ಹಳ್ಳಿ ಹೈದನ ನೂರೆಂಟು ನೆನಪು- ಸಿ.ಚಿಕ್ಕಣ್ಣಐಎಎಸ್   ಪ್ರೇಮವೋಅಥವಾಮೋಹವೋ..,

ಹಳ್ಳಿ ಹೈದನ ನೂರೆಂಟು ನೆನಪು- ಸಿ.ಚಿಕ್ಕಣ್ಣಐಎಎಸ್ ಪ್ರೇಮವೋಅಥವಾಮೋಹವೋ..,

ಹಳ್ಳಿ ಹೈದನ ನೂರೆಂಟು ನೆನಪು- ಸಿ.ಚಿಕ್ಕಣ್ಣಐಎಎಸ್     ಪ್ರೇಮವೋಅಥವಾಮೋಹವೋ..,

ಹಳ್ಳಿ ಹೈದನ ನೂರೆಂಟು ನೆನಪು- ಸಿ.ಚಿಕ್ಕಣ್ಣಐಎಎಸ್

 

ಪ್ರೇಮವೋಅಥವಾಮೋಹವೋ..,

ಅಜ್ಜಿರಂಗಮ್ಮನವರು,

 

ಚಿಕ್ಕಪ್ಪಶಂಕರಪ್ಪನವರು

ಹಾಸ್ಟೆಲ್‌ಗೆ ಬಂದು ರೂಮಿಗೆ ಹೋದೆ.

ಎಂದೂ ಕಾಣಲು ಬರದ ಚಿಕ್ಕಪ್ಪ ಶಂಕರಪ್ಪನವರು ರೂಮಿನಲ್ಲಿದ್ದ ನನ್ನ ಹಾಸಿಗೆಯ ಮೇಲೆ ಕುಳಿತು ನನಗಾಗಿ ಕಾಯುತ್ತಿದ್ದರು. ಅವರ ಜತೆ ಕೃಷ್ಣಯ್ಯ ಮಾತನಾಡುತ್ತಿದ್ದರು. 'ಯಾವಾಗಬಂದ್ರಿಕಾಕ' ಅಂದೆ. 'ಬೆಳಿಗ್ಗೆನೇ ಬಂದೆವು, ಅಣ್ಣಯ್ಯನೂ ಬಂದಿದ್ದಾರೆ. ಅಮ್ಮನ್ನ ಆಸ್ಪತ್ರೆಗೆ ಸೇರಿಸಬೇಕು' ಅಂದರು. “ಏನಾಯ್ತುಅಜ್ಜಿಗೆ' ಅಂದೆ. 'ನಿನಗೆಗೊತ್ತಿಲ್ವಾ?  ಕ್ಯಾನ್ಸರ್‌ ಉಲ್ಬಣ ಆಗಿದೆ' ಅಂದರು. “ಈಗಎಲ್ಲಿದ್ದಾರೆ' ಅಂದೆ. 'ಇಲ್ಲೇರಂಗಪ್ಪನ ಮನೇಲಿ ಬಿಟ್ಟು ಬಂದಿದ್ದೀನಿ. ಬಾ ಹೋಗೋಣ' ಅಂದರು. 'ಸರಿ' ಎಂದು ಅವರ ಜತೆ ಹೊರಟೆ.

 

ಸೋದರತ್ತೆ ಚೌಡಮ್ಮನವರ ದೊಡ್ಡ ಮಗ ಜಿ.ಕೆ. ರಂಗಪ್ಪಅವರು A.E. PWD ಯಲ್ಲಿ ಕೆಲಸಕ್ಕಿದ್ದು, ಶೇಷಾದ್ರಿಪುರಂನಲ್ಲಿಯೇ ಮನೆ ಮಾಡಿಕೊಂಡಿದ್ದರು. HRC ಯಿಂದ ಅಲಾಟಾದ ಹೆಂಚಿನ, 1 ರೂಮಿನ ಮನೆ. ಹೆಂಡತಿ ಪ್ರೇಮ ಜತೆ ವಾಸವಿದ್ದರು. ಈಗ ಏನು ಮಾಡೋದು ಕಾಕ' ಅಂದೆ. 'ಏನಿಲ್ಲ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ  ಕರೆದು ಕೊಂಡು ಹೋಗಬೇಕು. ನಿನಗೆ ಅಲ್ಲಿ ಯಾರಾದರೂ ಪರಿಚಯಾನಾ?' ಅಂದರು. 'ಹೇಳಿ ಕೇಳಿ ನಾನೊಬ್ಬ ಸ್ಟೂಡೆಂಟ್ ,ನನಗೆ ಹೇಗೆ ಪರಿಚಯ ಇರಲು ಸಾಧ್ಯ' ಅಂದೆ. ಅಷ್ಟರಲ್ಲಿ ರಂಗಪ್ಪನವರ ಮನೆ ಬಂತು.

