ವೈಯಕ್ತಿಕ ಜಗಳಕ್ಕೆ ಕೋಮು ಬಣ್ಣ: ಸಿ.ಪಿ.ಐಎಂ ಆರೋಪ

ವೈಯಕ್ತಿಕ ಜಗಳಕ್ಕೆ ಕೋಮು ಬಣ್ಣ: ಸಿ.ಪಿ.ಐಎಂ ಆರೋಪ


ವೈಯಕ್ತಿಕ ಜಗಳಕ್ಕೆ ಕೋಮು ಬಣ್ಣ: ಸಿ.ಪಿ.ಐಎಂ ಆರೋಪ

ತುಮಕೂರು: ವೈಯಕ್ತಿಕ ಜಗಳವನ್ನು ಜಾತಿ, ಧರ್ಮಕ್ಕೆ ಬಳಸಿ ಜಿಲ್ಲೆಯ ಶಾಂತಿ ಭಂಗ ಉಂಟುಮಾಡುವ ಕೋಮುವಾದಿಗಳನ್ನು ಜಿಲ್ಲಾಡಳಿತ ಮಟ್ಟಹಾಕಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿ.ಪಿ.ಐ(ಎಂ) ತುಮಕೂರು ಜಿಲ್ಲಾ ಸಮಿತಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರನ್ನು ಆಗ್ರಹಿಸಿದೆ.
ಜನತೆ ಸಂಕಟಗಳಲ್ಲಿ ತಮ್ಮ ಬದುಕನ್ನು ನಡೆಸುತ್ತಿರುವಾಗ ಸರ್ಕಾರಗಳ ನೀತಿಗಳಿಂದ ಜನತೆಯ ಬದುಕು ಮತ್ತಷ್ಟು ಯಾತನಾಮಯವಾಗಿದೆ. ಇಂತಹ ಸಂದರ್ಭದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಮತ್ತು ಅಂತಹ ಅಪರಾಧಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷಿಸಲು ಕ್ರಮ ಜರುಗಿಸಬೇಕೆಂದು ಸಿಪಿಐಎಂ ಒತ್ತಾಯಿಸಿದೆ.
ಕೋಮುವಾದಿ ಸಂಘಟನೆಗಳು ಮತೀಯ ಗೂಂಡಾಗಿರಿಯಿAದ ಕೋಮು ಸೌಹಾರ್ದತೆ ಹದಗೆಟ್ಟಿದೆ. ಈ ಮತೀಯ ಸಂಘಟನೆಗಳ ಕ್ರೌರ್ಯದಿಂದ ಸಮಾಜದಲ್ಲಿ ದಲಿತರನ್ನು, ಅಲ್ಪಸಂಖ್ಯಾತರನ್ನು ಇನ್ನಷ್ಟು ಪ್ರತ್ಯೇಕಿಸಿದಂತಾಗುತ್ತದೆ. ಇದು ಭ್ರಾತೃತ್ವ ಮತ್ತು ಜಾತ್ಯಾತೀತೆಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದೆ.
ಜಿಲ್ಲೆಯನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಉಳಿಸಲು ಎಲ್ಲರೂ ಒಂದಾಗಿ ಸಾಗೋಣವೆಂದು ಸಿ.ಪಿ.ಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಉಮೇಶ ಮನವಿ ಮಾಡಿದ್ದಾರೆ.