ಸ್ವತಂತ್ರ ಭಾರತದ ಮೊಟ್ಟ ಮೊದಲ ಚುನಾವಣೆಯ ಪ್ರತ್ಯಕ್ಷದರ್ಶಿ !!

ಸ್ವತಂತ್ರ ಭಾರತದ ಮೊಟ್ಟ ಮೊದಲ ಚುನಾವಣೆಯ ಪ್ರತ್ಯಕ್ಷದರ್ಶಿ !!

(ಹಿಂದಿನ ಕಿನ್ನರಿಯಿಂದ)


ರಾಗಿ ಮುದ್ದೆ , ನವಣೆ ಮುದ್ದೆ, ಆರಕದ ಅನ್ನ, ಊದಲು ರೊಟ್ಟಿ, ನಮ್ಮ ದೈನಂದಿನ ಆಹಾರವಾಗಿತ್ತು, ಅಡಿಕೆ, ಕಡಲೆಕಾಯಿ ಬೆಳೆಯಿಂದ ಕೈಲಿ ಅಲ್ಪಸ್ವಲ್ಪ ಕಾಸು ಓಡಾಡುತ್ತಿದ್ದರೂ, ಶೆಟ್ಟರ ಅಂಗಡಿಯವರು ತೂಕದಲ್ಲಿ ಬೆಲೆಯಲ್ಲಿ ಮೋಸ ಮಾಡಿ, ಹಿಂದಿನ ಸಾಲಕ್ಕೆ ಈಗಿನ ಮಾಲನ್ನು ಲೆಕ್ಕಕ್ಕೆ ಸೇರಿಸಿ, ಕೊಟ್ಟಷ್ಟು ಹಣವನ್ನು ಪಡೆದು ನಾವು ತೃಪ್ತಿಗೊಳ್ಳಬೇಕಾಗಿತ್ತು.

ಸ್ವತಂತ್ರ ಭಾರತದ ಮೊಟ್ಟ ಮೊದಲ ಚುನಾವಣೆಯ ಪ್ರತ್ಯಕ್ಷದರ್ಶಿ !!


