ವಿನಾಶದ ಅಂಚಿನಲ್ಲಿ ವೃಕ್ಷ ರಾಜ ʼಮುತ್ತುಗ ʼ

ಇತ್ತೀಚಿನ ದಿನಗಳಲ್ಲಿ ಮುತ್ತುಗದ ಎಲೆ ಮಾಯವಾಗುತ್ತಿರುವುದರಿಂದ ಈಗಿನ ಜನರು  ಸಮಾರಂಭಗಳಲ್ಲಿ ಊಟ ಮಾಡಲು ಬಾಳೆ ಎಲೆ ಹಾಗೂ ಪ್ಲಾಸ್ಟಿಕ್ ಎಲೆಗಳನ್ನು ಬಳಸುತ್ತಿದ್ದಾರೆ.  

   ವಿನಾಶದ ಅಂಚಿನಲ್ಲಿ ವೃಕ್ಷ ರಾಜ ʼಮುತ್ತುಗ ʼ

ಕೆ.ಎಸ್ ಲಕ್ಷ್ಮೀಕಾಂತ,

ಕೊರಟಗೆರೆ  

 ನಮ್ಮ ಭಾರತೀಯ ಪದ್ದತಿಯಲ್ಲಿ ಮುತ್ತುಗದ ಎಲೆಗೆ ಪವಿತ್ರವಾದ ಸ್ಥಾನವನ್ನು ಕೊಡಲಾಗಿದೆ.

ನಿಸರ್ಗದ  ಮಡಿಲಲ್ಲಿ ನಾವು ಪರಿಕ್ರಮಿಸುವಾಗ ನಮ್ಮ ಕಣ್ಣಿಗೆ ಬಿದ್ದಂತಹ ಗಿಡ - ಮರಗಳ ಪ್ರಭೇದಗಳಲ್ಲಿ ಮುತ್ತುಗ ವಿಶಿಷ್ಟ ಪ್ರಭೇದ.

ಮುತ್ತುಗ, ವೃಕ್ಷರಾಜ,ದೇವರ ಮರ ಎಂದು ಕರೆಸಿಕೊಳ್ಳುವ ಗ್ರಾಮಾಂತರ ಭಾಗದ ಕಾಡು ಮೇಡು ರೈತರ ಹೊಲದ ಬದುಗಳಲ್ಲಿ ಕಾಣಿಸಿಕೊಳ್ಳುವ ಈ ಮುತ್ತುಗ  ಇತ್ತೀಚೆಗೆ ವಿನಾಶದ ಅಂಚಿಗೆ ತಲುಪಿದೆ.ಹಳ್ಳಿಗಳಲ್ಲಿಯೂ ಸಹ ಈ ಮರವು  ಅಲ್ಲೊಂದು ಇಲ್ಲೊಂದು ಮರ ಕಂಡುಬಂದರೂ ವಿನಾಶದ ಅಂಚಿಗೆ ತಲುಪಿರುವುದು ಮಾತ್ರ ವಿಷಾದನೀಯ.

 

