ಮಧುಗಿರಿ ತಾ. ಗಿಡದಾಗಲಹಳ್ಳಿಯಲ್ಲಿ ಸರ‍್ಕಾರ ಸೃಷ್ಟಿಸಿದ ಜಾತ್ರೆ -ಜಿಲ್ಲೆಯ ಹಳ್ಳಿಗಳ ಸಂಖ್ಯೆ 3200 ದಾಟಲಿದೆ:ಡಿಸಿ

ಮಧುಗಿರಿ ತಾ.ಗಿಡದಾಗಲಹಳ್ಳಿಯಲ್ಲಿ ಸರ‍್ಕಾರ ಸೃಷ್ಟಿಸಿದ ಜಾತ್ರೆ ಜಿಲ್ಲೆಯ ಹಳ್ಳಿಗಳ ಸಂಖ್ಯೆ 3200 ದಾಟಲಿದೆ:ಡಿಸಿ

ಮಧುಗಿರಿ ತಾ. ಗಿಡದಾಗಲಹಳ್ಳಿಯಲ್ಲಿ ಸರ‍್ಕಾರ ಸೃಷ್ಟಿಸಿದ ಜಾತ್ರೆ   -ಜಿಲ್ಲೆಯ ಹಳ್ಳಿಗಳ ಸಂಖ್ಯೆ 3200 ದಾಟಲಿದೆ:ಡಿಸಿ


ತುಮಕೂರು :ಜಿಲ್ಲೆಯಲ್ಲಿ 2500 ಹೆಚ್ಚು ಹಳ್ಳಿಗಳಿದ್ದು ಈಗ ಹಾಡಿ, ಹಟ್ಟಿಗಳಂತ 562 ಬೇಚರಾಕ್ ಹಳ್ಳಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ, ಮಧುಗಿರಿ ತಾಲೂಕಿನಲ್ಲಿ 47 ಬೇಚರಾಕ್ ಗ್ರಾಮಗಳಲ್ಲಿ 26 ಹಳ್ಳಿಗಳನ್ನು ಅಂತಿಮಗೊಳಿಸಲಾಗಿದೆ, ಜಿಲ್ಲೆಯಲ್ಲಿ 195 ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ, ಈ ಎಲ್ಲಾ ಪ್ರಕ್ರಿಯೆ ಪೂರ್ಣವಾದರೆ ಜಿಲ್ಲೆಯಲ್ಲಿ ಹಳ್ಳಿಗಳ ಸಂಖ್ಯೆ 3200 ದಾಟಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲು ಸಿಗಲು ಇದರಿಂದ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಪ್ರಕಟಿಸಿದರು.


ಜಿಲ್ಲೆಯ ಮಧುಗಿರಿ ತಾಲೂಕ್‌ ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ ಆಶ್ರಯದಲ್ಲಿ ಏರ್ಪಡಿಸಿದ್ ದ" ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಎಲ್ಲಾ ಇಲಾಖೆಗಳ ಜಿಲ್ಲಾ ಮತ್ತು ತಾಲೂಕ್ ಮಟ್ಟದ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹರಿಸಲಾಗುತ್ತಿದ್ದು, ಒಂದೂವರೆ ವರ್ಷದಲ್ಲಿ ಸುಮಾರು 2 ಲಕ್ಷ ಪಹಣಿಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದ್ದು,  230 ಪಹಣಿಗಳು ಬಾಕಿ ಉಳಿದಿವೆ ಇವುಗಳನ್ನು ತ್ವರಿತವಾಗಿ ಸರಿಪಡಿಸಲಾಗುವುದು, 3ನೇ ಕಲಂನಲ್ಲಿ ಭೂಮಿ ವಿಸ್ತೀರ್ಣ, 9ನೇ ಕಲಂನಲ್ಲಿಅನುಭವದಾರ, ಮಾಲೀಕರ ಹೆಸರು ಹಾಗೂ ವಿಸ್ತೀರ್ಣ ಹೊಂದಾಣಿಕೆಇರುತ್ತಿರಲಿಲ್ಲ ಅಂತಹ ಒಂದು ಲಕ್ಷಕ್ಕೂ  ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿದ್ದವು. ಅಂತಹ ಪ್ರಕರಣಗಳನ್ನು ಬಗೆಹರಿಸುವಕಾರ್ಯ ಭರದಿಂದ ಸಾಗಿದ್ದು, ಈಗ ಅಂತಹ ಪ್ರಕರಣಗಳ ಸಂಖ್ಯೆ 6 ಸಾವಿರಕ್ಕಿಳಿದಿದೆ,


ಜಿಲ್ಲೆಯ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಮತ್ತು ಘನ ತ್ಯಾಜ್ಯ ಸಂಗ್ರಹಣಘಟಕಕ್ಕೆಜಾಗಒದಗಿಸಲಾಗಿದೆ, ಇಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಸ್ವಾಗತಿಸಿದ ರೀತಿ ಈ ಭಾಗದ ಸಂಸ್ಕೃತಿಯನ್ನು ಪರಿಚಯಿಸುತ್ತದೆ, ಗಿಡದಾಗಲಹಳ್ಳಿಯ ಜನತೆಯಉತ್ತಮ ನಡವಳಿಕೆ ಶ್ಲಾಘನೀಯಎಂದರು.


