತ್ಯ ಭಾರತೀಯ ಭಾಷೆಗಳಲ್ಲದೇ ವಿಶ್ವದ 34 ಭಾಷೆಗಳಿಗೆ ಅನುವಾದಗೊಂಡಿವೆ. 100ಕ್ಕೂ ಹೆಚ್ಚು ಕವನ ಸಂಕಲನಗಳು ಹೊರ ಬಂದಿವೆ. ಅವರ ಕಾದಂಬರಿ, ಕಥೆಯನ್ನಾಧರಿಸಿದ ಅನೇಕ ಚಲನಚಿತ್ರಗಳು, ಟಿವಿ ಸೀರಿಯಲ್‌ಗಳು ವಿಶಿಷ್ಟವಾಗಿದೆ. ಅವರ ಮನೆ ಸದಾಕಾಲ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಕೇಂದ್ರವಾಗಿತ್ತು ಎಂದು ಪಂಜಾಬಿ ಲೇಖಕ ಸುತಿಂದರ್ ಸಿಂಗ್ ನೂರ್ ಉಲ್ಲೇಖಿಸುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಪಡೆದ ಪಂಜಾಬಿನ ಮೊದಲ ಬರಹಗಾರ್ತಿ. ಭಾರತ ಹಾಗೂ ಪಾಕಿಸ್ತಾನದ ಸರಹದ್ದಿನಾಚೆ, ಸಪ್ತಸಾಗರದಾಚೆಗೂ, ಸಮಾನವಾಗಿ ಅಪಾರ ಮೆಚ್ಚುಗೆಯನ್ನು, ಕೀರ್ತಿ-ಗೌರವಗಳನ್ನು ಪಡೆದವರು. 
ಅಮೃತಾ ಬದುಕು:
 ಸ್ವಾತಂತ್ರö್ಯ ಪೂರ್ವದ ಪಂಜಾಬಿನ ಗುಜರನ್‌ವಾಲಾದಲ್ಲಿ ಆಗಸ್ಟ್ 31, 1919ರಲ್ಲಿ ಹುಟ್ಟಿದ ಅಮೃತಾ ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡರು. ತಂದೆ ನಂದ್ ಸಾಧೂ (ಕರತಾರ್ ಸಿಂಗ್) ಸ್ವತಃ ಕವಿಯಾಗಿದ್ದು ಮಗಳಿಗೂ ಕವಿತೆ ಕಟ್ಟಲು ಪ್ರೋತ್ಸಾಹಿಸಿದ್ದರಂತೆ. ನಂದ ಸಾಧು ಅವರು ಕಟ್ಟಾ ಸಾಂಪ್ರದಾಯಿಕ ಹಾಗೂ ಧಾರ್ಮಿಕ ನಿಗರಾನಿಯಲ್ಲಿ ತುಂಬಾ ಕಟ್ಟುನಿಟ್ಟಿನಲ್ಲಿ ಬಾಲ್ಯ ಕಳೆದ ಅಮೃತಾ ಮುಂದೆ ತಮ್ಮ ಬದುಕನ್ನು ಯಾವುದೇ ಧಾರ್ಮಿಕ ಕಟ್ಟುಪಾಡುಗಳಲ್ಲಿ ಕಟ್ಟಿಹಾಕಿಕೊಳ್ಳದೇ ತನಗೆ ಒಳಿತೆನಿಸಿದ ಅಸಾಂಪ್ರದಾಯಿಕ ಹಾದಿಯನ್ನು ಆರಿಸಿಕೊಂಡಿದ್ದು ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ. 
 ಅಂದಿನ ಸ್ವಾತಂತ್ರö್ಯ ಪೂರ್ವದ ಹಾಗೂ ಸ್ವಾತಂತ್ರೊö್ಯÃತ್ತರದ ವಿಭಜನೆಯ ಕರಾಳ ಹಿಂಸಾಚಾರದ ಇತಿಹಾಸ ಅಮೃತಾ ಪ್ರೀತಮ್ ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತ್ತು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರು ಹಿಂದುಳಿದಿದ್ದ, ತೀರಾ ಕಟ್ಟುಪಾಡುಗಳಿದ್ದ ಕಾಲಘಟ್ಟದಲ್ಲಿ ಅಮೃತಾರ ಬದುಕು ಬಾಲ್ಯದಿಂದಲೂ ಸಂಘರ್ಷಮಯವಾಗಿದ್ದು, ಮುಂದೆ ಆಕೆಗೆ ಬದುಕೇ ಬಹಳಷ್ಟನ್ನು ಕಲಿಸಿತು. ಇಷ್ಟವಿಲ್ಲದ್ದನ್ನು ಪ್ರತಿಭಟಿಸುವ, ಬೇಡದ್ದನ್ನು ಪ್ರತಿರೋಧಿಸುವ ಹಾಗೂ ತನ್ನದೇ ಶರತ್ತು, ಸಿದ್ಧಾಂತಗಳ ಮೇಲೆ ಇಚ್ಛಿತ ಬದುಕನ್ನು ರೂಪಿಸಿಕೊಳ್ಳುವ ಆತ್ಮಸ್ಥೆöÊರ್ಯ ಆಕೆಯದು.
