ವಕೀಲ ಭೀಷ್ಮ ಹೆಚ್.ಎಸ್.ಶೇಷಾದ್ರಿ

ವಕೀಲ ಭೀಷ್ಮ ಹೆಚ್.ಎಸ್.ಶೇಷಾದ್ರಿ

ವಕೀಲ ಭೀಷ್ಮ ಹೆಚ್.ಎಸ್.ಶೇಷಾದ್ರಿ

ವಕೀಲ ಭೀಷ್ಮ ಹೆಚ್.ಎಸ್.ಶೇಷಾದ್ರಿ

     ತಂದೆ ಸರಕಾರಿ ಅಧಿಕಾರಿ ಕೆ.ಎಸ್. ಶ್ಯಾಮೇಗೌಡರ ಇಚ್ಚೆಯಂತೆ ವಕೀಲ ವೃತ್ತಿಯನ್ನು ಆರಿಸಿಕೊಂಡು ಬಿ.ಎಸ್ಸಿ., ಎಲ್.ಎಲ್.ಬಿ., ಪದವೀಧರರಾಗಿ 1948 ರಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ಸುಮಾರು 70 ವರ್ಷಗಳಿಗೂ ಹೆಚ್ಚು ಕಾಲ ಪ್ರಾಕ್ಟೀಸ್ ಮಾಡಿದ ಹೆಚ್.ಎಸ್.ಶೇಷಾದ್ರಿಯವರು ನಮ್ಮನ್ನೆಲ್ಲ ಅಗಲಿದ್ದಾರೆ.


 ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ವಕೀಲರ ಸಂಘದ ಸದಸ್ಯರಾಗಿ ಹಾಗೂ 2 ಬಾರಿ ಅಖಿಲ ಭಾರತ ವಕೀಲರ ಸಂಘದ ಸದಸ್ಯರಾಗಿ, ಸರಕಾರಿ ವಕೀಲರಾಗಿ, ಕರ್ನಾಟಕ ಲೀಗಲ್ ಅಡ್ವೆöÊಸರಿ ಬೋರ್ಡ್ನ ಸದಸ್ಯರಾಗಿ, ಪ್ರಾಧ್ಯಾಪಕರಾಗಿ, ವಿದ್ಯೋದಯ ಲಾ ಕಾಲೇಜಿನ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟಿಯಾಗಿ, ನ್ಯಾಷನಲ್ ಲಾ ಸ್ಕೂಲ್‌ನ ಮೆಂಬರ್ ಆಗಿ, ಲೀಗಲ್ ಸ್ಟಡಿ ಮತ್ತು ಅಡ್ಮಿನಿಸ್ಟೆçÃಷನ್ ನಿರ್ದೇಶಕರಾಗಿ, ಮೇನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕರಾಗಿ, ಲಾ ಫ್ಯಾಕಲ್ಟಿಯ ಸದಸ್ಯರಾಗಿ, ಬೆಂಗಳೂರು ವಿಶ್ವವಿದ್ಯಾನಿಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿ ಹಾಗೂ ಸೆನೆಟ್ ಸದಸ್ಯರಾಗಿ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ವಕೀಲರಾಗಿ ಕೇಸ್‌ಗಳನ್ನು ನಡೆಸಿದ ಅಪಾರ ಅನುಭವವುಳ್ಳವರಾಗಿ ಹಾಗೂ ಹಲವಾರು ಹೆಸರಾಂತ ಕೇಸ್‌ಗಳನ್ನು ಜಯಿಸಿದ್ದಾರೆ. ಇವರು ಕ್ರಿಮಿನಲ್ ಕೇಸ್‌ಗಳಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದ ವಕೀಲರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ಇವರ ಕಛೇರಿಯಲ್ಲಿ ಕೆಲಸ ಮಾಡಿದ ಸುಮಾರು 28 ಜನ ವಕೀಲರು ನ್ಯಾಯಾದೀಶರಾಗಿರುತ್ತಾರೆ.  

ಅಂತರರಾಷ್ಟç ಖ್ಯಾತಿಯ ವಕೀಲರಾದ ರಾಮ್‌ಜೇಠ್ ಮಲಾನಿ ಇವರನ್ನು ತುಮಕೂರಿಗೆ ಕರೆತಂದ ಕೀರ್ತಿ ಹೆಚ್.ಎಸ್.ಶೇಷಾದ್ರಿರವರಿಗೆ ಸಲ್ಲಬೇಕು. ರಾಮ್‌ಜೇಠ್  ಮಲಾನಿ ರವರು ಆತ್ಮೀಯರಾಗಿ, ಒಡನಾಡಿಯಾಗಿ, ವೃತ್ತಿಬಾಂಧವರಾಗಿ ಅವರೊಡನೆ ಕೆಲಸ ಮಾಡಿದ ಅಪಾರ ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಹಾಗೆಯೇ ನಿವೃತ್ತ ಚೀಫ್ ಜಸ್ಟೀಸ್ ಭೀಮಯ್ಯನವರು ಇವರ ಆತ್ಮೀಯರು ಹಾಗೂ ಒಡನಾಡಿಯಾಗಿದ್ದರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಶ್ ಹೆಗ್ಗಡೆಯವರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಅವರೊಡನೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದರು. 

ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತುಮಕೂರಿನಲ್ಲಿ ಲಯನ್ಸ್ ಕ್ಲಬ್‌ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. ತುಮಕೂರು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಮತ್ತು ತುಮಕೂರು ಟೌನ್‌ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ತುಮಕೂರಿನ ಕೆಂಪೇಗೌಡ ಬ್ಯಾಂಕ್‌ನ ಸ್ಥಾಪಕ ಹಾಗೂ ದೀರ್ಘಕಾಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಶಿಕ್ಷಣ ಭೀಷ್ಮ ಪ್ರಶಸ್ತಿ, ಉತ್ತಮ ವಕೀಲ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಹೆಚ್.ಎಸ್. ಶೇಷಾದ್ರಿಯವರಿಗೆ ಐದು ಜನ ಪುತ್ರಿಯರು ಹಾಗೂ ಇಬ್ಬರು ಪುತ್ರರು ಮೊದಲನೇ ಪುತ್ರ ಹೆಚ್.ಎಸ್. ಕೆಂಪಣ್ಣ ರವರು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಹಾಗೂ ಹೆಚ್.ಎಸ್. ರಾಜು ರವರು ವಕೀಲರಾಗಿದ್ದಾರೆ. 

ಇವರು ಕಾನೂನು ತಜ್ಞರೂ ಹೌದು, ಕಾನೂನು ಶಿಕ್ಷಣ ತಜ್ಞರು ಹೌದು, ಶಿಕ್ಷಣ ತಜ್ಞರೂ ಹೌದು ಹಾಗೂ ಹಣಕಾಸು ಸಂಸ್ಥೆಯನ್ನು ಮುನ್ನಡೆಸಿದ ತಜ್ಞರು ಹೀಗೆ ಬಹುಮುಖ ಪ್ರತಿಭಾ ಶಕ್ತಿಯ ವ್ಯಕ್ತಿಗಳಾಗಿದ್ದರು. ಹಲವಾರು ಸಂಸ್ಥೆಗಳನ್ನು ಪ್ರಾರಂಭಿಸಿ, ಹತ್ತು ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವದ ವ್ಯಕ್ತಿಯಾಗಿ, ವಕೀಲರಾಗಿ, ಶಿಕ್ಷಣ ತಜ್ಞರಾಗಿ, ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ  ಸೇವೆ ಸಲ್ಲಿಸಿರುತ್ತಾರೆ. ಇವರು ತುಮಕೂರು ವಕೀಲರ ಶಕ್ತಿಯಾಗಿ ಅಪಾರ ಶಿಷ್ಯವೃಂದವನ್ನು ಹೊಂದಿ ಹಲವಾರು ನ್ಯಾಯವಾದಿಗಳಿಗೆ ಮಾರ್ಗದರ್ಶಕರಾಗಿರುತ್ತಾರೆ. 


ತುಮಕೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಬಹುತೇಕ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ನಡೆಸಿ ಅಪಾರ ಅನುಭವವುಳ್ಳ ಭೀಷ್ಮರಾಗಿ 98 ವರ್ಷಗಳ ಸುಧೀರ್ಘ ಪಯಣವನ್ನು ಬೆಳೆಸಿ ತುಮಕೂರಿನ ಕೆಚ್ಛೆದೆಯ ವಕೀಲರು ಎಂಬ ಹೆಸರನ್ನು ಪಡೆದು ನೇರ ನುಡಿಗಳ ವಿಶಾಲ ಹೃದಯಿಗಳಾಗಿರುತ್ತಾರೆ. ಆನೆ ನಡೆದದ್ದೇ ದಾರಿ ಎನ್ನುವಂತೆ ಮೊದಲನಿಂದಲೂ  ಹೆಚ್.ಎಸ್. ಶೇಷಾದ್ರಿ ಗಜಗಾಂಭೀರ್ಯದ ವ್ಯಕ್ತಿಯಾಗಿ ಅವರ ಹೆಜ್ಜೆಯ ಗುರುತುಗಳನ್ನು ಬಿಟ್ಟು ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ. 


ಆರ್.ಎನ್.ವೆಂಕಟಾಚಲ
ವಕೀಲರು, ತುಮಕೂರು.