ಲಕ್ಷ ಕಂಠ ಗಾಯನದಲ್ಲಿ ಹುಳಿಯಾರು ವಿದ್ಯಾರ್ಥಿಗಳು
ಲಕ್ಷ ಕಂಠ ಗಾಯನದಲ್ಲಿ ಹುಳಿಯಾರು ವಿದ್ಯಾರ್ಥಿಗಳು
ಹುಳಿಯಾರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ಆರಂಭಿಸಿದ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಗುರುವಾರ ಬೆಳಗ್ಗೆ 11 ಕ್ಕೆ ನಡೆದ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಮಂದಿಯ ಗೀತಗಾಯನ ಕಾರ್ಯಕ್ರಮದಲ್ಲಿ ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಭಾಗಿಯಾದರು. ನಾಡಗೀತೆಯೊಂದಿಗೆ ಆರಂಭವಾದ ಗೀತಗಾಯನದಲ್ಲಿ ರಾಷ್ಟçಕವಿ ಕುವೆಂಪು ಅವರ ``ಬಾರಿಸು ಕನ್ನಡ ಡಿಂಡಿAಮವ’’, ಕೆ.ಎಸ್.ನಿಸಾರ ಅಹ್ಮದ್ ಅವರ ``ಜೋಗದ ಸಿರಿ ಬೆಳಕಿನಲ್ಲಿ’’ ಮತ್ತು ಹಂಸಲೇಖ ಅವರ ``ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’’ ಹಾಡುಗಳನ್ನು ವಾಸವಿ ಶಾಲೆಯ 700 ವಿದ್ಯಾರ್ಥಿಗಳು ಹಾಡಿದರು.
ಸಿಆರ್‌ಪಿ ದಯಾನಂದ್ ಅವರು ಪ್ರಮಾಣವಚನ ಬೋಧಿಸಿದರು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣವನ್ನ ತೊಟ್ಟರು. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕöÈತಿ ಹಾಗೂ ಪರಂಪರೆಯನ್ನು ಉಳಿಸಲು ಬದ್ಧನಾಗಿರುತ್ತೇನೆ ಎಂಬ ಸಂಕಲ್ಪ ವಿದ್ಯಾರ್ಥಿಗಳು ಮಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕಮದ ಪೂರ್ವಭಾವಿಯಾಗಿ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಈ ವಿನೂತನ ಕಾರ್ಯಕ್ರಮ ಆರಂಭ ಮಾಡಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ಕನ್ನಡಿಗರೆಲ್ಲರಿಗೂ ಭಾಷೆ, ನೆಲಜಲದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕನ್ನಡೇತರರಿಗೆ ಕನ್ನಡದ ಮೇಲೆ ಪ್ರೀತಿ ಬೆಳೆಯಲು ಈ ಕಾರ್ಯಕ್ರಮ ಸಹಕಾರಿ ಎಂದು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ಆರ್. ಬಾಲಾಜಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕರುಗಳಾದ ರವೀಂದ್ರ, ಮೇಘಾಶ್ಯಾಮ್, ಮೇಲ್ವಿಚಾರಣ ಸಮಿತಿ ಸದಸ್ಯರುಗಳಾದ ಲಕ್ಷಿö್ಮÃರಾಜ್, ಶಿಲ್ಪಾ ಬಾಲಾಜಿ, ಮುಖ್ಯಶಿಕ್ಷಕರುಗಳಾದ ರಮೇಶ್, ಮಹೇಶ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.