ವಿದೇಶಿ ಕ್ರೀಡೆ ಬದಲಿಗೆ ಸ್ವದೇಶಿ ಆಟಗಳನ್ನು ಆಡಿ ಯುವಕರಿಗೆ ಸಚಿವ ಬಿ.ಸಿ. ನಾಗೇಶ್ ಕಿವಿ ಮಾತು

ವಿದೇಶಿ ಕ್ರೀಡೆ ಬದಲಿಗೆ ಸ್ವದೇಶಿ ಆಟಗಳನ್ನು ಆಡಿ ಯುವಕರಿಗೆ ಸಚಿವ ಬಿ.ಸಿ. ನಾಗೇಶ್ ಕಿವಿ ಮಾತು

ವಿದೇಶಿ ಕ್ರೀಡೆ ಬದಲಿಗೆ ಸ್ವದೇಶಿ ಆಟಗಳನ್ನು ಆಡಿ ಯುವಕರಿಗೆ ಸಚಿವ ಬಿ.ಸಿ. ನಾಗೇಶ್ ಕಿವಿ ಮಾತು


ವಿದೇಶಿ ಕ್ರೀಡೆ ಬದಲಿಗೆ ಸ್ವದೇಶಿ ಆಟಗಳನ್ನು ಆಡಿ
ಯುವಕರಿಗೆ ಸಚಿವ ಬಿ.ಸಿ. ನಾಗೇಶ್ ಕಿವಿ ಮಾತು


ತಿಪಟೂರು: ಮನೆಯಿಂದ ಆಚೆಯೇ ಬರದಂತAಹ ಸ್ಥಿತಿಯಲ್ಲಿರುವ ಜನರನ್ನು ಕ್ರೀಡೆ ಹಾಗೂ ರಾಜ್ಯೋತ್ಸವ ಆಚರಣೆ ಮೂಲಕ ಎಲ್ಲಾ ಮನಸ್ಸುಗಳನ್ನು ಒಟ್ಟುಗೂಡಿಸುವಂತಹ ಕೆಲಸ ಮಾಡಿರುವ ಕಾರ್ಯ ಶ್ಲಾಘನೀಯ  ಎಂದು ಪ್ರಾಥಮಿಕ ಹಾಗೂ ಫ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.


ತಾಲ್ಲೂಕಿನ ಕೊನೇಹಳ್ಳಿಯ ಅಶ್ವಿನಿ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಶನಿವಾರ ಶಂಕರೇಶ್ವರ ಕ್ರಿಕೆರ‍್ಸ್ ವತಿಯಿಂದ ದಿವಂಗತ ಪುನೀತ್ ರಾಜ್‌ಕುಮಾರ್ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.


ರಾಜ್ಯದ ನೆನಪುಗಳನ್ನು ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕರ್ನಾಟಕ ಏಕೀಕರಣದ ಇತಿಹಾಸದ ನೆನಪುಗಳನ್ನು ಜ್ಞಾಪಿಸುವ ಕೆಲಸಗಳು ಆಗಬೇಕು. ಯುವಕರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸದ ಜೊತೆಯಲ್ಲಿ ಸ್ವದೇಶಿ ಆಟಗಳಿಗೆ ಹೆಚ್ಚು ಮಹತ್ವವನ್ನು ನೀಡಬೇಕು. ಮೊನ್ನೆ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 36 ವಿದ್ಯಾರ್ಥಿಗಳು ಎಲ್ಲರೂ ಸಹ ಕನ್ನಡ ಶಾಲೆ ವ್ಯಾಸಂಗ ಮಾಡಿದವರು. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿದವರು. ಅದ್ದರಿಂದ ಇಂಗ್ಲೀಷ್ ಮೋಹದಿಂದ ಹೊರ ಬಂದು ಕನ್ನಡವನ್ನು ತಿರಸ್ಕಾರ ಮಾಡುವ ಮನಸ್ಥಿತಿ ಮೂಡಬೇಕಿದೆ ಎಂದರು.


ಎಪಿಎAಸಿ ಅಧ್ಯಕ್ಷ ಎಚ್.ಬಿ. ದಿವಾಕರ್ ಮಾತನಾಡಿ ಕಲೆ, ಸಾಹಿತ್ಯ, ಸಾಂಸ್ಕೃತಿಯನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡುವತ್ತ ಸಾಗಬೇಕಿದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅನೇಕ ಅವಕಾಶಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.


ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವಿಜಯ್‌ಕುಮಾರ್ ಸಿದ್ದಾಪುರ ಮಾತನಾಡಿ, ಪುನೀತ್ ರಾಜ್‌ಕುಮಾರ್ ಒಬ್ಬ ನಟನಾಗಿ ನೋಡುವುದಲ್ಲದೆ ಅವರು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಕನ್ನಡ-ಕರ್ನಾಟಕವನ್ನು ಮೇಲೆತ್ತರಕ್ಕೆ ಕೊಂಡ್ಯೋಯ್ದ ಮಹಾನ್ ಚೇತನ. ಅವರ ಆದರ್ಶಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರೇಶ್ವರ ಕ್ರಿಕೆರ‍್ಸ್ ಅಧ್ಯಕ್ಷ ಅರುಣ್‌ಕುಮಾರ್ ವಹಿಸಿದ್ದರು. ವೈಭವಿ ಚಿಕಿತ್ಸಾಲಯದ ಮಕ್ಕಳ ವೈದ್ಯ ಮಧುಸೂದನ್, ಗ್ರಾ.ಪಂ. ಸದಸ್ಯರಾದ ನಟರಾಜು, ಹರೀಶ್ ಗೌಡ, ಅಶ್ವಿನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡರಾದ ಭೋಜೇಗೌಡ, ಶಶಿಧರ್, ಲಿಂಗರಾಜು, ಮಾಜಿ ಗ್ರಾ.ಪಂ. ಸದಸ್ಯರಾದ ಲಿಂಗರಾಜು, ಅಶೋಕ್, ಮಲ್ಲೇಶ್ ಆಯೋಜಕ ದೀಪು, ಪ್ರಶಾಂತ್ ಕರೀಕೆರೆ ಇದ್ದರು.