ಆಶ್ರಯಯೋಜನೆ,  ಪಹಣಿತಿದ್ದುಪಡಿ,  ಅರ್ಹ ಕುಟುಂಬಗಳಿಗೆ ಬಿಪಿಎಲ್‌ಕಾರ್ಡ್ ಹಂಚಿಕೆ, ಪೋಡಿ ಪ್ರಕರಣಇತ್ಯರ್ಥ, ರಸ್ತೆ, ವಸತಿ ಸೌಲಭ್ಯ, ಹಾನಿಯಾದ ಮನೆಗಳಿಗೆ ಪರಿಹಾರ, ವಿದ್ಯುತ್ ಸಂಪರ್ಕ, ಸೇರಿದಂತೆ ವಿವಿಧರೀತಿಯ ಬೇಡಿಕೆಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸಲ್ಲಿಸಿದರು. ಸಾರ್ವಜನಿಕರ ಹತ್ತು ಹಲವು ಕುಂದುಕೊರತೆಗಳನ್ನು ಸಮಾಧಾನದಿಂದ ಆಲಿಸುತ್ತಾ ಸ್ಥಳದಲ್ಲಿಯೇ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರಒದಗಿಸಲಾಯಿತು. 


ಪ್ರಾಸ್ತಾವಿಕ ಭಾಷಣ ಮಾಡಿದ ಉಪ ವಿಭಾಗಾಧಿಕಾರಿ ರಿಷಿಆನಂದ್‌ ಅವರು ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಬೇಕು ಎನ್ನುವ ಸರಕಾರದ ಆಶಯದಂತೆ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರತಿ ತಿಂಗಳ ಮೂರನೇಯ ಶನಿವಾರ ಅಯೋಜಿಸಲಾಗುತ್ತಿದೆ, ಗ್ರಾಮೀಣ ಭಾಗದ ಜನರಿಗೆ ಮಾಹಿತಿಯಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿಇಂತಹ ಕಾರ್ಯಕ್ರಮಗಳು ಮಹತ್ವಪೂರ್ಣವಾಗಿವೆ ಸರ್ಕಾರದ ಸೌಲಭ್ಯಗಳ  ಮಾಹಿತಿಯನ್ನು ಪಡೆದಂತಹ ಪ್ರಜೆಯೂ ನಾಡಿಗೆ ಉತ್ತಮ ಪ್ರಜೆಯಾಗಿ ತನ್ನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಜಿಲ್ಲಾಧಿಕಾರಿ ಒಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯೇ ಅವರು  ವಾಸ್ತವ್ಯ ಇದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವುದೇ ಈ ಕಾರ್ಯಕ್ರಮದ ವಿಶೇಷತೆಯಾಗಿದ್ದು, ಸಾರ್ವಜನಿಕರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಇದಾಗಿದ್ದುಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು, 


ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಡಾ. ಕೆ ವಿದ್ಯಾಕುಮಾರಿ ಮಾತನಾಡಿದರು.


ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ವಿವಿಧ ಅಧಿಕಾರಿಗಳು ಜನರ ಅಹವಾಲುಗಳನ್ನು ಆಲಿಸಿದರು, ನಂತರಗ್ರಾಮೀಣ ಪ್ರತಿಭೆಗಳ ಹಾಗೂ ಕಲೆಗೆ ಪ್ರೋತ್ಸಾಹಿಸಲು ಪೂರಕವಾಗಿ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಾಹುಲ್‌ಕುಮಾರ್ ಶಹಾಪುರವಾಡ್, ಡಿಡಿಎಲ್‌ಆರ್‌ ಜಿಲ್ಲಾಧಿಕಾರಿ  ಸುಜಯ್, ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೇಮಟಿ.ಎಲ್.ಎಸ್,ರೇಷ್ಮೇ ಇಲಾಖೆಯ ಉಪನಿರ್ದೇಶಕರಾದ ರಾಮಕೃಷ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಮಹೇಶಬಾಬು,ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ, ಮುಖಂಡರಾದ ವಿಜಯ್, ಗ್ರಾಮ ಪಂಚಾಯತಿ ಸದ್ಯರು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರುಗಳು, ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ಸಮಸ್ಯೆ ಆಲಿಸಲು ಬಂದಿದ್ದೇವೆ: ವೀರಭದ್ರಯ್ಯ


