ಜೀವದಾಯಿನಿ ಜಯಮಂಗಲಿ, ಸುವರ್ಣ ಮುಖಿಯರು ಪೊರೆದ ನಾಡು ಮಧುಗಿರಿ

ಜೀವದಾಯಿನಿ ಜಯಮಂಗಲಿ, ಸುವರ್ಣ ಮುಖಿಯರು ಪೊರೆದ ನಾಡು ಮಧುಗಿರಿ


ಸುವರ್ಣಮುಖಿ ಮತ್ತುಜಯಮಂಗಲಿ ನದಿಗಳು ಕೊರಟಗೆರೆ ಹಾಗೂ ಮಧುಗಿರಿತಾಲೂಕಿನಲ್ಲಿ ನೂರಾರುತಲಪರಿಗೆಗಳನ್ನು ಪೊರೆದಿವೆ. ನದಿ ಮತ್ತು ದೊಡ್ಡಹಳ್ಳಗಳಲ್ಲಿ ಮಳೆಗಾಲ ತುಂಬಿ ಹರಿಯುವ ನೀರುಅಲ್ಲಿನ ಮರಳಿನಲ್ಲಿ ಇಂಗಿ ಅವುಗಳ ದಡದಲ್ಲಿನತಲಪರಿಗೆಗಳಿಗೆ ನೀರೊದಗಿಸುತ್ತದೆ. ನದಿ ಹರಿಯುವಾಗಅದಕ್ಕಡ್ಡಲಾಗಿಕಟ್ಟು ಕಾಲುವೆ ಹಾಕಿ ನೀರನ್ನುತಮ್ಮ-ತಮ್ಮ ಹೊಲಗಳಿಗೆ ತಿರುಗಿಸಿಕೊಂಡು ಬೇಸಾಯ ಮಾಡುವರೈತರು, ನದಿ ಒಣಗಿದಾಗಅಥವಾ ಸ್ವಲ್ಪವೇ ಹರಿಯುವಾಗದಡದಲ್ಲಿತಲಪರಿಗೆ ಕಾಲುವೆಗಳನ್ನು ತೆಗೆದು ನೀರು ಪಡೆಯುತ್ತಾರೆ.


ಜೀವದಾಯಿನಿ ಜಯಮಂಗಲಿ, ಸುವರ್ಣ ಮುಖಿಯರು ಪೊರೆದ ನಾಡು ಮಧುಗಿರಿ

ಮಲ್ಲಿಕಾರ್ಜುನ ಹೊಸಪಾಳ್ಯ


ಪ್ರಾಗೈತಿಹಾಸಿಕ ಕಾಲದಿಂದಲೂತುಮಕೂರುಜಿಲ್ಲೆಯ ಭಾಗಗಳು ಪ್ರಾಮುಖ್ಯತೆಯನ್ನು ಪಡೆದಿವೆ. ನೂತನ ಶಿಲಾಯುಗದ ಅನೇಕ ಅವಶೇಷಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರೆತಿವೆ. ಮಧುಗಿರಿ ಪಕ್ಕದಕೊರಟಗೆರೆತಾಲ್ಲೂಕಿನಇರಕಸಂದ್ರಗ್ರಾಮದಲ್ಲಿ ಶಿಲಾಯುಗದ ಆದಿಮಾನವರು ನೆಲೆನಿಂತು ನಾಗರಿಕತೆಯನ್ನು ಬೆಳೆಸಿದ ಕುರುಹುಗಳಿವೆ. ಇಲ್ಲಿನ ಅನೇಕ ಹೊಲಗದ್ದೆಗಲಲ್ಲಿ ಏಳು ಸಾವಿರ ವರ್ಷಕ್ಕೂ ಹಿಂದಿನ ಸಮಾಧಿಗಳಿರುವುದನ್ನು ಕಾಣಬಹುದು. ಮಧುಗಿರಿತಾಲ್ಲೂಕಿನ ಮಿಡಿಗೇಶಿ, ಪಾವಗಡತಾಲ್ಲೂಕಿನ ವೈ.ಎನ್.ಹೊಸಕೋಟೆ, ನಿಡಗಲ್ಲು ಪ್ರದೇಶಗಳಲ್ಲಿ ಬೃಹತ್ ಶಿಲಾಯುಗದ ಅನೇಕ ಕುರುಹುಗಳನ್ನು ಪತ್ತೆಹಚ್ಚಲಾಗಿದೆ. 


