ಜೆಡಿಎಸ್ ಸಮಾವೇಶಕ್ಕೆ ನಾನು ಹೋಗಲ್ಲ: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ನಿರ್ಧಾರ

ಜೆಡಿಎಸ್ ಸಮಾವೇಶಕ್ಕೆ ನಾನು ಹೋಗಲ್ಲ: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ನಿರ್ಧಾರ

ಜೆಡಿಎಸ್ ಸಮಾವೇಶಕ್ಕೆ ನಾನು ಹೋಗಲ್ಲ:
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ನಿರ್ಧಾರ


ಗುಬ್ಬಿ: ಗುಬ್ಬಿ ಪಟ್ಟಣದಲ್ಲಿ ಜೆಡಿಎಸ್ ಸಮಾವೇಶವನ್ನು 25 ರಂದು ಆಯೋಜನೆ ಮಾಡಿದ್ದರೂ ಸಹ ನಾನು ಭಾಗವಹಿಸಬಾರದೆಂದು ನಿರ್ಧರಿಸಿದ್ದೇನೆ ಎಂದು ಗುಬ್ಬಿಯ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಖಚಿತಪಡಿಸಿದರು. 
ಗುಬ್ಬಿ ತಾಲ್ಲೂಕಿನ ತೊಂಗನಹಳ್ಳಿ, ಕೊಪ್ಪ ಗೇಟ್, ಶಿವಸಂದ್ರ ಭಾಗದಲ್ಲಿ ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ವಾಭಿಮಾನವಾಗಿ ಬದುಕುತ್ತಿರುವ ನನಗೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇಲ್ಲ. ಯಾರೋ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಕ್ಕೆ ತಾವು ಹೋಗಬಾರದು ಎಂದು ನಮ್ಮ ಕಾರ್ಯಕರ್ತರು ಹೇಳಿರುವುದರಿಂದ ನಾನು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಮ್ಮ ಕಾರ್ಯಕರ್ತರು ಸಹ ಹೋಗುವುದಿಲ್ಲ ಎಂದರು.
ನಾನು ಜೆಡಿಎಸ್ ಬಿಡುತ್ತೇನೆ ಎಂದು ಎಲ್ಲಿಯೂ ಸಹ ಹೇಳಿಕೆ ನೀಡಿಲ್ಲ. ನನ್ನ ಹಾಗೂ ವರಿಷ್ಟರ ನಡುವೆ ಒಂದಷ್ಟು ಬೇಸರವಿರುವುದು ನಿಜ, ಅದನ್ನು ಸರಿಪಡಿಸಿಕೊಂಡು ನಾನು ಇಲ್ಲಿ ಮುಂದುವರಿಯಬೇಕು ಎಂದು ಕೊಂಡವನು. ಆದರೆ ಅವರಿಗೆ ನಾನು ಬೇಕಾಗಿಲ್ಲ. ನಾನು ಇರುತ್ತೇನೆ ಎಂದು ಹೇಳಿದರೂ ಅವರೇ ಕತ್ತು ಹಿಡಿದು ತಳ್ಳುತ್ತಿದ್ದಾರೆ. ಕಳೆದ ಬುಧವಾರ ಸಮಯ ನಿಗದಿ ಮಾಡಿ ಬರುತ್ತೇನೆ ಎಂದು ಹೇಳಿದರೂ ಸಹ ಬೇರೊಂದು ದಿನ ಬನ್ನಿ ಎಂದು ಹೇಳಿದವರು ಮತ್ತೆ ನನ್ನನ್ನು ಕರೆದಿಲ್ಲ. ಸ್ಥಳೀಯ ಶಾಸಕ ನಾನು ಇಲ್ಲೇ ಇದ್ದರೂ ಸಹ ಇನ್ನೊಬ್ಬ ವ್ಯಕ್ತಿಯನ್ನು ತಂದು ಗುಬ್ಬಿ ಕ್ಷೇತ್ರಕ್ಕೆ ಬಿಟ್ಟಿದ್ದಾರೆ. ಜೆಡಿಎಸ್ ಸಮಾವೇಶ ಮಾಡುತ್ತೇನೆಂದು ಹೊರಟಿದ್ದಾರೆ. 
ಜೆಡಿಎಸ್ ಪಕ್ಷದ ಮುಖಂಡರಿಗೆ 123 ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂಬುದು ಮಾತಿಗಷ್ಟೇ, ಅವರಿಗೆ ಬೇಕಿರುವುದು ಕೇವಲ 20 ರಿಂದ 25 ಸೀಟುಗಳು ಮಾತ್ರ. ಹಾಗಾಗಿ ಗೆಲ್ಲುವಂತಹ ವ್ಯಕ್ತಿಯನ್ನು ದೂರವಿಡುವಂತಹ ಕೆಲಸವನ್ನ ಮಾಡುತ್ತಿದ್ದಾರೆ ಎಂದು ನೇರವಾಗಿ ಜೆಡಿಎಸ್ ವರಿಷ್ಠರ ವಿರುದ್ಧ ಹರಿಹಾಯ್ದರು.
ಇದೇ ಸಂದರ್ಭದಲ್ಲಿ ಯುವ ಜೆಡಿಎಸ್ ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರು, ಸಿಡಿಪಿಓ ಮಂಜುನಾಥ್, ಎಸಿಡಿಪಿಓ ಕೃಷÀ್ಣಮೂರ್ತಿ, ಆ ಭಾಗದ ಜೆಡಿಎಸ್ ಮುಖಂಡರು, ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.