60ರ ಹಿನ್ನೋಟ -  ಡಾ.ಹೆಚ್.ವಿ.ರಂಗಸ್ವಾಮಿ   “ನೀವು ದೇವರು, ದೆವ್ವ ನೋಡಿದೀರ?”

   60ರ ಹಿನ್ನೋಟ -  ಡಾ.ಹೆಚ್.ವಿ.ರಂಗಸ್ವಾಮಿ “ನೀವು ದೇವರು, ದೆವ್ವ ನೋಡಿದೀರ?”

   60ರ ಹಿನ್ನೋಟ -  ಡಾ.ಹೆಚ್.ವಿ.ರಂಗಸ್ವಾಮಿ     “ನೀವು ದೇವರು, ದೆವ್ವ ನೋಡಿದೀರ?”

   60ರ ಹಿನ್ನೋಟ

-  ಡಾ.ಹೆಚ್.ವಿ.ರಂಗಸ್ವಾಮಿ

 

“ನೀವು ದೇವರು, ದೆವ್ವ ನೋಡಿದೀರ?”

ನಾನುಪಂಚನಹಳ್ಳಿ ಮಾಧ್ಯಮಿಕ ಶಾಲೆಗೆ ಸೇರಿದಾಗ ವೃಷಭಾಚಾರ್‌ ಅನ್ನುವವರು ಮುಖ್ಯೋಪಾಧ್ಯಯರಾಗಿದ್ದರು. ಕೆಂಚಮಾರಯ್ಯ, ಫಣಿಯಾಚಾರ್‌, ನೀಲಕಂಠಪ್ಪ, ಧನಶೇಖರಪ್ಪ, ಬಸವರಾಜಪ್ಪ ನಮ್ಮಶಿಕ್ಷಕರು.  ಪೋಲೀಸ್‌ ನಾಗಪ್ಪನವರ ಮಗ ಚಿದಾನಂದ, ನೀಲಕಂಠಪ್ಪ ಮಾಸ್ತರ ಮಗ ಪ್ರಸನ್ನ ನನ್ನ ಜೊತೆ ಮೊದಲನೆ ಸಾಲಿನ ಸಹಪಾಠಿಗಳು.  ನಮ್ಮ ಮೂವರ ಮಧ್ಯೆ ತಪ್ಪಿಲ್ಲದೆ ಓದುವ ಮತ್ತು ಮುದ್ದಾಗಿ ಅಕ್ಷರಗಳನ್ನು ಪೋಣಿಸಿ ಬರೆಯುವ ಬಗ್ಗೆ ಸ್ಪರ್ಧೆ ಇದ್ದೇ ಇರುತ್ತಿತ್ತು.  ಚಿದಾನಂದನನಗಿಂತ ಮುದ್ದಾಗಿ ಅಕ್ಷರಗಳನ್ನ ಬರೆಯುತ್ತಿದ್ದ.  ಆದರೆ ತಪ್ಪಿಲ್ಲದೆ ಬರೆಯುವುದರಲ್ಲಿ ನಾನು ಮತ್ತು ಪ್ರಸನ್ನ ಪರವಾಗಿರಲಿಲ್ಲ. ರತ್ನಮ್ಮ ಅನ್ನುವ ಮತ್ತೊಬ್ಬಳು ಸಹಪಾಠಿಮಹಿಳಾ ವಿಭಾಗದಿಂದ ನಾವು ಮೂವರಿಗೂ ಮುದ್ದಾಗಿಬರೆಯುವ ಮತ್ತು ತಪ್ಪಿಲ್ಲದೆ ಓದುವಎಲ್ಲಾ ವಿಭಾಗಗಳಲ್ಲಿ ನಮಗೆ ಪ್ರತಿಸ್ಪರ್ಧಿಯಾಗಿದ್ದಳು.  ಈ ಎಲ್ಲಾನಮ್ಮ ಪ್ರಯತ್ನಗಳಿಗೆ ಫಣಿಯಾ ಚಾರ್ಮಾಸ್ತರು ಹುರಿದುಂಬಿಸುತ್ತಿದ್ದರು.  ಅವರುಅದ್ಭುತವಾಗಿ ಚಿತ್ರಗಳನ್ನುಬಿಡಿಸುತ್ತಿದ್ದರು.  