    ಪಂಚಾಯಿತಿದಾರರಿಂದಾದ ಪಾಲು ಪಾರಿಕತ್ತಿನ ಪ್ರಕಾರ ನಮ್ಮ ಭಾಗಕ್ಕೆ 3 ಎಕರೆ ದಿನ್ನೆ ಹೊಲ, 4 ಎಕರೆ ದೊಡ್ಡ ತೋಟದ ಅಡಿಕೆ, ಮಾವು, ಹೊಂಗೆ ತೋಪಿರುವ ಒಂದು ತಾಳು, 1 ಎಕರೆ ಮುಡುಪಣ್ಣನ ಅಡಿಕೆ ತೋಟ, ಎರಡು ಎಕರೆ ಬಂಡೆ ಹೊಲ, 2.25 ಎಕರೆ ಬಳೆಹಳ್ಳಿ ಹತ್ತಿರದ ಜಮೀನು. 1.5 ಎಕರೆ ಜಕ್ಕೇನಹಳ್ಳಿಯ ಹತ್ತಿರದ ಜಮೀನು, 2 ಎಕರೆ ದಂಡಿನದಿಬ್ಬದ ಹತ್ತಿರದ ಒಡ್ಡರ ಹಟ್ಟಿಯಲ್ಲಿದ್ದ ಜಮೀನು (ಇದನ್ನು ನಂತರ ವಿನೋಭಾ ಭಾವೆಯವರ ಭೂದಾನದಲ್ಲಿ ದಾನವಾಗಿ ನೀಡಿದರು. ನಮ್ಮ ತಂದೆ), ಕಟ್ಟೆ ಹಿಂದೆ ಕಾಲು ಎಕರೆಯ ನಾಲ್ಕು ತುಂಡು ಜಮೀನುಗಳು, ಒಟ್ಟು ಅಂದಾಜು 10 ಎಕರೆ ಜಮೀನು ನಮ್ಮ ಪಾಲಿಗೆ ಬಂದ ಆಸ್ತಿಗಳು. ತಿಪ್ಪನಹಳ್ಳಿಯಲ್ಲಿ ನಮ್ಮ ತಾತನವರು ಕಟ್ಟಿಸಿದ್ದ ದೊಡ್ಡ ಮನೆಯಲ್ಲಿ ಅರ್ಧ ಭಾಗವನ್ನು ನಮಗೂ, ಇನ್ನರ್ಧ ಭಾಗವನ್ನು ದೊಡ್ಡಚಿಕ್ಕಪ್ಪ ಕಾಕನವರಿಗೂ ಕೊಟ್ಟು ಎರಡು ತಿಂಗಳಲ್ಲಿ ಇಟ್ಟಿಗೆ ಮಣ್ಣು ತರಿಸಿ ಊಟದ ಮನೆ ಮತ್ತು ದೊಡ್ಡ ಹಾಲನ್ನು ಎರಡು ಭಾಗ ಮಾಡಿದರು. ಪುಣ್ಯಕ್ಕೆ ಎರಡೂ ಮನೆಯವರು ಒಂದೇ ಬಾಗಿಲಿನಿಂದ ಓಡಾಡುವಂತೆ ನೋಡಿಕೊಂಡರು. ಚಿಕ್ಕಪ್ಪನವರ ಅಡುಗೆ ಮನೆ ವಾಯುವ್ಯಕ್ಕಿದ್ದರೆ, ನಮ್ಮದು ಈಶಾನ್ಯ ಮೂಲೆಗೆ ಮಾಡಲಾಗಿತ್ತು. ವಾಸ್ತುದೋಷದಿಂದಾಗಿ ನಮ್ಮ ಸಂಸಾರಕ್ಕೆ ಹೆಚ್ಚು ಕಷ್ಟನಷ್ಟಗಳಾದವು ಎಂದು ನಂತರದಲ್ಲಿ ನಮಗೆ ಶ್ಯಾನುಭೋಗರಾದ ರಂಗಣ್ಣನವರೂ, ಮರೋಹಿತರಾದ ಅಶ್ವತ್ಥನಾರಾಯಣಪ್ಪನವರು ತಿಳಿಸಿದರು. 


ಆಸ್ತಿ ಭಾಗವಾದ ಮೇಲೆ ನಮ್ಮ ತಂದೆಯವರು ಒಂಟಿಯಾದರು. ಮನೆಯ ಯಜಮಾನಿಕೆ ಹೋಗಿ, ಸಾಮಾನ್ಯ ರೈತನಂತೆ ಹೊಲದಲ್ಲಿ ದುಡಿಯಲು ಆರಂಭಿಸಿದರು. ಮಾದಿಗ ಸಮುದಾಯದ ನರಸಿಂಹಯ್ಯ ಅವರ ಮಗ ತಿಪ್ಪ, ನಮ್ಮ ಮನೆಯು ಆಳಾಗಿ ಮುಂದುವರಿದರೂ, ಆತಂಗೆ ವರ್ಷದ ಕೂಲಿ, ದಿನದ ಊಟ, ವರ್ಷಕ್ಕೊಮ್ಮೆ ಒಂದು ಜತೆ ಅಂಗಿ, ಚಡ್ಡಿ, ಟವಲ್, ಖಾಯಂ ಆಗಿ ಕೊಡಬೇಕಾಗಿ ಬಂತು. ಜಮೀನಿನಲ್ಲಿ ಯಾವುದೇ ಆದಾಯವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ನಮ್ಮ ತಂದೆಯವರಿಗೆ ಹೋರಿಗಳನ್ನು ಕೊಂಡು, ಚೆನ್ನಾಗಿ ಸಾಕಿ ಬೆಳೆಸಿ ಒಂದು ವರ್ಷದ ನಂತರ ಮಾರಾಟ ಮಾಡಿ ಹೊಸ ಕರುಗಳನ್ನು ತಂದು ಸಾಕುವ ಚಟವಿತ್ತು. ಅಲ್ಲದೆ ಸುತ್ತಮುತ್ತಲ ಹಳ್ಳಿಗಳಲ್ಲಿ ನಡೆಯುವ ಎತ್ತಿನ ಜಾತ್ರೆೆಗಳಿಗೆ ತಪ್ಪದೆ ಹೋಗಿ ವಾರಗಟ್ಟಲೆ ಅಲ್ಲಿ ಅವರಿವರಿಗೆ ಎತ್ತುಗಳನ್ನು ಕೊಡಿಸಿ ಮನೆಗೆ ಬರುತ್ತಿದ್ದರು. ಊರಿನಲ್ಲಿರುವಾಗಲೂ ಕೋರ್ಟು, ಕಛೇರಿ ಎಂದು ಮಧುಗಿರಿಗೆ ಬೆಳಗ್ಗೆ ಹೋದರೆ, ರಾತ್ರಿ ಸಿದ್ದೇಶ್ವರ ಬಸ್ಸಿನಲ್ಲಿ ಹಿಂದಿರುಗುತ್ತಿದ್ದರು.


