ಒಂದು ವಾರ `ನವ ಭಾರತದ ನಾರಿ ಕಾರ್ಯಕ್ರಮ’ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ

ಒಂದು ವಾರ `ನವ ಭಾರತದ ನಾರಿ ಕಾರ್ಯಕ್ರಮ’ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ

ಒಂದು ವಾರ `ನವ ಭಾರತದ ನಾರಿ ಕಾರ್ಯಕ್ರಮ’   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ

ಒಂದು ವಾರ `ನವ ಭಾರತದ ನಾರಿ ಕಾರ್ಯಕ್ರಮ’


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ

       ತುಮಕೂರು: ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ   ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿನಿAದ (ಮಾರ್ಚ್ ೭ ರಿಂದ)  ಒಂದು ವಾರಗಳ ಕಾಲ  `ನವ ಭಾರತದ ನಾರಿ’ ಕಾರ್ಯಕ್ರಮವನ್ನು   ಹಮ್ಮಿಕೊಳ್ಳಲಾಗಿದೆ  ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.


         ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ  ಮಾರ್ಚ್ ೧೩ರವರೆಗೆ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ನವ ಭಾರತದ ನಾರಿ ಕಾರ್ಯಕ್ರಮದಡಿ ಮಹಿಳಾ ಕೂಲಿಕಾರರು, ಮಹಿಳಾ ಕಾಯಕ ಬಂಧುಗಳು ಹಾಗೂ ವೈಯಕ್ತಿಕ ಫಲಾನುಭವಿಗಳನ್ನು ಗುರುತಿಸಿ ಗೌರವಿಸಲಾಗುವುದು.   ಅಲ್ಲದೆ ಮಾರ್ಚ್ 12ರಂದು ಮಹಿಳಾ ಕೂಲಿ ಕಾರ್ಮಿಕರಿಂದ ಜಲ ಸಂರಕ್ಷಣೆ ಕಾಮಗಾರಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


         ಜಿಲ್ಲೆಯಿಂದ 3 ಮಂದಿ ಉತ್ತಮ ಮಹಿಳಾ ಕಾಯಕ ಬಂಧುಗಳು ಹಾಗೂ 3 ಮಂದಿ ಮಹಿಳಾ ಫಲಾನುಭವಿಗಳು ಸೇರಿದಂತೆ ಒಟ್ಟು ೬ ಮಂದಿ ಮಹಿಳೆಯರನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಲ್ಲಿ ಮಾರ್ಚ್ 9 ಹಾಗೂ 11ರಂದು ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.


        ಅಲ್ಲದೆ ಮಾರ್ಚ್ ೧೨ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಕೂಲಿಕಾರರನ್ನು ಸಂಘಟಿಸಿ, ಜಲಸಂರಕ್ಷಣೆ ಕಾಮಗಾರಿಗಳಾದ ಕಲ್ಯಾಣಿ, ಕಾಲುವೆ, ಗೋಕಟ್ಟೆ ಮುಂತಾದ ಕಾಮಗಾರಿಗಳ ಸ್ವಚ್ಛಗೊಳಿಸುವ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು   ಅವರು   ತಿಳಿಸಿದ್ದಾರೆ.