ಯಾವುದೆ ವಸ್ತು ಮತ್ತು ವ್ಯಕ್ತಿಗಳಚಿತ್ರಗಳನ್ನು ಕ್ಷಣಾರ್ಧದಲ್ಲಿಬಿಡಿಸಿನಮ್ಮಲ್ಲಿ ಅಚ್ಚರಿ ಮೂಡಿಸುತ್ತಿದ್ದರು.  ಅವರು ಒಬ್ಬ ಒಳ್ಳೆಶಿಷ್ಯನ ಹುಡುಕಾಟದಲ್ಲಿದ್ದರು ಅನ್ನಿಸುತ್ತೆ.  ಅವರುಚಿತ್ರಬರೆಯುವಾಗಕಣ್ಣರಳಿಸದೆಅವರಕೈಬೆರಳುಗಳಿಂದ ಮೂಡುವಗೆರೆಗಳನ್ನೇ ಕುತೂಹಲದಿಂದ ಗಮನಿಸುತ್ತಿದ್ದ ನನ್ನ ಬಗ್ಗೆಅವರಿಗೆ ಅದೇನೋ ವಿಶೇಷವಾದಕಾಳಜಿ.  ನನಗೆ ಯಾವುದಾದರು ಮರದ್ದೊ, ವಸ್ತುವಿನ ದೋಹೆಸರು ಹೇಳಿಅದರಚಿತ್ರವನ್ನು ಬರೆದುಕೊಂಡುಬರುವಂತೆ ತಿಳಿಸುತ್ತಿದ್ದರು.  ಚೌಕಾಬಾರದ ರೀತಿಚಿತ್ರದ ಮೇಲೆಗೆರೆಗಳಿಂದ ಚಚ್ಚೌಕವನ್ನು ಬರೆದು, ಅದೇ ಅಳತೆಯ ಅಷ್ಟೇಮನೆಗಳಿರುವ ಚಚ್ಚೌಕವನ್ನು ಬಿಳಿಹಾಳೆಯ ಮೇಲೆ ಬರೆಸುತ್ತಿದ್ದರು.  ಚಿತ್ರದ ಮೇಲಿನ ಚಚ್ಚೌಕದಲ್ಲಿ ಯಾವ ಚೌಕದಲ್ಲಿ ಚಿತ್ರದಯಾವಭಾಗವಿದೆಯೋ ಅದನ್ನು ಅದೇ ಅಳತೆಯಲ್ಲಿ, ಅದೇಕೋನದಲ್ಲಿ ಬರೆಯಲು ತಿಳಿಸುತ್ತಿದ್ದರು.  ಅನಾಯಾಸವಾಗಿ ತದ್ರೂಪು ಚಿತ್ರ ಮೂಡಿಬರುತ್ತಿತ್ತು.  ಅವರು ಗಣಪತಿ ಚಿತ್ರವನ್ನುಈ ರೀತಿ ಬಿಡಿಸಿ ತೋರಿಸಿದ್ದು ನೆನಪು.  ನಾನುಅದಕ್ಕೆಪ್ರತಿಯಾಗಿ ಸಂಪತ್ತಿಗೆ ಸವಾಲ್‌ ಸಿನಿಮಾದಮೂಲಕ ನಮ್ಮೆಲ್ಲರ ಮನಗೆದ್ದಿದ್ದ ರಾಜಕುಮಾರ್‌  ಚಿತ್ರವನ್ನುಬರೆದುತೋರಿಸಿಅವರ ಪರಮ ಶಿಷ್ಯನಾಗಿಬಿಟ್ಟೆ.  ಅವರನಿ ರೀಕ್ಷೆಯಂತೆ ನಾನು ರವಿವರ್ಮನಂತೆ ನಾನು ಚಿತ್ರಕಲಾವಲ್ಲಭನಾಗಲಿಲ್ಲವಾದರೂ, ಮುಂದೆ “ಪ್ರಾಕ್ಟಿಕಲ್‌ʼನಲ್ಲಿ ಕಪ್ಪೆ, ಜಿರಲೆ ಇತ್ಯಾದಿಗಳನ್ನು ಸುಂದರವಾಗಿಬರೆದುಸ್ವಲ್ಪಒಳ್ಳೆಯ ಅಂಕಗಳನ್ನು ಪಡೆಯುವಷ್ಟಕ್ಕೆ ಮಾತ್ರ ಸೀಮಿತವಾಯ್ತು.