 ಜೀವನವೆಂದರೆ ಪ್ರೀತಿಯ ಹುಡುಕಾಟ! ನಿರಂತರ ಅನ್ವೇಷಣೆ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್ ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಇಲ್ಲಿ ಸಾಹಿರ್ ಯಾರು ಅಂತ ನಿಮಗೆ ಇನ್ನೂ ಸ್ಪಷ್ಟವಾಗಿ ಹೇಳೋದಾದರೆ, ಬಾಲಿವುಡ್‌ನಲ್ಲಿ 1976ರಲ್ಲಿ ಬಿಡುಗಡೆಯಾದ ಕಭೀ ಕಭೀ ಸಿನೆಮಾದಲ್ಲಿ ಬರುವ ಬಹಳ ಪ್ರಸಿದ್ಧವಾದ ಹಾಡು ಕಭೀ ಕಭೀ ಮೆರೆ ದಿಲ ಮೇ ಖಯಾಲು ಆತಾಹೇ.. ಈ ಹಾಡಿನ ಕವಿಯೇ ಈ ನಮ್ಮ ಸಾಹಿರ್ ಲೂಧಿಯಾನ್ವಿ. ಮುಂದೆ ಇದೇ ಕಾರಣಕ್ಕೆ ಪತಿ ಪ್ರೀತಂ ಸಿಂಗ್ ಅವರೊಂದಿಗೆ ಅಮೃತಾರ ಮನಸ್ಸು ಬೆಸಗೊಳ್ಳಲೇ ಇಲ್ಲ.
 ತಾನು ಹುಟ್ಟಿದ್ದ ಹಳ್ಳಿಗಳ ಅಂದಿನ ವಾಸ್ತವ ಚಿತ್ರಣವನ್ನು ಹೇಳುತ್ತಲೇ ಒಮ್ಮೆ ಅಮೃತಾ ಲಾಹೋರ್‌ನ ಕವಿಗೋಷ್ಠಿಯಲ್ಲಿ ಮೊದಲ ಬಾರಿಗೆ ತನ್ನ ಜೀವನದ ಮೊದಲ ಪ್ರೇಮದ ಮಳೆಹನಿ ಸಾಹಿರ್‌ನನ್ನು ಭೇಟಿಯಾಗಿದ್ದನ್ನು ಅಲ್ಲಿ ಹೇಳಿಕೊಳ್ಳುತ್ತಾರೆ. ಸಾಹಿರ್ ಜೊತೆಗಿನ ತನ್ನ ಓಡಾಟ-ಒಡನಾಟವನ್ನು ಕೆಲವೊಮ್ಮೆ ಉತ್ಸಾಹದಿಂದ, ಕೆಲವೊಮ್ಮೆ ಖುಷಿಯಿಂದ, ಕೆಲವೊಮ್ಮೆ ಗಂಭೀರದ ಧ್ವನಿಯಲ್ಲಿ ಮತ್ತೂ ಕೆಲವೊಮ್ಮೆ ವಿಷಾದದ ಛಾಯೆಯಲ್ಲಿ ಹೇಳುತ್ತಲ್ಲೇ, ಸಾಹಿರ್ ಅನ್ನುವ ಗಾಢ ಮೌನದೊಂದಿಗೆ ತಾನು ನಿರಂತರ ಸಂಭಾಷಣೆ ನಡೆಸಿದ್ದನ್ನು ಅಮೃತಾ ಹೇಳಿಕೊಳ್ಳುತ್ತಾರೆ.
