ಲಕ್ಷ ಕಂಠಗಳ ಕನ್ನಡ ಗೀತೆ ಗಾಯನ ಕಾರ್ಯಕ್ರಮ ಮಧುಗಿರಿಯಲ್ಲಿ ಮೊಳಗಿದ ಕನ್ನಡ ಗಾಯನ
ಲಕ್ಷ ಕಂಠಗಳ ಕನ್ನಡ ಗೀತೆ ಗಾಯನ ಕಾರ್ಯಕ್ರಮ
ಮಧುಗಿರಿಯಲ್ಲಿ ಮೊಳಗಿದ ಕನ್ನಡ ಗಾಯನ
ಮಧುಗಿರಿ: ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಮಾಲೀಮರಿಯಪ್ಪ ರಂಗಮAದಿರದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ `ಲಕ್ಷ ಕಂಠಗಳ ಕನ್ನಡ ಗೀತೆ ಗಾಯನ ಕಾರ್ಯಕ್ರಮ' ಗುರುವಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟçಕವಿ ಕುವೆಂಪು ಅವರ "ಬಾರಿಸು ಕನ್ನಡ ಡಿಂಡಿಮವ", ಡಾ. ನಿಸಾರ್ ಅಹಮದ್‌ರವರ 'ಜೋಗದ ಸಿರಿ ಬೆಳಕಿನಲ್ಲಿ' ಹಾಗೂ ಡಾ. ಹಂಸಲೇಖರವರ "ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು' ಈ 3 ಗೀತೆಗಳು ಮೊಳಗಿದವು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ನಿಕಟಪೂರ್ವ ಕಾರ್ಯದರ್ಶಿ ನರಸೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪುರಸಭಾಧ್ಯಕ್ಷ ತಿಮ್ಮರಾಜು, ತಹಸಿಲ್ದಾರ್ ವೈ. ರವಿ, ಪುರಸಭಾ ಸದಸ್ಯ ಎಂ.ಎಲ್. ಗಂಗರಾಜು, ತಾಪಂ ಇಒ ಲಕ್ಷ÷್ಮಣ, ತಾ. ಪಂ. ಇಲಾಖೆಯ ಮಧುಸೂದನ್, ಟಿಎಚ್‌ಓ ಡಾ. ರಮೇಶ್ ಬಾಬು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷಿನರಸಿಂಹಯ್ಯ, ಸಿಡಿಪಿಒ ಅನಿತಾ, ಪುರಸಭಾ ಮುಖ್ಯಾಧಿಕಾರಿ ನಜ್ಮಾ, ಸಮಾಜ ಸೇವಕಿ ಲತಾ ನಾರಾಯಣ್, ಕನ್ನಡಪರ ಒಕ್ಕೂಟದ ಅಧ್ಯಕ್ಷ ತಿಮ್ಮರಾಜು, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಹನುಮಂತರಾಯಪ್ಪ, ಕಂದಾಯ ನಿರೀಕ್ಷಕ ಜಯರಾಮಯ್ಯ, ಇಸಿಓ ಪ್ರಾಣೇಶ್, ಬಿಆರ್‌ಸಿ ಮಂಜುನಾಥ ಸ್ವಾಮಿ, ಬಿಇಒ ನಂಜುAಡಯ್ಯ ಇತರರಿದ್ದರು.