ಚಿನಾಹಳ್ಳಿಯಲ್ಲಿ ರಾಜೀವಗಾಂಧಿ ಸ್ಮರಣೆ
ಚಿನಾಹಳ್ಳಿಯಲ್ಲಿ ರಾಜೀವಗಾಂಧಿ ಸ್ಮರಣೆ, rajiv-ganndhi-cn-halli-congress-bevarahani
ಚಿನಾಹಳ್ಳಿಯಲ್ಲಿ ರಾಜೀವಗಾಂಧಿ ಸ್ಮರಣೆ
ಚಿಕ್ಕನಾಯಕನಹಳ್ಳಿ : ದಿ.ರಾಜೀವ ಗಾಂಧಿ ಅವರ 31 ಪುಣ್ಯಸ್ಮರಣೆಯನ್ನು ಪಟ್ಟಣದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಾಮಾಜಿಕ ಜಾಲತಾಣದ ಕಾರ್ಯಾಧ್ಯಕ್ಷ ವೇಣುಗೋಪಾಲ್,ರಾಜೀವ್ ಗಾಂಧಿ ಅವರ ದೂರದೃಷ್ಟಿ ಆಡಳಿತದಿಂದ ರಾಷ್ಟçದ ಗೌರವ ಹೆಚ್ಚಿದೆ, ದೇಶದಲ್ಲಿ 18 ವಯಸ್ಸಿನವರಿಗೆ ಮತದಾನದ ಹಕ್ಕನ್ನು ನೀಡಿದರು. ಅವರ ಪ್ರತಿಯೊಂದು ಕಾರ್ಯಗಳು ಅನನ್ಯವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ರಾಜೀವ್ ಗಾಂಧಿ ಕಿರಿಯ ವಯಸ್ಸಿನಲ್ಲಿ ಪ್ರಧಾನಿಯಾಗಿ ಕಿರಿಯ ವಯಸ್ಸಿನಲ್ಲೇ ಮೃತರಾದರು. ಇದರಿಂದ ದೇಶಕ್ಕೆ ನಷ್ಟವಾಯಿತು. ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಕಾರಿ ಬೆಳವಣಿಗೆ ತಂದು ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸಲಾಯಿತು. ಇಂದಿನ ದುರಾದೃಷ್ಟವೆಂದರೆ ಇಷ್ಟು ಪ್ರಧಾನಿಗಳು ಕಟ್ಟಿ ಬೆಳಸಿದ ಸಂಸ್ಥೆಗಳನ್ನು ಮಾರಾಟ ಮಾಡಲು ಈಗಿನ ಪ್ರಧಾನಿಗಳು ಸಿದ್ದತೆ ಆರಂಭಿಸಿದ್ದಾರೆ ಎಂದು ಕುಟುಕಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ, ಕಾರ್ಯದರ್ಶಿ ಬ್ರಹ್ಮಾನಂದ್, ವಕ್ತಾರ ಕೃಷ್ಣೇಗೌಡ ಮುಖಂಡರಾದ ಶಿವಕುಮಾರ್, ಗಂಗಾಧರ್, ಬೀರೇಶ್, ಪರಮೇಶ್, ಸೂರಿ, ತಿಲಕ್, ವೇಣುಗೋಪಾಲ್, ರೇಣುಕಸ್ವಾಮಿ, ವೀರೇಶ್ ಭಾಗವಹಿಸಿದ್ದರು.