ಐ ವಿಟ್‍ನೆಸ್ ವೈ ಜಿ ಅಶೋಕ್ ಕುಮಾರ್ "ಎಲ್ಲೋ ಹುಡುಕಿದೆ 'ಕಾಣದ' ದೇವರ”
ಐ ವಿಟ್‍ನೆಸ್ ವೈ ಜಿ ಅಶೋಕ್ ಕುಮಾರ್ "ಎಲ್ಲೋ ಹುಡುಕಿದೆ 'ಕಾಣದ' ದೇವರ”
ಐ ವಿಟ್‍ನೆಸ್
ವೈ ಜಿ ಅಶೋಕ್ ಕುಮಾರ್
"ಎಲ್ಲೋ ಹುಡುಕಿದೆ 'ಕಾಣದ' ದೇವರ”
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜಯದೇವಪ್ಪ ಹಾಲಪ್ಪ ಪಟೇಲ್ ಸ್ವೀಟ್ ಅಂಡ್ ಶಾರ್ಟ್ ಆಗಿ ಜೆ.ಹೆಚ್.ಪಟೇಲ್ ಕುರಿತು ಮತ್ತು ಅವರೇ ನುಡಿದ ಸಾವಿರಾರು ವಾಕ್ಯ ವಚನಗಳಿವೆ.
ಪ್ರೆಸ್ ಫ್ರೆಂಡ್ಲೀ ಪಟೇಲ್ ,ನಿಜ ನಾಯಕ.
ನಾನು ಅವರಿಗೆ ಹತ್ತಿರವಾದದ್ದು ಒಂದು ಲೇಖನದ ಮೂಲಕ !
ಆ ಲೇಖನದ ಶೀರ್ಷಿಕೆ ಹೀಗಿತ್ತು. " ಪಟೇಲರ ಜುಬ್ಬಾಕ್ಕೆ ಜೇಬುಗಳಿಲ್ಲ "
ಅಸೆಂಬ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಎರಡನೆ ಶನಿವಾರ ಈಗಿನ ಮು ಮ ಬರಾಬೊ ಪ್ರೆಸ್ ಕ್ಲಬ್ ಗೆ ಹುಡುಕಿಕೊಂಡು ಬಂದು " ಗುರು ರಾತ್ರಿ ಒಂದು ಊಟಕ್ಕೆ ಬರಬೇಕು. ಒಳ್ಳೆ ಸ್ಕಾಚ್ ಪಾರ್ಟಿ ಇದೆ " ಎಂದರು.
ಆಗ ಬಾಪೂ ಹೆದ್ದೂರ ಶೆಟ್ಟಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಈಗಿನ ಮುಖ್ಯಮಂತ್ರಿ ಆಪ್ತ ಸಹಾಯಕ ದಾಡೀ ಮೋಹನ್ ಮೂಲ ಶಿಕ್ಷಣ ಇಲಾಖೆ , ಆತ ನಿಮ್ಮ ಪ್ರೆಸ್ ಕ್ಲಬ್ ನಲ್ಲಿ msil ಡ್ರಿಂಕ್ ಕ್ವಾಲಿಟಿ ಇರುತ್ತೆ ಅಂತ ಪಾರ್ಸೆಲ್ ತಗೋತಿದ್ದರು.ಬರಾಬೊ ಆಗ MHB ಪ್ರಿಯ.
ಈಗ ಸುಧಾಕರ ಅದೇನು ಕುಡಿಸ್ತಾರೋ ಕಾಣೇ !ಇರಲಿ ,
ರಾತ್ರಿ ಹರಿಖೋಡೆಯ ನರ್ಸರಿ ಗೆಸ್ಟ್ ಹೌಸ್ ರಂಗೇರಿತ್ತು. (ಈಗ ಅದು ಪ್ರಿಸ್ಟೇಜ್ ಹೋಟೇಲ್ ಆಗಿದೆ.