ಮಧುಗಿರಿ ಮಹಾನಾಡ ಪ್ರಭುಗಳ ಕೊನೆಯರಾಜಧಾನಿಯಾಗಿತ್ತು. ಮರಾಠರು ಮತ್ತು ಮೈಸೂರುಒಡೆಯರ ಆಳ್ವಿಕೆಗೆ ಒಳಪಟ್ಟ  ಕೋಟೆಯನ್ನುಅಂತಿಮವಾಗಿ ನಾಲ್ಕನೆಯ ಮೈಸೂರುಯುದ್ಧಾನಂತರ ಮೈಸೂರಿಗೆ ಸೇರಿಸಲಾಯಿತು.


1192 ಮೀಟರ್‌ಎತ್ತರದಇಲ್ಲಿನ ಬೃಹತ್ ಏಕಶಿಲಾಬೆಟ್ಟ ಏಷ್ಯಾದಲ್ಲಿಯೇ ಮೊದಲನೆಯದಾಗಿದ್ದುಜಗತ್ತಿನಲ್ಲಿಎರಡನೇ ಸ್ಥಾನ ಪಡೆದಿದೆ.  ಸಮುದ್ರಮಟ್ಟದಿಂದ 2582 ಅಡಿ ಎತ್ತರದಲ್ಲಿದೆ. ಬೆಟ್ಟದ ಮೇಲೆ ಏಳುಸುತ್ತಿನ ಕೋಟೆಯಿದ್ದು ಸೈನಿಕರ ಗೃಹಗಳು, ನೀರಿನದೊಣೆ, ಕಣಜಗಳು ಕಾಣಸಿಗುತ್ತವೆ. ಪಟ್ಟಣದಲ್ಲಿದಂಡೂರು ಬಾಗಿಲು, ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣಸ್ವಾಮಿದೇವಾಲಯ, ಜೈನ ಬಸದಿಗಳಿವೆ.ಅನೇಕ ಕಲ್ಯಾಣಿಗಳಿವೆ. ದಂಡಿನ ಮಾರಮ್ಮನದೇವಸ್ಥಾನ ಪೂಜನೀಯವಾಗಿದ್ದು ಮಾರ್ಚಿಯಲ್ಲಿ ನಡೆಯುವ ದನಗಳ ಜಾತ್ರೆಅತ್ಯಂತಜನಪ್ರಿಯ.ತುಮಕೂರುಜಿಲ್ಲೆಯಲ್ಲಿ ಮಧುಗಿರಿತಾಲ್ಲೂಕು ಉಪವಿಭಾಗವಾಗಿದೆ. ಹಿಂದೆ ಮದ್ದಗಿರಿ ಎಂಬ ಹೆಸರೂಇತ್ತು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ಸುಮಾರು 635 ಮಿಮೀ.,


ತಾಲ್ಲೂಕಿಗೆ ಕೆರೆಗಳೇ ಪ್ರಮುಖ ನೀರಿನಾಶ್ರಯ. ಸರಣಿ ಕೆರೆಗಳು ಇಲ್ಲಿನ ವೈಶಿಷ್ಟ÷್ಯ. ಬಿಜವರದಕೆರೆ, ಹನುಮಂತಪುರದಕೆರೆ, ಹೊಸಕೆರೆದೊಡ್ಡಕೆರೆ, ಚೋಳೇನಹಳ್ಳಿಕೆರೆ, ದೊಡ್ಡೇರಿಕೆರೆ, ಸಿದ್ದಾಪುರದ ಕೆರೆ ಮುಂತಾದವುಬೃಹತ್ ಕೆರೆಗಳಾಗಿವೆ. 


ಇನ್ನುತಾಲ್ಲೂಕಿನಲ್ಲಿಎರಡು ನದಿಗಳು ಹರಿಯುತ್ತವೆ. ಜಯಮಂಗಲಿ ಹಾಗೂ ಸುವರ್ಣಮುಖಿ. ಎರಡೂ ಸಹ ಮಳೆಗಾಲದಲ್ಲಿ ಮಾತ್ರ ಹರಿಯುವಂತಹವು.ಕುಮುದ್ವತಿ ನದಿಯು ಈ ತಾಲ್ಲೂಕಿನಅತ್ಯಂತಈಶಾನ್ಯದಲ್ಲಿ ಕೊಡಿಗೇನಹಳ್ಳಿಯ ಬಳಿ ಕೆಲವೇ ಮೈಲಿ ದಕ್ಷಿಣೋತ್ತರವಾಗಿ ಹರಿಯುವುದು. ಈ ನದಿಗಳ ಕಿರು ಪರಿಚಯ ಹೀಗಿದೆ.


