ಲಸಿಕೆ ಯಶಸ್ವಿ: ಕೊರೊನಾ ಸೋಂಕು ಹತೋಟಿಗೆ ವಾರಿರ‍್ಸ್ಗಳಿಗೆ ಬಿಜೆಪಿ ಅಭಿನಂದನೆ

ಲಸಿಕೆ ಯಶಸ್ವಿ: ಕೊರೊನಾ ಸೋಂಕು ಹತೋಟಿಗೆ ವಾರಿರ‍್ಸ್ಗಳಿಗೆ ಬಿಜೆಪಿ ಅಭಿನಂದನೆ


ಲಸಿಕೆ ಯಶಸ್ವಿ: ಕೊರೊನಾ ಸೋಂಕು ಹತೋಟಿಗೆ
ವಾರಿರ‍್ಸ್ಗಳಿಗೆ ಬಿಜೆಪಿ ಅಭಿನಂದನೆ


ತುಮಕೂರು: ಕೊರೋನಾ ವಾಕ್ಸಿನ್ ನೂರು ಕೋಟಿ ಮೂವತ್ತು ಲಕ್ಷ ವ್ಯಾಕ್ಸಿನೇಷನ್ ಮಾಡಲಾಗಿದೆ, ವೇಗವಾಗಿ ಹರಡುತ್ತಿದ್ದ ವೈರಸ್ ಅನ್ನು ವ್ಯವಸ್ಥಿತವಾಗಿ ವ್ಯಾಕ್ಸಿನ್ ಕಳುಹಿಸುವ ಮೂಲಕ ನಿಯಂತ್ರಿಸಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಎಂ.ಬಿ.ನAದೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದೊಂದಿಗೆ ಫ್ರಂಟ್ ಲೈನ್ ವಾರಿಯರ್ಸ್ ಸತತ ಶ್ರಮದಿಂದ ಕೋವಿಡ್ ನಿಯಂತ್ರಣಕ್ಕೆ ಸಹಕಾತ ನೀಡಿದ್ದಾರೆ, ಆಹಾರ ಮತ್ತು ಉದ್ಯೋಗ ವನ್ನು ನೀಡುವ ಮೂಲಕ ಸಾರ್ವಜನಿಕರು ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದರು.
ಎಪ್ಪತ್ತು ಕೋಟಿ ಮಂದಿಗೆ ಎರಡು ಡೋಸ್, ಮೂವತ್ತು ಕೋಟಿ ಮೊದಲ ಲಸಿಕೆ ನೀಡಲಾಗಿದೆ, ದೇಶದಲ್ಲಿನ ಎಂಭತ್ತೇಳು ಸಾವಿರ ಲಸಿಕಾ ಕೇಂದ್ರದಲ್ಲಿ ಅರವತ್ತೆöÊದು ಲಕ್ಷ ಲಸಿಕೆ ನೀಡಲಾಗಿದೆ ಎಂದ ಅವರು ರಾಜ್ಯದಲ್ಲಿ ಒಂದು ದಿನದಲ್ಲಿಯೇ ಒಂದು ಲಕ್ಷ ಲಸಿಕೆ ನೀಡಲಾಗಿದೆ ಎಂದರು.
ಪ್ರತಿಸೆಕೆAಡ್‌ಗೆ ಎಂಟು ನೂರು ಮಂದಿಗೆ ಲಸಿಕೆ ನೀಡುವ ಮೂಲಕ ವಿಶ್ವದಾಖಲೆ ಮಾಡಿದೆ, ಜಿಲ್ಲೆಯಲ್ಲಿ ಇಪ್ಪತ್ನಾಲ್ಕು ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ, ಇಂದು ಅಭಿಯಾನದ ಅಂಗವಾಗಿ ಮೂರು ಸಾವಿರ ಮಂದಿಗೆ ಲಸಿಕೆ ವಿತರಿಸಲಾಗಿದೆ. ಲಸಿಕೆ ವಿತರಣಾ ಕಾರ್ಯದಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಅಭಿನಂದನೆ ಸಲ್ಲಿಸಲು ಎಂಭತ್ತು ಕೇಂದ್ರಗಳ ಸಿಬ್ಬಂದಿಗೆ ಸಿಹಿ ತಿನ್ನಿಸಿ ಕೃತಜ್ಞತೆ ಅರ್ಪಿಸಲಾಯಿತು ಎಂದರು.
ಪ್ರತಿ ಬೂತ್ ನಲ್ಲಿಯೂ ಶೇ.೧೦೦ರಷ್ಟು ಲಸಿಕೆ ನೀಡುವ ಗುರಿಯೊಂದಿಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಲಸಿಕಾರಣ ಕುಂಠಿತಗೊAಡಿತು, ವ್ಯಾಕ್ಸಿನ್ ಪಡೆಯದವರ ಮನವೊಲಿಸಿ ಲಸಿಕೆ ನೀಡುವ ಕೆಲಸ ಮಾಡುತ್ತೇವೆ, ಮನೆ ಮನೆ ತಲುಪಲು ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜ್ಯೋತಿಗಣೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ನಗರಾಧ್ಯಕ್ಷ ಹನಮಂತರಾಜು, ಲಕ್ಷಿö್ಮÃಶ್, ಕೊಪ್ಪಳ್‌ನಾಗರಾಜು, ಶಿವಕುಮಾರ್ ಸೇರಿದಂತೆ ಇತರರಿದ್ದರು.