ವಾರಾಂತ್ಯ ಲಾಕ್‌ಡೌನ್ ಕಟ್ಟುನಿಟ್ಟು: ಸಚಿವ ಮಾಧುಸ್ವಾಮಿ ಶಾಲೆ,ಕಾಲೇಜು,ವ್ಯಾಪಾರಕ್ಕಿಲ್ಲ ಅಡ್ಡಿ
jcm-dc-week-end-curfew-tumkur
ವಾರಾಂತ್ಯ ಲಾಕ್‌ಡೌನ್ ಕಟ್ಟುನಿಟ್ಟು: ಸಚಿವ ಮಾಧುಸ್ವಾಮಿ
ಶಾಲೆ,ಕಾಲೇಜು,ವ್ಯಾಪಾರಕ್ಕಿಲ್ಲ ಅಡ್ಡಿ
ತುಮಕೂರು: ದಿನೇ ದಿನೇ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮಂಗಳವಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಬುಧವಾರ ರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕೋರಿದ್ದಾರೆ.
ಎಲ್ಲಾ ರೀತಿಯ ರ‍್ಯಾಲಿ, ಪ್ರತಿಭಟನೆ, ಧರಣಿಗಳನ್ನು ನಿಷೇಧಿಸಲಾಗಿದೆ, ವಾರಾಂತ್ಯ ಶನಿವಾರ ಮತ್ತು ಭಾನುವಾರದ ಲಾಕ್‌ಡೌನ್ ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲಾ,ಕಾಲೇಜು, ವ್ಯಾಪಾರ ವಹಿವಾಟು, ಸಂತೆ,ಮಾರುಕಟ್ಟೆಗಳಿಗೆ ಯಾವುದೇ ಅಡ್ಡಿಯಿಲ್ಲವಾದರೂ ವರ್ತಕರು ಅತ್ಯಂತ ಕಡಿಮೆ ಜನಸಂದಣಿಯೊAದಿಗೆ ವಹಿವಾಟು ನಡೆಸಬೇಕು. ಬಸ್,ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶವಿದೆ. ಅವುಗಳ ಸಾಮರ್ಥ್ಯದ ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
ಕೋವಿಡ್ 2ನೇ ಡೋಸ್ ಲಸಿಕೆ ಪಡೆದವರ ಪ್ರಮಾಣ ಪತ್ರ ಖಚಿತಪಡಿಸಿಕೊಂಡ ನಂತರವಷ್ಟೇ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಅನುಮತಿಸಬೇಕು. ವಿಶೇಷ ಪೂಜಾ ಸೇವೆಗೆ ಅವಕಾಶವಿರುವುದಿಲ್ಲ. ಧಾರ್ಮಿಕ ಸ್ಥಳಗಳಿಗೆ ಎರಡು ಡೋಸ್ ಲಸಿಕೆ ಪಡೆದ ಗರಿಷ್ಟ 50 ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರಕಟಿಸಿರುವ ಹೊಸ ಮಾರ್ಗಸೂಚಿ(ಎಸ್‌ಓಪಿ) ಬುಧವಾರ ರಾತ್ರಿ 10ರಿಂದ ಇದೇ ತಿಂಗಳ 19ರ ಮುಂಜಾನೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ, ಪ್ರತಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆ ಹೊರತುಪಡಿಸಿ ಸರ್ಕಾರದ ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿವೆ. ಶುಕ್ರವಾರದ ರಾತ್ರಿ 10 ಗಂಟೆಯಿAದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಸಚಿವರು ವಿವರಿಸಿದರು.
