ಪರಂಪರೆಯ ಹೆಗ್ಗಳಿಗೆ ಮತ್ತು ತಾತ, ದೊಡ್ಡತಾತನವರ ದುರಂತ ಅಂತ್ಯ ಸಿ.ಚಿಕ್ಕಣ್ಣಐಎಎಸ್

ಪರಂಪರೆಯ ಹೆಗ್ಗಳಿಗೆ ಮತ್ತು ತಾತ, ದೊಡ್ಡತಾತನವರ ದುರಂತ ಅಂತ್ಯ ಸಿ.ಚಿಕ್ಕಣ್ಣಐಎಎಸ್

ಪರಂಪರೆಯ ಹೆಗ್ಗಳಿಗೆ ಮತ್ತು ತಾತ, ದೊಡ್ಡತಾತನವರ ದುರಂತ ಅಂತ್ಯ  ಸಿ.ಚಿಕ್ಕಣ್ಣಐಎಎಸ್

ಪರಂಪರೆಯ ಹೆಗ್ಗಳಿಗೆ ಮತ್ತು ತಾತ, ದೊಡ್ಡತಾತನವರ ದುರಂತ ಅಂತ್ಯ

ಸಿ.ಚಿಕ್ಕಣ್ಣಐಎಎಸ್

ತಿಪ್ಪನಹಳ್ಳಿ ನಾನು ಜನ್ಮ ತಳೆದ ಊರಾದರೂ ನಮ್ಮ ವಂಶದವರುಕಟ್ಟಿ, ಹುಟ್ಟಿ ಬೆಳೆದ, ಬಾಳಿ ಬದುಕಿದಊರು 'ಪಾಳ್ಯ' ಎಂದು ನಾನು ಕೇಳಲ್ಪಟ್ಟಿದ್ದೇನೆ. ನಮ್ಮತಂದೆಯವರು ಆಗಾಗ ನನಗೆ ನೀಡುತ್ತಿದ್ದ ಮಾಹಿತಿಯ ತುಣುಕುಗಳ ಪ್ರಕಾರ ನಾವು ಮೂಲತಃ ಬಡವನಹಳ್ಳಿ ನಾಗೇನಹಳ್ಳಿ ರಸ್ತೆಯ ಪಕ್ಕದಲ್ಲಿದ್ದಒಂದುಕುಗ್ರಾಮ 'ಪಾಳ್ಯ' ಎಂಬ ಊರಿನವರು. ಒಂದನೇ ಮಹಾಯುದ್ಧ ವಿಶ್ವದಲ್ಲಿ ನಡೆಯುತ್ತಿದ್ದಕಾಲದಲ್ಲಿ ಆ ಭಾಗದಲ್ಲಿ ಈಗಿನ ಕೊರೋನಾ ಮಹಾಮಾರಿಯನ್ನೇ ಹೋಲುವ ಪ್ಲೇಗ್' ಎಂಬ ಹೆಮ್ಮಾರಿಊರು ಊರುಗಳನ್ನೇ ಗುಡಿಸಿ ಗುಂಡಾAತರ ಮಾಡಿತ್ತಂತೆ. ಈ ಮಾರಿಯಿಂದ ರಕ್ಷಿಸಿಕೊಳ್ಳಲು ನನ್ನ ಮುತ್ತಾತ, ನನ್ನತಾತಅಜ್ಜಿ ಮತ್ತುಅವರ ಮಕ್ಕಳು ಪಾಳ್ಯವನ್ನು ತೊರೆದು ತಿಪ್ಪನಹಳ್ಳಿಯ ಸುತ್ತಮುತ್ತಇರುವಅವರ ಹೊಲಗಳಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಅಳಿದುಳಿದ ಕುಟುಂಬದವರೊಡನೆ ವಾಸಿಸಲಾರಂಭಿಸಿದರು ಎಂದೂ, ಪ್ಲೇಗ್ ಭೀತಿಕೊನೆಗೊಂಡ ನಂತರ ತಿಪ್ಪನಹಳ್ಳಿಗೆ ಹೊಂದಿಕೊAಡ ನಮ್ಮ ಮುತ್ತಾತನವರು ಹೊಂದಿದ್ದಜಮೀನಿನಲ್ಲಿಯೇ ಪಕ್ಕಾ ಮನೆಗಳನ್ನು ಕಟ್ಟಿಕೊಂಡು ನೆಲೆಗೊಂಡರೆAದೂ, ನನ್ನಅಜ್ಜಿರಂಗಜ್ಜಿ ನನಗೆ ಹೇಳುತ್ತಿದ್ದರು.