ಮತ್ತೊಬ್ಬ ಪ್ರಭಾವಬೀರುತ್ತಿದ್ದ ಮಾಸ್ತರೆಂದರೆಕೆಂಚಮಾರಯ್ಯನವರು (ಈಗಅವರು ತುಮಕೂರುನಗರದಲ್ಲಿ ನೆಲೆಸಿದ್ದು ಜಿಲ್ಲಾಪಂಚಾಯತ್‌ ಮಾಜಿ ಸದಸ್ಯರು).  ಪ್ರೈಮರಿಶಾಲೆ ಮಾಸ್ತರಿಕೆಯಿಂದ ಮೊದಲುಗೊಂಡು, ಹೋದಲ್ಲೆಲ್ಲಾತ ಮ್ಮನೇರ ನಡೆನುಡಿಯ ಛಾಪುಮೂಡಿಸಿ, ಮೈಸೂರಿನ ಹೆಚ್.ಡಿ. ಕೋಟೆಯಲ್ಲಿಶಿಕ್ಷಣಾಧಿಕಾರಿಯಾಗಿ ಜನ ಮನ್ನಣೆಗಳಿಸಿದವರು.  ತುಮಕೂರಿನಲ್ಲಿ ಜಿಲ್ಲಾಪಂಚಾಯತ್‌ ಸದಸ್ಯರಾಗಿ ಜನಪರಕೆಲಸಗಳಿಗೆ ಹೆಸರು ವಾಸಿಯಾದವರು.  ಅವರ ವಾಕ್ಚಾತುರ್ಯ, ವೈಚಾರಿಕನಿಲುವುನಮ್ಮನ್ನಆಲೋಚನೆಗೆ ಹಚ್ಚುತ್ತಿದ್ದವು.  ಬರೀಪಠ್ಯಕ್ಕೆ ಸೀಮಿತವಲ್ಲದೆ, ಪ್ರಾಸಂಗಿಕವಾಗಿಕುತೂಹಲ ಕೆರಳಿಸುವಂತ ಪ್ರಸಂಗಗಳ ಮೂಲಕ ನಮ್ಮನ್ನು ಸೆಳೆಯುತ್ತಿದ್ದರು.  ಒಂದುಬಾರಿಪಾಠದ ಮಧ್ಯೆಯಾವುದೋ ಕಾರಣಕ್ಕೆ ದೇವರು, ದೆವ್ವಗಳ ಇರುವಿಕೆಯ ವಿಷಯ ಪ್ರಸ್ತಾಪವಾಯ್ತು.  ನಾವುಒಬ್ಬರಮೇಲೊಬ್ಬರು ಅವರಿವರಿಂದ ಕೇಳಿದ್ದಕಪೋಲಕಲ್ಪಿತ ಕತೆಗಳನ್ನ ಹೇಳಿ ಶಹಭಾಶ್‌ ಅನ್ನಿಕೊಳ್ಳಲು ತುದಿಗಾಲಮೇಲೆಕಾತರಿಸುತ್ತಿದ್ದೆವು.  ಅವರು ಅಷ್ಟೇಶಾಂತರಾಗಿ ಎಲ್ಲವನ್ನೂ ಕೇಳಿಸಿಕೊಂಡು “ನೀವುಬೇರೆಯವರಿಂದಕೇಳಿರುವುದನ್ನು ಹೇಳುತ್ತಿದ್ದೀರಷ್ಟೆ, ನೀವು ನೋಡಿರುವುದನ್ನು ಹೇಳಿರಿ” ಅಂದಾಗನಮ್ಮಉತ್ಸಾಹಭಂಗವಾಯ್ತು.  ಆದರೂ ಖಾತರಿಮಾಡಿಕೊಳ್ಳಬೇಕಲ್ಲ. ನಮ್ಮೆಲ್ಲಾ ಮುಗ್ದಪ್ರಶ್ನೆಗಳಿಗೆ ಸ್ಪಂಧಿಸುತ್ತಿದ್ದವರು ಫಣಿಯಾಚಾರ್‌ ಮತ್ತುಕೆಂಚಮಾರಯ್ಯನವರುಮಾತ್ರ.  ಬೇರೆಯಾರಲ್ಲೂ ಈರೀತಿಪ್ರಶ್ನೆಗಳನ್ನುಕೇಳಲು ಸಾಧ್ಯವಿರಲಿಲ್ಲ. ನಾನು ಚಿದಾನಂದ ದೈರ್ಯಮಾಡಿ ಫಣಿಯಾಚಾರ್‌ ಮಾಸ್ತರಿಗೆ “ಸರ್‌ ನೀವುದೇವರು, ದೆವ್ವ ನೋಡಿದೀರ?” ಅಂತಕೇಳಿಯೇಬಿಟ್ಟೆವು.  ಅವರು ಸ್ವಲ್ಪಸಾವರಿಸಿಕೊಂಡು “ನಾನು ನೋಡಿಲ್ರಪ್ಪ ನೀವೇನಾದ್ರೂನೋಡಿದ್ರೆ ಹೇಳ್ರಿ” ಅಂದರು.  “ನಾವುನೋಡಿಲ್ಲಾಸಾರ್‌, ಬರೀ ಕೇಳಿದೀವಿ.” ಅಂದರು.  ಆದರೂ ನಮಗೆಪೂರ್ತಿ ಸಮಾಧಾನವಾಗಲಿಲ್ಲ.  ಈಇಬ್ಬರೂ ನೆಚ್ಚಿನ ಮಾಸ್ತರುಗಳು ನಮ್ ಮಕುತೂಹಲತಣಿಸುವಂತೆ ದೇವರು ಇರುವ ಬಗ್ಗೆಯಾಗಲಿ, ಇರದುದರ ಬಗ್ಗೆಯಾಗಲಿ ಸ್ಪಷ್ಟವಾಗಿ ಏನನ್ನೂ ಹೇಳದೆ ನಡು ನೀರಿನಲ್ಲಿ ಬಿಟ್ಟುಬಿಟ್ಟರು.  ನನಗಂತೂ ಈ ಬಗ್ಗೆ ಅಗಾಧ ಕುತೂಹಲ ಇದ್ದೇಇತ್ತು.  ಅದಕ್ಕೆಕಾರಣವಾಗಿದ್ದುದು ನಮ್ಮ ದೇವರಹೊಸಹಳ್ಳಿ ಶ್ರೀಲಕ್ಮೀರಂಗನಾಥ ಸ್ವಾಮಿ ದೇವಸ್ಥಾನದ ಒಳಾಂಗಣದಲ್ಲಿಗೋಡೆಗೆನೇತು ಹಾಕಿದ್ದಒಂದು ಭಯಾನಕ ಚಿತ್ರಗಳುಳ್ಳ ಫೋಟೋ!

ಅದು ಯಮಧರ್ಮರಾಯ ತಪ್ಪುಮಾಡಿದವರಿಗೆ ತನ್ನಧೂತರ ಮೂಲಕ ನೀಡಬಹುದಾದ ಘನ ಘೋರ ಶಿಕ್ಷೆಗಳ ಚಿತ್ರಗಳು.  ಆಯಾತಪ್ಪಿಗೆ ತಕ್ಕನಾದ ಶಿಕ್ಷೆಬೇರೆ.  ಕದ್ದವನಿಗೆ ಒಂದು ರೀತಿಯದ್ದು, ಸುಳ್ಳು ಹೇಳಿದವನಿಗೆ ಮತ್ತೊಂದು ರೀತಿ.  ಹಾದರ ಮಾಡಿದವರಿಗೆ ಇನ್ನೂ ಭಯಾನಕವಾದ ಚಿತ್ರ ಹಿಂಸೆ ನೀಡುವ ಚಿತ್ರಗಳು. ಆಯಮಧೂತರೋ ಕೋರೆಹಲ್ಲುಗಳನ್ನುಬಿಟ್ಟುಕೊಂಡು, ಕೆಂಗಣ್ಣು ಮಾಡಿಕೊಂಡು ಭರ್ಜಿಯಿಂದತಿ ವಿಯುವುದೇನು? ಬೆಂಕಿಯಲ್ಲಿ ಹಾಕಿಸುಡುವುದೇನು? ಕಾದಸೀಸವನ್ನು ಕಣ್ಣಿಗೆ ಬಿಡುವುದೇನು ಇತ್ಯಾದಿ.  ನನಗೆಮೊದ ಮೊದಲು ಈ ಚಿತ್ರಪಟವನ್ನು ನೋಡಿದಾಕ್ಷಣ ಗಂಟಲು ಒಣಗಿ ಮೈಯೆಲ್ಲಾ ಬೆವರಲು ಶುರುವಾಗುತ್ತಿತ್ತು.  ನಾನುಈಮೊದಲುಅರಿಕೆದುಡ್ಡುಕದ್ದುಸಿನಿಮಾಕ್ಕೆಹೋಗಿದ್ದು, ಅಪ್ಪಧರ್ಮಸ್ಥಳದ ಮಂಜುನಾಥಸ್ವಾಮಿಗೆʼಮನಿ ಆರ್ಡರ್ʼ ಮಾಡಲು ಕೊಟ್ಟದ್ದನ್ನ ಕೆಲವೊಂದು ಬಾರಿ ನಾನೇ ಇಟ್ಟು ಕೊಂಡು ಖರ್ಚುಮಾಡಿ, ಕೆಳಭಾಗದ ರಸೀದಿ ಹರಿದು ತಂದು ಕೊಟ್ಟು ನಂಬಿಸಿದ್ದು ಕಣ್ಣಮುಂದೆಪಿಚ್ಚರ್‌ ಬಿಟ್ಟಂಗೆ ಬರತೊಡಗಿದವು.  ಅಲ್ಲದೆಯ ಮಧೂತರು ನನ್ನ ಬೆನ್ನಟ್ಟಿ ಬಂದಂತೆ ಕನಸುಗಳು ಬೀಳತೊಡಗಿದವು.  ಜೊತೆ ಜೊತೆಯಾಗಿಯೇ ಇದನ್ನೆಲ್ಲಾ ಮಾಡಿದ್ದ ನಾನು ಓಂಕಾರಭಯ-ಭಕ್ತಿಯಿಂದ ಕಂಡ ಕಂಡದೇವರಿಗೆಲ್ಲಾ ಕೈಮುಗಿಯುವುದೇನು, ಅಡ್ಡಬೀಳುವುದೇನು?!