     ನಾವು 3 ಗಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದೆವು. ಶಾಲೆಗೆ ಹೋಗುವ ಮುನ್ನ ಬೆಳಿಗ್ಗೆ ಕೊಟ್ಟಿಗೆಯಿಂದ ಸಗಣಿಯನ್ನು ಮಂಕರಿಯಲ್ಲಿ ತುಂಬಿ ತಲೆಯ ಮೇಲೆ ಹೊತ್ತು ತಿಪ್ಪೆಗೆ ಸುರಿದು ಬಂದು, ಕೊಟ್ಟಿಗೆ, ಮನೆ ಮುಂದಿನ ಕಸವನ್ನು ನಾನು ಗುಡಿಸಿ ಅಚ್ಚುಕಟ್ಟು ಮಾಡಿದರೆ, ನನ್ನ ತಮ್ಮ ಜಯಣ್ಣ ಹೋರಿಗಳಿಗೆ ಜೋಳದ ಸಪ್ಪೆ ಅಥವಾ ಸೆಡೆಸೊಪ್ಪು, ಅವರೆ ಕಡ್ಡಿ ಮುಂತಾದವುಗಳನ್ನು ತಂದು ಮೇಯಿಸುತ್ತಿದ್ದನು. ತಂದೆಯವರು ಅಡಿಕೆ ತೋಟದ ಕಡೆಗೆ ಹೋಗಿ ಕಂಕುಳಲ್ಲಿ ಅಡಿಕೆ ಪಟ್ಟೆಯನ್ನು, ತೆಂಗಿನ ಕಾಯಿಗಳನ್ನೂ ಹೊತ್ತುಕೊಂಡು ಮನೆಗೆ ಬರುತ್ತಿದ್ದರು. ಮನೆಯಲ್ಲಿ ಹೋರಿಗಳ ಜೊತೆಗೆ ಸದಾ ಹಾಲಿಗಾಗಿ ಎರಡು ಹಸು, ಒಂದು ಎಮ್ಮೆ ಖಾಯಂ ಆಗಿ ಇರುತ್ತಿದ್ದವು. ಹಸುಗಳನ್ನು ಊರ ದನಗಳ ಜತೆ ಕಾಡಿಗೆ ಹೊಡೆದರೆ, ಎಮ್ಮೆಯನ್ನು ಅಮ್ಮ ಬುತ್ತಿಯ ಜತೆಗೆ ಹೊಲಕ್ಕೆ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಸಂಜೆ ಹೊತ್ತಿಗೆ ಬರುತ್ತಿದ್ದರು. ಬಂದು ಅಡುಗೆ ವ್ಯವಸ್ಥೆ ಮಾಡುತ್ತಿದ್ದರು. ಬಡವನಹಳ್ಳಿ ಮಿಡಲ್ ಸ್ಕೂಲಿನಲ್ಲಿದ್ದ ನಾನು ಮತ್ತು ಜಯಣ್ಣ ಮನೆಯ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೆವು. ಕೊನೆಯ ತಮ್ಮ ತಿಪ್ಪನಹಳ್ಳಿಯ ಶಾಲೆಯಲ್ಲಿ ಕಲಿಯುತ್ತಿದ್ದು ಅವನಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಂಡೆವು.