ಹೀಗಾಗಿ ತಿಪ್ಪನಹಳ್ಳಿಯ ಮೂಲ ನಿವಾಸಿಗಳು ನಮ್ಮ ವಂಶಸ್ಥರನ್ನು ಈಗಲೂ ಪಾಳ್ಯದವರೆಂದೇಪರಿಗಣಿಸಿ, ಅದರಂತೆ ನಮ್ಮನ್ನು ಸಂಬೋಧಿಸಿದರೂ, ಮೂಲ ತಿಪ್ಪನಹಳ್ಳಿಯವರು ನಮ್ಮನ್ನು ನಮ್ಮವರೆಂದು ಇಂದಿಗೂ ಅಪ್ಪಿಕೊಂಡಿಲ್ಲ, ಒಪ್ಪಿಕೊಂಡಿಲ್ಲ. ಮೇಲಾಗಿ ತಿಪ್ಪನಹಳ್ಳಿಯ ಮೂಲ ವಕ್ಕಲಿಗರೆಲ್ಲಯಾರೂ ದೊಡ್ಡಕುಳಗಳಾಗಿರದೆ ಸಣ್ಣಪುಟ್ಟರೈತರಾಗಿದ್ದರು. ನಮ್ಮತಂದೆಯವರಿAದ ನಾನು ತಿಳಿದುಕೊಂಡ ಹಾಗೆ ಪಾಳ್ಯದ ವಂಶಸ್ಥರಿಗೆ ತಿಪ್ಪನಹಳ್ಳಿಯ ಆಜು-ಬಾಜಿನಲ್ಲಿರುವ ಸುಮಾರು 8-10 ಹಳ್ಳಿಗಳಲ್ಲಿ ಭೂಮಿ-ಕಾಣಿಇದ್ದುಕೊಂಡುಒAದು ಹಂತದಲ್ಲಿ, ಈ ಜಮೀನುಗಳ ಒಟ್ಟು ಮೊತ್ತ 200 ಎಕರೆಗಳಿಗೂ ಮೀರಿತ್ತು. ತಾತಚಿಕ್ಕಣ್ಣನವರು ಈ ವಂಶಸ್ಥರಯಜಮಾನರಾಗಿದೊಡ್ಡ ಸಾಹುಕಾರರೆಂದು ಕರೆಯಿಸಿಕೊಳ್ಳುತ್ತಿದ್ದರೆಂದೂ ಕೇಳಿ ನನಗೆ ಹೆಮ್ಮೆ ಎನಿಸುತ್ತಿತ್ತು.


ಮುತ್ತಾತ ಹಾಗೂ ಅವರಅಣ್ಣತಮ್ಮಂದಿರ ಮಾಹಿತಿ ನನಗೆ ಹೆಚ್ಚು ತಿಳಿದಿಲ್ಲ. ಆದ್ದರಿಂದಅದರ ಬಗ್ಗೆ ನಾನು ಬರೆಯಲಾಗುತ್ತಿಲ್ಲ. ಪಾಳ್ಯದ ವಂಶಸ್ಥರಯಜಮಾನರಾಗಿದ್ದತಾತಚಿಕ್ಕಣ್ಣನವರ ಬಗ್ಗೆ, ಅವರಅಣ್ಣತಮ್ಮಂದಿರು, ಅವರಕುಟುಂಬದ ವಿವರಗಳನ್ನೂ ಅವರ ಆಸ್ತಿ-ಪಾಸ್ತಿಯ ವಿವರಗಳನ್ನೂ ನಮ್ಮತಂದೆ ತಾಯಿಗಳ ಮೂಲಕ ತಿಳಿದುಕೊಳ್ಳಲು ಚಿಕ್ಕಂದಿನಿಂದಲೂ ನನ್ನ ಪ್ರಯತ್ನ ನಡೆದೇಇದೆ.


