ಇಂದಿನ ಭಾರತ್ ಬಂದ್ ಯಶಸ್ಸಿಗೆ ಪಕ್ಷ ,ಸಂಘಟನೆಗಳ ಮನವಿ
ಇಂದಿನ ಭಾರತ್ ಬಂದ್ ಯಶಸ್ಸಿಗೆ ಪಕ್ಷ ,ಸಂಘಟನೆಗಳ ಮನವಿ
ತುಮಕೂರು: ಐದು ನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆ೨೭ ರ ಭಾರತ್ ಬಂದ್” ಗೆ ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸವಾದಿ) ಹಾಗೂ ಅಂಗ ಸಂಘಟನೆಗಳು, ರೈತ ಸಂಘದ ಎರಡೂ ಬಣಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ನಾಳೆ ನಡೆಯುವ ಕರ್ನಾಟಕ ಬಂದ್ ಅನ್ನು ರೈತರು ಕಾರ್ಮಿಕರು ಒಂದಾಗಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಕೂಡಾ ಬಂದ್ ಕರೆಗೆ ಬೆಂಬಲ ನೀಡಿದೆ .
ಹತ್ತು ತಿಂಗಳಿಂದ ದಿಲ್ಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ರಾಷ್ಟç ಮಟ್ಟದ ಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಮಸೂದೆ ಕೈಬಿಡಬೇಕೆಂದು ಆಗ್ರಹಿಸಲಾಗಿದೆ. ಜೊತೆಗ “ಕನಿಷ್ಟ ಬೆಂಬಲ ಬೆಲೆ ಕಾನೂನು” ಬೇಡಿಕೆಗಳ ಜೊತೆಗೆ ರಾಜ್ಯದ ಕೃಷಿ ಭೂಮಿಯನ್ನು ಶ್ರೀಮಂತರು. ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲು ಜಾರಿಗೆ ತಂದಿರುವ “ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ”. ಕೃಷಿ ಉತ್ಪಾದನೆಯ ಜೊತೆಗೆ ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆೆ ಕೊಡಲು ಜಾರಿಗೆ ತಂದಿರುವ “ಎಪಿಎಂಸಿ ಕಾಯ್ದೆ ತಿದ್ದುಪಡಿ” ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿ ಕೂಲಿಕಾರರು ಹಾಗೂ ದಲಿತರು, ಅಲ್ಪಸಂಖ್ಯಾತರ ಬದುಕು. ಆಹಾರದ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ “ಗೋಹತ್ಯೆ ನಿಷೇಧ ಕಾಯ್ದೆ”ಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟ್ ಕಂಪನಿಗಳ ಪರವಾಗಿ ನೀತಿಗಳಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮಗಳನ್ನು ಕೈ ಬಿಡಬೇಕು ಎಂದು ಸಿಪಿಐ ಎಂ ಕರ‍್ಯರ‍್ಶಿ ಎನ್.ಕೆ. ಸುಬ್ರಮಣ್ಯ ಒತ್ತಾಯಿಸಿದ್ದಾರೆ.
ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಲು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ದರೋಡೆಯನ್ನು ಕೈ ಬಿಡಬೇಕು. ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಹಾಗೂ ಬ್ಯಾಂಕಿAಗ್, ವಿಮೆ, ಉಕ್ಕು, ವಿದ್ಯುತ್, ಕಲ್ಲಿದ್ದಲು, ಪೆಟ್ರೋಲಿಯಂ, ಭದ್ರತೆ, ರೈಲ್ವೇ, ಬಂದರು, ಏರ್ ಇಂಡಿಯಾ, ವಿಮಾನಯಾನ, ಟೆಲಿಕಾಂ, ಅಂಚೆ, ಬಾಹ್ಯಾಕಾಶ ವಿಜ್ಞಾನ ಮತ್ತು ಅಣು ವಿಜ್ಞಾನ ವಲಯಗಳ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ವಿರೋಧಿಸುತ್ತಾ, ಪಡಿತರ ವ್ಯವಸ್ಥೆಯ ಸಾರ್ವತ್ರೀಕರಣ ಮತ್ತು ನರೇಗಾ ಬಜೆಟ್‌ನ ಹೆಚ್ಚಳಕ್ಕಾಗಿ ಆಗ್ರಹಿಸುತ್ತಿರುವ ದೇಶದ ಕಾರ್ಮಿಕರು ಮತ್ತು ದುಡಿಯುವ ಜನರು, ಈ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿ ಯಶಸ್ವಿಗೊಳಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಮೂರು ಕರಾಳ ಕೃಷಿ ಕಾನೂನುಗಳು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವ ತನಕ ಹಾಗೂ ಖಾಸಗೀಕರಣ ಮತ್ತು ರಾಷ್ಟಿçÃಯ ನಗರೀಕರಣ ಯೋಜನೆಯ ಮೂಲಕ ದೇಶವನ್ನು ಕಾರ್ಪೋರೆಟ್ ಕಂಪನಿಗಳಿಗೆ ಮಾರುವ ಕನಸ್ಸನ್ನು ಕೊನೆಗಾಣಿಸುವ ತನಕ ಈ ಜಂಟಿ ಹೋರಾಟ ಮುಂದುವರೆಯುತ್ತದೆ ಎಂದು ಪಕ್ಷ ತಿಳಿಸಿದೆ.