ರಂಗಪ್ಪನವರು ಅಜ್ಜಿಯನ್ನು ಪಕ್ಕದಲ್ಲಿಯೇ ಇದ್ದ ಡಾ. ಶೇಷಾದ್ರಿಯವರಿಗೆ ತೋರಿಸಿ, ಅವರಿಂದ ಒಂದು Reference ಪಡೆದು ರೆಡಿ ಇದ್ದರು. ತಂದೆಯವರಿಗೆ ನೀವು ಇಲ್ಲೇ ಇರಿ' ಎಂದು ಹೇಳಿ ರಂಗಪ್ಪ, ಚಿಕ್ಕಪ್ಪ ನಾನೂ ಟ್ಯಾಕ್ಸಿ ಮಾಡಿಕೊಂಡು ಅಜ್ಜಿಯಜತೆ ಕಿದ್ವಾಯಿಗೆ ಹೋದೆವು, ಡಾ|| ಶೇಷಾದ್ರಿಯವರ ಪತ್ರದ ಪರಿಶೀಲನೆಯ ನಂತರ ಅಜ್ಜಿಯನ್ನುಆಸ್ಪತ್ರೆಗೆ ಅಡ್ಮಿಟ್ಮಾಡಿಕೊಂಡರು. ಕ್ಯಾನ್ಸರ್ಕೊನೆ ಹಂತದಲ್ಲಿದೆ, ನಾವು ಏನೂ ಹೇಳಲು ಸಾಧ್ಯವಿಲ್ಲ' ಎಂದು ಹೇಳಿದರು. “ತುರ್ತು ನಿಗಾವಹಿಸುವುದಾಗಿ  ವೈದ್ಯರು ಹೇಳಿ ನೀವು ಹೊರಗೆ ಕುಳಿತು ಕೊಳ್ಳಿ' ಎಂದರು. ಶಂಕರಪ್ಪನವರನ್ನುಅಲ್ಲಿಯೇ ಬಿಟ್ಟು ನಾನೂ ರಂಗಪ್ಪ ವಾಪಸ್ಸುಬಂದೆವು. ತಂದೆಯವರಿಗೆ ಊಟಕ್ಕೆ ವ್ಯವಸ್ಥೆಯಾದ ನಂತರ ಅವರನ್ನು ನನ್ನ ಹಾಸ್ಟೆಲ್‌ಗೆ ಕರೆದು ಕೊಂಡು ಹೋಗಿ ತೋರಿಸಿ,  ಸಂಜೆ 4 ಗಂಟೆ SLN Express ಗೆಮಧುಗಿರಿ ಬಸ್ಹತ್ತಿಸಿದೆ.

ಮರುದಿನ ಬೆಳಗಿನ ಜಾವ ಅಜ್ಜಿ ತೀರಿಕೊಂಡರು. ನಾನುಶಂಕರಪ್ಪ ಕಾಕ ಒಂದು Taxi ಮಾಡಿಕೊಂಡು ಪಾರ್ಥಿವ ಶರೀರವನ್ನು ಊರಿಗೆ ತೆಗೆದು ಕೊಂಡುಹೋದೆವು. ಮಿಕ್ಕ ವ್ಯವಸ್ಥೆಯನ್ನು ಊರಿನಲ್ಲಿದ್ದ ಕುಟುಂಬಸ್ಥರು ಮಾಡಿದ್ದರು. ಸಂಜೆಯ ಒಳಗೆ ಎಲ್ಲಾಅಂತ್ಯ ಕರ್ಮಗಳನ್ನು ಮಾಡಲಾಯಿತು.

ಹೀಗೆ ಕಣ್ಣೆದುರು ನನ್ನ ಮನೆತನದ ಹಿರಿಜೀವದ ಅಂತ್ಯವಾಯಿತು.

******

ಡಿಸೆಂಬರ್‌ಲ್ಲಿಕಾಲೇಜಿನ ಕರ್ನಾಟಕ ಸಂಘದವತಿಯಿಂದ ಭರ್ಜರಿಯಾಗಿ ನೃತ್ಯ ನಾಟಕ ಏರ್ಪಡಿಸಿದ್ದೆವು, ಸಂಘದ ವತಿಯಿಂದ ಆ ಸಂದರ್ಭದಲ್ಲಿ ಹೊರತಂದಿದ್ದ ಕಾಲೇಜುಮ್ಯಾಗಜಿನ್‌ನಲ್ಲಿ ನನ್ನ 'ದೇವಾಲಯವೀಹೂವಿನತೋಟಂ'  ಎಂಬ ಕವನ ಪ್ರಕಟವಾಗಿತ್ತು. ಅಷ್ಟರಲ್ಲಿ Films Division ಅವರು ಸಿನಿಮಾ ಥಿಯೇಟರ್‌ಗಳಲ್ಲಿ ನಾನು ಭಾಗವಹಿಸಿದ್ದ Documentary Film ಬಿಡುಗಡೆಯಾಗಿ, ಎಲ್ಲ ಹುಡುಗರಿಂದ ಪ್ರಶಂಸೆ ಕೇಳಿ ಬಂದವು. ಪ್ರಾಂಶುಪಾಲರೆಡ್ಡಿಯವರು ಬೆನ್ನುತಟ್ಟಿ ಹುರಿದುಂಬಿಸಿದರು.

