ಮನು ಧರ್ಮಕ್ಕಿಂತ ಮನೋ ಧರ್ಮ ಮುಖ್ಯ: ಹುಲಿಕಲ್ ನಟರಾಜ್

ಮನು ಧರ್ಮಕ್ಕಿಂತ ಮನೋ ಧರ್ಮ ಮುಖ್ಯ: ಹುಲಿಕಲ್ ನಟರಾಜ್

ಮನು ಧರ್ಮಕ್ಕಿಂತ ಮನೋ ಧರ್ಮ ಮುಖ್ಯ: ಹುಲಿಕಲ್ ನಟರಾಜ್


ತುಮಕೂರು: ಸಮಾಜದಲ್ಲಿ ಮನು ಧರ್ಮಕ್ಕಿಂತ ಮನೋ ಧರ್ಮ ಮುಖ್ಯ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ಅವರು ಟೆಕಿಲಾ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಪರಿಷತ್‌ನ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಳೆದ 38 ವರ್ಷದಿಂದ ಮೌಢ್ಯದ, ಕಂದಾಚಾರದ ಹಾಗೂ ವಾಮಾಚಾರದ ವಿರುದ್ಧ ಹೋರಾಡಿ 280 ಜನರನ್ನು ಜೈಲಿಗೆ ಕಳುಹಿಸಿರುವುದಾಗಿ ತಿಳಿಸಿದ ಅವರು, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವುದು ಮಕ್ಕಳ ಪಠ್ಯವಾಗಬೇಕು ಎಂದು ಪ್ರತಿಪಾದಿಸಿದರು.
ಶಿವಮೊಗ್ಗದಲ್ಲಿ ಡಿಸೆಂಬರ್ 28 ಹಾಗೂ 29 ರಂದು ಮೊದಲ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು ಜಿಲ್ಲೆಯಿಂದ ಹೆಚ್ಚಿನ ಸದಸ್ಯರು ಭಾಗವಹಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹನುಮಂತೇಗೌಡ ಮಾತನಾಡಿ, ಇಂದಿನ ಸಮಾಜದಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಹಾಗೂ ನಿಧಿ ಹುಡÀÄಕಿಕೊಡುವ ನೆಪದಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಹೋರಾಡುತ್ತಿರುವ ಹುಲಿಕಲ್ ನಟರಾಜ್ ಮೇಲೆ ಹಲವರು ಎಫ್‌ಐಆರ್ ದಾಖಲಿಸಿರುವುದನ್ನು ತಿಳಿಸಿ, ನಮ್ಮ ಮಕ್ಕಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಪರಿಷತ್‌ನ ನೂತನ ಅಧ್ಯಕ್ಷರಾಗಿ ಸಿ.ಎಸ್. ಮೋಹನ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು ಹಾಗೂ ಪಿ. ಮೂರ್ತಿಯವರನ್ನು ಗೌರವಾಧ್ಯಕ್ಷರನ್ನಾಗಿ ಮುಂದುವರೆಸಲಾಯಿತು. 
ನಂತರ ಮಾತನಾಡಿದ ನೂತನ ಜಿಲ್ಲಾ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಪರಿಷತ್‌ನ್ನು ಬಲಿಷ್ಠ ಸಂಘಟನೆಯಾಗಿ ರೂಪಿಸಲು ಎಲ್ಲರ ಸಹಕಾರ ಕೋರಿದರು. 
ವೇದಿಕೆಯಲ್ಲಿ ಗೌರವ ಅಧ್ಯಕ್ಷ ಪಿ. ಮೂರ್ತಿ, ರೇಣುಕಾ ಪ್ರಸಾದ್, ಈಶ್ವರಯ್ಯ, ಡಿ.ಟಿ. ರಾಜು ಮತ್ತಿತರರು ಹಾಜರಿದ್ದರು. ಲತಾ ದೀಪು ಪ್ರಾರ್ಥಿಸಿ, ಮಂಜುಳಾ ಪರಿಸರ ಗೀತೆಯನ್ನು ಹಾಡಿದರು. ಹೊನ್ನಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.