ಜಿಲ್ಲಾಧಿಕಾರಿಗಳು ರೈತರ ಸಮಸ್ಯೆ ಆಲಿಸಲು ಬರದಿದ್ದಲ್ಲಿ ತಾಲೂಕು ಕಛೇರಿಗೆ ಬೀಗಮುದ್ರೆ - ಬೆಮಲ್ ಕಾಂತರಾಜ್ ಎಚ್ಚರಿಕೆ

ಜಿಲ್ಲಾಧಿಕಾರಿಗಳು ರೈತರ ಸಮಸ್ಯೆ ಆಲಿಸಲು ಬರದಿದ್ದಲ್ಲಿ ತಾಲೂಕು ಕಛೇರಿಗೆ ಬೀಗಮುದ್ರೆ - ಬೆಮಲ್ ಕಾಂತರಾಜ್ ಎಚ್ಚರಿಕೆ

ಜಿಲ್ಲಾಧಿಕಾರಿಗಳು ರೈತರ ಸಮಸ್ಯೆ ಆಲಿಸಲು ಬರದಿದ್ದಲ್ಲಿ ತಾಲೂಕು ಕಛೇರಿಗೆ ಬೀಗಮುದ್ರೆ - ಬೆಮಲ್ ಕಾಂತರಾಜ್ ಎಚ್ಚರಿಕೆ

ಜಿಲ್ಲಾಧಿಕಾರಿಗಳು ರೈತರ ಸಮಸ್ಯೆ ಆಲಿಸಲು ಬರದಿದ್ದಲ್ಲಿ ತಾಲೂಕು ಕಛೇರಿಗೆ ಬೀಗಮುದ್ರೆ - ಬೆಮಲ್ ಕಾಂತರಾಜ್ ಎಚ್ಚರಿಕೆ

ತುರುವೇಕೆರೆ, ಫೆ,9. ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ವಿರೋಧಿಸಿ ಗ್ರಾಮಸ್ಥರು ತಾಲೂಕು ಕಛೇರಿ ಮುಂಭಾಗ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯ ಕಿಚ್ಚು ದಿನದಿನಕ್ಕೆ ಹೆಚ್ಚುತ್ತಿದೆ. ಇದು ರಾಜಕೀಯ ತಿಕ್ಕಾಟಕ್ಕೂ ಕಾರಣವಾಗುತ್ತಿದೆ. 


 ಬೆಮಲ್  - ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನಪರಿಷತ್ ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬೆಮಲ್ ಕಾಂತರಾಜ್ ರವರು ಕಳೆದ ಮೂರು ದಿನಗಳಿಂದ ರೈತಾಪಿಗಳು, ತಮ್ಮ ಕುಟುಂಬದ ಸಹಿತ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಜಿಲ್ಲಾಡಳಿತದ ಸ್ಪಂದಿಸದೇ ಇರುವುದು ಖಂಡನೀಯ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಮಗಾಗುತ್ತಿರುವ ಸಮಸ್ಯೆಯನ್ನು ಆಲಿಸಲಿ ಎಂದು ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಿದ್ದರೂ ಸಹ ಜಿಲ್ಲಾಧಿಕಾರಿಗಳು ಸ್ಪಂದಿಸದೇ ಇರುವುದು ಸರಿಯಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಬೇಕೆಂದು ಆಗ್ರಹಿಸಿದರು.


 ಬೀಗಮುದ್ರೆ – ರೈತರ ಸಮಸ್ಯೆಯನ್ನು ಆಲಿಸಲು ಜಿಲ್ಲಾಧಿಕಾರಿಗಳು ಬಾರದಿದ್ದ ಪಕ್ಷದಲ್ಲಿ ತಾಲೂಕು ಕಛೇರಿಗೆ ಬೀಗಮುದ್ರೆ ಹಾಕುವುದು ಅನಿವಾರ್ಯವಾಗಲಿದೆ. ರೈತರೊಂದಿಗೆ ತಾವೂ ಸಹ ಬೀಗಮುದ್ರೆ ಚಳುವಳಿಯಲ್ಲಿ ಪಾಲ್ಗೊಂಡು ಅವರಿಗೆ ಸಹಕಾರ ನೀಡುವುದಾಗಿ ಬೆಮಲ್ ಕಾಂತರಾಜ್ ಹೇಳಿದರು.


ನಿರ್ಲಕ್ಷö್ಯ – ಜನಪ್ರತಿನಿಧಿಗಳ ನಿರ್ಲಕ್ಷö್ಯವೂ ಸಹ ಹೆಚ್ಚಾಗಿ ಕಾಣುತ್ತಿದೆ. ಕಳೆದ ಮೂರು ತಿಂಗಳಿನಿAದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಇಲ್ಲಿಯ ಜನಪ್ರತಿನಿಧಿಗಳು ಗ್ರಾಮಸ್ಥರ ಸಮಸ್ಯೆಯನ್ನು ಕೇಳಲು ಬಾರದಿರುವುದು ದುರಂತವೇ ಸರಿ ಎಂದು ಶಾಸಕ ಮಸಾಲಾ ಜಯರಾಮ್ ರವರ ಹೆಸರನ್ನು ಹೇಳದೇ ಆಕ್ಷೇಪಿಸಿದರು. ರೈತಾಪಿಗಳ ತಾಳ್ಮೆಯನ್ನು ಕೆಣಕುವುದು ಬೇಡ. ಕೂಡಲೇ ಶಾಸಕರು ಮಧ್ಯಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. 


 ಭೇಟಿ – ಜಿಲ್ಲೆಯ ನೂತನ ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣನವರನ್ನೂ ಸಹ ಇಲ್ಲಿಗೆ ಕರೆಸಿ ಸರ್ಕಾರದ ಗಮನ ಸೆಳೆಯುವುದಾಗಿ ಬೆಮಲ್ ಕಾಂತರಾಜ್ ಹೇಳಿದರು. 


 ಖಂಡನೆ – ಕಳೆದ ಮೂರು ದಿನಗಳಿಂದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸಹ ದಂಡಾಧಿಕಾರಿಗಳು ಮಹಿಳೆಯರ ಹಾಗೂ ರೈತರ ಸಮಸ್ಯೆಯನ್ನು ಆಲಿಸಲು ಆಸಕ್ತಿ ತೋರುತ್ತಿಲ್ಲ. ಮಹಿಳೆಯರಿಗೆ ಅಗತ್ಯವಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲೂ ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿದರು. 


 ಪ್ರತಿಭಟನೆ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರಾದ ತಾವರೇಕೆರೆ ದಾನೀಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಶಶಿಶೇಖರ್, ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಮಾಳೆ ಕೃಷ್ಣಪ್ಪ, ಕಾಂಗ್ರೆಸ್ ಯುವ ಮುಖಂಡರಾದ ನಟರಾಜ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. 


 ದಲಿತ ಸಂಘರ್ಷ ಸಮಿತಿಯ ಪದಾದಿಕಾರಿಗಳಾದ ದಂಡಿನಶಿವರ ಕುಮಾರ್ ಮತ್ತು ಡಾ.ಚಂದ್ರಯ್ಯ ನವರು ಕ್ರಾಂತಿ ಗೀತೆಯನ್ನು ಹಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.