ಮೊದಲ ಸಾರ್ವತ್ರಿಕ ಚುನಾವಣೆ


   ಭಾರತದ ಹೊಸ ರಾಜ್ಯಾಂಗದ ಅನುಸಾರ 1952ರಲ್ಲಿ ದೇಶದಾದ್ಯಂತ ಪ್ರಕಾರ ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆಗಳು ನಡೆದವು. ಈ ಹಿಂದೆ  ಮೈಸೂರು ಸಂಸ್ಥಾನದ ರಾಜ್ಯಾಂಗ ರಚನಾ ಸಭೆಗೆ ಸದಸ್ಯರನ್ನು ಚುನಾಯಿಸಲು  ಸಾರ್ವತಿಕ ಚುನಾವಣೆಗೆ ಮಧುಗಿರಿಯ ಶ್ರೀ ಮಾಲಿಮರಿಯಪ್ಪನವರು ಸ್ಪರ್ಧಿ, ಅಪಾರ ಜನ ಬೆಂಬಲ ಪಡೆದು ತುಮಕೂರು ಜಿಲ್ಲೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.


   1952ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ-ಪಾವಗಡ ಎಂಬ ದ್ವಿಸದಸ್ಯ ಚುನಾವಣಾ ಕ್ಷೇತ್ರದಿಂದ ಮತ್ತೆ ಮಾಲಿಮರಿಯಪ್ಪನವರು ಸ್ಪರ್ಧಿಸಿ, ಈ ಎರಡೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಆ ಸಮಯದಲ್ಲಿ ಮೈಸೂರು ಸಂಸ್ಥಾನದ ಮುಖ್ಯಮಂತಿಗಳಾಗಿ ಕೆ.ಸಿ, ರೆಡ್ಡಿಯವರಿದ್ದರು.


   ಕಾಂಗ್ರೆಸ್ ಪಕ್ಷದ ಪರವಾಗಿ ಕೆ. ಹನುಮಂತಯ್ಯ, ಬಿ.ಡಿ. ಜತ್ತಿ, ತಾಳೆಕೆರೆÉ ಸುಬ್ರಹ್ಮಣ್ಯ ಮುಂತಾದವರು ಅವರ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ನಾನು ತಿಪ್ಪನಹಳ್ಳಿಯ ಪ್ರಾಥಮಿಕ ಶಾಲೆ 3ನೇ ತರಗತಿಯಲ್ಲಿ ಓದುತ್ತಿರುವಾಗ, ನಮ್ಮ ತಂದೆಯವರ ಜತೆ ಬಡವನಹಳ್ಳಿಯ ವಾರದ ಸಂತೆಗೆ ಹೋಗಿದ್ದೆ. ಅಲ್ಲಿಗೆ ನಾಲ್ಕೆöÊದು ಕಾರುಗಳು, ಒಂದು ಬಸ್ಸು ಮೈಕ್ ಹಾಕಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಮಾಲಿಮರಿಯಪ್ಪನವರ ಪರ ಪ್ರಚಾರಕ್ಕೆ ಬಂದಿದ್ದವು. ಸಿಕ್ಕವರ ಕೈಗೆಲ್ಲಾ ಕರಪತ್ರ ನೀಡಿ ಓಟುಕೊಡಿ ಎಂದು ಕೋರುತ್ತಿದ್ದರು. ಹೀಗಿರುವಾಗ ಕಾರಿನಿಂದ ಕೆಳಗೆ ಇಳಿದ ಮಾಲಿಮರಿಯಪ್ಪನವರ ಜತೆ ತೀರ ಕುಳ್ಳಗಿದ್ದ ಬಿ.ಡಿ. ಜತ್ತಿಯವರು ಮತ್ತು 6 ಅಡಿ ಎತ್ತರವಿದ್ದ ಮೈಸೂರು ಪೇಟ ಧರಿಸಿ ಕಪ್ಪು ಕೋಟು ಪಂಚೆ ಹಾಕಿದ್ದ ಕೆಂಗಲ್ ಹನುಮಂತಯ್ಯನವರು ಭಾಷಣ ಮಾಡಿ ಕಾಂಗ್ರೆಸ್ಸನ್ನು ಗೆಲ್ಲಿಸಲು ಕೋರಿದರು. ಚುನಾವಣೆ ಅಂದರೇನು ಎಂದು ಅಲ್ಲಿನ ಯಾರಿಗೂ ಗೊತ್ತಿಲ್ಲದ ಕಾಲ. ಚುನಾವಣೆಯಲ್ಲಿ ಯಾರು ವೋಟ್ ಹಾಕಬೇಕು ಎಂದೂ ಜನರಿಗೆ ತಿಳಿದಿರಲಿಲ್ಲ. ಚುನಾವಣೆಯ ದಿನ ನಮ್ಮ ಹಳ್ಳಿಯಿಂದ 7-8 ಕಮಾನು ಗಾಡಿಗಳಲ್ಲಿ, ಜನಗಳನ್ನು ತುಂಬಿಕೊAಡು ಎನ್‌ಟಿಎಂ ಶಾಲೆಯಲ್ಲಿ ಸಾಲಾಗಿ ನಿಲ್ಲಿಸಿ, ಒಂದು ಬೆರಳಿಗೆ ಇಂಕನ್ನು ಬಳಿದು, ಒಳಗೆ ಹೋಗಿ ಇದನ್ನು ನಿಮಗೆ ಬೇಕಾದವರ ಚಿತ್ರದ ಮೇಲೆ ಒತ್ತಿ ಎಂದು ಒಂದು ಸ್ಟಾಂಪ್ ನೀಡುತ್ತಿದ್ದುದನ್ನು ನಾನು ನೋಡುತ್ತಾ ಚುನಾವಣೆ ಅಂದರೆ ಹೀಗೇನಾ ಅಂತ ಅಂದುಕೊAಡಿದ್ದೆ. ಸ್ವಲ್ಪ ದಿನ ಆದ ಮೇಲೆ ಗೊತ್ತಾಯ್ತು ಮಾಲಿಮರಿಯಪ್ಪನವರು ಗೆದ್ದಿದ್ದಾರೆ ಎಂದು.'