ಸೋಫಾಯ ಸ್ಕೂಲ್‌ಪಕ್ಕದ್ದು.) ಒಂದು ಸಣ್ಣ ವೇದಿಕೆಯಲ್ಲಿ ಸಿ ಅಶ್ವಥ್ ರತ್ತಮಾಲ ಸಿಸ್ಟರ್ಸ್
" ಸಂಜೆಯ ರಾಗಕೆ ಭಾನು ಕೆಂಪೇರಿದೆ " ಭಾವಗೀತೆ ಅಲೆ ಅಲೆಯಾಗಿ ರತ್ನ ಕಂಠದಲ್ಲಿ.....
ಪೀಟರ್ ಸ್ಕಾಟ್, ರೆಡ್‌ನೈಟ್, ಹರ್ಕ್ಯೂಲಸ್ ಡಿಲಕ್ಸ್ , ವೈಟ್ ರಮ್ ಇವೆಲ್ಲ VIP ಗಳಿಗೆ ಸ್ಪೆಷಲ್ ಆಗಿ ಪ್ರತ್ಯೇಕವಾಗಿ ಖೋಡೆ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿತ್ತು.
ಎಲ್ಲಾ mla mlc mp media ಗಳಿಗೆ ತಿಂಗಳಿಗೆ ಒಂದು ಕೇಸ್ ಸರಬರಾಜಾಗುತ್ತಿತ್ತು.
ಕುಡಿಯದ ರಾಜಕಾರಣಿಗಳು ನಮಗೆ ತಂದು ಕೊಡುತ್ತಿದ್ದರು.ಮಹಾದೇವಪ್ಪ, ಮರಿಲಿಂಗೇಗೌಡರು ರೆಗ್ಯುಲರ್ ನಾಣಯ್ಯ , ವಿಶ್ವನಾಥ್ ತಾವೇ ಬಳಸುವರು. ನಮ್ಮ ಪ್ರೆಸ್ ಕ್ಲಬ್ ಕಾರ್ಯಕ್ರಮಗಳಿಗೆ ಲಾರಿ ಲೋಡು ಕಳಿಸುತ್ತಿದ್ದರು.
ಇವತ್ತು ಒಂದು ಪೆಗ್ ಕೂಡಾ ಫ್ರೀ ಸಿಗೋದಿಲ್ಲ.
ಖೋಡೆಗೆ ತಿರುಪತಿ ಲಾಡು ಅಂತ ಬಳೇಪೇಟೆಯಿಂದ ತಗೊಂಡು ಹೋಗಿ ಕೊಟ್ಟು ಹಣ ಕೀಳುತ್ತಿದ್ದ ಮಹಾನ್ ಪತ್ರಕರ್ತರೂ ಇದ್ದರು.ಇರಲೀ, ಹರಿಖೋಡೆ ಸಿಗರೇಟು ಸೇದಲು ನನ್ನ ಹೊರಗೆ ಕರೆದರು. ಒಳಗೆ
ಜಿ ಎಸ್ ಎಸ್ ಅವರ "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ " ಕೇಳುತ್ತಿತ್ತು.
ಪಟೇಲರು ತನ್ಮಯರಾಗಿ ಆಲಿಸುತ್ತಿದ್ದರು. ಲಾನ್ ನಲ್ಲಿ ಹರಿಖೋಡೆ ಡೇವಿಡಾಫ್ ಸಿಗರೇಟ್ ಹಚ್ಚಿದರು.
"ಜಿ ಎಸ್ ಎಸ್ ನಿಮಗೆ ಪರಿಚಯನಾ" ?
ನಾನು ' ಹೂಂ ಯಾಕೆ ' ಅಂದೆ.
ಈ ಕವಿತೆಯಲ್ಲಿ 'ಎಲ್ಲೋ ಹುಡುಕಿದೆ ಇಲ್ಲದ ದೇವರ '
ಅಂತ ಬರೆದಿದ್ದಾರೆ.ಅದನ್ನು ಸ್ವಲ್ಪ ಬದಲಿಸಬೇಕು. ದೇವರಿದ್ದಾನೆ 'ಇಲ್ಲದ' ದೇವರ ಅಂತ ಬರೆದಿದ್ದಾರೆ.
