ಅಮೃತ ವಸತಿ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಸೂರು ಫಲಾನುಭವಿಗಳ ಅರ್ಜಿ ಸ್ವೀಕರಿಸಿದ ಸಚಿವ ಬಿ.ಸಿ. ನಾಗೇಶ್

ಅಮೃತ ವಸತಿ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಸೂರು ಫಲಾನುಭವಿಗಳ ಅರ್ಜಿ ಸ್ವೀಕರಿಸಿದ ಸಚಿವ ಬಿ.ಸಿ. ನಾಗೇಶ್

ಅಮೃತ ವಸತಿ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಸೂರು
ಫಲಾನುಭವಿಗಳ ಅರ್ಜಿ ಸ್ವೀಕರಿಸಿದ ಸಚಿವ ಬಿ.ಸಿ. ನಾಗೇಶ್


ತಿಪಟೂರು : ಪ್ರಧಾನಿಗಳ ಇಚ್ಛೆಯಂತೆ ದೇಶದ ಪ್ರತಿಯೊಬ್ಬರಿಗೂ ೨೦೨೨ರ ಒಳಗಾಗಿ ಸೂರನ್ನು ಕಲ್ಪಿಸುವ ಸಲುವಾಗಿ ಅಮೃತ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ರಾಜ್ಯದಲ್ಲಿಯೂ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೋಂದಣಿ ಪ್ರಾರಂಭವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚಗೊಂಡನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಅಮೃತ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ, ಅರ್ಜಿ ಸ್ವೀಕೃತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ 75ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಸುಮಾರು ೭೫೦ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿನ ಎಲ್ಲಾ ಗ್ರಾಮಗಳ ಪ್ರತಿಯೊಂದು ಕುಟುಂಬವೂ ವಸತಿ ರಹಿತವಾಗಿರದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ ಯಾರಿಗೆ ನಿವೇಶನಗಳಿವೆ ಅಂತಹವರಿಗೆ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಒಂದು ವೇಳೆ ಜಮೀನು ಮಾತ್ರ ಇದ್ದರೂ ಅದರಲ್ಲಿಯೂ ಮನೆ ಕಟ್ಟಲು ಅಗತ್ಯವಿರುವ ದಾಖಲೆಗಳನ್ನು ಒದಗಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು.
ತಾಲೂಕಿನಲ್ಲಿ ಮೊದಲಿಗೆ ೫ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದ್ದು, ಮುಂದಿನ ೫ ವರ್ಷದಲ್ಲಿ ಎಲ್ಲಾ ಗ್ರಾ.ಪಂ.ಗಳಲ್ಲಿಯೂ ಹಂತ ಹಂತವಾಗಿ ಮನೆಗಳನ್ನು ಪೂರ್ಣವಾಗಿ ನಿರ್ಮಿಸಲಾಗುವುದು. ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಸಭೆಗಳ ಮಹತ್ವ ಅತ್ಯಮೂಲ್ಯವಾಗಿದ್ದು, ಮಾಜಿ ಪ್ರಧಾನಿ ವಾಜಪೇರಿಯವರ ದೊಡ್ಡ ಆಲೋಚನೆಯಿಮದ ಇಂದು ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ವಸತಿಯನ್ನು ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹುಚ್ಚಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಡಿ. ಧನಲಕ್ಷಿö್ಮÃ ಮಾತನಾಡಿ, ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ವಸತಿ ರಹಿತ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲಿದೆ. ಪ್ರತಿಯೊಬ್ಬರು ಯೋಜನೆಯ ಸದುಪಯೋಗಕ್ಕೆ ಪ್ರಾಮಾಣಿಕ ಸಹಕಾರ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಸತಿ ರಹಿತ ಆಕಾಂಕ್ಷಿಗಳಿAದ ಗ್ರಾಮಸಭೆಯಲ್ಲಿ ಸಚಿವ ಬಿ.ಸಿ. ನಾಗೇಶ್ ಅರ್ಜಿ ಸ್ವೀಕರಿಸಿದರು. ಉಪಾಧ್ಯಕ್ಷೆ ರೂಪ, ಸದಸ್ಯರುಗಳಾದ ಓಂಕಾರಸ್ವಾಮಿ, ಶಿವಗಂಗಾ, ಗೀತಾ, ಶಿವಕುಮಾರ್, ಸುಧಾಮಣಿ, ಶಿವಸ್ವಾಮಿ ಈ.ಎನ್., ಕಲಾವತಿ ಎಚ್.ಎಂ., ಮಮತಾ ಎಸ್.ಕೆ., ಸಾವಿತ್ರಮ್ಮ, ನರಸಿಂಹಯ್ಯ, ಬಸವರಾಜು, ಕಲ್ಯಾಣಮ್ಮ, ಅಂಜಲಿ ಡಿ., ಜಗನ್ನಾಥ್ ಕೆ.ಬಿ., ಎಚ್.ಎಲ್. ಪ್ರಕಾಶ್, ಸೋಮಶೇಖರ್, ನಿರ್ಮಲ, ಗಂಗಾಧರ್, ಆರ್.ಎಸ್. ಶಂಕರಪ್ಪ, ಅಣ್ಣಯ್ಯ, ವಿಜಯಲಕ್ಷಿö್ಮÃ, ಪಿಡಿಒ ಎಚ್.ಆರ್. ಶಿವಕುಮಾರ್, ದ್ವಿತೀಯ ದರ್ಜೆ ಸಹಾಯಕ ರಮೇಶ್ ಇದ್ದರು.


ಗ್ರಾಮಗಳಲ್ಲಿ ಹಲವರು ಎರಡು ಬಾರಿ ಫಲಾನುಭವಿಗಳಾಗಲು ಮುಂದಾಗುತ್ತಾರೆ. ಆದರೆ ಸರ್ಕಾರದಲ್ಲಿ ಸೂಕ್ತ ದಾಖಲೆಗಳಿದ್ದು ಎರಡನೇ ಬಾರಿಗೆ ಫಲಾನುಭವಿಯಾಗಲು ಸಾಧ್ಯವಾಗುವುದಿಲ್ಲ. ಗ್ರಾಮದಲ್ಲಿ ಸುಳ್ಳು ಆಶ್ವಾಸನೆ ಹೇಳಿ ಮೋಸದಿಂದ ಹಣ ಪಡೆಯುವ ಮಧ್ಯವರ್ತಿಗಳ ಮಾತು ಕೇಳಬಾರದು. ಯಾವುದೇ ಮಾಹಿತಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು.
- ಬಿ.ಸಿ. ನಾಗೇಶ್, ಶಿಕ್ಷಣ ಸಚಿವರು