******
ನಮ್ಮಕ್ಕ ಚೌಡಮ್ಮನನ್ನು ಕಂಡರೆ ನಮ್ಮೆಲ್ಲರಿಗೂ ಎಲ್ಲಿಲ್ಲದ ಪ್ರೀತಿ, ನಮ್ಮ ತಂದೆ ತಾಯಂದಿರಿಗAತೂ ಅವರ ಮೇಲೆ ಪಂಚಪ್ರಾಣ, ಇದಕ್ಕೆಲ್ಲಾ ಕಾರಣ ಆಕೆ ಅಳಿದು ಉಳಿದ ಕುಟುಂಬದ ಮೊದಲನೆ ಮಗಳು, ನಮಗೆಲ್ಲಾ ಕಷ್ಟಕಾಲದಲ್ಲಿ ಆಪತ್ಬಾಂಧವರಾಗಿ, ನೆರವಾದವರು. ಅಕ್ಕನಿಗೆ ಮದುವೆ ಮಾಡಬೇಕೆಂದು ಅಮ್ಮ ಆಗಾಗ್ಗೆ ತಂದೆಯನ್ನು ನೆನಪಿಸಿ, ಎಲ್ಲಾದರೂ ಒಳ್ಳೆ ಕಡೆ ಗಂಡು ಹುಡುಕಿ ಎಂದು ಹೇಳುತ್ತಿದ್ದರು. ನಮ್ಮ ತಂದೆಯವರ ನಿಗಾದಲ್ಲಿ, ನಮ್ಮ ಸೋದರ ಮಾವ ಗಿರೇಗೊಂಡನ ಹಳ್ಳಿಯ ದೊಡ್ಡಕರಿಯಪ್ಪನವರ ತಮ್ಮ ಒಬ್ಬರು ಇಂಜಿಯರಿAಗ್ ಓದಿಕೊಂಡಿದ್ದು ಅವರನ್ನು ಗುರಿಯಾಗಿಟ್ಟುಕೊಂಡಿದ್ದರು ಎನಿಸುತ್ತಿತ್ತು. ಈ ಬಗ್ಗೆ ದೊಡ್ಡಕರಿಯಪ್ಪನವರೊಡನೆ ಮಾತನಾಡಿ, ಇರುವುದಾಗಿಯೂ, ಅವರೂ ಒಪ್ಪಿಕೊಂಡಿದ್ದಾರೆAದೂ ತಂದೆಯವರು ನಮಗೆ ಹೇಳುತ್ತಿದ್ದರು. ಆದರೆ ಆಗಾಗ ನಮ್ಮೂರಿಗೆ ತಪ್ಪದೇ ಭೇಟಿ ನೀಡುತ್ತಿದ್ದ ದೊಡ್ಡಕರಿಯಪ್ಪನವರು ಇತ್ತೀಚೆಗೆ ಬರುವುದನ್ನೇ ನಿಲ್ಲಿಸಿದ್ದರು. ಇದರಿಂದಾಗಿ ನಮ್ಮ ತಂದೆಯವರು ಆತಂಕಗೊAಡಿದ್ದರು. ಇತ್ತೀಚೆಗೆ ಗಿರೇಗೊಂಡನಹಳ್ಳಿಗೆ ಹೋಗಿ ಬಂದಿದ್ದ ನಮ್ಮ ಚಿಕ್ಕಪ್ಪ ದೊಡ್ಡಚಿಕ್ಕಪ್ಪನವರನ್ನು, ನಮ್ಮ ತಂದೆಯವರು, 'ಕರಿಯಪ್ಪ ಮದುವೆ ವಿಷಯವನ್ನು ನಿನ್ನ ಹತ್ತಿರ ಏನಾದರೂ ಹೇಳಿದನೆ?' ಎಂದು ಕೇಳಿದರು. 'ಸೂರಿ ಅಲ್ಲ, ಅವರ ತಮ್ಮನಿಗೆ ಬಿಜವರದಲ್ಲಿ ಹೆಣ್ಣು ಗೊತ್ತಾಗಿದೆಯೆಂದೂ, ತಿಪ್ಪನಹಳ್ಳಿಗೆ ಬಂದು ನಿಮ್ಮ ಅಣ್ಣನಿಗೆ ಹೇಗೆ ಮುಖ ತೋರಿಸಲಿ? ಬೇರೆ ಎಲ್ಲಾದರೂ ನೋಡಿಕೊಳ್ಳಲು ಹೇಳು ಎಂದಿದ್ದಾನೆ' ಎಂದರು. ಇದನ್ನು ಕೇಳಿ ನಮ್ಮ ತಂದೆ-ತಾಯಿ ಇಬ್ಬರೂ ನೊಂದು ‘ಒಳಗೊಳಗೇ ಮಸಲತ್ತು ಮಾಡಿ ಕೊನೆಗೆ ಕೈಕೊಟ್ಟ ಅವನು' ಅಂತ ಹೇಳಿ ಕೈಹಿಸುಕಿಕೊಂಡರು ತಂದೆ.


