ಬಿಳಿದೇವಾಲಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚೌದ್ರಿಪಾಳ್ಯದ ರಾಮಚಂದ್ರ, ಉಪಾಧ್ಯಕ್ಷರಾಗಿ ಕೆಂಕೆರೆಯ ನಾಗರಾಜು ಅವಿರೋಧವಾಗಿ ಆಯ್ಕೆ
ಕುಣಿಗಲ್ : ತೀವ್ರ ಪೈಪೋಟಿಯ ನಡುವೆಯೂ ಬಿಳಿದೇವಾಲಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚೌದ್ರಿಪಾಳ್ಯದ ರಾಮಚಂದ್ರ, ಉಪಾಧ್ಯಕ್ಷರಾಗಿ ಕೆಂಕೆರೆಯ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಲತಾ ತಿಳಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿ, ಬಿಳಿದೇವಾಲಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿದೇವಾಲಯ ಹಾಲು ಉತ್ಪಾದರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ೧೨ ನಿರ್ದೇಶಕರಲ್ಲಿ ಆರು ಜನ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದು, ಆರು ಜನ ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದು ಸಮಬಲ ಸಾಧಿಸುವುದರೊಂದಿಗೆ ಭಾರೀ ಪೈಪೋಟಿ ಏರ್ಪಟ್ಟು ನಿರ್ದೇಶಕರನ್ನ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದರು. ಬೆಳಗ್ಗೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಚುನಾವಣಾ ಪ್ರಕ್ರಿಯೆ ಚುನಾವಣಾಧಿಕಾರಿ ತಡವಾಗಿಬಂದ ಕಾರಣ ೧೧-೪೦ಕ್ಕೆ ಆರಂಭವಾಯಿತು. ರಾಮಚಂದ್ರ ಮತ್ತು ಕಾಳಯ್ಯ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರೆ ನಾಗರಾಜು ಮತ್ತು÷ ಶಿವರಾಮಯ್ಯ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲಿಸಿದ ಚಿನಾವಣಾಧಿಕಾರಿ ಅಧ್ಯಕ್ಷ ಸ್ಥಾನಕ್ಕೆ÷ನಾಮ ಪತ್ರ ಸಲ್ಲಿಸಿದ್ದ ಕಾಳಯ್ಯನವರ ನಾಮ ಪತ್ರದಲ್ಲಿ ಸದಸ್ಯತ್ವ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಖಾಲಿ ಇದ್ದ ಕಾರಣ ತಿರಸ್ಕೃತಗೊಳ್ಳುತ್ತದೆ ಎಂದು ಹೇಳಿದಾಗ ನಿರ್ದೇಶಕರಾದ ಆನಂದ್ ಸಿಟ್ಟಿಗೆದ್ದು ನಾಮ ಪತ್ರ ಹರಿದು ಹಾಕಿದ್ದರಿಂದ ನಾಮ ಪತ್ರ ತಿರಸ್ಕೃತಗೊಂಡಿತು.
ಉಪಾಧ್ಯಕ್ಷರ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದು ಅನುಮೋದಕರ ಸಹಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತ ಗೊಂಡಿದ್ದರಿAದ ರಾಮಚಂದ್ರ ರವರನ್ನ ಅಧ್ಯಕ್ಷರನ್ನಾಗಿ, ನಾಗರಾಜು ರವರನ್ನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಚುನಾವಣಾಧಿಕಾರಿ ತಡವಾಗಿ ಬಂದಿದ್ದಕ್ಕೆ ನಿರ್ದೇಶಕರಾದ ಆನಂದ್ ಪ್ರಶ್ನಿಸಿದ್ದರಿಂದ ಬಸ್ ಪಂಚರ್ ಆಗ್ಗಿದ್ದರಿಂದ ತಡವಾಗಿ ಬರಬೇಕಾಯಿತು ಎಂದು ಸಮಜಾಯಿಶಿ ನೀಡಿ ಚುನಾವಣಾಧಿಕಾರಿಗಳು ಹಿಂಬರಹ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ರಂಗಸ್ವಾಮಿ ಇದ್ದರು. ಹುಲಿಯೂರುದುರ್ಗ ಪಿಎಸ್‌ಐ ಚೇತನ್ ಕುಮಾರ್ ಹಾಗೂ ಕ್ರೆöÊಮ್ ಸಬ್‌ಇನ್ಸ್ಪೆಕ್ಟರ್ ಆಗೂ ಸಿಬ್ಬಂದಿ ಸೂಕ್ರ ಬಂದೂಬಸ್ತ್ ನೀಡಿದ್ದರು.