ನನ್ನ ಬಾಲ್ಯ


1942ನೇ ಇಸವಿ, ಬ್ರಿಟಿಷ್‌ಅಧಿಪತ್ಯದಲ್ಲಿದ್ದದೇಶದಉದ್ದಗಲಕ್ಕೂಗಾಂಧೀಜಿಯವರ ನೇತೃತ್ವದಲ್ಲಿ ಭಾರತ ಬಿಟ್ಟುತೊಲಗಿ ಎಂಬ ಆಕ್ರೋಶಭರಿತ ಚಳುವಳಿ ನಡೆಯುತ್ತಿತ್ತು. ಈ ಚಳುವಳಿಯ ಬಿಸಿ ನಮ್ಮೂರಿಗೆತಲುಪಿರಲಿಲ್ಲ. ಅಷ್ಟೇ ಏಕೆ, ನಮ್ಮ ವಂಶಸ್ಥರಲ್ಲಿಯಾರೂ ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲವಾದರೂ, ಅಲ್ಪಸ್ವಲ್ಪಓದಿಕೊಂಡ ನಮ್ಮೂರಿನಜನರಿಗೆ ಚಳುವಳಿಯ ಬಗ್ಗೆ ಮಾಹಿತಿಇತ್ತುಎಂದು ನಮ್ಮತಂದೆಯವರಿAದ ನಾನು ಶಾಲಾ ಬಾಲಕನಾಗಿದ್ದಾಗ ಕೇಳಿ ತಿಳಿದುಕೊಂಡಿದ್ದೆ.


ದಿನಾAಕ 3-4-1942ನೇ ಭಾನುವಾರ, ವಸಂತಋತುವಿನ ವೈಶಾಖ ಮಾಸಉತ್ತರಾಯಣ, ಜೈಷ್ಟ ನಕ್ಷತ, ವೃಷಭ ರಾಶಿಯಲ್ಲಿ ತಿಪ್ಪನಹಳ್ಳಿಯ ಶ್ರೀಮತಿ ಪುಟ್ಟರಂಗಮ ಮತ್ತು ಪಾಳ್ಯದ ಚೌಡಪನವರ ಮೊದಲ ಮಗನಾಗಿ ನಾನು ಜನ್ಮ ತಳೆದನೆಂದು ತಂದೆ ಮುಂದೊAದು ದಿನ ನನಗೆ ತಿಳಿಸಿದ್ದರು. ಶಾಲಾ ದಾಖಲೆಗಳಲ್ಲಿ ನನ್ನ ಹುಟ್ಟಿದ ದಿನಾಂಕವನ್ನು 16-5 1942 ಎಂದು, ನಮ್ಮತಂದೆಯವರು ನನ್ನನ್ನು ಶಾಲೆಗೆ ಸೇರಿಸುವಾಗ ಬಾಯಿ ತಪ್ಪಿನಿಂದ ಬರೆಸಿದ್ದ ಕಾರಣ ನನ್ನ ಹುಟ್ಟಿದ ದಿನಾಂಕ 16-5-1942 ಎಂದದಾಖಲಾಗಿದ್ದು, ಅದನ್ನು ಬದಲಾಯಿಸುವಯಾವ ಪ್ರಯತ್ನವನ್ನು ನಾನು ಮಾಡಲಿಲ್ಲ. ಜತೆಗೆ ನಮ್ಮತಂದೆಯವರು ನಾನು ಹುಟ್ಟಿದಜಾತಕವನ್ನು ಬಡವನಹಳ್ಳಿ ಅಶ್ವತ್ಥನಾರಾಯಣಪ್ಪನವರಿಂದ ಬರೆಸಿ ತಂದಿದ್ದೇನೆAದು ಹೇಳಿದರೆ, ಅದನ್ನು ನೋಡುವಓದುವ ಭಾಗ್ಯಇಲ್ಲಿಯವರೆಗೆ ನನ್ನದಾಗಲೇಇಲ್ಲ.