     ಅಂದಿನಿAದ ತಂದೆಯವರು ವರನ ಹುಡುಕಾಟದಲ್ಲಿ ತೊಡಗಿಸಿಕೊಂಡರು. ತುಮಕೂರಿನಲ್ಲಿ ಬಿಎ ಓದುತ್ತಿದ್ದ ಚಿಕ್ಕಪ್ಪ ಶಂಕರಪ್ಪನವರು ರಜೆಯಲ್ಲಿ ತಿಪ್ಪನಹಳ್ಳಿಯಲ್ಲಿಯೇ ಇದ್ದು ಮದುವೆ ವಿಷಯದಲ್ಲಿ ತಂದೆಯವರಿಗೆ ಸಹಾಯಕರಾಗಿ ನಿಂತರು, ಕೊನೆಗೆ ಮಧುಗಿರಿಯ ಕಸಬಾ ಹೋಬಳಿ ಭಕ್ತರಹಳ್ಳಿಯ ನರಸಪ್ಪನವರ 2ನೇ ಮಗ ಲಿಂಗಪ್ಪ (ವಕೀಲಪ್ಪ - ಎಂಬ ಅಡ್ಡ ಹೆಸರು) ನವರಿಗೆ ಕೊಡುವುದೆಂದು ನಿಶ್ಚಯವಾಯಿತು. ತಂದೆಯವರನ್ನು ಹೊರತುಪಡಿಸಿ, ಮನೆಯಲ್ಲಿ ಈ ಸಂಬAಧ ಯಾರಿಗೂ ಇಷ್ಟವಾಗಲಿಲ್ಲ. ಯಾರಾದರೂ ಓದಿ ಕೆಲಸದಲ್ಲಿರೋರನ್ನು ನೋಡಿ ಮಾಡಬೇಕೆಂಬ ಹಠ ನಮಗೆಲ್ಲಾ ಆದರೆ, ಅಪ್ಪ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಮದುವೆ ನಿಶ್ಚಯ ಮಾಡಿಯೇ ಬಿಟ್ಟರು. 'ಋಣಾನುಬಂಧ ಇರುವ ಕಡೆ ಮದುವೆಗಳಾಗುತ್ತವೆ' ಎಂದು ಅಮ್ಮ ಅಕ್ಕನನ್ನು ಸಾಂತ್ವನಗೊಳಿಸಿದರು. 1954ರ ಮೇ ತಿಂಗಳಲ್ಲಿ ಮನೆಯ ಮುಂದೆ ಆಡಿಕೆ ಮರ, ತೆಂಗಿನ ಗರಿಗಳಿಂದ ಉದ್ದನೆಯ ಚಪ್ಪರ ಹಾಕಿ ಅದ್ಧೂರಿಯಾಗಿ ಮದುವೆ ಮಾಡಲಾಯಿತು. ಮದುವೆಗೆ ನಮಗೆಲ್ಲಾ ಪಟಾಪಟಿ ಚಡ್ಡಿಗಳ ಬದಲು ಪ್ಯಾಂಟನ್ನು ಹೊಲಿಸಬೇಕೆಂದು ಅಕ್ಕ ಹಠ ಹಿಡಿದರು. ಪರಿಣಾಮವಾಗಿ ಬೂದು ಬಣ್ಣದ ಬಿನ್ನಿ ಬಟ್ಟೆಯಲ್ಲಿ ಬಡವನಹಳ್ಳಿಯ ಟೇಲರಿಂದ ಪ್ಯಾಂಟು ಶರಟುಗಳನ್ನು ಹೊಲಿಸಿ ಹಾಕಿಕೊಂಡು, ನಾವು ಮೂವರೂ ಗಂಡುಮಕ್ಕಳು ಮದುವೆಯಲ್ಲಿ ಸಂಭ್ರಮಿಸಿದೆವು.

