ಬೆಳಕಿನ ಹಬ್ಬವು ಜೀವನದ ಬೆಳಕನ್ನು ನಂದಿಸದಿರಲಿ

ದೀಪಾವಳಿ ಪಟಾಕಿಯ ಬಗ್ಗೆ ಎಚ್ಚರಿಕೆ ಬಗ್ಗೆ ಲೇಖನ- ಬೆಳಕಿನ ಹಬ್ಬವು ಜೀವನದ ಬೆಳಕನ್ನು ನಂದಿಸದಿರಲಿ-ಡಾ.ಪರಮೇಶ್-ಎಸ್‌-ಸಿದ್ಧಗಂಗಾ-ಆಸ್ಪತ್ರೆ

ಬೆಳಕಿನ ಹಬ್ಬವು ಜೀವನದ ಬೆಳಕನ್ನು ನಂದಿಸದಿರಲಿ


ಪಟಾಕಿ ಸಿಡಿಸಿದಾಗ ಹೊರ ಬರುವ ಕಾಪರ್ ಮನುಷ್ಯನ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಿದರೆ, ಝಿಂಕ್ ಜ್ವರ ಹಾಗೂ ವಾಂತಿಯ ಅಪಾಯ ತರುತ್ತದೆ. ಜೊತೆಗೆ ಲೆಡ್ ಮನುಷ್ಯನ ನರಗಳ ಮೇಲೆ ಪರಿಣಾಮ ಉಂಟುಮಾಡಿದರೆ. ಮೆಗ್ನೀಷಿಯಮ್ ಹಾಗೂ ಸೋಡಿಯಂ ಕೂಡ ಹಾನಿಕರ. ಇದರ ಜೊತೆಗೆ ಪಟಾಕಿಗಳ ಶಬ್ದದಿಂದ ಪ್ರಾಣಿ ಪಕ್ಷಗಳಲ್ಲಿ ಹಾಗೂ ಹಿರಿಯರಲ್ಲಿ ಹೃದಯಾಘಾತ ತಂದೊಡ್ಡುವ ಅಪಾಯವನ್ನೂ ಕೂಡ ಹೆಚ್ಚಿಸಿದೆ. 

ಬೆಳಕಿನ ಹಬ್ಬವು ಜೀವನದ ಬೆಳಕನ್ನು ನಂದಿಸದಿರಲಿ


        ದೀಪಗಳು ಜ್ಞಾನದ ಪ್ರತೀಕ. ಬೆಳಕೆನ್ನುವ ಜ್ಞಾನವನ್ನು ಭೂಮಿ ತಾಯಿಯ ಒಡಲಿಂದ ಸಂಗ್ರಹಿಸಿದ ಮಣ್ಣಿನ ಹಣತೆಗಳಲ್ಲಿ ನಿರಹಂಕಾರವೆನ್ನುವ ತೈಲದಲ್ಲಿ ಮಿದ್ದಿ ಜ್ಞಾನವೆನ್ನುವ ಬೆಳಕನ್ನು ಸದಾ ಪಸರಿಸುವ ದಾರ್ಶನಿಕತೆಯೇ ದೀಪ. ನಮ್ಮ ಪುರಾಣಗಳಲ್ಲಿ ನಮಗೆ ದೀಪ ಅಥವಾ ಬೆಳಕಿನ ಬಗ್ಗೆ ಅನೇಕ ತಾತ್ಪರ್ಯಗಳು ಹಾಗೂ ರೂಪಕಗಳು ಕಂಡು ಬರುತ್ತವೆ. ಧಾರ್ಮಿಕ ಐತಿಹ್ಯವುಳ್ಳ ಭಾರತದ ಪ್ರತಿ ನಗರಗಳಲ್ಲಿಯೂ ಕೂಡ ಬೆಳಕಿಗೆ ವಿಶೇಷ ಸ್ಥಾನಮಾನ. ಜಗತ್ತು ಆಧುನಿಕತೆಯ ಕೈ ಹಿಡಿದು ಎಷ್ಟೇ ನಾಗಲೋಟದಲ್ಲಿ ಹಿಂದಿರುಗಿ ನೋಡಿದಂತೆ ಓಡುತ್ತಿದ್ದರೂ ಕೂಡ ಸಾಂಪ್ರದಾಯಿಕ ಹಬ್ಬಗಳಲ್ಲಿ ಬೆಳಕಿಗೆ ನಾವು ನೀಡುವ ಮಹತ್ವ ಎಂದೂ ಬದಲಾಗಿಲ್ಲ. ಬದಲಾಗುವುದೂ ಇಲ್ಲ. 