ಜಯಮಂಗಲಿ:ಜಯಮಂಗಲಿ ಹುಟ್ಟುವುದುದೇವರಾಯನದುರ್ಗದಲ್ಲಿ. ಅಲ್ಲಿನ ಭೋಗನರಸಿಂಹ ಸ್ವಾಮಿದೇವಾಲಯದ ಬಳಿ ದೊಡ್ಡ ಬಂಡೆಯ ಬುಡದಲ್ಲಿ ನೀರು ಉಕ್ಕಿ ಹರಿಯುತ್ತದೆ. ಅದೇ ನದಿಯ ಉಗಮ ಸ್ಥಾನ. ಅಲ್ಲಿಂದ ಉತ್ತರಕ್ಕೆ ಹರಿದುಆಂಧ್ರದ ಪರಿಗಿಕೆರೆ ಸೇರುತ್ತದೆ. ನಂತರಉತ್ತರ ಪಿನಾಕಿನಿ (ನಾರ್ತ್ ಪೆನ್ನಾರ್) ನದಿಗೆ ಕೂಡಿಕೊಳ್ಳುತ್ತದೆ. ಕರ್ನಾಟಕದಲ್ಲಿತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಹಾಗೂ ಆಂಧ್ರದ ಮಡಕಸಿರಾ ತಾಲ್ಲೂಕಿನಲ್ಲಿಇದರ ಹರಿವು. ಕೊರಟಗೆರೆತಾಲ್ಲೂಕಿನಲ್ಲಿಯೇಅತಿ ಹೆಚ್ಚು ಉದ್ದ ಹರಿಯುತ್ತದೆ. ಸುಮಾರು 80 ಕಿಲೋ ಮೀಟರ್‌ಉದ್ದದ ನದಿ. ಅದರಲ್ಲಿ ಮಧುಗಿರಿತಾಲ್ಲೂಕಿನಲ್ಲಿ ಸುಮಾರು 20 ಕಿಲೋ ಮೀಟರ್ ಹರಿಯುತ್ತದೆ.


ಚೆನ್ನಸಾಗರದ ಬಳಿ ಮಧುಗಿರಿತಾಲ್ಲೂಕಿಗೆ ಸೇರಿ, ಮುದ್ದೇನಹಳ್ಳಿಯವರೆಗೂ ತಾಲ್ಲೂಕಿನಲ್ಲಿ ಹರಿದು ಮುಂದೆಆAಧ್ರಕ್ಕೆಕಾಲಿಡುತ್ತದೆ. 16ನೇ ಶತಮಾನದಲ್ಲಿ ಮಧುಗಿರಿಯನ್ನುಇಮ್ಮಡಿಚಿಕ್ಕಪ್ಪಗೌಡರು ಆಳುತ್ತಿದ್ದಾಗ ಅವರ ಸಾಮಂತರಾಗಿದ್ದತೆರಿಯೂರು ಸಂಸ್ಥಾನದ ಪಾಳೆಯಗಾರರು ಜಯಮಂಗಲಿ ನದಿ ಪಕ್ಕದಲ್ಲೇ ದೇವಾಲಯಗಳನ್ನು ನಿರ್ಮಿಸಿದ್ದರಂತೆ. ಈಗಲೂ ಇಲ್ಲಿಚೌಡೇಶ್ವರಿದೇವಾಲಯವಿದೆ.ಜಯಮಂಗಲಿಯು ಮಧುಗಿರಿತಾಲ್ಲೂಕಿನ ಪೂರ್ವಭಾಗದಲ್ಲಿದಕ್ಷಿಣದಿಂದಉತ್ತರಕ್ಕೆ ಹರಿಯುತ್ತದೆ. ಮುಂದೆಇದುತಾಲ್ಲೂಕಿನಈಶಾನ್ಯ ದಿಕ್ಕಿನಲ್ಲಿ ಹರಿದುಆಂಧ್ರಪ್ರದೇಶದಅನAತಪುರಜಿಲ್ಲೆಯನ್ನು ಪ್ರವೇಶಿಸುತ್ತದೆ. 