 

ಈಜಂಜಾಟದಲ್ಲಿ ಓದಿನ ಕಡೆ ನಾನು ಗಮನ ಹರಿಸಲು ಸಾಧ್ಯವಾಗಲೇ ಇಲ್ಲ. ಜತೆಗೆ ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಭದ್ರವಾಗಿ ಕುಳಿತಿದ್ದ ಪ್ರೇಮದ ಗೆಳತಿಯ ನೆನಪು ಸದಾಕಾಡುತ್ತಿತ್ತು. ಆದರೆ ಅವಳನ್ನು ಕಂಡು ಮಾತನಾಡುವ ಅವಕಾಶ ಒದಗಲೇ ಇಲ್ಲ. ಒಂದು ಸಂಜೆ ಗಂಗಣ್ಣ ದೇವಸ್ಥಾನದ ಕೆಲಸದಲ್ಲಿದ್ದಾಗ ಸಿಕ್ಕಿ, ದೇವಸ್ಥಾನದ ಒಂದು ಕಡೆ ಕರೆದುಕೊಂಡು ಹೋಗಿ 'ಆಯಮ್ಮ ನಿನ್ನ ತುಂಬ ಹಚ್ಚಿಕೊಂಡಿದೆ. ನಿಮ್ಮಿಬ್ಬರ ವಿಷಯಅಜ್ಜಿಗೆ ಗೊತ್ತಾಗಿ ಬೇಸರ ಮಾಡಿಕೊಂಡಿದ್ದಾರೆ' ಎಂಬ ಬಾಂಬನ್ನು ಹಾಕಿದ, ನಾನು ಇನ್ನೂಅಧೀರನಾದ 'ಏನು ಮಾಡೋದು ಅಂದೆ, "ಏನುಮಾಡೋದು? ಅಜ್ಜಿ ಹತ್ತಿರಹೋಗಿ ಧೈರ್ಯವಾಗಿ ಮದುವೆಮಾಡಿಕೊಳ್ಳುತ್ತೇನೆ ಎಂದುಹೇಳೋದು ಅಷ್ಟೇ' ಅಂದ, ಮದುವೆ ಎಂಬ ಶಬ್ದ ಕೇಳಿ ನಾನು ಬೆಚ್ಚಿಬಿದ್ದೆ. ನಾನಿನ್ನು ಬಿ.ಕಾಂ, ಮುಗಿಸಿ ಕೈಯಲ್ಲಿ ಸಂಪಾದನೆಯ ಮೂಲವಾದ ಯಾವ ಕೆಲಸವೂ ಇಲ್ಲ, ತಂದೆಯವರು ಕೊಡುವ ಕಾಸಿನ ಮೇಲೆ ಅವಲಂಬಿತನಾಗಿದ್ದೇನೆ, ಈಗ ಮದುವೆ ಮಾಡಿಕೊಂಡು ಸಂಸಾರ ಹೇಗೆ ಸಾಗಿಸೋದು ಎಂದು ರಾತ್ರಿಯೆಲ್ಲಾ ದೀರ್ಘವಾಗಿ ಯೋಚಿಸಿದೆ. ಒಂದು ಕಡೆ ನನ್ನ ಮನಸ್ಸಿನಲ್ಲಿ ಅವಳ ಬಗ್ಗೆ ತುಂಬಿದ್ದ ಪ್ರೇಮವೋ ಅಥವಾಮೋಹವೋ, ನನ್ನಲ್ಲಿಶಕ್ತಿ, ಧೈರ್ಯತುಂಬಿದಂತೆ, ಮತ್ತೊಂದು ಕಡೆ ನನ್ನಅಸಹಾಯಕತೆ. ಎಡವಟ್ಟು ಮಾಡಿಕೋ ಬೇಡ ಎಂದು ನನ್ನ ವಿವೇಕ ಬುದ್ದಿಹೇಳುತ್ತಿತ್ತು. ಆದೇ ತೊಳಲಾಟದಲ್ಲಿ ರಾತ್ರಿ ನಿದ್ರೆಗೆಟ್ಟಿದ್ದೆ.