“ಸಾರ್ ಅದು ಕವಿಯ ಕಲ್ಪನೆ ಬದಲಿಸಲಾಗುವುದಿಲ್ಲ.”
ಅವರೇ ಬದಲಿಸಬೇಕು.ಈಗ ಜನಪ್ರಿಯವಾಗಿದೆ ಸಾಧ್ಯವೇ ಇಲ್ಲ ಅಂದೆ.
ಮಹಾನ್ ದೈವಭಕ್ತರು ಸ್ವಯಂ ಕವಿಯೂ ಆಗಿದ್ದ ಶ್ರೀಹರಿ ಖೋಡೆ ಬದಲಿಸಲೇಬೇಕೆಂದು ಹಠಕ್ಕೆ ಬಿದ್ದರು.
ಒಳಗೆ ಗಾಯನ ಮುಗಿದಿತ್ತು . ಇದೇ ಪ್ರಶ್ನೆಯನ್ನು ಖೋಡೆ ಪಟೇಲರ ಮುಂದಿಟ್ಟರು.
ಅವರು ಸರಿಯಾಗೇ ಬರೆದಿದ್ದಾರೆ ಬೇಕಿದ್ರೆ ಜಿ ಎಸ್ ಎಸ್ ಅವರನ್ನೇ ಕೇಳಿ ಎಂದರು.
ಜಿ ಎಸ್ ಎಸ್ ಲ್ಯಾಂಡ್ ಲೈನ್ ಗೆ ಫೋನ್ ಹೋಯಿತು.
ಸಮಯ ಸರಿಯುತ್ತಿತ್ತು. ಗಾಯಕಿಯರು ಊಟಕ್ಕೆ ಹೊರಟರು.
ಅಶ್ವಥ್ ಪಾರ್ಟಿಯೊಳಗೆ ತೂರಿಕೊಂಡರು.
ಜಿ ಎಸ್ ಎಸ್ ಜೊತೆ ಪಟೇಲರು ಮಾತನಾಡುತ್ತಾ
" ಶಿವರುದ್ರಪ್ಪನವರೇ, ನನ್ನ ಗೆಳೆಯ ಯಜಮಾನ್ ಅವರ ಒಂದು ಆಕ್ಷೇಪ ಇದೆ.ಈಗ ತಾನೇ ತಮ್ಮ ಎಲ್ಲೋ ಹುಡುಕಿದೆ ಇಲ್ಲದ ದೇವರನ್ನು ಅಶ್ವಥ್ ಹಾಡಿದರು.
ದೇವರಿದ್ದಾನೆ.ಇಲ್ಲದ ದೇವರ ಅಂತ ತಾವು ಬರೆದಿದ್ದೀರಿ ಎಂಬುದು ಹರಿಯ ಆಕ್ಷೇಪ?
ಆ ಕಡೆಯಿಂದ ಕವಿಗಳು
'ಅವರು ಚೆನ್ನಾಗಿ ಕುಡಿದಿರಬೇಕು.ಏನು ಬೇಕಾದರೂ ಹಾಡ್ಕೋಳ್ಳೀ ನಾನು ಏನೋ ಬರೀತಿದ್ದೇನೆ 'ಎಂದು ಫೋನ್ ಇಟ್ಟರು.
ಇಲ್ಲಿ ಚರ್ಚೆ ಮುಂದುವರೆಯಿತು. ಖೋಡೆ ಒಂದು ಮಡಚಿದ ಚೀಟಿಯನ್ನುನನ್ನ ಕೈ ಗಿಟ್ಟರು.
ಬಿಡಿಸಿ ಓದಿಕೊಂಡು ಅಶ್ವಥ್ ಅವರಿಗೆ ಚೀಟಿಯನ್ನು ವರ್ಗಾಯಿಸಿದೆ.
ಪಟೇಲರು ಕುತೂಹಲದಿಂದ ಗಮನಿಸುತ್ತಿದ್ದರು.