   ಮೇ ತಿಂಗಳಲ್ಲಿ ಮದುವೆ ಕಾರ್ಯಗಳ ಜತೆಗೆ ಶಾಲೆಗಳು ಆರಂಭವಾಗಿದ್ದುವು. ನಾನು ಆಗ 7ನೇ ಕ್ಲಾಸಿನಲ್ಲಿದ್ದೆ. ತಮ್ಮ ಜಯಣ್ಣ 5ನೇ ಕ್ಲಾಸಿನಲ್ಲಿದ್ದ, ಪಾಳ್ಯದವರ ಮನೆಯ ಸುಮಾರು 6-7 ಜನ ಹುಡುಗ ಹುಡುಗಿಯರು ಬಡವನಹಳ್ಳಿಯ ಶಾಲೆಗೆ ಹೋಗುತ್ತಿದ್ದು, ನಾವೆಲ್ಲ ಒಂದೊಮ್ಮೆ ಜತೆಜತೆಯಾಗಿ, ಕೆಲವೊಮ್ಮೆ ಬೇರೆಯಾಗಿ, ಇಲ್ಲವೇ ಫಕ್ರುದ್ದೀನ್, ಉಪೇಂದ್ರ ಇವರ ಜೊತೆಯಲ್ಲಿ ಹೋಗಿ ಬರುತ್ತಿದ್ದೆವು.


