‘ವೈಯಕ್ತಿಕ ಬದುಕಿಗೂ ಆದ್ಯತೆ ನೀಡಿ’  ಪತ್ರಕರ್ತರಿಗೆ ವಾರ್ತಾಧಿಕಾರಿ ಹಿಮಂತರಾಜ್ ಸಲಹೆ

Vartha adhikari

‘ವೈಯಕ್ತಿಕ ಬದುಕಿಗೂ ಆದ್ಯತೆ ನೀಡಿ’  ಪತ್ರಕರ್ತರಿಗೆ ವಾರ್ತಾಧಿಕಾರಿ ಹಿಮಂತರಾಜ್ ಸಲಹೆ

‘ವೈಯಕ್ತಿಕ ಬದುಕಿಗೂ ಆದ್ಯತೆ ನೀಡಿ’ 

ಪತ್ರಕರ್ತರಿಗೆ ವಾರ್ತಾಧಿಕಾರಿ ಹಿಮಂತರಾಜ್ ಸಲಹೆ


ತುಮಕೂರು: ಪತ್ರಿಕೋದ್ಯಮದಲ್ಲಿರುವ ಒತ್ತಡಗಳ ನಡುವೆ ನಮ್ಮ ಬದುಕು ಕಳೆದುಕೊಳ್ಳದೇ ವೈಯುಕ್ತಿಕ ಬದುಕಿಗೂ ಪ್ರಾಧಾನ್ಯತೆ ನೀಡಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಸಲಹೆ ಮಾಡಿದರು. 
ಸೋಮವಾರ ಹೃದಯಾಘಾತದಿಂದ ನಿಧನರಾದ ಪತ್ರಕರ್ತ ದಿ. ಸಿ.ಎಸ್. ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಭೆಯಲ್ಲಿ ಅವರು ಮಾತನಾಡಿದರು.
ಕುಮಾರ್ ಪ್ರತಿಭಾವಂತ ಸ್ನೇಹಜೀವಿಯಾಗಿದ್ದರು. ಪತ್ರಕರ್ತರು ಕೆಲಸದ ನಡುವೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅವಶ್ಯಕ. ಆರೋಗ್ಯ ಕಡೆಗಣಿಸದೇ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನ ಹರಿಸಬೇಕು,ಯಾರ ಒತ್ತಡಕ್ಕೂ ಒಳಗಾಗದೇ ಸುಗಮವಾಗಿ ಪ್ರೀತಿ ಮತ್ತು ಸಂತೋಷದಿAದ ಬದುಕಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ, ಕುಮಾರ್ ಕೆಲಸಕ್ಕೆ ಒತ್ತು ನೀಡಿ ಆರೋಗ್ಯ ಕಡೆಗಣಿಸಿದರು. ಪತ್ರಕರ್ತರಿಗೆ ಕಷ್ಟ ಎಂದಾಗ ಮುಂದೆ ನಿಲ್ಲುತ್ತಿದ್ದರು. ಆತನ ಧೋರಣೆಗಳು ಏನೇ ಇದ್ದರೂ ಸಹೃದಯಿ ಎಂದು ಭಾವುಕರಾದರು.
ಪತ್ರಕರ್ತ ಪಿ.ಡಿ. ಈರಣ್ಣ ಮಾತನಾಡಿ, ಉತ್ತಮ ಒಡನಾಡಿಯನ್ನು ನಾವು ಕಳೆದುಕೊಂಡಿದ್ದೇವೆ. ಒಬ್ಬ ವ್ಯಕ್ತಿಯನ್ನು ಅರ್ಥೆÊಸಿಕೊಳ್ಳುವುದರಲ್ಲಿ ಒಬ್ಬರದ್ದು ಒಂದು ರೀತಿ, ಗ್ರಾಮೀಣ ಪ್ರದೇಶದಿಂದ ಬಂದ ಮಹತ್ವಾಕಾಂಕ್ಷೆಯ ಪತ್ರಕರ್ತ ಚೇಳೂರು ಕುಮಾರ್ ಅವರದ್ದು ತಾಯಿ ಹೃದಯ, ಎಲ್ಲರ ದುಃಖದಲ್ಲಿಯೂ ಭಾಗಿಯಾಗುತ್ತಿದ್ದವರು ಎಂದರು.
ಸAಘದ ಪ್ರಧಾನ ಕಾರ್ಯದರ್ಶಿ ಎನ್.ಡಿ. ರಂಗರಾಜು, ಹೆಚ್.ವಿ. ವೆಂಕಟಾಚಲ, ಹರೀಶ್ ಆಚಾರ್ಯ ಸಂತಾಪದ ನುಡಿಗಳನ್ನಾಡಿದರು.
ಸಂಘದ ನಿರ್ದೇಶಕರಾದ ರಂಗನಾಥ್, ನಾಗರಾಜು, ಈಶ್ವರ್, ಸತೀಶ್, ಮಾರುತಿಪ್ರಸಾದ್ ಹಾಗೂ ಕುಣಿಹಳ್ಳಿ ಮಂಜುನಾಥ್, ರಘು, ಸತೀಶ್, ಜಯಪ್ರಕಾಶ್, ಟಿ.ಹೆಚ್. ಸುರೇಶ್, ಬಾಲು, ಮೋಹನ್, ರೇಣುಕಾ, ವಾರ್ತಾ ಇಲಾಖೆಯ ವೆಂಕಟೇಶ್, ರಾಧಮ್ಮ ಭಾಗವಹಿಸಿದ್ದರು.