‘ಸಿದ್ಧಾರ್ಥ ಸ್ಮೈಲ್ಸ್’ ನೂತನ ಚಿಕಿತ್ಸಾ ಘಟಕ ಏಪ್ರಿಲ್ 13ರ ಬುಧವಾರ ಆರಂಭ

‘ಸಿದ್ಧಾರ್ಥ ಸ್ಮೈಲ್ಸ್’ ನೂತನ ಚಿಕಿತ್ಸಾ ಘಟಕ ಏಪ್ರಿಲ್ 13ರ ಬುಧವಾರ ಆರಂಭ

‘ಸಿದ್ಧಾರ್ಥ ಸ್ಮೈಲ್ಸ್’ ನೂತನ ಚಿಕಿತ್ಸಾ ಘಟಕ ಏಪ್ರಿಲ್ 13ರ ಬುಧವಾರ ಆರಂಭ

‘ಸಿದ್ಧಾರ್ಥ ಸ್ಮೈಲ್ಸ್’ ನೂತನ ಚಿಕಿತ್ಸಾ ಘಟಕ ಏಪ್ರಿಲ್ 13ರ ಬುಧವಾರ ಆರಂಭ


ತುಮಕೂರು; ನಗರದ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡ ‘ಸಿದ್ಧಾರ್ಥ ಸ್ಮೈಲ್ಸ್’ ನೂತನ ಚಿಕಿತ್ಸಾ ಘಟಕ ನಾಳೆಯಿಂದ (ಏಪ್ರಿಲ್ 13ರ ಬುಧವಾರ)ಆರಂಭಗೊಳ್ಳಲಿದೆ.


ಆಧುನಿಕ ಸೌಲಭ್ಯಗಳ ಕಲ್ಪಿಸಲಾಗಿರುವ ನೂತನ ದಂತ ಚಿಕಿತ್ಸಾ ಕೇಂದ್ರದ ವಿವರಗಳನ್ನು ಕಾಲೇಜಿನ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಡಾ.ಪ್ರವೀಣ ಕುಡುವ ವಿವರಿಸಿದರು.


ದಂತ ಆರೋಗ್ಯ ಸೇವೆಯಲ್ಲಿ ಸಾರ್ವಜನಿಕರೊಂದಿಗೆ ಆಸ್ಪತ್ರೆ ಬೆಸದುಕೊಂಡಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಉಚಿತ ದಂತ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ಮಾಡಿದಾಗ ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗಳಿಗೆ ಸ್ಪಂದಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಆಸ್ಪತ್ರೆಯಲ್ಲಿ ನೂತನ ಘಟಕ ಆರಂಭಿಸಿದ್ದಾರೆAದು ವಿವರಿಸಿದರು.


ಸಿದ್ಧಾರ್ಥ ಆಸ್ಪತ್ರೆಯಲ್ಲಿ ಸುಸರ್ಜಿತ ಸೌಕರ್ಯವುಳ್ಳ ಎಲ್ಲ ತರದ  ದಂತ ಚಿಕಿತ್ಸೆ ಒಂದೇ ಕಡೆ ಸಿಗುವಂತಾಗಬೇಕೆAಬ ಆಶಯಗಳನ್ನು ಇಟ್ಟುಕೊಂಡು  ಕಾರ್ಪೋರೇಟ್ ವಲಯದಲ್ಲಿ ಇರುವಂತ ಸೌಲಭ್ಯಗಳನ್ನು ‘ಸಿದ್ಧಾರ್ಥ ಸ್ಮೆöÊಲ್ಸ್ಸ್’  ನೂತನ ಘಟಕದಲ್ಲಿ ಅಳವಡಿಸಿಸಲಾಗಿದೆ. ವಿಶೇಷ ತಜ್ಞ ದಂತ ವೈದ್ಯರನ್ನು ನೇಮಿಸಲಾಗಿದ್ದು, ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಪ್ರಾಂಶುಪಾಲರಾದ ಡಾ. ಪ್ರವೀಣ ಕುಡುವಾ ವಿವರಿಸಿದರು.


