ನೌಕರರ ಸಂಘಕ್ಕೆ 15 ಮಂದಿ ನೂತನ ಪದಾಧಿಕಾರಿಗಳ ನೇಮಕ ವೇತನ ಆಯೋಗಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ-ಜಿ.ಸುರೇಶ್‌ಬಾಬು

g-sureshbabu-pay-commission-manavi

ನೌಕರರ ಸಂಘಕ್ಕೆ 15 ಮಂದಿ ನೂತನ ಪದಾಧಿಕಾರಿಗಳ ನೇಮಕ ವೇತನ ಆಯೋಗಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ-ಜಿ.ಸುರೇಶ್‌ಬಾಬು

ನೌಕರರ ಸಂಘಕ್ಕೆ 15 ಮಂದಿ ನೂತನ ಪದಾಧಿಕಾರಿಗಳ ನೇಮಕ
ವೇತನ ಆಯೋಗಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ-ಜಿ.ಸುರೇಶ್‌ಬಾಬು

ಕೋಲಾರ: ವೇತನ ಆಯೋಗ ರಚನೆ, ಕೇಂದ್ರ ಸಮಾನ ವೇತನ, ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ರಾಜ್ಯ ಸಂಘದ ನಿರ್ದೇಶನದಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಡ ಹಾಕಲು ಪದಾಧಿಕಾರಿಗಳು ಕ್ರಮವಹಿಸಿ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಕರೆ ನೀಡಿದರು.


ಜಿಲ್ಲಾ ನೌಕರರ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘಕ್ಕೆ ನೂತನವಾಗಿ ನೇಮಕಗೊಂಡ 15 ಮಂದಿ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.


ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಅಂತಹವರಿಗೆ ತಕ್ಕ ಉತ್ತರ ನೀಡಿದ್ದೇವೆ, ನೌಕರರ ಹಿತ ರಕ್ಷಣೆಯೇ ಪದಾಧಿಕಾರಿಗಳ ಮೂಲ ಉದ್ದೇಶವಾಗಿರಲಿ ಎಂದ ಅವರು, ಸಂಘ ನೀಡುವ ಕರೆಗೆ ಎಂತಹ ಹೋರಾಟಕ್ಕೂ ಸಿದ್ದರಿರುವಂತೆ ಮನವಿ ಮಾಡಿದರು.
ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ಪ್ರಮುಖ ಬೇಡಿಕೆಗಳ ಕುರಿತು ನಿಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳ ಮೂಲಕವೂ ಒತ್ತಡ ತನ್ನಿ ಎಂದು ಸೂಚಿಸಿದ್ದು, ಅದರಂತೆ ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಭೇಟಿಯಾಗಿ ಮನವಿ ಸಲ್ಲಿಸೋಣ ಎಂದರು.


ಇದೇ ಸಂದರ್ಭದಲ್ಲಿ ನೌಕರರ ಭವನ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಒದಗಿಸಲು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸೋಣ, ಒಟ್ಟಾರೆಯಾಗಿ ಶೀಘ್ರ ಭವನ ನಿರ್ಮಿಸುವ ಗುರಿ ನಮ್ಮದಾಗಿದೆ ಎಂದರು.


ನೌಕರರ ಭವನ ನಿರ್ಮಾಣಕ್ಕೆ ಸಂಬAಧಿಸಿದAತೆ ರಾಜ್ಯ ಸಂಘ 1 ಕೋಟಿ ರೂ ನೀಡಲು ಸಮ್ಮತಿ ನೀಡಿದ್ದು, ಅದರಲ್ಲಿ ಮೊದಲ ಕಂತಾಗಿ 50 ಲಕ್ಷ ನೀಡುವ ಸಾಧ್ಯತೆ ಇದ್ದು, ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.


ಸಂಘದ ನೂತನ 
ಪದಾಧಿಕಾರಿಗಳು


ಸಂಘಕ್ಕೆ ಮತ್ತೆ 15 ಮಂದಿ ಪಧಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ, ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಮನವಿ ಮಾಡಿದರು.


ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆರೋಗ್ಯ ಇಲಾಖೆಯ ಎಂ.ಪ್ರೇಮ, ಡಾ.ಎಂ.ಸುರೇಶ್‌ಬಾಬು, ಕ್ರೀಡಾ ಕಾರ್ಯದರ್ಶಿಗಳಾಗಿ ಬಿ.ಚಂದ್ರಕಲಾ, ವಿ.ಶ್ರೀರಾಮ್, ಹೆಚ್.ಎನ್.ಮಂಜುನಾಥ್, ಎಸ್.ಸುಬ್ರಹ್ಮಣ್ಯಂ, ಸಂಘಟಕಾ ಕಾರ್ಯದರ್ಶಿಗಳಾಗಿ ಸಿ.ಎಂ.ಮಲ್ಲಿಕಾರ್ಜುನ್, ಬಿ.ಹರೀಶ್ ನೇಮಕಗೊಂಡಿದ್ದಾರೆ. 


ಜಂಟಿ ಕಾರ್ಯದರ್ಶಿಯಾಗಿ ಎ.ಬಿ.ನವೀನ, ಕಾರ್ಯದರ್ಶಿಗಳಾಗಿ ಬಿ.ವಿ.ಅರುಣ್ ಕುಮಾರ್, ಎಸ್.ವಿಜಯಮ್ಮ, ಆರ್.ನಾಗಮಣಿ, ಉಪಾಧ್ಯಕ್ಷರಾಗಿ ಜಿ.ಮುನಿಯಪ್ಪ, ಬಿ.ಮಂಜುನಾಥ್, ಎಂ.ನಾಗರಾಜ್ ಅವರನ್ನು ನೇಮಿಸಲಾಗಿದೆ ಎಂದು ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಪ್ರಕಟಿಸಿದರು.


ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.


ನೂತನ ಪದಾಧಿಕಾರಿಗಳ ಪರವಾರಿ ವಿಜಯಮ್ಮ, ಪ್ರೇಮಾ, ಎಂ.ನಾಗರಾಜ್ ಶ್ರೀರಾಮ್, ಸುರೇಶ್‌ಬಾಬು, ಮುನಿಯಪ್ಪ ಮತ್ತಿತರರು ಮಾತನಾಡಿ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಮೂಲಕ ಸಂಘಟನೆಯಲ್ಲಿ ಮಹಿಳೆಯರಿಗೂ ಆದ್ಯತೆ ನೀಡಲಾಗಿದ್ದು, ಇದೊಂದು ಉತ್ತಮ ಆಯ್ಕೆ ಎಂದು ಜಿಲ್ಲಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಅಜಯ್, ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿಗಳಾದ ಪಿಡಿಒ ನಾಗರಾಜ್, ಶ್ರೀನಿವಾಸಲು,ಎಸ್ಸಿಎಸ್ಟಿ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ನಾಗರಾಜ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎನ್.ವಿ.ರಮೇಶ್, ಜಿಲ್ಲಾಧ್ಯಕ್ಷ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ವೈ.ವೆಂಕಟೇಶ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ನಾಗರಾಜ್,ಉರ್ದುಶಿಕ್ಷಕರ ಸಂಘದ ಯೂನಸ್ ಖಾನ್ ಮತ್ತಿತರರಿದ್ದರು.

-________________________--