ಶಿವರಾತ್ರಿ ಹಬ್ಬದ ಸಮಯದಲ್ಲಿ ಕೆಂಪು ಬಣ್ಣದಲ್ಲಿ ಕಾಣಿಸುವ  ಈ ಹೂವು ಶಿವನ ಪೂಜೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ.ಮುತ್ತುಗದ ಮರಕ್ಕೆ ದೇವರ ಮರವೆಂದು ಸಹ ಕರೆದಿದ್ದು ಕನ್ನಡದಲ್ಲಿ ಮುತ್ತುಗವಾದರೆ  ಸಂಸ್ಕೃತದಲ್ಲಿ ಪಾಲಾಶ ಎಂಬ ಹೆಸರು ನಾಮಾಂಕಿತವಿದೆ. ಭಾರತೀಯ ಸಂಸ್ಕೃತಿಯಲ್ಲಿ ದೇವರ ಮರ ಎಂದು ಪರಿಗಣಿಸಲಾಗುವ ಮುತ್ತುಗದ ಮರ ಎಲ್ಲ ಮರಗಳಿಗೂ ಗುರುವಿನ ಸ್ಥಾನವನ್ನು ಕೊಟ್ಟಿದೆ .ಹಿಂದೂ ಸಂಪ್ರದಾಯದ ಸಾಕಷ್ಟು ವಿಧಿ ವಿಧಾನಗಳಲ್ಲಿ ಈ ವೃಕ್ಷಕ್ಕೆ ಪ್ರಾಧಾನ್ಯತೆಯಿದ್ದು ನವಗ್ರಹಗಳಲ್ಲಿ ಈ ಮರ ಚಂದ್ರನ ಸ್ಥಾನವನ್ನು ಪ್ರತಿನಿಧಿಸುತ್ತದೆ. ಹಲವು ರೀತಿಯ ಪರಿಣಾಮಕಾರಿಯಾದಂತಹ ಹಲವು ಕಾಯಿಲೆಗಳಿಗೆ ರಾಮಬಾಣವೂ ಸಹ ಈ ಮುತ್ತುಗದ ಗಿಡ.ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದ್ದು ಕ್ರಿಮಿನಾಶಕವಾಗಿ ಕಾಣಬಹುದು .

ರೈತರಿಗೂ ಹಾಗೂ ಮುತ್ತುಗದ ಮರಕ್ಕೋ  ಅವಿನಾಭಾವ ಸಂಬಂಧವಿದ್ದು  ಮುತ್ತುಗದ ಚಿಗುರು ಸುಗ್ಗಿ ಕಾಲದಲ್ಲಿ ಬರುವುದರಿಂದ ಸುಗ್ಗಿ ಪೂಜೆಗೆ ಹೆಚ್ಚಿನ ಬಳಕೆಗೆ ಬರುತ್ತದೆ.

ಪುರಾತನ ಕಾಲದಿಂದಲೂ ಸಹ ಶಿವನ ಪೂಜೆಗೆ ಇದನ್ನು ಇಟ್ಟು ಪೂಜಿಸಿದರೆ ಒಳಿತು ಎಂಬ ಭಾವನೆ ಪೂರ್ವಿಕರಲ್ಲಿ ಇರುವುದರಿಂದ ಕಾಡು ಮೇಡು ಹಾಗೂ ರೈತರ ಹೊಲ ಗದ್ದೆಗಳ ಬದುಗಳಲ್ಲಿ ಕೆಂಪನೆಯ ಚಿತ್ತಾರವಾಗಿ ಕಾಣುವಂತಹ ಮುತ್ತುಗದ ಹೂವುಗಳು ಬಹಳ ಆಕರ್ಷಣೀಯವಾಗಿ ಕಂಡು ಬರುತ್ತವೆ ಇದು ಬಹಳ ವಿಶಿಷ್ಟವಾಗಿದ್ದು ಇದರ ಎಲೆಯಲ್ಲಿ ಊಟದ ಎಲೆಗಳನ್ನ ಮಾಡುವುದು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸಾಕಷ್ಟು ಹೆಚ್ಚು ಬಳಕೆ ಮಾಡುವುದನ್ನು ನೋಡಬಹುದಾಗಿದೆ.

 