ನೂತನ ವಿಭಾಗದಲ್ಲಿ ತುರ್ತು ಚಿಕಿತ್ಸೆಯನ್ನು ನೀಡಲಾಗುವುದಲ್ಲದೆ ದಿನದ 24 ಗಂಟೆ ಕೇಂದ್ರ ತೆರೆದಿರುತ್ತೆ ಎಂದು  ಅವರು ತಿಳಿಸಿದರು.


ಬಾಯಿ ಮತ್ತು ವಸುಡು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಮಹೇಶ್ ಕುಮಾರ್.ಆರ್ ಮಾತನಾಡಿ,ಬಾಯಿ ದವಡೆ ಶಸ್ತç ಚಿಕಿತ್ಸೆ, ಬಾಯಿ ಕ್ಯಾನ್ಸರ್ ಚಿಕಿತ್ಸೆ, ಸೀಳು ತುಟಿ, ಸೀಳು ಅಂಗಳ ಮುಖದ ಸೌಂದರ್ಯ ಚಿಕಿತ್ಸೆ ಸೇರಿದಂತೆ 9 ವಿಭಾಗಗಳಲ್ಲಿ ದಂತಕ್ಕೆ ಸಂಬAಧಿಸಿದ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯ ಜನತೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಮಾಡುತ್ತಿದ್ದೇವೆ ಎಂದು ಹೇಳಿದರು .


ಸಮುದಾಯ ದಂತ ವಿಭಾಗದ ಮುಖ್ಯಸ್ಥರಾದ ಡಾ. ಮೈತ್ರಿ ಮಾತನಾಡಿ,  ದಂತ ಆರೋಗ್ಯದ ಬಗ್ಗೆ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಅನೇಕ ಉಚಿತ ದಂತ ಚಿಕಿತ್ಸೆ ನಡೆಸಲಾಗಿದ್ದು, ದಂತ ಕ್ಷಯ, ಕ್ಯಾನ್ಸರ್ ತರದ ರೋಗಗಳು ಪತ್ತೆಯಾಗಿದ್ದು, ಜನರಿಗೆ ಅರಿವು ಮತ್ತು ಚಿಕಿತ್ಸೆಯನ್ನು ನೀಡಿದ್ದೇವೆ.  ಕ್ಯಾಂಪಸ್‌ನಲ್ಲಿ ಹೆಚ್ಚು ಗಂಭೀರವಾಗಿ ಕಂಡುಬರುವ ರೋಗಗಳಿಗೆ ವಿಶೇಷ ಕಾರ್ಡ್ಗಳನ್ನು ನೀಡಿ ಆಸ್ಪತ್ರೆಗೆ ಕರೆದುಕೊಂಡು ಬಂದು ಶೇ 50% ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದರು. 


ಉದ್ಘಾಟನಾ ಕಾರ್ಯಕ್ರಮ:


ನಾಳೆ(ಏಪ್ರಿಲ್ 13)  ‘ಸಿದ್ಧಾರ್ಥ ಸ್ಮೆöÊಲ್ಸ್’ ಸೆಂಟರ್ ಫಾರ್ ಅಡ್ವಾನ್ಸ್ ಕೇಂದ್ರದ ಉದ್ಘಾಟನೆಯನ್ನು  ಕನ್ನಡ ಚಿತ್ರರಂಗದ ಗೋಲ್ಡನ್ ಗರ್ಲ್ ರಮ್ಯಾ  ನೆರವೇರಿಸಲಿದ್ದಾರೆ. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.


ನವದೆಹಲಿಯ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಡಾ.ಶಿವಶರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಪಿ.ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಉಪಪ್ರಾಂಶುಪಾಲರಾದ ಡಾ.ನಾಗಲಕ್ಷ್ಮಿ ಚೌಧರಿ ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವೈದ್ಯಕೀಯ ಅಧೀಕ್ಷರಾದ ಡಾ.ಸಿ.ಪಿ ಸತೀಶ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.