 ಮುಂದೆ ಅಮೃತಾರ ಜೀವನಕ್ಕೆ ಹೊಸ ಪುಟಗಳನ್ನು ಬರೆದ ಉರ್ದು ಪತ್ರಿಕೆ “ಶಮಾ”ದಲ್ಲಿ ವಿನ್ಯಾಸಕರಾಗಿದ್ದ ಇಮರೋಜ್ ಪಟೇಲ್ ನಗರದಲ್ಲಿ ಅಮೃತಾ ಮನೆ ಹತ್ತಿರವೇ ಒಂದು ಬಾಡಿಗೆ ಕೋಣೆಯಲ್ಲಿರುತ್ತಿದ್ದರು. ಅಮೃತಾ ಪತಿ ಪ್ರೀತಂ ಸಿಂಗ್‌ರೊAದಿಗೆ ಇದ್ದಾಗಲೂ ಕೂಡ ಅಮೃತಾ ಅವರ ಮಕ್ಕಳನ್ನು ಇಮರೋಜ್ ತಾವೇ ಸ್ಕೂಲ್ ಬಿಟ್ಟ ನಂತರ ತಮ್ಮ ಕಚೇರಿಯಿಂದ ಹೋಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಮನೆಗೆ ತಂದು ಬಿಡುತ್ತಿದ್ದರಂತೆ. ಅವರಿಗೆ ಯಾರೂ ನೀನು ಕೆಲಸವಹಿಸಿಕೋ ಎಂದು ಹೇಳಲಿಲ್ಲ. ಅವರೇ ಖುದ್ದಾಗಿ ಮಕ್ಕಳನ್ನು ಕರೆತರುವ ಕೆಲಸವನ್ನು ತುಂಬಾ ಪ್ರೀತಿಯಿಂದ ಮಾಡುತ್ತಿದ್ದರು. ಅಲ್ಲಿಯವರೆಗೂ ಅಮೃತಾ ತಾವೇ ಅಡುಗೆ ಮಾಡತೊಡಗಿದರು. ಇಮರೋಜ್ ಮಕ್ಕಳನ್ನು ಬಿಟ್ಟು ಕಚೇರಿಗೆ ಹೋಗುತ್ತಿದ್ದರಂತೆ. ಆಗೆಲ್ಲ ಅಮೃತಾ ಆಗ್ರಹಪಡಿಸಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದರಂತೆ. 
 ಒಮ್ಮೊಮ್ಮೆ ಪ್ರೀತಂ ಸಿಂಗರೂ ‘ನಿನ್ನಿಂದಾಗಿ ಅಮೃತಾ ಕೈ ಊಟ ಸಿಗುತ್ತಿದೆ, ಊಟ ಮಾಡು’ ಎನ್ನುತ್ತಿದ್ದರಂತೆ. ಪ್ರೀತಂ ಸಿಂಗ್ ಕೊನೆಗಾಲದಲ್ಲಿ ತುಂಬಾ ಅನಾರೋಗ್ಯದಲ್ಲಿದ್ದಾಗ ಅಮೃತಾ ಮತ್ತು ಇಮರೋಜ್ ಅವರನ್ನು ತಮ್ಮ ಹೌಸ್‌ಖಾಸ್ ಮನೆಗೆ ಕರೆತಂದು ಆರೈಕೆ ಮಾಡಿದ್ದನ್ನು ಇಮರೋಜ್ ಈಗಲೂ ನೆನಪಿಸಿಕೊಳ್ಳತ್ತಾರೆ. ಇಮರೋಜ್ ನಗರದಲ್ಲಿದ್ದಾಗ ಅಮೃತಾ ಆಗ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದರು. ಸಂಬಳ ಕೇವಲ 5 ರೂಪಾಯಿ! ಆಗಲೂ ಇಮರೋಜ್ ಅವರೇ ಸ್ಕೂಟರಿನಲ್ಲಿ ಅವರನ್ನು ಆಕಾಶವಾಣಿಗೆ ಬಿಡುತ್ತಿದ್ದರು. 