ಆ ಚೀಟಿಯಲ್ಲಿ "ಎಲ್ಲೋ ಹುಡುಕಿದೆ 'ಕಾಣದ' ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ " ಅಂತ ತಿದ್ದಿದ್ದರು.
'ಇಲ್ಲದ' ಬದಲು 'ಕಾಣದ' ದೇವರಾಗಿತ್ತು.
ಅದನ್ನು ಅಶ್ವಥ್ ಮತ್ತೊಮ್ಮೆ ಹಾಡಿದರು.
ಇದೂ ಕೂಡ ಚೆನ್ನಾಗಿದೆ ಎಂದು ಪಟೇಲರು ತಲೆದೂಗಿದರು.
ಪೀಟರ್ ಸ್ಕಾಟ್ ಬಾಟಲಿಗಳು ಖಾಲಿಯಾಗುತ್ತಲೇ ಇತ್ತು.
ಮಧ್ಯರಾತ್ರಿ ಎಲ್ಲಾ ಮುಗಿದು ಪಟೇಲರು ಗನ್ ಮ್ಯಾನ್ ಹೆಗಲು ಹಿಡಿದು ಕಾರಿನೆಡೆಗೆ ಹೆಜ್ಜೆ ಹಾಕುವಾಗ
"ಪಟೇಲರ ಜುಬ್ಬಾಕ್ಕೆ ಜೇಬುಗಳಿಲ್ಲ” ಚೆನ್ನಾಗಿ ಬರೆದಿದ್ದೀಯಾ " ಎಂದು ಬೆನ್ನು ಚಪ್ಪರಿಸಿ ಕಾರಿಗನೂರಿಗೆ
ಕಾರೇರಿದರು.
( ಆ ಲೇಖನದಲ್ಲಿ ಪಟೇಲರು ತಮ್ಮ ನೂರಾರು ಎಕರೆ ಜಮೀನನ್ನು ಉಳುವವರಿಗೆ ನೀಡಿದ್ದು, ಲಂಚ ರುಷುವತ್ತು ಭ್ರಷ್ಟರಾಗದೇ ಉಳಿದದ್ದು, ರಾಜ್ ಕುಮಾರ್ ಹಾಗೂ ಪಟೇಲರ ಅಂಗಿಯ ಜೇಬುಗಳಲ್ಲಿ ಹಣ ಇಲ್ಲದಿರುವುದನ್ನು ಪ್ರಸ್ತಾಪಿಸಲಾಗಿತ್ತು.)
***
***
ಇನ್ನೊಮ್ಮೆ
ಪಟೇಲರ ಸಂಪುಟದಲ್ಲಿ ಕ್ರೀಡಾ ಮಂತ್ರಿಯಾಗಿದ್ದ ಅಜಯ್ ಕುಮಾರ್ ಸರ್ ನಾಯಕ್ ಅಟ್ಲಾಂಟಾಕ್ಕೆ ಹೋಗಿ ಬಂದ ಮೇಲೆ ಅವರ ಮನೆಯಲ್ಲಿ ಹಲವಾರು ಸ್ಕಾಚ್ ವಿಸ್ಕಿಗಳ ಪಾರ್ಟಿ ಏರ್ಪಡಿಸಿದ್ದರು.ಅಲ್ಲಿ ಹಗಲಲ್ಲಿ ಯಾವಾಗಲೂ ಗಾಂಧಿ ಟೋಪಿ ಹಾಕುತ್ತಿದ್ದ ಸಮಾಜ ಕಲ್ಯಾಣ ಮಂತ್ರಿ ರಮೇಶ್ ಜಿಗಜಿಣಗಿ, ಅಬಕಾರಿ ಶಾಣಪ್ಪ ಮುಂತಾದವರಿದ್ದರು.
ಪತ್ರಕರ್ತರಾದ ಸಿಂಗಲ್ ಪೆಗ್ ಶಿವಣ್ಣ , ಆರ್ ಪಿ ಜಗದೀಶ್,
ಮೈ ಸಿ ಪಾಟೀಲರೂ ಇದ್ದರು ಪಟೇಲರಿಗಾಗಿ ಕಾದು ಇವರೆಲ್ಲ ಹೊರಟರು.