     ಮದುವೆಯಾಗಿ ಅಕ್ಕ ಗಂಡನ ಮನೆಗೆ ಹೋದಮೇಲೆ ತಾಯಿ ಇನ್ನೂ ಒಂಟಿಯಾದರು. ಸದಾ ಕಣ್ಣಂಚಿನಲ್ಲಿ ನೀರು ತುಂಬಿಕೊAಡೇ ಮನೆ ಕೆಲಸ ಮಾಡುತ್ತಿದ್ದರು. ತಂದೆಯವರೂ ಹೊಲಕ್ಕೆ ಹೋದರೆ, ಅಲ್ಲೇ ಯಾವುದಾದರೊಂದು ಮರದ ಕೆಳಗೆ ಮಲಗಿ ಮಗಳ ಬಗ್ಗೆಯೇ ಯೋಚಿಸುತ್ತಾ ಖಿನ್ನರಾಗಿರುತ್ತಿದ್ದುದನ್ನು ಮನು ಗಮನಿಸುತ್ತಿದ್ದೆ. ಇದರಿಂದಾಗಿ ವ್ಯವಸಾಯ ಕುಂಠಿತವಾಯಿತು. ಜತೆಗೆ ನಮ್ಮ ಪಾಲಿಗೆ ಬಂದ ಬಾವಿಗಳು ಇದ್ದ ನಾಲ್ಕು ಅಣ್ಣತಮ್ಮಂದಿರಿಗೆ ಜಂಟಿಯಾಗಿದ್ದು ಶಕ್ತಿ ಇದ್ದವರು ಬೆಳಗಿನ ಜಾವವೇ ಎತ್ತುಗಳು, ಮೇಣಿ, ಬಾನಿ ತೆಗೆದುಕೊಂಡು ಹೋಗಿ ಕಲೆ ಕೂಡಿ, ಬಾವಿಯಲ್ಲಿದ್ದ ನೀರನ್ನೆಲ್ಲಾ ಅವರ ಜಮೀನಿಗೆ ಬಗ್ಗಿಸಿ ಭತ್ತದ ಗದ್ದೆ, ರಾಗಿ ಹೊಲ, ಅಡಿಕೆ ತೋಟಗಳಿಗೆ ಹಾಯಿಸಿಕೊಳ್ಳುತ್ತಿದ್ದರು, ನಾವು ಆಳುಗಳನ್ನೇ ನಂಬಿದ್ದರಿAದ ಕಲೆಯನ್ನು ಮೂಡಲು ಸಾಧ್ಯವಾಗದೇ ಸುಮಾರು ಎರಡು ವರ್ಷಗಳ ಕಾಲ ಭತ್ತದ ಬೆಳೆಯನ್ನು ಮಾಡಲಾಗಲೇ ಇಲ್ಲ. ಪರಿಣಾಮ ದಿನ್ನೆಯಲ್ಲಿ ಬೆಳೆಯುತ್ತಿದ್ದ ನವಣೆ, ರಾಗಿ, ಆರಕ, ಉದಲು ಮುಂತಾದ ಕಾಳುಗಳನ್ನು ತಿನ್ನಲು ಉಪಯೋಗಿಸುತ್ತಿದ್ದವು.. ರಾಗಿ ಮುದ್ದೆ , ನವಣೆ ಮುದ್ದೆ, ಆರಕದ ಅನ್ನ, ಊದಲು ರೊಟ್ಟಿ, ನಮ್ಮ ದೈನಂದಿನ ಆಹಾರವಾಗಿತ್ತು, ಅಡಿಕೆ, ಕಡಲೆಕಾಯಿ ಬೆಳೆಯಿಂದ ಕೈಲಿ ಅಲ್ಪಸ್ವಲ್ಪ ಕಾಸು ಓಡಾಡುತ್ತಿದ್ದರೂ, ಶೆಟ್ಟರ ಅಂಗಡಿಯವರು ತೂಕದಲ್ಲಿ ಬೆಲೆಯಲ್ಲಿ ಮೋಸ ಮಾಡಿ, ಹಿಂದಿನ ಸಾಲಕ್ಕೆ ಈಗಿನ ಮಾಲನ್ನು ಲೆಕ್ಕಕ್ಕೆ ಸೇರಿಸಿ, ಕೊಟ್ಟಷ್ಟು ಹಣವನ್ನು ಪಡೆದು ನಾವು ತೃಪ್ತಿಗೊಳ್ಳಬೇಕಾಗಿತ್ತು.