       ನರಕಾಸುರನನ್ನು ವರಹಾವತಾರದಲ್ಲಿ ಸಂಹರಿಸಿದ ಮಹಾವಿಷ್ಣು ಲೋಕಕ್ಕೆ ಮಂಗಳ ಉಂಟುಮಾಡಿದ ಪ್ರತೀಕ ದೀಪಾವಳಿ, ಈ ದಿನವನ್ನು ನರಕ ಚತುರ್ದಶಿ ಎಂದೂ ಕೂಡ ಕರೆಯುತ್ತಾರೆ. ಜೊತೆಗೆ ಬಲಿಪಾಡ್ಯಮಿಯ ಐತಿಹ್ಯ ನಿಮಗೆಲ್ಲರಿಗೂ ತಿಳಿದಿದೆ. ವಿಷ್ಣು ವಾಮನ ಅವತಾರಿಯಾಗಿ ಬಂದು ಬಲಿ ಚಕ್ರವರ್ತಿಯಿಂದ ಮೂರು ಪಾದದಷ್ಟು ಜಾಗವನ್ನು ಕೇಳಿ ಬಲಿಯನ್ನು ಪಾತಾಳಕ್ಕೆ ತುಳಿದು ಕೊನೆಗೆ ಆತನ ದಾನಕ್ಕೆ ಮೆಚ್ಚಿ ಆತನ ಹೆಸರಲ್ಲಿಯೇ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಹಾಗಾಗಿ ಬಲಿಪಾಡ್ಯಮಿ ಎಂದು ಹೆಸರು ಬಂತು. 


     ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ಐತಿಹ್ಯದ ಜೊತೆಗೆ ತ್ರೇತಾಯುಗದಲ್ಲಿ ರಾವಣನನ್ನು ಕೊಂದ ನಂತರ ಶ್ರೀರಾಮ ಆಯೋಧ್ಯೆಗೆ ಹಿಂದಿರುಗಿದ ದಿನವಾಗಿಯೂ ಕೂಡ ದೀಪಾವಳಿಯನ್ನು ಆಚರಿಸುತ್ತಾರೆ. 


     ಜೈನ ತೀರ್ಥಂಕರ ಮಹಾವೀರ ನಿರ್ವಾಣ ಹೊಂದಿದ್ದೂ ,  ಸಿಖ್ ಸಂಪ್ರದಾಯದ  ಪ್ರಕಾರ ಅವರ ಆರನೇ ಗುರು ಹರಗೋವಿಂದ್ ಜೀ ಮೊಘಲರ ಸೆರೆಯಿಂದ ಬಿಡುಗಡೆ ಹೊಂದಿದ್ದೂ ಇದೇ ದಿನ (ನರಕ ಚತುರ್ದಶಿ) ಹೀಗಾಗಿ ಈ ಸಮುದಾಯಗಳೂ ದೀಪಾವಳಿ ಆಚರಿಸುತ್ತವೆ ಎಂದು ಇತಿಹಾಸ ತಿಳಿಸುತ್ತದೆ. 


     ಮನುಷ್ಯನ ನಾಗರಿಕತೆಯ ಉಗಮವೇ ಬೆಳಕಿನಿಂದ ಎಂಬುದರಲ್ಲಿ ಸಂದೇಹವಿಲ್ಲ. ಬೆಳೆದ ಬೆಳೆಯನ್ನು ಬೇಯಿಸಿ ತಿನ್ನುವ ಪರಿಕಲ್ಪನೆ ಮನುಷ್ಯನಿಗೆ ಮೂಡಿದ ಜೊತೆ ಜೊತೆಗೆ ವಸಾಹತು ಸ್ಥಾಪಿಸಿದ ಎಲ್ಲಾ ಆದಿಮಾನವರ ಪುಟ್ಟ ಪುಟ್ಟ ಜೋಪಡಿಗಳಲ್ಲಿ ನಾವು ದೀಪವನ್ನೇ ಮೊದಲು ಕಂಡಿದ್ದು. 