ಹಿರಿಯರು ಹೇಳುವ ಪ್ರಕಾರ 70-80ರ ದಶಕದಲ್ಲಿ ಈ ನದಿಯು ಪ್ರತಿವರ್ಷ ಕನಿಷ್ಟ 2-3 ತಿಂಗಳಾದರೂ ಹರಿಯುತ್ತಿತ್ತು. ಚೆನ್ನಾಗಿ ಮಳೆಯಾದ ವರ್ಷ 6 ತಿಂಗಳು ಖಾಯಂ ನೀರಿನ ಹರಿವು. ಇಷ್ಟು ಹರಿದರೆ ಸಾಕಿತ್ತು ಆಗ. ಉಳಿದ ಅವಧಿಯಲ್ಲಿ ನದಿ ಪಕ್ಕದ ಬಾವಿಗಳು, ಕೆರೆಗಳು, ತಲಪರಿಗೆಗಳು ನೀರಿನಿಂದ ಸಮೃದ್ಧವಾಗಿರುತ್ತಿದ್ದವು. ನದಿ ನೀರನ್ನು ಕಾಲುವೆಗಳ ಮೂಲಕ ಕೆರೆಗಳಿಗೆ ಹಾಯಿಸಿಕೊಂಡು ಅಲ್ಲಿಯೂ ವರ್ಷಕ್ಕೆರಡು ಬೆಳೆ ತೆಗೆಯುತ್ತಿದ್ದರು. ಹಾಲುಬ್ಬಲು, ಘಂಗಡಲೆ, ಕೊಯಮತ್ತೂರು ಸಣ್ಣ, ಬರೋಡ ಭತ್ತ, ದೇವಮಲ್ಲಿಗೆ, ಹಂಸ, ದೊಡ್ಡರಾಗಿ, ಮುಳ್ಳುಬದನೆ ಇತ್ಯಾದಿ ಅನೇಕ ದೇಸಿ ತಳಿಗಳನ್ನು ಬೆಳೆಯಲಾಗುತ್ತಿತ್ತು.


ಈ ಸಮೃದ್ಧತೆಯನ್ನುಕಂಡು 21ನೇ ಮಾರ್ಚ್ 1933ರಲ್ಲಿ ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾಇಸ್ಮಾಯಿಲ್‌ ಅವರುಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿಯ ಬಳಿ ಒಂದು ಅಣೆಕಟ್ಟು ನಿರ್ಮಿಸಲು ಅಡಿಗಲ್ಲು ಹಾಕುತ್ತಾರೆ. ಈ ಕಲ್ಲಿನ ಅಣೆಕಟ್ಟು ಈಗಲೂ ಸುಭದ್ರವಾಗಿದೆ. ಹಾಗೆಯೇ ಮಧುಗಿರಿತಾಲ್ಲೂಕಿನ ಪುರವರದ ಬಳಿ ನದಿ ದಾಟಲು ಅನುಕೂಲವಾಗುವಂತೆ 1949, ಜುಲೈ 30ರಂದು ಆಗಿನ ಮೈಸೂರುಅರಸರಾದ ಶ್ರೀ ಜಯಚಾಮರಾಜೇಂದ್ರಒಡೆಯರ್‌ಅವರು ಸೇತುವೆ ನಿರ್ಮಿಸುತ್ತಾರೆ.


ಕೆಲವು ವರ್ಷಗಳ ಹಿಂದೆ ಮೈದನಹಳ್ಳಿ ಬಳಿ ನದಿ ದಡದಲ್ಲಿಯೇ ಅಪರೂಪದ ಕೃಷ್ಣಮೃಗಗಳನ್ನು ರಕ್ಷಿಸಲು ನೂರಾರು ಎಕರೆಯನ್ನು ವನ್ಯಧಾಮವಾಗಿ ಘೋಷಿಸಲಾಗಿದೆ. 