 

ಬೆಳಿಗ್ಗೆ ಎದ್ದಕೂಡಲೇ ರೆಡ್ಡಿಯವರು, ಕೃಷ್ಣಯ್ಯನವರು ಕಲ್ಯಾಣ ಕೆಫೆಗೆ ಕರೆದುಕೊಂಡು ಹೋದರು. 'ರಾತ್ರಿಯೆಲ್ಲಾ ಕನವರಿಸಿಕೊಳ್ತಿದ್ದೆ! ಏನಾಯ್ತು?' ಎಂದರು ರೆಡ್ಡಿ, ಇರುವ ವಿಷಯವನ್ನೆಲ್ಲಾ ಇಬ್ಬರ ಮುಂದೆ ಸುದೀರ್ಘವಾಗಿ ವಿವರಿಸಿದೆ. 'ಸ್ನೇಹಿತನಾಗಿ ನಾನು ಇಷ್ಟು ಹೇಳಬಹುದು. ಆ ಹುಡುಗಿಯನ್ನು ಮದುವೆಯಾಗುವ ವಿಷಯ ಮುಂದಕ್ಕೆ  ಹಾಕೋದು: ನಿನಗೆ ಅವಳ ಮೇಲೆ ಅಷ್ಟು ಪ್ರೀತಿಯಿದ್ದರೆ, ಅವರನ್ನು ನೀನು ಡಿಗ್ರಿ ಮುಗಿಸಿ, ಕೆಲಸ ಸಿಗುವವರೆಗೂ ಕಾಯಲು ಹೇಳು, ನಂತರ ಮದುವೆ ಮಾಡಿಕೊಳ್ಳಿ' ಎಂದು ಸಲಹೆ ನೀಡಿದರು ರೆಡ್ಡಿ, ಅದೇ ಸರಿ ಅಂದರು ಕೃಷ್ಣಯ್ಯ, ನನ್ನವಿವೇಕವೂ ಅದನ್ನೇ ಹೇಳಿತು, ಸರಿಯಾದ ಮಾರ್ಗದಲ್ಲಿ ಮುನ್ನಡೆಸಿತು.

 

ಏಪ್ರಿಲ್ತಿಂಗಳಲ್ಲಿ Final Exam ನಾನುಯಾವರೀತಿಯಲ್ಲೂ ಸನ್ನದ್ಧನಾಗಿರಲಿಲ್ಲ. 'ಇನ್ನುಎರಡು ತಿಂಗಳಿವೆ. ಭದ್ರವಾಗಿಯಾವ ಯೋಚನೆಯೂ ಇಲ್ಲದೆ ಓದಿನ ಮೇಲೆ Concentrate ಮಾಡು. ನೀನು Intelligent ಖಂಡಿತಾಪಾಸಾಗೀಯ' ಎಂದುರೆಡ್ಡಿ ಹುರಿದುಂಬಿಸಿದರು. ಅಂದಿನಿಂದಕಾಲೇಜುಮುಗಿಸಿಲೈಬ್ರರಿಯಲ್ಲಿಕುಳಿತುಎರಡುಮೂರುಗಂಟೆಗಳ ಕಾಲ ನಿಯತ್ತಿನಿಂದ ಓದಲು ಆರಂಭಿಸಿದೆ. ಹಾಸ್ಟೆಲ್‌ನಲ್ಲಿ ಪ್ರಿಫೆಕ್ಟ್ಕೆಲಸ ನನ್ನ ಕೈಲಿ ಸಾಧ್ಯವಿಲ್ಲಎಂದು ಹೇಳಿ ಬೇರೆಯವರ ಹೆಗಲಿಗೆಹಾಕಿದೆ. ರೆಡ್ಡಿಯವರು ಸಹ Final ನಲ್ಲಿದ್ದರು. ಅವರೊಡನೆ ಸಂವಾದಮಾಡಿಕೊಂಡು, ಇಬ್ಬರೂ Joint Study ಮಾಡಿದೆವು. ಕಳೆದು ಹೋಗಿದ್ದ ಏನನ್ನೋ ಹುಡುಕಿ ಮತ್ತೆ ಪಡೆದಂತಾಯಿತು. ಹಳಿತಪ್ಪಿದ ರೈಲನ್ನುಮತ್ತೆ ಹಳಿಗೆ ಜೋಡಿಸಿದಂತಾಯಿತು. ಕಾಶಿ ವಿಶ್ವನಾಥನನ್ನು, ಗಣೇಶನನ್ನು ಧ್ಯಾನಿಸುತ್ತಾ ಪರೀಕ್ಷೆಯನ್ನು ಧೈರ್ಯವಾಗಿಯೇ ಎದುರಿಸಿದೆ. ಪಾಸಾಗಬಹುದೆಂಬ ಭರವಸೆಮನಸ್ಸಿನ ಒಂದುಮೂಲೆಯಲ್ಲಿ ಮೂಡಿಸ ಮಾಧಾನವಾಯಿತು.