 ಭಾರತದ ವಿಭಜನೆಯ ನಂತರ ಪಂಜಾಬಿನಿAದ ದೆಹಲಿಗೆ ವಲಸೆ ಬಂದ ನಿರಾಶ್ರಿತರಿಗೆ ಸರ್ಕಾರದಿಂದ ನೂರು ಗಜದ ಭೂಮಿ ಹಂಚಿಕೆಯಾಗುತ್ತಿತ್ತು. ಅಮೃತಾ ಮತ್ತು ಇಮರೋಜ್ ತಮ್ಮಲ್ಲಿದ್ದ ಹಣ ಹೂಡಿ ಕೆ-25, ಹೌಸ್ ಖಾಸಿನ ಮನೆ ಕಟ್ಟಿಕೊಂಡರು. ಕೆಳಗಿನ ಮಜಲು ಮಕ್ಕಳಿಗೆ, ಮೇಲಿನ ಮಜಲಿನಲ್ಲಿ ಅಮೃತಾ ಹಾಗೂ ಇಮರೋಜರಿಗೆ ಪ್ರತ್ಯೇಕ ಕೋಣೆಗಳು. ಮನೆಯ ಒಳವಿನ್ಯಾಸ, ಹೊರ ವಿನ್ಯಾಸ, ಹೆಸರಿನ ಕ್ಯಾಲಿಗ್ರಫೀ ಬರಹ ಎಲ್ಲ ಇಮರೋಜ್ ತಾವೇ ಬರೆದಿದ್ದರು. ಕೆ-25 ಇಬ್ಬರೂ ಕಟ್ಟಿದ ಪ್ರೀತಿಯ ಗೂಡು. ಇಬ್ಬರೂ ಸೇರಿ ಪಾರಿಜಾತದ ಮರವನ್ನು ನೆಟ್ಟರು. ಶರದೃತುವಿನ ಮುಂಜಾವಿನಲ್ಲಿ ತಟ್ಟೆ ತುಂಬಾ ಪಾರಿಜಾತ ಆರಿಸಿ ತಂದು ಅಮೃತಾಳ ಮೇಜಿನ ಮೇಲಿಡುತ್ತಿದ್ದರು ಇಮರೋಜ್. ಆ ಮನೆಯ ಫಲಕವನ್ನು ಇಮರೋಜ್ ಯೇ ಮೈ-ಔರ್ ಯೇ ತೂ, ಔರ್ ಬೀಚ್ ಮೇ ಸಪನಾ... ಎಂದು ಬರೆದಿರುತ್ತಾರೆೆ.
 ಅಮೃತಾ ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗ ಸಾಹಿತ್ಯಿಕ ವಲಯದಲ್ಲಿ ಅವರ ಬಗ್ಗೆ ಕೆಟ್ಟ ಪ್ರಚಾರಗಳು, ಫಲಿಸದ ಸಾಹಿರ್ ಪ್ರೇಮ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದರೂ ಇಮರೋಜ್ ಯಾವುದಕ್ಕೂ ಬೆಲೆ ಕೊಡದೇ ಬೆನ್ನಿಗೆ ಹಿಮಾಲಯದಂತೆ ಅಚಲವಾಗಿ ನಿಂತಿದ್ದರು. ಇಮರೋಜ್ ಆಸರೆಯೊಂದು ಇರದಿದ್ದರೆ ಅಮೃತಾ ಯಾವತ್ತೋ ಚೂರುಚೂರಾಗಿರುತ್ತಿದ್ದರು ಅನ್ನಿಸುತ್ತೆ. ನಿಜಕ್ಕೂ ಆಕೆ ಅದೃಷ್ಟವಂತೆ. 
 ವಿಭಜನೆಯ ನಂತರ ಅಮೃತಾ, ಪ್ರೀತಂ ಸಿಂಗ್ ಜೊತೆಗೆ ಮದುವೆಯಾಗಿ ದೆಹಲಿಯಲ್ಲಿ ವಾಸವಿರುತ್ತಾರೆ. ಆಗ ಅವರಿಗೆ ಇಬ್ಬರು ಮಕ್ಕಳಿರುತ್ತಾರೆ. ಸಾಹಿರ್ ಕೂಡ ಮುಂಬೈಗೆ ವಲಸೆ ಬರುತ್ತಾರೆ. ಪ್ರೀತಂ ಸಿಂಗ್ ಜೊತೆ ಮದುವೆಯಾದ ನಂತರ ಮತ್ತೆ ಸಾಹಿರ್ ಭೇಟಿಯಾಗುತ್ತದೆ. ತನ್ನ ಗರ್ಭಿಣಿಯಾಗಿದ್ದ ದಿನಗಳಲ್ಲಿ ನೆನಸಿಕೊಂಡು ಗುರುನಾನಕರ ತಾಯಿ ತೃಪ್ತಾ ದೇವಿ 9 ತಿಂಗಳ ಅವಧಿಯನ್ನು 9 ಸುಂದರ ಕನಸುಗಳಂತೆ ಅನುಭವಿಸಿದ್ದನ್ನು ತಾನೂ ಅನುಭವಿಸಿ ಬರೆಯುತ್ತಾರೆ. ಗರ್ಭಿಣಿಯಾಗಿದ್ದಾಗ ಸಾಹಿರ್ ಮುಖವನ್ನೇ ನೆನಪಿಸಿಕೊಂಡು ಅವನಂತಹದ್ದೇ ಮಗ ಹುಟ್ಟಲಿ ಅಂತ ಅಮೃತಾ ಆಸೆಪಡುತ್ತಾರೆ. ಒಮ್ಮೆ ಅಮೃತಾ ಮಗ ನವರಾಜ್ ತಾಯಿಯನ್ನು ಕೇಳಿದನಂತೆ... ‘ಮಮ್ಮಾ...ನಾನು ಸಾಹಿರ್ ಅಂಕಲ್ ಮಗನಾ?’ ಎಂದು. ಅಮೃತಾ ಶಾಂತವಾಗಿ ಹೇಳಿದರಂತೆ, ‘ಇಲ್ಲಾ... ಆಗಿದ್ದರೆ ಚೆನ್ನಾಗಿತ್ತು!’ ಎಂದು. ಹೀಗಿದ್ದರೂ ಅಮೃತಾ ಸಾಹಿರ್ ಜತೆಗಿನ ಪ್ರೇಮವನ್ನು ಬಚ್ಚಿಡಲಿಲ್ಲ. ತನ್ನ ಮಗು ಗರ್ಭದಲ್ಲಿದ್ದಾಗಲು ಕೂಡ ಅದು ಸಾಹಿರ್‌ನನನ್ನೇ ಹೋಲಲಿ ಎಂದು ಬಯಸಿದ ಅಪ್ಪಟ ಪ್ರೇಮಿ. ಯಾವತ್ತೂ ಆಕೆ ಸುಳ್ಳನ್ನು ಬದುಕಲಿಲ್ಲ. 
 ಅಮೃತಾ ಹುಟ್ಟಾ ಬಂಡಾಯಗರ್ತಿ, ಆಕೆ ಹನ್ನೊಂದು ವರ್ಷವಿದ್ದಾಗಲೇ ತಾಯಿ ತೀರಿಕೊಳ್ಳುತ್ತಾರೆ. ಆಕೆಯ ತಂದೆ ಕರ್ತಾರ್ ಸಿಂಗ್ ಹಿತಕಾರಿ ಸ್ವತಃ ಕವಿ. ಗುರುದ್ವಾರದಲ್ಲಿ ಧಾರ್ಮಿಕ ಗುರು. ಕಟ್ಟಾ ಸಾಂಪ್ರದಾಯಿಕ ವಾತಾವರಣದಲ್ಲಿ ಅಮೃತಾ ಬೆಳೆದರೂ ಹಿಂದೂ-ಮುಸ್ಲಿA ಭೇದಭಾವದ ವಿರುದ್ಧ ಪ್ರತಿಭಟನೆಯನ್ನು ತಮ್ಮ ಮನೆಯಿಂದಲೇ ಅರಂಭಿಸುತ್ತಾರೆ. ಆಕೆ ಚಿಕ್ಕವಳಿದ್ದಾಗಿನ ಒಂದು ಘಟನೆಯನ್ನು ‘ರಸೀದಿ ಟಿಕೇಟ್’ನಲ್ಲಿ ಹೇಳುತ್ತಾರೆ. ಅಮೃತಾ ಮನೆಯಲ್ಲಿ ಬಹಳಷ್ಟು ಸ್ಟೀಲ್ ಗ್ಲಾಸುಗಳನ್ನು ಅಜ್ಜಿ ತೊಳೆದು, ಒರೆಸಿ ಶೆಲ್ಫಿನ ಮೇಲೆ ಜೋಡಿಸಿದ್ದರಂತೆ. ಮೂರು ಗ್ಲಾಸುಗಳು ಮಾತ್ರ ಅಡುಗೆಕೋಣೆಯ ಹೊರಗೆ ಅನಾಥ ಮಕ್ಕಳಂತೆ ಕೂತಿರುತ್ತಿದ್ದವು. ಪುಟ್ಟ ಹುಡಿಗಿ ಅಮೃತಾ ಅಜ್ಜಿಗೆ ಕೇಳುತ್ತಾಳೆ, ‘ಈ ಮೂರು ಗ್ಲಾಸುಗಳನ್ನು ಇಲ್ಯಾಕೆ ಇಡ್ತಿದ್ದೀ, ಅವೇಕೆ ಒಳಗಿಲ್ಲ?’ ಅಂತಾ. ಅಜ್ಜಿ ಹೇಳುತ್ತಾಳೆ, ‘ಇವು ಮನೆಗೆ ಬರುವ ಮುಸ್ಲಿಮರಿಗೆ ಚಹ ಮತ್ತು ಲಸ್ಸಿ ಕುಡಿಯಲು ಕೊಡೋಕೆ ಇಟ್ಟದ್ದು...’ ಅಂತ. ಆ ಮಾತು ಅಮೃತಾರಿಗೆ ಚೂರು ಹಿಡಿಸಲಿಲ್ಲ. ಆಕೆ ಅಜ್ಜಿಯೊಂದಿಗೆ ಜಗಳ ಕಾದು, ಉಪವಾಸ ಹೂಡಿ, ಮನೆಯಲ್ಲಿ ‘ಹಿಂದೂ’ ಗ್ಲಾಸು, ‘ಮುಸ್ಲಿಂ’ ಗ್ಲಾಸು ಅಂತ ಬೇರೆ ಬೇರೆ ಇರಕೂಡದು ಎಂದು ಹಠ ಹಿಡಿಯುತ್ತಾರೆ. ಕೊನೆಗೆ ಅಜ್ಜಿ ಸೋತು, ಮೊಮ್ಮಗಳು ಗೆಲ್ಲುತ್ತಾಳೆ. ಆಗ ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ ಅಜ್ಜಿಗೇನು ಸ್ವತಃ ಅಮೃತಾಗೆ ಗೊತ್ತಿರಲಿಕ್ಕಿಲ್ಲ ಮುಂದೊAದು ದಿನ ಆಕೆ ಮುಸ್ಲಿಂ ಒಬ್ಬನ ಪ್ರೇಮದಲ್ಲಿ ಸಿಲುಕುತ್ತಾಳೆಂದು. 
 ಆ ಪ್ರೀತಿಗೆ ಪುಷ್ಟಿಕೊಡುವಂತೆ ಮತ್ತು ಆ ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ ಅಮೃತಾ ಸಾಹಿರ್ ಸೇದಿ ಬಿಟ್ಟ ಸಿಗರೇಟ್ ತುಂಡುಗಳನ್ನು ಎತ್ತಿಟ್ಟುಕೊಂಡು ತಮ್ಮ ಏಕಾಂತದಲ್ಲಿ ಕೂತು ಆ ತುಂಡುಗಳನ್ನು ಸೇದುತ್ತಿದ್ದರಂತೆ. ಸಾಹಿರ್ ಮಿತಭಾಷಿ. ಗಂಟೆಗಟ್ಟಲೆ ಇಬ್ಬರೂ ಮಾತಿಲ್ಲದೇ ಮೌನದಲ್ಲಿ ಕೂತಿರುತ್ತಿದ್ದರಂತೆ. ಅಮೃತಾ ‘ಮಾತಾಡು ಮಾತಾಡು’ ಎಂದರೂ ಹೆಚ್ಚು ಮಾತಾಡುತ್ತಿರಲಿಲ್ಲವಂತೆ. ‘ರೋಶನೀ ಮೇ ಮೈ ಬಾತ್ ನಹೀ ಕರ್ ಸಕತಾ’ ಅಂತಿದ್ದರAತೆ. ಆಗ ಅಮೃತಾ ರೋಸಿಹೋಗಿ ‘ಈ ಸೂರ್ಯನನ್ನೇ ಬಚ್ಚಿಡಬೇಕು ಆಗಲಾದರೂ ನೀನು ಮಾತನಾಡುತ್ತೀ’ ಅನ್ನೋ ಪದ್ಯ ಬರೆದಿದ್ದರು. ಸಾಹಿರ್‌ಗಾಗಿ ಬಹಳಷ್ಟು ಪದ್ಯಗಳನ್ನು ಬರೆದರು. ನೋವು-ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು. 
(ಮುಂದಿನ ಸಂಚಿಕೆಯಲ್ಲಿ: ಅಮೃತಾ ಬರಹ)
ಫೋಟೋ ಶರ‍್ಷಿಕೆ
1969ರಲ್ಲಿ ಅಮೃತಾ ಪ್ರೀತಂ ಇಮರೋಜ್ ಜೊತೆ, ಒಂದು ಅಪರೂಪದ ಫೋಟೋ (ಛಾಯಾಗ್ರಾಹಕ: ರವೀಂದರ್ ರವಿ)