ರಾಜ್ಯ ಸರ್ಕಾರ ಕೋವಿಡ್ ತಾಂತ್ರಿಕ ಸಮಿತಿ ವರದಿ ಆಧಾರದ ಮೇಲೆ ಒಮೈಕ್ರಾನ್ ವೈರಾಣುವಿನಿಂದ ಪ್ರಾಣಹಾನಿಯಾಗದಿದ್ದರೂ ಒಬ್ಬರಿಂದ ಒಬ್ಬರಿಗೆ ವೇಗವಾಗಿ ವೈರಾಣು ಹರಡುತ್ತಿರುವುದರಿಂದ ಈ ಮಾರ್ಗಸೂಚಿ ಜಾರಿಗೆ ತರಲಾಗಿದೆ. ಕೋವಿಡ್ 2ನೇ ಅಲೆಯ ನಂತರ ವಿನಾಯತಿ ನೀಡಲಾಗಿದ್ದ ನಿರ್ಬಂಧಗಳನ್ನು ಮತ್ತೊಮ್ಮೆ ಹೇರಲಾಗಿದೆ. ನಿರ್ಬಂಧಗಳನ್ನು ಮುಂದುವರೆಸುವ ಅಥವಾ ವಿನಾಯಿತಿ ನೀಡುವ ಬಗ್ಗೆ ಜನವರಿ 19ರಂದು ಸರ್ಕಾರ ಮುಂದಿನ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಮಾತ್ರ ಗುರುವಾರದಿಂದ 10,11, 12ನೇ ತರಗತಿ ಸೇರಿದಂತೆ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಹೊರತುಪಡಿಸಿ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಆದರೆ ಸದ್ಯಕ್ಕೆ ತುಮಕೂರು ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಣಯವನ್ನು ಈವರೆಗೂ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಪಬ್, ಬಾರ್,ರೆಸ್ಟೋರೆಂಟ್,ಹೋಟೆಲ್,ಮಾಲ್ ಹಾಗೂ ಸಿನಿಮಾ ಮಂದಿರಗಳ ಸಾಮರ್ಥ್ಯದ ಶೇ.50ರಷ್ಟು ಆಸನಗಳಿಗೆ ಅನ್ವಯಿಸುವಂತೆ ಮಾತ್ರ ಕೋವಿಡ್ ನಿಯಮ ಪಾಲನೆಯೊಂದಿಗೆ ಸೇವೆ ಒದಗಿಸಬೇಕು. ಮದುವೆ ಹಾಗೂ ಇತರ ಸಮಾರಂಭಗಳನ್ನು ನಡೆಸಲು ಹೊರಾಂಗಣ ಪ್ರದೇಶಗಳಲ್ಲಿ 200 ಹಾಗೂ ಒಳಾಂಗಣದಲ್ಲಿ 100 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಕ್ರೀಡಾ ಕಾಂಪ್ಲೆಕ್ಸ್,ಈಜು ಕೊಳ,ಜಿಮ್‌ಗಳಿಗೆ ಅವುಗಳ ಸಾಮರ್ಥ್ಯದ ಶೇ. 50ರಷ್ಟು ಮಾತ್ರ ಪ್ರವೇಶ ನೀಡಬೇಕು ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಭಾಗವಹಿಸುವ ಎಲ್ಲರೂ ಎರಡು ಡೋಸ್ ವ್ಯಾಕ್ಸಿನೇಶನ್ ಪಡೆದಿರುವುದು ಕಡ್ಡಾಯ ಮತ್ತು ಆ ಮಾಹಿತಿಯನ್ನು ಖಚಿತಪಡಿಸಿಕೊಂಡೇ ಪ್ರವೇಶ ನೀಡತಕ್ಕದ್ದು ಎಂದು ಸಚಿವರು ಸೂಚಿಸಿದರು.
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೈಗಾರಿಕೆಗಳು ಮಾಮೂಲಿಯಂತೆ ಕಾರ್ಯನಿರ್ವಹಿಸಲು ಅವಕಾಶವಿದ್ದು, 2ನೇ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು. ಗುರುತಿನ ಚೀಟಿ, ವ್ಯಾಕ್ಸಿನೇಷನ್ ಪ್ರಮಾಣ ಪತ್ರ ಹಾಜರುಪಡಿಸದೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿ.ಪಂ. ಸಿಇಓ ಡಾ: ಕೆ. ವಿದ್ಯಾಕುಮಾರಿ, ಡಿಹೆಚ್‌ಓ ಡಾ.ನಾಗೇಂದ್ರಪ್ಪ, ಡಿಎಸ್ ಡಾ.ವೀರಭದ್ರಪ್ಪ ಹಾಜರಿದ್ದರು.
