ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಹೆಚ್ಚು ಅರ್ಥಪೂರ್ಣ ಸದಸ್ಯತ್ವ ಸ್ವೀಕರಿಸಿದ ಡಾ. ಜಿ. ಪರಮೇಶ್ವರ್

ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಹೆಚ್ಚು ಅರ್ಥಪೂರ್ಣ ಸದಸ್ಯತ್ವ ಸ್ವೀಕರಿಸಿದ ಡಾ. ಜಿ. ಪರಮೇಶ್ವರ್

ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಹೆಚ್ಚು ಅರ್ಥಪೂರ್ಣ ಸದಸ್ಯತ್ವ ಸ್ವೀಕರಿಸಿದ ಡಾ. ಜಿ. ಪರಮೇಶ್ವರ್



ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಹೆಚ್ಚು ಅರ್ಥಪೂರ್ಣ
ಸದಸ್ಯತ್ವ ಸ್ವೀಕರಿಸಿದ ಡಾ. ಜಿ. ಪರಮೇಶ್ವರ್


ತುಮಕೂರು: ನಗರದ ಹೊರವಲಯದ ಸಿದ್ದಾರ್ಥ ನಗರದ ಬೂತ್ ನಂ. 59 ರಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರು ತಮ್ಮ ಸದಸ್ಯತ್ವ ಪಡೆಯುವ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.


ಕೆಪಿಸಿಸಿ ವೀಕ್ಷಕರಾದ ಮಂಜುನಾಥ್ ಅವರ ನೇತೃತ್ವದಲ್ಲಿ ಸದಸ್ಯತ್ವ ಪಡೆದ ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಇಡೀ ದೇಶದಲ್ಲಿ ಪ್ರಾರಂಭವಾಗಿದೆ. ನಮ್ಮ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರ ಆದೇಶದ ಮೇರೆಗೆ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದೆ ಎಂದರು.


ರಾಜ್ಯದಲ್ಲಿ ಡಿ. 11 ರಂದು ನೋಂದಣಿ ಅಭಿಯಾನವನ್ನು ಪ್ರತಿ ಬೂತ್‌ಗಳಲ್ಲೂ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. 
ಪಕ್ಷದ ಪ್ರತಿಯೊಬ್ಬ ಸದಸ್ಯರು ಕೂಡಾ ಅವರವರ ಬೂತ್‌ನಲ್ಲೆ ಹೋಗಿ ಸದಸ್ಯತ್ವ ತೆಗೆದುಕೊಳ್ಳಬೇಕು ಎಂಬ ಹೊಸ ಪದ್ಧತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಾರಂಭಿಸಿದ್ದಾರೆ. ಯಾರು ಯಾವ ಬೂತ್‌ನಲ್ಲಿ ಮತ ಚಲಾಯಿಸುತ್ತಾರೋ ಆ ಬೂತ್‌ನಲ್ಲೇ ಸದಸ್ಯತ್ವ ನೋಂದಣಿ ಮಾಡಿದರೆ ಆ ಬೂತ್‌ಗೆ ಒಂದು ಅರ್ಥ, ಗೌರವ ಬರುತ್ತದೆ. ಆ ಬೂತ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂಬ ಸದುದ್ದೇಶದಿಂದ ಕೆಪಿಸಿಸಿ ಅಧ್ಯಕ್ಷರು ಈ ವ್ಯವಸ್ಥೆಯನ್ನು ಪ್ರಾರಂಭ ಮಾಡಿದ್ದಾರೆ ಎಂದರು.


ಸಿದ್ದಾರ್ಥ ನಗರದ ಬೂತ್ ನಂ. 59 ರಲ್ಲಿ ನನಗೆ ಸದಸ್ಯತ್ವವನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ವೀಕ್ಷಕರಾಗಿರುವ ಮಂಜುನಾಥ್ ಅವರ ನೇತೃತ್ವದಲ್ಲಿ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞನಾಗಿದ್ದೇನೆ ಎಂದರು.


ಪ್ರತಿ ಬೂತ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುವ ಕೆಲಸ ಆಗಬೇಕಿದೆ ಎಂದ ಅವರು, ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಅವರು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕರು ಹಾಗೂ ಸದಸ್ಯತ್ವ ಅಭಿಯಾನದ ತುಮಕೂರು ಉಸ್ತುವಾರಿ ಮಂಜುನಾಥ್, ಎನ್‌ಎಸ್‌ಯುಐ ಸಾಮಾಜಿಕ ಜಾಲತಾಣ ರಾಜ್ಯ ಉಸ್ತುವಾರಿ ಅಬ್ದುಲ್ ಸಲ್ಮಾನ್ ಉಪಸ್ಥಿತರಿದ್ದರು.


ಯಾರು ಯಾವ ಬೂತ್‌ನಲ್ಲಿ ಮತ ಚಲಾಯಿಸುತ್ತಾರೋ ಆ ಬೂತ್‌ನಲ್ಲೇ ಸದಸ್ಯತ್ವ ನೋಂದಣಿ ಮಾಡಿದರೆ ಆ ಬೂತ್‌ಗೆ ಒಂದು ಅರ್ಥ, ಗೌರವ ಬರುತ್ತದೆ.
- ಡಾ. ಜಿ. ಪರಮೇಶ್ವರ, ಮಾಜಿ ಉಪ ಮುಖ್ಯಮಂತ್ರಿ