ಸಾರ್ ನಾಯಕರ ಜೋಡಿ ನಾನೊಬ್ಬ ಉಳಿದೆ.ಇನ್ನೇನು ಮನೆಗೆ ಹೊರಡಬೇಕೆನ್ನುವಷ್ಟರಲ್ಲಿ ಆಗಲೇ ಟೈಟಾಗಿದ್ದ ಪಟೇಲರು ಎಂಟ್ರಿ ಕೊಟ್ಟರು.ಸರ್ ಇಷ್ಟು ಹೊತ್ತು ಅವರೆಲ್ಲ ನಿಮಗಾಗಿ ಕಾದುಹೋದರು.ಎಂದು ಹೇಳಿದ
ಸರ್ ನಾಯಕ್ ಗೆ ಅವರು ಹೋಗಿದ್ದೇ ಒಳ್ಳೇದಾಯಿತು.ಅವರಿಗೆ ಕುಡಿತದ ಮಹತ್ವ ಗೊತ್ತಿಲ್ಲ.ಎಂದು ನನ್ನ ಕಡೆ ನೋಡಿದರು.ಮತ್ತೆ ಎಲ್ಲವೂ ಮೊದಲಿಂದ ಶುರುವಾಯಿತು.
ಸುಮಾರು 2.30 ರ ಹೊತ್ತಿಗೆ ಅನ್ನ ,ಟೊಮೊಟೋ ಗೊಜ್ಜು ಮಾಡಿಸಿ ಮೊಟ್ಟೆ ಬೇಯಿಸಿಬಿಡು ಎಂದು ಪಟೇಲರು ಆಜ್ಞೆ ಇತ್ತರು.ಆವತ್ತು ಆರೇಳು ಮಾದರಿಯ ಸ್ಕಾಚ್ ವಿಸ್ಕಿಗಳ ಟೇಸ್ಟ್ ಮಾಡಿ ಅದರ ಬಗ್ಗೆ ಲೆಕ್ಚರ್ ಕೊಟ್ಟರು.
ಊಟದ ನಂತರ ಚಾಕಲೇಟ್ ವಿಸ್ಕಿ ಕುಡಿದು ಪಾರ್ಟಿ ಸಮಾಪ್ತಿ ಯಾಗುವ ಹೊತ್ತಿಗೆ ಕೋಳಿ ಕೂಗುತ್ತಿತ್ತು.
***
***
ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಪೂರ್ವಾನುಮತಿ ಇಲ್ಲದೆ ಅವರ ಶಯ್ಯಾಗೃಹಕ್ಕೆ ನುಗ್ಗುತ್ತಿದ್ದೆವು.
ನಮ್ಮ ಪತ್ರಿಕಾ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದೆವು. ಒಮ್ಮೆ ಹಾಗೆ ರಾಜಹನ್ಸ್ ಪ್ರಿಂಟರ್ಸ್ ಹೊಸ ಕಲರ್ ಮಿಷನ್ ಉದ್ಘಾಟನೆಗೆ ನಾಣಯ್ಯನವರೊಂದಿಗೆ ಬಂದರು.
ಪ್ರಿಂಟಿಂಗ್ ಮಿಷನ್ ಸ್ವಿಚ್ ಒತ್ತಿದಾಗ ಸುಂದರ ತರುಣಿ ಕೈಯಲ್ಲಿ ದ್ರಾಕ್ಷಾರಸ ಹಿಡಿದು ನಿಂತಿರುವ ಪೋಸ್ಟರ್ ಹೊರ ಬಂತು.ಪಟೇಲರು ನಮ್ಮೆಡೆಗೆ ನೋಡಿ ನಕ್ಕರು. ಅಲ್ಲಿ ಪತ್ರಕರ್ತ ಸಾ.ಚಂದ್ರಶೇಖರ್ ರಾವ್(ಸಾಚ), ಸಮೀಉಲ್ಲಾ, ಪೇಜ್ ಮೇಕರ್ ತರ್ಲೆ ರವಿ ಇದ್ದರು.
