‘ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ’,  ಮುಖ್ಯಮಂತ್ರಿಯವರಿಗೆ ಸಮುದಾಯದ ಮನವಿ

‘ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ’,   ಮುಖ್ಯಮಂತ್ರಿಯವರಿಗೆ ಸಮುದಾಯದ ಮನವಿ


‘ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ’


 ಮುಖ್ಯಮಂತ್ರಿಯವರಿಗೆ ಸಮುದಾಯದ ಮನವಿ
ತುಮಕೂರು- ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅಗ್ನಿವಂಶ ಕ್ಷತ್ರಿಯ ತಿಂಗಳ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಹನುಮಂತಪುರದ ಅಗ್ನಿಕುಲ ತಿಂಗಳ ಜನಾಂಗದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ನೀಡಿದ್ದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮುದಾಯದ ಮುಖಂಡರು, ರಾಜ್ಯದಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಜನಾಂಗವು ಅಲ್ಪಸಂಖ್ಯಾತರಾಗಿದ್ದು, ಆರ್ಥಿಕವಾಗಿಯೂ ಸಬಲರಾಗಿಲ್ಲ. ನಾವು ಮೂಲತಃ ಕ್ಷತ್ರಿಯರಾಗಿದ್ದು, ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಸೇನಾ ದಂಡನಾಯಕ ಮತ್ತು ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದೇಶದ ಐಕ್ಯತೆಗಾಗಿ ಅನೇಕ ಕೊಡುಗೆಗಳನ್ನು ಶತ ಶತಮಾನಗಳಿಂದೂ ಕೊಡುತ್ತಾ ಬಂದಿದೆ. ಆದರೂ ನಮ್ಮ ಸಮುದಾಯಕ್ಕೆ ಯಾವುದೇ ರೀತಿಯ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಘೋಷಿಸದೆ ಕಡೆಗಣಿಸಲಾಗಿದೆ ಎಂದು ಸಮಸ್ಯೆಗಳನ್ನು ವಿವರಿಸಿದರು.
ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ತಿಗಳ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಅಗ್ನಿವಂಶ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ಸಮುದಾಯ ಎಲ್ಲ ರೀತಿಯಲ್ಲೂ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಿ ನಿಗಮ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅಗ್ನಿವಂಶ ಕ್ಷತ್ರಿಯ ತಿಗಳ ಜನಾಂಗದ ಅಧ್ಯಕ್ಷ ಕುಂಬಿನರಸಯ್ಯ ಹಾಗೂ ಪಾಲಿಕೆ ಸದಸ್ಯ ಮತ್ತು ಸಮುದಾಯದ ಮುಖಂಡ ನರಸಿಂಹಮೂರ್ತಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. 
ರಾಜ್ಯದಲ್ಲಿ ಅನೇಕ ಜಾತಿ, ಧರ್ಮದವರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ ೧೦ ರಿಂದ ೧೦೦ ಕೋಟಿ ರೂ.ವರೆಗೆ ಅನುದಾನ ಮಂಜೂರು ಮಾಡಿದ್ದೀರಿ. ಅದೇ ಮಾದರಿಯಲ್ಲಿ ನಮ್ಮ ಜನಾಂಗಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಅಭಿವೃದ್ಧಿಗೆ ೧೦೦ ಕೋಟಿ ರೂ. ಮಂಜೂರು ಮಾಡಬೇಕು ಮುಖ್ಯಮಂತ್ರಿಗಳಲ್ಲಿ ಕೋರಿದರು. 
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದಲ್ಲಿ ತಿಗಳ ಸಮುದಾಯದ ರೈತ ಮಹಿಳೆಯನ್ನು ಯಾರೋ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆಗೈದ ಘಟನೆ ನಡೆದು ತಿಂಗಳು ಕಳೆದರೂ ಇದುವರೆಗೂ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿಲ್ಲ. ಈ ಪ್ರಕರಣದ ಬಗ್ಗೆ ಪೊಲೀಸರು ನಿರ್ಲಕ್ಷ÷್ಯ ವಹಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವAತೆ ಪೊಲೀಸರಿಗೆ ಸೂಚನೆ ನೀಡುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಹಾಗೆಯೇ ತಾಯಿ ಕಳೆದುಕೊಂಡಿರುವ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ ಒತ್ತಾಯಿಸಿದರು. 
ಪಾಲಿಕೆ ಸದಸ್ಯರಾದ ಎ. ಶ್ರೀನಿವಾಸ್, ಶಶಿಕಲಾ ಗಂಗಹನುಯ್ಯ, ಜನಾಂಗದ ಮುಖಂಡರಾದ ಕುಂಭಯ್ಯ, ಕುಂಭಿನರಸಯ್ಯ, ಜಾಂಗೀರ್ ರವೀಶ್, ಪ್ರೆಸ್ ರಾಜಣ್ಣ, ಎನ್.ಎಸ್. ಶಿವಣ್ಣ ಪಾಲ್ಗೊಂಡಿದ್ದರು.