ಉಕ್ರೇನ್‌ನಿಂದ ಆಗಮಿಸಿದ ವಿದ್ಯಾರ್ಥಿನಿಗೆ ಸೊಗಡು ಸಾಂತ್ವನ

ಉಕ್ರೇನ್‌ನಿಂದ ಆಗಮಿಸಿದ ವಿದ್ಯಾರ್ಥಿನಿಗೆ ಸೊಗಡು ಸಾಂತ್ವನ

ಉಕ್ರೇನ್‌ನಿಂದ ಆಗಮಿಸಿದ ವಿದ್ಯಾರ್ಥಿನಿಗೆ ಸೊಗಡು ಸಾಂತ್ವನ
ಉಕ್ರೇನ್‌ನಿಂದ ಆಗಮಿಸಿದ ವಿದ್ಯಾರ್ಥಿನಿಗೆ ಸೊಗಡು ಸಾಂತ್ವನ


ತುಮಕೂರು: ರಷ್ಯ ಮತ್ತು ಉಕ್ರೇನ್ ನಡುವೆ ನಡೆಯುತ್ತಿದ್ದ ಯುದ್ಧ ಭೀತಿಯಿಂದ ಸುರಕ್ಷಿತವಾಗಿ ಆಗಮಿಸಿದ ತುಮಕೂರಿನ ವಿದ್ಯಾನಗರದ ವಿದ್ಯಾರ್ಥಿನಿ ದೀಕ್ಷಾ ಅವರ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಭೇಟಿ ನೀಡಿ ವಿದ್ಯಾರ್ಥಿನಿಗೆ ಸ್ವಾಗತಿಸಿ ಅಲ್ಲಿನ ಪರಿಸ್ಥಿತಿಯನ್ನು ಚರ್ಚಿಸಿದರು 
ವಿದ್ಯಾರ್ಥಿಗೆ ಧೈರ್ಯ ತುಂಬಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ನಮ್ಮ ದೇಶದಿಂದ ಉಕ್ರೇನ್ ದೇಶಕ್ಕೆ ಮೆಡಿಕಲ್ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ನೂರಾರು ವಿದ್ಯಾರ್ಥಿನಿಯರಿದ್ದಾರೆ. ಅಂತಹ ವಿದ್ಯಾರ್ಥಿನಿಯರಿಗೆ ನಮ್ಮ ಪಕ್ಷದ ಮುಖಂಡ ಪ್ರಭಾಕರ್ ಕೋರೆ ಹೇಳಿದಂತೆ ನಮ್ಮ ದೇಶದಲ್ಲಿರುವ ಯೂನಿವರ್ಸಿಟಿಗಳಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುವಂತೆ ಸರಕಾರ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ನಮ್ಮ ದೇಶದ ಮಕ್ಕಳು ನಮಗೆ ಸರ್ವ ಸಂಪತ್ತು ಇದ್ದ ಹಾಗೆ. ಆದರೆ ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆಂದು ಹೋಗುವುದು ಸರಿಯಲ್ಲ. ಕೂಡಲೇ ವಿದ್ಯಾರ್ಥಿಗಳಿಗೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ವಿದ್ಯಾರ್ಥಿನಿಯ ಸಾಂತ್ವನದ ವೇಳೆ ಕೆಸಿಡಿಸಿ ನಿರ್ದೇಶಕ ಸದಾಶಿವಯ್ಯ ಇದ್ದರು.