ಸೇವಾ ಮನೋಭಾವ ಇರುವವರು ಮಾತ್ರ ರಾಜಕಾರಣದಲ್ಲಿ ಇರಬೇಕು: ಅನಿಲ್‌ಕುಮಾರ್

anilkumar-service-oriented-people-should-come-to-politics

ಸೇವಾ ಮನೋಭಾವ ಇರುವವರು ಮಾತ್ರ ರಾಜಕಾರಣದಲ್ಲಿ ಇರಬೇಕು: ಅನಿಲ್‌ಕುಮಾರ್

ಸೇವಾ ಮನೋಭಾವ ಇರುವವರು ಮಾತ್ರ ರಾಜಕಾರಣದಲ್ಲಿ ಇರಬೇಕು: ಅನಿಲ್‌ಕುಮಾರ್


ಕೋಲಾರ: ರಾಜಕಾರಣ ಎಂದರೇ ಸೇವೆ, ಸೇವಾ ಮನೋಭಾವ ಇರುವವರು ಮಾತ್ರ ರಾಜಕಾರಣದಲ್ಲಿ ಇರಬೇಕು, ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಕಲುಷಿತ ರಾಜಕಾರಣ ಸೃಷ್ಠಿಯಾಗಿತ್ತು, ಮೊದನೇ ಸೃಷ್ಟಿಕರ್ತರು ನಮ್ಮ ಹಿರಿಯ ಮುಖಂಡರು ಎರಡನೇ ಸೃಷ್ಠಿಕರ್ತ ನಾನೇ ಎಂದು ಎಂ.ಎಲ್.ಸಿ. ಎಂ.ಎಲ್.ಅನಿಲ್‌ಕುಮಾರ್ ತಿಳಿಸಿದರು.


ತಾಲ್ಲೂಕಿನ ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ನೀಡುವ ಆಮಿಷಕ್ಕೆ ನಾವೇಲ್ಲರು ಮಾರುಹೋಗಿ ರಾಜಕಾರಣವನ್ನು ವ್ಯಾಪಾರಕ್ಕೆ ಬಳಸುವವರನ್ನ, ರಾಜಕೀಯ ಮೌಲ್ಯಗಳು ಇಲ್ಲದವರನ್ನು, ನಮ್ಮ ಪತ್ರಿನಿಧಿಗಳಾಗಿ ಆಯ್ಕೆ ಮಾಡಿದರೇ ಜಾತಿಗಳ ಮಧ್ಯೆ ಸಂಘರ್ಷ ಉಂಟಾಗುತ್ತದೆ, ನಮ್ಮ ಖನಿಜ ಸಂಪತ್ತು ನಾಶವಾಗುತ್ತದೆ, ಅವರು ಹಾಕಿದ ಬಂಡವಾಳ ಹತ್ತು ಪಟ್ಟು ಹೆಚ್ಚಿಸಿಕೊಳ್ಳುತ್ತಾರೆ ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಯಾರು ಸಾರ್ವಜನಿಕ ಜೀವನದಲ್ಲಿ ಶುದ್ಧವಾಗಿರುತ್ತಾರೆ, ಸಾರ್ವಜನಿಕರ ಧ್ವನಿಯಾಗಿ ಕೆಲಸಮಾಡುತ್ತಾರೆ, ಜಾತ್ಯಾತೀತ ಧರ್ಮವನ್ನು ಇಟ್ಟುಕೊಂಡಿದ್ದಾರೆ ಅಂತಹ ಪ್ರಾಮಾಣಿಕÀ ಸ್ಥಳೀಯ ಜನಪರ ವ್ಯಕ್ತಿಯನ್ನು ನಾವು ಆಯ್ಕೆಮಾಡಬೇಕಿದೆ ಎಂದರು.


ನಾನು ಯಾವ ಮುಖಂಡರ ಹೆಸರನ್ನು ಹೇಳುತ್ತಿಲ್ಲಾ, ರಾಜಕಾರಣ ಹೇಗೆ ಮಾಡಬೇಕೆಂದು ಹೇಳುತ್ತಿದ್ದೇನೆ ಅಷ್ಟೆ, ಕಲುಷಿತ ರಾಜಕಾರಣ ಸೃಷ್ಠಿಯಾಗಲು ನಾನೇ ಕಾರಣವಾಗಿದ್ದೆ ಈಗ ತಮ್ಮ ತಪ್ಪನ್ನು ಸರಿ ಪಡಿಸಿಕೊಂಡಿದ್ದೇನೆ ಎಂದರು. ನನ್ನ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಶುದ್ಧ ರಾಜಕೀಯ ಮಾಡುತ್ತೇನೆ, ನನ್ನ ಗೆಲುವಿಗೆ ಕಾರಣರಾದ ಎಲ್ಲಾ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. 


ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ವಕ್ಕಲೇರಿ ಗ್ರಾಂ ಪಂ ಅಧ್ಯಕ್ಷ ಮಲ್ಲಾಂಡಹಳ್ಳಿ ಮುರಳಿ, ಯುವ ಮುಖಂಡ ನಂದಿನಿ ಪ್ರವೀಣ್‌ಗೌಡ, ದೊಡ್ಡ ಹಸಾಳ ಗ್ರಾಮ ಗ್ರಾಂ ಪಂ ಮಾಜಿ ಅಧ್ಯಕ್ಷ ಛತ್ರಕೊಡಿಹಳ್ಳಿ ಮಂಜುನಾಥ್, ತಾ.ಪಂ. ಸದಸ್ಯೆ ಸವಿತ ಮಂಜುನಾಥ್, ಮಾಜಿ ಕೋಮುಲ್ ನಿರ್ದೇಶಕ ರಾಮಕೃಷ್ಣೆಗೌಡ, ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಗೌಡ, ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ರಾಜೇಶ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಪಿಡಿಓ ಸಿ.ಆರ್.ಗೌಡ, ಸದಸ್ಯರಾದ ಚಲಪತಿ, ಮುನಿರಾಜು, ಮುನಿಶಾಮಪ್ಪ, ಜಗದೀಶ್, ಸುನಂದಮ್ಮ, ಗೌರಮ್ಮ, ಸರೋಜಮ್ಮ, ಕುಮಾರ್, ಮಮತ, ರಾಜೇಶ್ವರಿ, ರಾಜಣ್ಣ, ಆಂಜಮ್ಮ, ನಾರಾಯಣಸ್ವಾಮಿ, ಮುನಿರತ್ನಮ್ಮ, ಶೋಭ, ಲೀಲಾವತಿ, ಮುಖಂಡರಾದ ನುಕ್ಕನಹಳ್ಳಿ ಶ್ರೀನಿವಾಸ್ ಸೇರಿದಂತೆ ದೊಡ್ಡ ಹಸಾಳ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಹಾಜರಿದ್ದರು.