ಆರ್ಥಿಕವಾಗಿ ಲಾಭ

ಮುತ್ತುಗದ  ಕಾಂಡ ಹೂವು ಎಲೆ ಎಲ್ಲವೂ ಕೂಡಾ ಜನೋಪಯೋಗಿ. ಮದುವೆ  ಹಾಗೂ ಶುಭ    ಸಮಾರಂಭಗಳಲ್ಲಿ ಹಿಂದೆಲ್ಲ ಮುತ್ತುಗದ ಎಲೆಯಲ್ಲಿ ಊಟ ಮಾಡುತ್ತಿದ್ದರು. ನಮ್ಮ ಹಿರಿಯರು ಎಲೆಗಳನ್ನು ತಂದು ಹಂಚಿಕಡ್ಡಿಯಲ್ಲಿ ಎಲೆಗಳನ್ನು ಜೋಡಿಸಿ ಊಟಕ್ಕೆ ಒಪ್ಪಮಾಡಿ ಜೋಡಿಸಿಡುತ್ತಿದ್ದರು ಇದು ಎಷ್ಟು ದಿನವಾದರೂ ಬಳಸಲು ಯೋಗ್ಯವಾಗಿರುತ್ತಿತ್ತು. ಮುತ್ತುಗದ ಎಲೆಗಳಿಂದ ಮಾಡಲಾಗುವ ಊಟದ ಎಲೆಗಳು ಹಾಗೂ  ದೊನ್ನೆಗಳು ಪ್ರಸಿದ್ದವಾಗಿದ್ದವು . ಎಲೆ ಪೆಂಡಿಗಳು ಹಾಗೂ ದೊನ್ನೆಗಳನ್ನು ಮಾರಿ ಉಪ ಜೀವನ ನಡೆಸುತ್ತಿದ್ದ ಹಳ್ಳಿಗರೂ ಇದ್ದರು.

ಆದ್ರೆ ಇತ್ತೀಚಿನ ದಿನಗಳಲ್ಲಿ ಮುತ್ತುಗದ ಎಲೆ ಮಾಯವಾಗುತ್ತಿರುವುದರಿಂದ ಈಗಿನ ಜನರು  ಸಮಾರಂಭಗಳಲ್ಲಿ ಊಟ ಮಾಡಲು ಬಾಳೆ ಎಲೆ ಹಾಗೂ ಪ್ಲಾಸ್ಟಿಕ್ ಎಲೆಗಳನ್ನು ಬಳಸುತ್ತಿದ್ದಾರೆ.

 

ಕೆಲವೊಂದು ವರ್ಷದಲ್ಲಿ  ಮುತ್ತುಗ ಅತಿ ಹೆಚ್ಚು ಹೂ ಬಿಟ್ಟರೆ ಮತ್ತೆ ಕೆಲವು ವರ್ಷದಲ್ಲಿ ಈ ಹೂವಿನ ಫಸಲು ಬಹುತೇಕ ಕಡಿಮೆ ಎಂದೇ ತಿಳಿಯಬಹುದು. ಶಿವನ ಪೂಜೆಗೆ ಬಳಕೆಯಾಗುವ ಈ ಹೂವನ್ನು ನೋಡಿ ರೈತರು ಮಳೆ ಬೆಳೆಯ ಲೆಕ್ಕಾಚಾರ ಹಿಂದೆ ಹಾಕುತ್ತಾರೆ ಈ ಹೂವು ಹೆಚ್ಚಾಗಿ ಬಿಟ್ಟರೆ ಈ ವರ್ಷ ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಕೂಡ.ಮುತ್ತುಗ ಧಾರ್ಮಿಕವಾಗಿ ಮೌಲ್ಯ ಪಡೆದಿದೆ.

 

ಮುತ್ತುಗದ ಎಲೆ .ಬೀಜ .ಹೂಗಳಿಂದ ಅನೇಕ ಖಾಯಿಲೆಗಳಿಗೆ ಉಪಯುಕ್ತವಾಗಿದೆ.ದೇಶದ ಹಲವು  ಭಾಗದಲ್ಲಿ ಇದರ ಸಣ್ಣ ಕೊಂಬೆಗಳನ್ನು ದರ್ಬೆ ಅರಳಿ ಇತ್ಯಾದಿ ಗಳ ಜೊತೆಯಲ್ಲಿ ಹೋಮ ಹವನ ಆಚರಣೆ ಯಲ್ಲಿ ಬಳಕೆ ಮಾಡಲಾಗುತ್ತದೆ .