ನಾನು ಬೆಳೆದು ದೊಡ್ಡವನಾಗಿ ಶಾಲೆಗೆ ಹೋಗುವಾಗ, ನನ್ನ ಅಕ್ಕ ಚೌಡಮ್ಮ ಮತ್ತು ನನ್ನಅಮ್ಮ ಮನೆಯ ಹಟ್ಟಿ ಮುಂದೆ, ರಾತ್ರಿ ಊಟ ಮಾಡಿ ಈಚಲು ಚಾಪೆ ಹಾಸಿಕೊಂಡು ಪೂರ್ಣಚಂದ್ರನ ಬೆಳಕಿನಲ್ಲಿ ನಕ್ಷತ್ರಗಳನ್ನು ಎಣಿಸುವಆಟದ ಮಧ್ಯೆ ನನಗೆ ತಿಳಿದ ಮಾಹಿತಿದಾಖಲರ್ಹವಾಗಿದೆ. ನಮ್ಮ ತಂದೆತಾಯಿಗಳಿಗೆ ಒಟ್ಟುಎಂಟು ಜನಮಕ್ಕಳೆಂದೂ, ಮೊದಲ ಎರಡು ಹೆಣ್ಣು ಮಕ್ಕಳು ಅಲ್ಪ ವಯಸ್ಸಿನಲ್ಲೇ ತೀರಿ ಹೋದವೆಂದೂ, ಆನಂತರ 3ನೇ ಮಗುವಾಗಿ ಹುಟ್ಟಿದ ನಮ್ಮಕ್ಕಯಾವುದೇ ಖಾಯಿಲೆಗೆ ತುತ್ತಾಗದೆ ಉಳಿದುಕೊಂಡರೆAದೂ, ನಂತರದ ವರ್ಷದಲ್ಲಿಒಂದುಗAಡು ಮಗು ಹುಟ್ಟಿಅದೂ ಖಾಯಿಲೆಗೆ ತುತ್ತಾಗಿ ಹೆಚ್ಚು ದಿನ ಬದುಕಲಿಲ್ಲವೆಂದೂಕಣ್ಣೀರಿನ ಮಧ್ಯೆ ಬದುಕಿನದಾರುಣಕಥೆಯನ್ನು ವಿವರಿಸಿದ್ದರು. ನಂತರದ ವರ್ಷದಲ್ಲಿ ನೀನು ಹುಟ್ಟಿದೆಯೆಂದು ನನ್ನಮ್ಮ ನನ್ನಗಲ್ಲ ನೇವರಿಸಿ ನೆಟಿಕೆ ಮುರಿದುಕೊಂಡಿದ್ದು ನನಗೆ ಚೆನ್ನಾಗಿಜ್ಞಾಪಕವಿದೆ.


ನನ್ನ ನಂತರ ಹುಟ್ಟಿದವನು, ನನ್ನತಮ್ಮಜಯಣ್ಣ. ಅವನಿಗೂ ನನಗೂ ಎರಡು ವರ್ಷದಅಂತರ. ನಂತರ ಹುಟ್ಟಿದವನುದೊಡ್ಡಚೌಡಯ್ಯ, ಅವನಿಗೂ ಜಯಣ್ಣನಿಗೂ ಸುಮಾರು 3 ವರ್ಷಗಳ ಅಂತರ. ಹೀಗೆ ಒಟ್ಟು 8 ಜನ ಮಕ್ಕಳಲ್ಲಿ ಅಳಿದು ಉಳಿದವರು ನಾವು ನಾಲ್ಕು ಮಂದಿ, ಅಂದರೆ ಅಕ್ಕ ಚೌಡಮ್ಮ, ನಾನು, ತಮ್ಮಂದಿರಾದಜಯಣ್ಣ ಮತ್ತುದೊಡ್ಡಚೌಡಯ್ಯ, ನನ್ನ ಅಕ್ಕ ಈಗ್ಗೆ ಒಂದು ವರ್ಷದ ಹಿಂದೆತನ್ನ 85ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು. ನಾವು ಮೂರುಜನಅಣ್ಣತಮ್ಮಂದಿರು ಈಗಲೂ ಅನ್ನೋನ್ಯವಾಗಿದ್ದೇವೆ.