ಈರೀತಿಭಯಭೀತರಾದಾಗ ಒಂದು ದಿನ ಅಮ್ಮನ್ನ “ಅಮ್ಮ ನೀನು ದೇವರು ನೋಡಿದೀಯ? ದೇವರುಎಲ್ಲಿರ್ತಾನೆ?” ಅಂತಕೇಳಿದ ನೆನಪು.  ಅಷ್ಟು ಮಾತ್ರಕ್ಕೆ ಗಾಬರಿಯಾದ ಅಮ್ಮ “ಬಿಡ್ತು ಅನ್ನು. ಹಂಗೆಲ್ಲಾ ದೇವರು, ದಿಂಡ್ರು ಎಲ್ಲೈತೆ, ಹೆಂಗೈತೆ ಅಂತ ಕೇಳಬಾರದು.  ನಿಮ್ಮತಾತನಂಗೆ ಯಲ್ಲಮ್ಮಅಂತ ಹೆಸರಿಟ್ಟಿಲ್ವ? ಅದುಎಲ್ಲಮ್ಮದೇವರಕುರ್ತಿಗೆ ಇಟ್ಟಿರೋದು.  ನಿಂಗೆನಮ್ಮೂರುರಂಗಸ್ವಾಮಿಹೆಸರಿಟ್ಟಿಲ್ವೆ? ಅವನ ಮಹಿಮೆ ಏನು ಸಾಮಾನ್ಯುದ್ದೆ? ನಿಮ್ಮಪ್ಪುಂಗೆ ಅದೇನೋ ಮಲ್ರೋಗ ಬತ್ತಿತ್ತಲ್ಲ, ಅದುಕ್ಕೆ ಅಲ್ವೆ ಗರುಗದಹಳ್ಳಿಬಿಟ್ಟು ಹೊಸಳ್ಳಿಸೇರ್ಕಂಡಿದ್ದು.  ಆಮೇಲೆಅಲ್ವೆನಿಮ್ಮಪ್ಪ ಮನುಸಾ ಅಂತ ಆಗಿರೋದು. ಹಿಂಗೆಲ್ಲಾ ದೇವರ ತಾತ್ಸಾರ ಮಾಡಿದೋರು ರಕ್ತ ಕಕ್ಕೊಂಡು ನೆಗೆದು ಬಿದ್ದೋಗಿದಾರೆ” ಅಂದುಬಿಡಬೇಕೆ?  ಈರೀತಿಸಂಕಷ್ಟವನ್ನು ಅನುಭವಿಸುತ್ತಿದ್ದನನಗೆ ಈ ನಮ್ಮನೆಚ್ಚಿನ ಮಾಸ್ತರುಗಳು ʼ ದೇವರನ್ನನೀವು ಪ್ರತ್ಯಕ್ಷ ನೋಡಿದ್ದೀರ?ʼಅಂತ ಹುಳಬಿಟ್ಟದ್ದು ಒಳಗೇ ಕೆಲಸಮಾಡಲು ಶುರುವಾಗಿ ಚಾರ್ವಾಕ ಸ್ಥಿತಿಗೆನನ್ನನ್ನ ತಂದು ನಿಲ್ಲಿಸಿತು.  ದೇವರು, ದೆವ್ವಗಳೆಂಬಕಲ್ಪನೆಗಳು ಮನುಷ್ಯರನ್ನು ಆವರಿಸಿರುವ ರೀತಿ ಮಾತ್ರ ಅಚ್ಚರಿ ಮೂಡಿಸುವಂತದು.

(ಮುಂದುವರಿಯುವುದು)