ಕುಟುಂಬ ಸಮೇತ ನೋಡಬಹುದಾದ ಚಂದದ, ಹಾಸ್ಯ ಭರಿತ ಸಿನಿಮಾ `ಗೋವಿಂದ ಗೋವಿಂದʼ  

kannada film govinda govinda

ಕುಟುಂಬ ಸಮೇತ ನೋಡಬಹುದಾದ ಚಂದದ, ಹಾಸ್ಯ ಭರಿತ ಸಿನಿಮಾ `ಗೋವಿಂದ ಗೋವಿಂದʼ  


ಕುಟುಂಬ ಸಮೇತ ನೋಡಬಹುದಾದ ಚಂದದ,
ಹಾಸ್ಯ ಭರಿತ ಸಿನಿಮಾ `ಗೋವಿಂದ ಗೋವಿಂದʼ  


ನಿರ್ದೇಶನ :    ತಿಲಕ್
ತಾರಾಗಣ : ತಿಲಕ್, ಸುಮಂತ್ ಶೈಲೇಂದ್ರ, ಕವಿತಾ ಗೌಡ, ಅಜಯ್ ಘೋಷ್ ಇತರರು.



ಹೊಸ ಸಿನಿಮಾ ನಿರ್ಮಾಪಕ ``ತಿಲಕ್’’ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕನ್ನಡ ಗುಣಕ್ಕೆ ತಕ್ಕಂತೆ ಕಥೆಯಲ್ಲಿ ಅಲ್ಲಲ್ಲಿ ಬದಲಾವಣೆ ಮಾಡಿಕೊಂಡಿದ್ದಾರಾದರೂ ಮೂಲ ಕಥೆಯ ಆಶಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗಿದೆ.
ಸಿನಿಮಾವು ಎರಡು ಸಮಾನಾಂತರ ಕಥೆಯ ಎಳೆಯನ್ನು ಹೊಂದಿದೆ. ಸಿನಿಮಾ ನಿರ್ಮಾಣ ಮಾಡ ಬಯಸುವ ಯುವಕ ಶ್ರೀನಿವಾಸ ಹೆಸರುವಾಸಿಯಾದ ನಟಿ ಪದ್ಮಾವತಿ ಜೊತೆ ಚಿತ್ರ ಮಾಡಲು ಬಯಸುತ್ತಾನೆ. ಮತ್ತೊಂದು ಕಡೆ ಸದಾ ಜಾಲಿಯಾಗಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುತ್ತಾ ಸಾಗುವ ಕೊನೆ ಬೆಂಚಿನ ಯುವಕರ ತಂಡವು ಸ್ನೇಹಿತನು ತನ್ನ ಪ್ರೀತಿಯ ಅಲಮೇಲು ಜೊತೆ ಓಡಿಹೋಗಲು ಸಹಾಯ ಮಾಡಲು ಬಯಸುತ್ತಾರೆ. ಇದಕ್ಕೆ ಸಮಾನವಾಗಿ ದೇವರಿಗೆ ಹೆದರುವ ಮತ್ತೊಂದು ಗುಂಪು  ಏನಾದರೂ ದೊಡ್ಡದೊಂದು ಸಾಧನೆ ಮಾಡುವ ಹಪಾಪಹಿಯಲ್ಲಿರುತ್ತಾರೆ. ಈ ಮೂವರೂ ಒಟ್ಟಿಗೆ ಸೇರಿದಾಗ ಆಗುವ ರೋಚಕ ತಿರುವುಗಳ ಕಥಾ ಹಂದರ ಹೊಂದಿರುವ ಗೋವಿಂದ ಗೋವಿಂದ ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡಬಹುದಾದ ಮನೋರಂಜನೆಯ ಸಿನಿಮಾ. ವಿಜಯಪುರ ಮತ್ತು ಬೆಂಗಳೂರಿನ ಸುಂದರ ಹೊರಾಂಗಣ ಹೊಂದಿರುವ ಸಿನಿಮಾ ಹಲವು ಒಳ್ಳೆಯ ಸಂದೇಶವನ್ನು ಕೂಡ ಹೇಳುತ್ತದೆ. ಸಿನಿಮಾ ನಟಿಯಾಗಿ ನಟಿಸಿರುವ ಭಾವನಾ ಪರದೆ ಮೇಲೆ ಬಂದಾಗಲೆಲ್ಲಾ ಮಿಂಚು ಹರಿದಂತೆ ಭಾಸವಾಗುತ್ತದೆ. ಎಲ್ಲ ನಟರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದರಲ್ಲೂ ರೂಪೇಶ ಶೆಟ್ಟಿ, ಕಾಲೇಜು ಹುಡುಗರ ಪಾತ್ರದಲ್ಲಿ ಸುಮಂತ್ ಶೈಲೇಂದ್ರ, ಕವಿತಾಗೌಡ ಕಾಲೇಜು ಹುಡುಗರ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಎಲ್ಲಿಯೂ ಬೇಸರವಾಗದೆ ನೋಡಿಸಿಕೊಂಡು ಹೋಗುವ ಗುಣ ಈ ಸಿನಿಮಾಗಿದೆ. ಕಡ್ಡಿಪುಡಿ ಚಂದ್ರು, ಪವನ್ ಮತ್ತು ವಿಜಯ್ ಚೆಂಡೂರ್ ಸಹ ಗಮನ ಸೆಳೆಯುತ್ತಾರೆ. ಗೋವಿಂದ ಗೋವಿಂದ ಸಿನಿಮಾ ಮನೋ ರಂಜಿತ ಹಾಸ್ಯಭರಿತ ರೋಚಕತೆ ಕೂಡಿದ ಸಿನಿಮಾ.