ವಾಡಿಕೆಯಂತೆ ಮನೆಗೆ ಜೇಷ್ಠ ಪುತ್ರನ ಸ್ಥಾನ ನನಗೆ ದೊರೆತು, ನನ್ನತಾತನ ಹೆಸರನ್ನು ನನಗೂ ಇಟ್ಟರು. ನನ್ನತಾತ ಅಂದಿನ ಅವರಕಾಲದಲ್ಲಿ ಮನೆಗೆ ಯಜಮಾನರಾಗಿ, ಸುಮಾರು 8 ಹಳ್ಳಿಯಲ್ಲಿ 200 ಎಕರೆಜಮೀನು ಹೊಂದಿದದೊಡ್ಡಜಮಿನಾರರೆAದೂ, ಕೊಡುಗೈದೊರೆಎಂದೂ, ವ್ಯವಹಾರದಲ್ಲಿ ಸೂಕ್ಷ್ಮಮತಿಗಳಾಗಿದ್ದರೆಂದೂ ನಾನು ಕೇಳಿದ್ದೇನೆ, ಮನೆತನದ 4 ಮಂದಿ ಅಣ್ಣತಮ್ಮಂದಿರು, ಅವರಒಟ್ಟು 8 ಮಂದಿ ಮಕ್ಕಳು ಅವರಕುಟುಂಬದ ಆಳುಕಾಳುಗಳ ಸಮೇತ ಮನೆಯಲ್ಲಿ ಸುಮಾರು 50 ಮಂದಿ ಇದ್ದರೆಂದೂ, ಅವರಿಗೆದೈನಂದಿನ ಊಟದ ವ್ಯವಸ್ಥೆಗೆ 5 ಜನ ಹೆಂಗಸರು ಬೆಳಗಿನಿಂದ ರಾತ್ರಿಯವರೆಗೆದುಡಿಯುತ್ತಿದ್ದರೆಂದೂ, 8 ರಿಂದ 10 ಜನ ಆಳುಗಳು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ, 4 ಜನ ಆಳುಗಳು, ಹಸು, ಎಮ್ಮೆ, ಹೋರಿಗಳ ಆರೈಕೆ ಮಾಡುತ್ತಿದ್ದರೆಂದೂ 4 ಗಾಡಿಗಳು, ಎರಡು ಕುದುರೆಗಳು ಇದ್ದು, ತಾತನವರು ಪರಊರಿಗೆಕುದುರೆ ಮೇಲೆ ಹೋಗುತ್ತಿದ್ದರೆಂದೂ ನಮ್ಮಮ್ಮರಾತ್ರಿ ಬಿಡುವಿನ ಸಮಯದಲ್ಲಿ ನಮಗೆ ಹೇಳುತ್ತಿದ್ದರು. ಹೀಗಾಗಿ ಮನಸ್ಸಿನಲ್ಲಿ ಮನೆತನದ ಬಗ್ಗೆ ಅಭಿಮಾನ, ತಾತನ ಬಗ್ಗೆ ಅತೀವವಾದಗೌರವ ಭಾವನೆಗಳನ್ನು ನನ್ನಲ್ಲಿ ಹೊರಹೊಮ್ಮಿಸುತ್ತಿದ್ದವು,


ಏನಾದರೇನು, ನಾನು ನನ್ನತಾತನ ಮುಖವನ್ನು ನೋಡಿಯೇಇಲ್ಲ. ತಿಪ್ಪನಹಳ್ಳಿಯಲ್ಲಿ 32 ಅಂಕಣದ ಎರಡು ತಾರಸಿ ಮನೆಗಳನ್ನು ತಾತನ ನೇತೃತ್ವದಲ್ಲಿ ನಮ್ಮತಂದೆ, ನಮ್ಮ ಚಿಕ್ಕಪ್ಪಗಳು ಕಟ್ಟಿಸಿ, ಅದರಗೃಹಪ್ರವೇಶವನ್ನು ವಿಜೃಂಭಣೆಯಿAದ ನೆರವೇರಿಸಿದರು. ಹೊಸ ಮನೆಗೆ ಪ್ರವೇಶ ಮಾಡಿದ 3ನೇ ರಾತ್ರಿ ಆ ಮನೆಯ ಪಡಶಾಲೆಯಲ್ಲಿ ಮಲಗಿದ್ದತಾತ ಬೆಳಗ್ಗೆ ಜೀವಂತವಾಗಿ ಏಳಲೇ ಇಲ್ಲ. ವಿಧಿವಶರಾದ ದಿನಾಂಕವನ್ನು ಹಿರಿಯರು ನಮಗಾರಿಗೂ ತಿಳಿಸದಿದ್ದರೂ ನಾವು ವಾಸಿಸುತ್ತಿದ್ದ ಆ ದೊಡ್ಡ ಮನೆಯ ಮುಂದೆ 1938 ಎಂದು, ದೊಡ್ಡ ಅಕ್ಷರಗಳಲ್ಲಿ ಬರೆಸಿದ್ದ ಮಾಹಿತಿಯಿಂದಗೃಹಪ್ರವೇಶದ ವರ್ಷ ಹಾಗೂ ತಾತನವರಅವಸಾನದ ವರ್ಷಎರಡೂಒಂದೇಎAದು ನಮಗೆ ಮನದಟ್ಟಾಯಿತು.