ವಾಪಾಸು ತೆರಳುವಾಗ
" ಏ ಚಂದ್ರು , ಇಂತಹ ಶೆಟ್ಟಿ ಇಟ್ಕೊಂಡು ಯಾಕ್ರೋ ಒದ್ದಾಡುತ್ತಿರಾ " ಅಂದ್ರು.
ಅದಕ್ಕೆ ಸಾಚ, ನೀವೇ ಹೇಳಿದ್ರಲ್ಲಾ ಶೆಟ್ಟಿ ಅಂತ !
ಎಲ್ಲರೂ ನಕ್ಕರು.
ಆ ದಿನಗಳಲ್ಲಿ ಮು ಷಣ್ಮುಗಂ ಸಂಪಾದಕರಾಗಿದ್ದ
ಸಂಜೆ ನುಡಿ ಪತ್ರಿಕೆಗೆ ತಿಂಗಳಿಗೆ ಐವತ್ತು ಸಾವಿರ ಹರಿಖೋಡೆಯಿಂದ ಬರುತ್ತಿತ್ತು.
ಷಣ್ಮುಗಂ ಪತ್ರಿಕೆ ಬಿಟ್ಟಾಗ ಬರುತ್ತಿದ್ದ ಹಣ ನಿಂತು ಹೋಯಿತು.
ಕೊನೆಗೆ ಪಟೇಲರ ಮೊರೆ ಹೋಗಬೇಕಾಯಿತು.
ಪಟೇಲರು ಫೋನ್ನಲ್ಲಿ ಹರಿಖೋಡೆಗೆ
" ಯಜಮಾನ್ ಅದೇನೋ ನಮ್ಮ ಹುಡುಗರ ಪತ್ರಿಕೆಗೆ ಸಹಾಯ ಮಾಡುತ್ತಿದ್ದರಂತಲ್ಲ.....
ಮುಂದುವರೆಸಿ " ಎಂದರು.
ಅಲ್ಲಿಂದ ಮುಂದೆ ಐವತ್ತರ ಬದಲು ಇಪ್ಪತ್ತೈದು ಬರುತ್ತಿತ್ತು.ಸಂಜೆನುಡಿ ನಾಮದ ಜಯರಾಮ ಹಣದ ಜೊತೆಗೆ ಮಾಮೂಲಿ ಡ್ರಿಂಕ್ಸ್ ಬಾಕ್ಸ್ ನ್ನೂ ಎತ್ತಿಕೊಂಡು ಬರುತ್ತಿದ್ದರು.
ಪಟೇಲರ ಕೃಪೆಯಿಂದ ಪತ್ರಿಕೆ ಅವರಿರುವ ತನಕ ನಡೆಯಿತು.
* ಇವತ್ತು ಪಟೇಲರ ಹೆಸರಿನಲ್ಲಿ "ಜೆ ಹೆಚ್ ಪಟೇಲ್ ಪ್ರಶಸ್ತಿ" ಯನ್ನು ಮಾಜಿ ಕಾರ್ಮಿಕ ಮಂತ್ರಿ ಎಸ್ ಕೆ ಕಾಂತಾ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಆದರೆ ಆ ಪ್ರಶಸ್ತಿಯನ್ನು ಆಯೋಜಿಸಿರುವುದು , ವಿ ಸೋಮಣ್ಣ !
ಭ್ರಷ್ಟತೆಯ ವಿರೋಧಿ ಪಟೇಲರೆಲ್ಲಿ ? ಈ 40 ಪರ್ಸೆಂಟ್ ಭ್ರಷ್ಟರೆಲ್ಲಿ ? ಪಟೇಲರು ಇದ್ದಿದ್ದರೆ ಇವರಿಗೆಲ್ಲ ತುಬುಕ್ಕನೇ ಉಗಿದಿರೋರು......