       ಪ್ರತಿ ದೀಪಾವಳಿ ಬಂದಾಗ ನಮಗೆ ನಮ್ಮ ಬಾಲ್ಯಗಳು ನೆನಪಾಗುತ್ತವೆ. ಪುಟ್ಟ ಹುಡುಗರಿದ್ದಾಗ ಆಚರಿಸುತ್ತಿದ್ದ ದೀಪಗಳ ಹಬ್ಬಕ್ಕೂ ಈಗಿನ ಕಾಲಕ್ಕೂ ಅದೇ ಬೆಳಕಿದ್ದರೂ ಅದನ್ನು ನೋಡುವ ದೃಷ್ಟಿಕೋನ ಹಾಗೂ ಆಚರಿಸುವ ರೀತಿ ಬದಲಾಗಿದೆ. ಜೊತೆಗೆ ಅಪಾಯಗಳೂ ಕೂಡ ಹೆಚ್ಚುತ್ತಿವೆ. ಪ್ರತಿ ವರ್ಷ ದೀಪಾವಳಿಯಿಂದ ಸಿಡಿಸುವ ಪಟಾಕಿಗಳಿಂದ ಭಾರತ ಒಂದರಲ್ಲೇ ಉಂಟಾಗುವ ಅನಾಹುತಗಳಲ್ಲಿ ಶೇ.49.3 ರಷ್ಟು ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಯಾವ ಬೆಳಕನ್ನು ಪಟಾಕಿ ಮುಖಾಂತರ ಹಬ್ಬಿಸುವ ಅಭೀಪ್ಸೆಯಲ್ಲಿ ಮಕ್ಕಳು ಮುಂದಾಗುತ್ತಾರೋ ಅದೇ ಮಕ್ಕಳು ತಮ್ಮ ಜೀವನ ಪರ್ಯಂತ ಕುರುಡರಾಗುವುದು ಆತಂಕಕಾರಿ. ಜೊತೆಗೆ ಪಟಾಕಿಗಳ ತಯಾರಿಕೆಯಲ್ಲಿ ಬಳಕೆಯಾಗುವ ಕಾಪರ್,ಝಿಂಕ್,ಲೆಡ್,ಮೆಗ್ನೀಷಿಯಮ್ ಸೇರಿದಂತೆ ಅಪಾಯಕಾರಿ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವುದು ಸುಳ್ಳಲ್ಲ. 


      ಪಟಾಕಿ ಸಿಡಿಸಿದಾಗ ಹೊರ ಬರುವ ಕಾಪರ್ ಮನುಷ್ಯನ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಿದರೆ, ಝಿಂಕ್ ಜ್ವರ ಹಾಗೂ ವಾಂತಿಯ ಅಪಾಯ ತರುತ್ತದೆ. ಜೊತೆಗೆ ಲೆಡ್ ಮನುಷ್ಯನ ನರಗಳ ಮೇಲೆ ಪರಿಣಾಮ ಉಂಟುಮಾಡಿದರೆ. ಮೆಗ್ನೀಷಿಯಮ್ ಹಾಗೂ ಸೋಡಿಯಂ ಕೂಡ ಹಾನಿಕರ. ಇದರ ಜೊತೆಗೆ ಪಟಾಕಿಗಳ ಶಬ್ದದಿಂದ ಪ್ರಾಣಿ ಪಕ್ಷಗಳಲ್ಲಿ ಹಾಗೂ ಹಿರಿಯರಲ್ಲಿ ಹೃದಯಾಘಾತ ತಂದೊಡ್ಡುವ ಅಪಾಯವನ್ನೂ ಕೂಡ ಹೆಚ್ಚಿಸಿದೆ. 


     ಪಟಾಕಿ ನಮ್ಮ ಸಂತಸವನ್ನು ಹೆಚ್ಚಿಸುವ ಕ್ಷಣಿಕ ಸಂಭ್ರಮವಾದರೆ ಅದರಿಂದ ಉಂಟಾಗುವ ಅಡ್ಡಪರಿಣಾಮಗಳು ಮನುಷ್ಯ ಹಾಗೂ ಪ್ರಾಣಿಪಕ್ಷಿಗಳನ್ನು ಜೀವನವಿಡೀ ಸಂಕಷ್ಟಕ್ಕೆ ತಳ್ಳುತ್ತವೆ. ದೀಪಗಳನ್ನು ಹಚ್ಚಿ ಸಣ್ಣ ಕಡಿಮೆ ಶಬ್ದ ಹಾಗೂ ಅನಿಲ ಹೊರ ಸೂಸುವÀ ಪಟಾಕಿಗಳನ್ನು ಆದಷ್ಟು ಕಡಿಮೆ ಬಳಸಿ. ಹಬ್ಬಗಳು ನಮ್ಮ ಪುರಾಣ ಇತಿಹಾಸಗಳನ್ನು ನೆನಪಿಸಿಕೊಳ್ಳುವ ವೇದಿಕೆಯಾಗಬೇಕು ಜೊತೆಗೆ ಈ ಐತಿಹ್ಯಗಳನ್ನು ದೀಪದ ಮುಖಾಂತರ ಮುಂದಿನ ತಲೆಮಾರಿಗೆ ತಲುಪಿಸುವ ಜ್ಞಾನದ ತೇರಾಗಬೇಕು. 


ನಮಸ್ಕಾರ. 

ಡಾ. ಪರಮೇಶ್. ಎಸ್
ನಿರ್ದೇಶಕರು, ಸಿದ್ದಗಂಗಾ ಆಸ್ಪತ್ರೆ