ಒಳ್ಳೆ ಮಳೆ ಆದ ವರ್ಷ ನದಿ ಹರಿಯದಿದ್ದರೂ ಮರಳಿನಲ್ಲಿ ಒರತೆತೋಡಿದರೆ ನೀರು ಬರುತ್ತದೆ. ನೀರು ಇಂಗಿ ಅಂತರ್ಜಲ ಮಟ್ಟಉತ್ತಮವಾಗಿರುತ್ತದೆ. ಇದರಿಂದ ಸುತ್ತ-ಮುತ್ತಲ ಕೊಳವೆಬಾವಿಗಳಿಗೆ ಸಮೃದ್ಧ ನೀರು. ಇತ್ತೀಚಿನ ದಿನಗಳಲ್ಲಿ ಹಲವು ಕಡೆ ನದಿಗೆ ಅಡ್ಡಲಾಗಿಕಿರು ಅಣೆಕಟ್ಟುಗಳನ್ನು ಹಾಕಲಾಗಿದೆ. ಅಲ್ಲಿ ನೀರು ನಿಂತು ಸುತ್ತ-ಮುತ್ತಲ ಪ್ರದೇಶದ ಅಂತರ್ಜಲ ಮಟ್ ಟಉತ್ತಮವಾಗಿದೆ. ಅಲ್ಲದೆ ಈ ನೀರಿನಲ್ಲಿ ಸಿಗುವ ಮೀನುಗಳನ್ನು ಹಿಡಿಯಲು ಹೆಂಗಸರು ಮಕ್ಕಳಾದಿಯಾಗಿ ಹಳ್ಳಿಗರು ಗುಂಪು ಗುಂಪಾಗಿ ಬರುತ್ತಾರೆ. ಅವರ ಸಂಭ್ರಮ ನೋಡುವುದೇ ಸೊಗಸು.


ಸುವರ್ಣಮುಖಿ: ಕೊರಟಗೆರೆತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ಹುಟ್ಟುತ್ತದೆ. ದೊಡ್ಡತೊರೆಎಂದೇಜನರುಕರೆಯುತ್ತಾರೆ. ಶಿರಾ ತಾಲ್ಲೂಕಿನ ಮದಲೂರುಕೆರೆ ಮೂಲಕ ವೇದಾವತಿ ನದಿಯನ್ನು ಕೂಡಿಕೊಳ್ಳುತ್ತದೆ. ಸಿದ್ಧರಬೆಟ್ಟಕ್ಕೆ ವಾಯುವ್ಯಾಭಿಮುಖವಾಗಿ ಹರಿದು ಬಂದು ಗೂಬಲಗುಟ್ಟೆ ಹೊಸಕೆರೆಯನ್ನುತಲುಪುತ್ತದೆ. ನಂತರಕೈಮರ-ತೋವಿನಕೆರೆರಸ್ತೆ ಹಾದು ಗೂಬಲಗುಟ್ಟೆ ಹಳೇಕೆರೆಯನ್ನು ಸೇರಿ ಹಾಗೇ ಮುಂದುವರಿದುದAಡಿನದಿಬ್ಬ-ಬಡವನಹಳ್ಳಿ ಮಧ್ಯದಲ್ಲಿ ಮಧುಗಿರಿ-ಶಿರಾ ರಸ್ತೆಯನ್ನುದಾಟುತ್ತದೆ. ಮುಂದಕ್ಕೆ ಸಜ್ಜೆ ಹೊಸಳ್ಳಿಯ ಬಳಿ ನದಿಗೆ ಒಂದುಕಟ್ಟು ಕಾಲುವೆ ಹಾಕಿ ಆಂಧ್ರದ ಅಗÀಳಿ ಕೆರೆಗೆ ಸಂಪರ್ಕಿಸಲಾಗಿದೆ. ಸುವರ್ಣಮುಖಿ ಮುಖ್ಯ ನದಿಯು ಶಿರಾ ತಾಲ್ಲೂಕಿಗೆ ಪ್ರವೇಶಿಸಿ ಮದಲೂರುಕೆರೆತಲುಪುತ್ತದೆ. 2022ರಲ್ಲಿ ಈ ನದಿಯುತನ್ನ ನೈಜ ಸ್ವರೂಪದಲ್ಲಿ ಹಲವು ದಿನಗಳ ಕಾಲ ಹರಿಯಿತು.