ನನ್ನತಾತಅವರಅಣ್ಣದೊಡ್ಡಚೌಡಪ್ಪ ಹಾಗೂ ಮೂವರುತಮ್ಮಂದಿರುಕರಿಯಪ್ಪ, ಚಿಕ್ಕಚೌಡಪ್ಪ ಮತ್ತುಇವರಜತೆಗೆ ಎಳೆಚೌಡಪ್ಪ ಎಂಬುವವರನ್ನು ಪಾಳ್ಯದಲ್ಲಿ ವಾಸವಿರುವಾಗಲೆ, ಮನೆಮಗನಾಗಿ ದತ್ತು ಸ್ವೀಕರಿಸಿ ಎಲ್ಲರಂತೆಅವರನ್ನು ಪಾಳ್ಯದ ವಂಶಸ್ಥರ ಭಾಗವಾಗಿ ಪರಿಗಣಿಸಿ ಅವರಿಗೂ ಮನೆ ಮತ್ತುಜಮೀನಿನಲ್ಲಿ ಭಾಗ ನೀಡಲಾಗಿತ್ತು. ತಂದೆಯವರು ಹೇಳಿದಂತೆ, 1935ರಲ್ಲಿ ನನ್ನತಾತನವರಾದ ಮನೆಯಯಜಮಾನರಾಗಿದ್ದಚಿಕ್ಕಣ್ಣನವರು ಆಸ್ತಿಯನ್ನು ಐದು ಭಾಗ ಮಾಡಿದೊಡ್ಡಚೌಡಪ್ಪ, ಕರಿಯಪ್ಪ, ಚಿಕ್ಕಚೌಡಪ್ಪಇವರಿಗೆ ಸಮನಾಗಿ ಹಂಚಿ, ಐದನೆಯವರಾದ ಎಳೆಚೌಡಪ್ಪನವರಿಗೆ ಸ್ವಲ್ಪಕಡಿಮೆಜಮೀನು ನೀಡಿದ ವಿಷಯಕ್ಕೆಅಣ್ಣತಮ್ಮಂದಿರಲ್ಲಿ ಮನಸ್ತಾಪಕ್ಕೆ ಕಾರಣವಾಗಿತ್ತೆಂದು ತಿಳಿಯಿತು. ನಮ್ಮದೊಡ್ಡತಾತನವರಾದದೊಡ್ಡಚೌಡಪ್ಪನವರು, ದೊಡ್ಡತೋಟದಒಂದು ಭಾಗದಲ್ಲಿಚೆಟ್ಟಿನ ಬಾವಿಯನ್ನು ವಡ್ಡರನ್ನುಇಟ್ಟುಕೊಂಡುತೆಗೆಸುತ್ತಿದ್ದರು. ಸುಮಾರು 30 ಅಡಿ ಅಗಲ 40 ಅಡಿ ಆಳದ ಈ ಬಾವಿಯ ಮಣ್ಣುಚೆಟ್ಟಿನಿಂದಕೂಡಿದ್ದು, ಅಗೆಯಲುತುಂಬಾಕಷ್ಟವಾಗುತ್ತಿತ್ತು. ಪಕ್ಕದತಾಲ್ಲೂಕಿನಿಂದಡೈನಮೆAಟ್ ತರಿಸಿ ಅದರ ಸಹಾಯದಿಂದ ಸುಮಾರುಒಂದು ವರ್ಷ ಕಾಲ ಕಷ್ಟಪಟ್ಟು 40 ಅಡಿ ಆಳಕ್ಕೆ ಬಾವಿಯನ್ನು ಕೊರೆಯಿಸಿದರು. ಬೇಸಿಗೆಯಾದ್ದರಿಂದ ನೀರುಅತ್ಯಲ್ಪವಾದ್ದರಿಂದ, ಪಕ್ಕದದೊಡ್ಡ ಹಳ್ಳದ ಕಡೆಗೆ ಸುಮಾರು 100 ಅಡಿ ಸುರಂಗವನ್ನುತೋಡಿಸಿದನಂತರನೀರಿನಒರತೆಜಾಸ್ತಿಯಾಯಿತು.