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೀರಭದ್ರಯ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ” ಕಾರ್ಯಕ್ರಮವುಅತ್ಯಂತಉತ್ತಮವಾದಕಾರ್ಯಕ್ರಮವಾಗಿದ್ದುಗ್ರಾಮ ಮಟ್ಟದಲ್ಲಿಜನರಅಲೆದಾಟವನ್ನು ತಪ್ಪಿಸಿ ಅವರಿಗೆ ಸ್ಥಳದಲ್ಲಿಯೆ ಪರಿಹಾರವನ್ನು ನೀಡುವಂತಹಕಾರ್ಯಕ್ರಮವಾಗಿದೆ,  ಗ್ರಾಮೀಣ ಭಾಗದಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವೇ ನಿಮ್ಮ ಬಳಿ ಬಂದಿದ್ದು, ಯಾವುದೇ ಸಮಸ್ಯೆಇದ್ದರೂ ಮುಕ್ತವಾಗಿ ನಮ್ಮಜೊತೆಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ, ನಿಮ್ಮ ಸಮಸ್ಯೆ ಆಲಿಸಲು ನಾವು ನಿಮ್ಮಊರಿಗೆ ಬಂದಿದ್ದೇವೆ ಎಂದು ತಿಳಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧಅಭಿವೃದ್ದಿ ಕಾಮಗಾರಿಗಳ ಮಾಹಿತಿಯನ್ನು ಶಾಸಕರು ನೀಡಿದರು


 
ರೈತರಿಗೆದೊರೆತ ಸೌಲಭ್ಯಗಳು 


ಮೀನುಗಾರಿಕೆಇಲಾಖೆಯಿಂದ ಇಲಾಖೆ ಯೋಜನೆಗಳ ಹಾಗೂ ಮೀನುಗಾರಿಕೆ ಬಗ್ಗೆ  ಮಾಹಿತಿ ಒಳಗೊಂಡ ವಸ್ತು ಪ್ರದರ್ಶನದ ಮಳಿಗೆ ಸಾರ್ವಜನಿಕರ ಆಕರ್ಷಿಸಿತು, ಹಾಗೂ ಕೃಷಿ ಹೊಂಡಗಳ ಅನುಕೂಲ ಹೊಂದಿರುವರೈತರಿಗೆತಲಾ 250ರಂತೆ 10 ಜನ ಮೀನುಗಾರರಿಗೆಉಚಿತ ಮೀನು ಮರಿ ವಿತರಣೆ ಮಾಡಲಾಯಿತು, ತಾಲೂಕು ಹಿರಿಯ ಮೀನುಗಾರಿಕೆ ಇಲಾಖೆ ಅಧಿಕಾರಿ ರಂಗಸ್ವಾಮಿಆರ್, ಇಲಾಖೆಯ ವಿವಿಧ  ಯೋಜನೆಗಳ ಸೌಲಭ್ಯ ಕುರಿತುಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು. 


ಆರೋಗ್ಯಇಲಾಖೆಯ ವತಿಯಿಂದ ಸಾರ್ವಜನಿಕರಆರೋಗ್ಯತಪಾಸಣೆಮಾಡಿ, ವಿವಿಧ ಪರಿಕರಗಳ ವಿತರಿಸಲಾಯಿತು, ವಿವಿಧ ಇಲಾಖೆಗಳು ವಸ್ತುಪ್ರದರ್ಶನ ಮಳಿಗೆ ತೆರದು, ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. 

ಹಳ್ಳಿಗರಲ್ಲಿ ಹಳ್ಳಿಗರಂತೆ ಸಾಮಾನ್ಯ ಮನುಷ್ಯರಾಗುವ ವೈ.ಎಸ್.ಪಾಟೀಲರು !?

ಐಎಎಸ್‌ ಅಧಿಕಾರಿ ಜೊತೆಗೆ ಜಿಲ್ಲಾಧಿಕಾರಿ ಎಂಬ ಹಮ್ಮು ಬಿಮ್ಮುಗಳಿಲ್ಲದೇ ಹಳ್ಳಿಯ ಸಾಮಾನ್ಯಜನರ ಜೊತೆ ಸಾಮಾನ್ಯರಾಗಿ ಬಿಡುವ ವೈ.ಎಸ್.ಪಾಟೀಲರು ಶನಿವಾರ ಕೂಡಾ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿಯಲ್ಲಿ ಟವಲ್ ಪೇಟ್ ಸುತ್ತಿಕೊಂಡು ಎತ್ತಿನ ಬಂಡಿ ಹೊಡೆದು ಕೊಂಡು ಬಂದದ್ದನ್ನು ಗ್ರಾಮಸ್ಥರು ನೋಡಿ ಆನಂದಿಸಿದರು, ಸಲಿಕೆ ಹಿಡಿದು ಅಗೆಯುವ ರೀತಿ ಅಯ್ಯೋ ನಮಗಿಂತ ಚೆನ್ನಾಗಿ ಅಗೆಯುತ್ತಿದ್ದಾರಲ್ಲ ಎಂದು ರೈತರು ಸಂಭ್ರಮ ಪಡುವಂತಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪನವರು ತಾವೂ ಏನೂ ಕಡಿಮೆ ಅಲ್ಲ ಎಂಬಂತೆ ಡಿಸಿಯವರಿಗೆ ಜೊತೆ ನೀಡಿದರು.