ಬಿದಿರುಮೆಳೆ ತೋಟದ ರಸ್ತೆ ವಿಸ್ತರಣೆಗೆ ಚಾಲನೆ ಸ್ಮಾರ್ಟ್ ಸಿಟಿಯಿಂದ ೪೦ ಅಡಿ ರಸ್ತೆ : ಜ್ಯೋತಿಗಣೇಶ್

ಬಿದಿರುಮೆಳೆ ತೋಟದ ರಸ್ತೆ ವಿಸ್ತರಣೆಗೆ ಚಾಲನೆ ಸ್ಮಾರ್ಟ್ ಸಿಟಿಯಿಂದ ೪೦ ಅಡಿ ರಸ್ತೆ : ಜ್ಯೋತಿಗಣೇಶ್


ಬಿದಿರುಮೆಳೆ ತೋಟದ ರಸ್ತೆ ವಿಸ್ತರಣೆಗೆ ಚಾಲನೆ
ಸ್ಮಾರ್ಟ್ ಸಿಟಿಯಿಂದ ೪೦ ಅಡಿ ರಸ್ತೆ : ಜ್ಯೋತಿಗಣೇಶ್

ತುಮಕೂರು: ನಗರದ ಬಿ.ಎಚ್.ರಸ್ತೆಯಲ್ಲಿ ಬಿದಿರು ಮೆಳೆ ತೋಟದ (ಶಂಕರಮಠದ ಪಕ್ಕದಿಂದ ನೇರವಾಗಿ ಕರಿಬಸವಸ್ವಾಮಿ ಮಠದ ಮೂಲಕ ಹೊರಪೇಟೆ ಮುಖ್ಯ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ) ರಸ್ತೆಯನ್ನು ಸ್ಮಾರ್ಟ್ ಸಿಟಿ ಕಂಪನಿ ವತಿಯಿಂದ ೪೦ ಅಡಿಗಳಿಗೆ ವಿಸ್ತರಿಸಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸಬೇಕೆಂದು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು. 
ಬುಧವಾರ ಕರಿಬಸವಸ್ವಾಮಿ ಮಠದ ಸಮೀಪ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ವತಿಯಿಂದ ಈ ಕಾಮಗಾರಿ ನಡೆಯಲಿದೆ. ಕಾಮಗಾರಿಗೆ ಟೆಂಡರ್ ಆಗಿ ಸುಮಾರು ೨ ವರ್ಷಗಳಾಗಿತ್ತು. ಆದರೆ ಕಾರಣಾಂತರಗಳಿAದ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಎಲ್ಲರ ಒಮ್ಮತದ ಅಭಿಪ್ರಾಯದ ಪ್ರಕಾರ ೪೦ ಅಡಿ ಅಗಲದ ರಸ್ತೆಯನ್ನಾಗಿ ವಿಸ್ತರಿಸಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಹೇಳುತ್ತ, ಇಲ್ಲೇ ವಾಸವಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಸ್.ಷಫಿ ಅಹಮದ್, ಜೆಡಿಎಸ್ ಮುಖಂಡ ಗುರು ಬಳ್ಳಕುರಾಯ, ಈ ವಾರ್ಡ್ನ ಮಾಜಿ ಕಾರ್ಪೊರೇಟರ್ ರಾಮಕೃಷ್ಣ (ಜೆಡಿಎಸ್), ಹಾಲಿ ಕಾರ್ಪೊರೇಟರ್ ಇನಾಯತ್ ಉಲ್ಲಾ ಖಾನ್ (ಕಾಂಗ್ರೆಸ್) ಮತ್ತಿರರರ ಸಹಕಾರವನ್ನು ಉಲ್ಲೇಖಿಸಿದರು.
ಕಾಮಗಾರಿಯನ್ನು ಸ್ಮಾರ್ಟ್ ಸಿಟಿಯೇ ಮಾಡುವುದಾದರೂ, ಭೂಮಿ ಬಿಡಿಸಿಕೊಡುವ ಹೊಣೆ ಮಹಾನಗರ ಪಾಲಿಕೆಯದಾಗಿದೆ. ೪೦ ಅಡಿಗಳ ಅಗಲದ ರಸ್ತೆಗೆ ಅನುಕೂಲವಾಗುವಂತೆ ಜಾಗವನ್ನು ಬಿಡಿಸಿಕೊಡುವ ಕಾರ್ಯವನ್ನು ಪಾಲಿಕೆ ಮಾಡಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕರು ಮನವಿ ಮಾಡಿಕೊಂಡರು.
ಮೇಯರ್ ಬಿ.ಜಿ.ಕೃಷ್ಣಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಕಾರ್ಪೊರೇಟರ್‌ಗಳಾದ ಇನಾಯತ್ ಉಲ್ಲಾ ಖಾನ್, ಟಿ.ಎಂ.ಮಹೇಶ್, ಮಾಜಿ ಕಾರ್ಪೊರೇಟರ್ ರಾಮಕೃಷ್ಣ, ಜೆಡಿಎಸ್ ಮುಖಂಡ ಗುರುಬಳ್ಳಕುರಾಯ ಹಾಜರಿದ್ದರು. 
ನಗರದ ಕೆ.ಆರ್.ಬಡಾವಣೆ ವ್ಯಾಪ್ತಿಗೆ ಸೇರುವ ಈ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕೆಂದು ಈ ಹಿಂದಿನ ಮಹಾನಗರ ಪಾಲಿಕೆಯಲ್ಲಿ ಈ ಭಾಗದ ಕಾರ್ಪೊರೇಟರ್ ಆಗಿದ್ದ ರಾಮಕೃಷ್ಣ ವಿಷಯವನ್ನು ಮಂಡಿಸಿ ನಿರ್ಣಯ ಕೈಗೊಳ್ಳುವಂತೆ ಮಾಡಿದ್ದರು. ಆದರೆ ಕಾರಣಾಂತರಗಳಿAದ ಇದು ನೆನೆಗುದಿಗೆ ಬಿದ್ದಿತು. ನಂತರವೂ ರಸ್ತೆ ವಿಸ್ತರಣೆಗೆ ರಾಮಕೃಷ್ಣ ಒತ್ತಾಯಿಸುತ್ತಿದ್ದರು. ಕೊನೆಗೂ ಆ ಕಾರ್ಯ ಈಗ ಚಾಲನೆಗೊಂಡಿದೆ.