ಒಂದುದಿನ ಮಧ್ಯಾಹ್ನಆಳುಗಳನ್ನೆಲ್ಲಊಟಕ್ಕೆಕಳುಹಿಸಿ, ತಾತನವರು ಮೆಟ್ಟಿಲು ಇಳಿದು ಒಳ ಹೋಗಿಯಾರ ಗಮನಕ್ಕೂ ಬಾರದಂತೆ ಸುರಂಗವನ್ನು ಅವಲೋಕಿಸುತ್ತಿದ್ದರು. ಊಟದನಂತರಆಳೊಬ್ಬಒಂದುಸಾಧಾರಣವಾದಕಲ್ಲುಚಪ್ಪಡಿಯನ್ನುತೆಗೆದುಕೊಂಡುಬಾವಿಯಲ್ಲಿಜನಇದ್ದಾರೆಂದುತಿಳಿಯದೆಮೇಲಿನಿಂದಬಾವಿಗೆಹಾಕಿದ.

ಅದುನೇರವಾಗಿನಮ್ಮದೊಡ್ಡತಾತನವರತಲೆಮೇಲೆಬಿದ್ದುಅವರುಸ್ಥಳದಲ್ಲಿಯೇಮೃತಪಟ್ಟರುಎಂದುನಮ್ಮತಂದೆಯವರುಅತೀವದುಃಖದಿಂದಈಘಟನೆಯನ್ನುನೆನೆದುಒಮ್ಮೆಕಣ್ಣೀರೊರೆಸಿಕೊಂಡರು.

1935ರಿಂದ 1948ರವರೆಗೆ, ನಮ್ಮತಂದೆಯವರುಅವರತಮ್ಮದೊಡ್ಡಚಿಕ್ಕಪ್ಪ, 3ನೆಯವರುಚಿಕ್ಕಣ್ಣ (ಅಪ್ಪಯ್ಯ) ಮತ್ತುನಾಲ್ಕನೆಯವರಾದಶಂಕರಪ್ಪಒಟ್ಟಾಗಿಒಂದೇಸೂರಿನಡಿಸಂಸಾರನಡೆಸಿದ್ದರು. ನಾಲ್ಕನೆ ಚಿಕ್ಕಪ್ಪನವರಾದ ಶ್ರೀಟಿ. ಶಂಕರಪ್ಪನವರನ್ನುಮಧುಗಿರಿ, ತುಮಕೂರಿಗೆ ಕಳುಹಿಸಿಬಿಎಶಿಕ್ಷಣ ಕೊಡಿಸಿದ್ದರು. ಮಹಾಭಾರತನಡೆದ ನಮ್ಮದೇಶದಲ್ಲಿಎಲ್ಲಾಅಣ್ಣತಮ್ಮಂದಿರಂತೆ ಕಿತ್ತಾಡಿ, ಮನಸ್ತಾಪಗಳಿದ್ದರೂ ಎಲ್ಲರೂಸೇರಿ 36 ಅಂಕಣದ ಎರಡು ಮನೆಗಳನ್ನುಇಟ್ಟಿಗೆ, ಗಾರೆಯಿಂದನರ‍್ಮಾಣಮಾಡಿ, ಸೂರಿಗೆಬೇವಿನ ತೊಲೆ ಮತ್ತು ಜಂತೆಗಳನ್ನುಅಳವಡಿಸಿ, ಸುತ್ತಲ 10 ಹಳ್ಳಿಗಳಲ್ಲಿಯಾರೂ ಇಂತಹಮನೆ ಕಟ್ಟಲಿಲ್ಲ. ಇವರುಕಟ್ಟಿಸಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

(ಮುಂದುವರಿಯುವುದು)