ಸುವರ್ಣಮುಖಿ ಮತ್ತುಜಯಮಂಗಲಿ ನದಿಗಳು ಕೊರಟಗೆರೆ ಹಾಗೂ ಮಧುಗಿರಿತಾಲೂಕಿನಲ್ಲಿನೂರಾರುತಲಪರಿಗೆಗಳನ್ನು ಪೊರೆದಿವೆ. ನದಿ ಮತ್ತು ದೊಡ್ಡಹಳ್ಳಗಳಲ್ಲಿ ಮಳೆಗಾಲ ತುಂಬಿ ಹರಿಯುವ ನೀರುಅಲ್ಲಿನ ಮರಳಿನಲ್ಲಿ ಇಂಗಿ ಅವುಗಳ ದಡದಲ್ಲಿನತಲಪರಿಗೆಗಳಿಗೆ ನೀರೊದಗಿಸುತ್ತದೆ. ನದಿ ಹರಿಯುವಾಗಅದಕ್ಕಡ್ಡಲಾಗಿಕಟ್ಟು ಕಾಲುವೆ ಹಾಕಿ ನೀರನ್ನುತಮ್ಮ-ತಮ್ಮ ಹೊಲಗಳಿಗೆ ತಿರುಗಿಸಿಕೊಂಡು ಬೇಸಾಯ ಮಾಡುವರೈತರು, ನದಿ ಒಣಗಿದಾಗಅಥವಾ ಸ್ವಲ್ಪವೇ ಹರಿಯುವಾಗದಡದಲ್ಲಿತಲಪರಿಗೆ ಕಾಲುವೆಗಳನ್ನು ತೆಗೆದು ನೀರು ಪಡೆಯುತ್ತಾರೆ.


ಮಧುಗಿರಿ ತಾಲ್ಲೂಕು ದೊಣೆಗಳು, ತೆರೆದ ಬಾವಿಗಳಿಗೂ ಪ್ರಸಿದ್ಧ. ಚಟ್ಟಿನ ಬಾವಿ, ಕಲ್ಲು ಬಾವಿ, ಮರಳು ಬಾವಿ, ರೌಂಡ್ ಬಾವಿ ಮುಂತಾಗಿ ವಿಶಿಷ್ಟ ಹೆಸರುಗಳಿಂದ ಕರೆಯಲಾಗುತ್ತದೆ. ಮಧುಗಿರಿ ಪಟ್ಟಣದ ಒಳಗೇ ಸೀನೀರು ಬಾವಿ, ಪ್ರಧಾನರ ಬಾವಿ, ಸಿದ್ಧರಕಟ್ಟೆ, ಶಿರಾ ಗೇಟಿನಲ್ಲಿರುವ ಐತಿಹಾಸಿಕ ಜೋಡಿ ಕಲ್ಯಾಣಿಗಳು ಮುಂತಾದ ಜಲಮೂಲಗಳಿವೆ. 


ಇನ್ನು, ಮಧುಗಿರಿ ಬೆಟ್ಟ, ಆನಂದರಾಯನಗುಡ್ಡ, ಮಿಡಿಗೇಶಿ ಬೆಟ್ಟ, ಬಸ್ಮಾಂಗಿ ಬೆಟ್ಟಗಳ ಬಂಡೆ ಕೊರಕಲುಗಳ ನಡುವೆ ದೊಣೆಗಳನ್ನು ಕಾಣಬಹುದು. ಕಟ್ಟು ಕಾಲುವೆಯೂ ಸಹ ಈ ತಾಲ್ಲೂಕಿನಲ್ಲಿರುವ ವಿಶಿಷ್ಟ ನೀರಾವರಿ ಪದ್ಧತಿ. ಹಳ್ಳಗಳಿಗೆ ಬೇಸಿಗೆಯಲ್ಲಿ ರೈತರು ಅಲ್ಲಲ್ಲಿ ಕಲ್ಲು ಮತ್ತು ಮಣ್ಣಿನಿಂದ ಅಡ್ಡ ಹಾಕಿ ನೀರು ತಿರುಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಈ ಪದ್ಧತಿ ಬಹುತೇಕ ಇಲ್ಲವಾಗಿದೆ.  


ಹೀಗೆ ಮಧುಗಿರಿಯ ವಿಶಿಷ್ಟ ಜಲಮೂಲಗಳ ಬಗ್ಗೆ  ಸಮಗ್ರ ಅಧ್ಯಯನ ನಡೆಯಬೇಕು. ಮುಖ್ಯವಾಗಿ ನಮ್ಮ ಎಳೆಯ ತಲೆಮಾರುಗಳಿಗೆ ಇವುಗಳನ್ನು ತೋರಿಸುವುದು ಬಹುಮುಖ್ಯ. ಹಾಗೇ ತೋರಿಸಬೇಕೆಂದರೆ ಅವುಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದಾಗಬೇಕಿದೆ. 


* * *

ದೂರವಾಣಿ:  9686194641

E-mail: [email protected]