ಸಿದ್ದರಾಮ ಜಯಂತಿ ರದ್ದು
ತಿಪಟೂರು ತಾಲ್ಲೂಕಿನ ಪ್ರಸಿದ್ಧ ಕೆರೆಗೋಡಿ ರಂಗಾಪುರ ಭೂ ಸುಕ್ಷೇತ್ರದ ಶ್ರೀ ಗುರು ಪರದೇಶಿ ಕೇಂದ್ರದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ಸಿದ್ಧರಾಮೇಶ್ವರ ಜಯಂತಿಯನ್ನು ರದ್ದುಪಡಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಸ್ಪಷ್ಟಪಡಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದೇವಾಲಯಗಳೂ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಪೂಜೆ ಹಾಗೂ ಮತ್ತು ದೇವರ ದರ್ಶನಕ್ಕೆ ಮಾತ್ರ ಅನುಮತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಲಸಿಕೆ ಕೊರತೆಯಿದೆ:
ಓ ಮೈಕ್ರಾನ್ ಪ್ರಕರಣವಿಲ್ಲ-ಜೆಸಿಎಂ
ತುಮಕೂರು: ಜಿಲ್ಲೆಯಲ್ಲಿ 76 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಈವರೆಗೂ ಯಾವುದೇ ಒಮೈಕ್ರಾನ್ ಪ್ರಕರಣ ವರದಿಯಾಗಿಲ್ಲ. ದಿನವಹಿ ಸುಮಾರು 3500 ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿದಿನ 6000 ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಒಂದೇ ಪ್ರದೇಶದಲ್ಲಿ 3ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದರೆ ಕಂಟೇನ್‌ಮೆAಟ್ e಼ೆÆÃನ್ ಮಾಡಬೇಕು, ಸೋಂಕಿತರನ್ನು ಹೋಂ ಕ್ವಾರಂಟೈನ್ ಮತ್ತು ಐಸೊಲೇಟ್ ಮಾಡಬೇಕು. ಹೊರ ದೇಶಗಳಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಆಗಿ ಇಲಾಖೆ ಪ್ರಮಾಣೀಕರಿಸಬೇಕು.
ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಸಿಗೆಗಳನ್ನು ಕಾಯ್ದಿರಿಸಬೇಕು. 13 ಆಕ್ಸಿಜನ್ ಪ್ಲಾಂಟ್‌ಗಳ ಪೈಕಿ 9 ಆಕ್ಸಿಜನ್ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 4 ಪ್ಲಾಂಟ್‌ಗಳನ್ನು ಪ್ರಾರಂಭಿಸಲು ಇರುವ ತಾಂತ್ರಿಕ ಸಮಸ್ಯೆಗಳನ್ನು ವಾರದೊಳಗೆ ಪರಿಹರಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಸ್ತುತ 600 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಲಭ್ಯವಿರುವುದರಿಂದ ಹಳ್ಳಿಗಳಲ್ಲಿರುವ ಆಸ್ಪತ್ರೆಗಳಲ್ಲಿಯೂ ಆಕ್ಸಿನೇಟೆಡ್ ಬೆಡ್ ವ್ಯವಸ್ಥೆಗೊಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಲಾಗಿದೆ. ಕೋವಿಡ್ 3ನೇ ಅಲೆಯಲ್ಲಿ ಸಾಮಾನ್ಯವಾಗಿ ಉಸಿರಾಟದ ಸಮಸ್ಯೆ ಸಂಭವಿಸಬಹುದೆAದು ತಜ್ಞರ ಅಭಿಪ್ರಾಯವಿರುವುದರಿಂದ ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡಬೇಕು.
ಜಿಲ್ಲೆಯಲ್ಲಿ ಆಯಾ ಶಾಲಾ-ಕಾಲೇಜುಗಳಲ್ಲಿ ಎರಡು ದಿನಗಳಿಂದ 15-18 ವರ್ಷದ 40,000 ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ, ಪ್ರತಿದಿನ 20,000 ಮಕ್ಕಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎರಡನೇ ಡೋಸ್ 71% ಮಾತ್ರ ಆಗಿದ್ದು, ಲಸಿಕೆ ಕೊರತೆ ಇದೆ, ಮುಂದಿನ ದಿನಗಳಲ್ಲಿ ಸರಿಹೋಗಲಿದೆ.
-ಜೆ.ಸಿ.ಮಾಧುಸ್ವಾಮಿ,
ಜಿಲ್ಲಾ ಉಸ್ತುವಾರಿ ಸಚಿವರು