ಪ್ರೌಢಶಾಲಾ ಮಕ್ಕಳ ಯಶಸ್ವೀ “ರಸ ಪ್ರಶ್ನೆ”, ಕಲ್ಪತರು ವಿದ್ಯಾರ‍್ಥಿ ರತ್ನ ಪ್ರಶಸ್ತಿಗೆ ಆಯ್ಕೆ

ಪ್ರೌಢಶಾಲಾ ಮಕ್ಕಳ ಯಶಸ್ವೀ “ರಸ ಪ್ರಶ್ನೆ”, ಕಲ್ಪತರು ವಿದ್ಯಾರ‍್ಥಿ ರತ್ನ ಪ್ರಶಸ್ತಿಗೆ ಆಯ್ಕೆ

ಪ್ರೌಢಶಾಲಾ ಮಕ್ಕಳ ಯಶಸ್ವೀ “ರಸ ಪ್ರಶ್ನೆ”, ಕಲ್ಪತರು ವಿದ್ಯಾರ‍್ಥಿ ರತ್ನ ಪ್ರಶಸ್ತಿಗೆ ಆಯ್ಕೆ

ತಿಪಟೂರು: ಸೊಗಡು ಜನಪದ ಹೆಜ್ಜೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತಿಪಟೂರು ತಾಲ್ಲೂಕು ಪ್ರೌಢಶಾಲಾ ಮಕ್ಕಳ ವಿಭಾಗದ “ರಸ ಪ್ರಶ್ನೆ” ಕಾರ್ಯಕ್ರಮವನ್ನು 
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದರು.

ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಯ್ಕೆಯಾದ 130 ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸಿದ್ದು, ಲಿಖಿತ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 15 ಮಕ್ಕಳಿಗೆ, ಎಲ್ಲ ಮಕ್ಕಳ ಸಮ್ಮುಖದಲ್ಲಿ ನೇರ ಪ್ರಶ್ನಾವಳಿಯಲ್ಲಿ 3 ಮಕ್ಕಳಂತೆ 5 ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪನ್ನು ಗ್ರಾಮಗಳ ಹೆಸರುಗಳೊಂದಿಗೆ ಅರಳಗುಪ್ಪೆ, ಶಿವರ, ಐಯ್ಯನಬಾವಿ, ವಿಘ್ನಸಂತೆ, ಹೊನ್ನವಳ್ಳಿ ಎಂದು ಗುರುತಿಸಲಾಗಿತ್ತು.

ಈ ಸುತ್ತಿನಲ್ಲಿ “ಶಿವರ’’ ಗುಂಪು (ಹೇಮಂತ್, ನಳಂದ ಪ್ರೌಢಶಾಲೆ ತಿಪಟೂರು, ಗಾನವಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ತಿಪಟೂರು, ಶ್ರೇಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತಿಪಟೂರು) ಅತೀ ಹೆಚ್ಚು ಅಂಕಗಳಿಸಿ “ಕಲ್ಪತರು ವಿದ್ಯಾರ್ಥಿ ರತ್ನ”ಪ್ರಶಸ್ತಿಗೆ ಆಯ್ಕೆಯಾದರು. ದ್ವಿತೀಯ ಸ್ಥಾನ “ವಿಘ್ನಸಂತೆ” (ಪವನ್, ಎಸ್.ಆರ್. ಎಚ್.ಎಸ್. ಕೊನೇಹಳ್ಳಿ, ಭುವನ ಸರ್ಕಾರಿ ಪ್ರೌಢಶಾಲೆ ಗೌಡನಕಟ್ಟೆ, ಹಿಮಸಿಂಚನ ಠಾಗೂರು ಪ್ರೌಢಶಾಲೆ ತಿಪಟೂರು) ಆಯ್ಕೆಯಾದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಚಾರ್ಯ ಚನ್ನೇಗೌಡ ವಹಿಸಿದ್ದು, ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್, ಜೋತಿಗಣೇಶ್, ನಗರಸಭೆಯ ಅಧ್ಯಕ್ಷ ರಾಮಮೋಹನ್, ಶಿವಾನಂದ್, ಸೊಗಡು ಜನಪದ ಹೆಜ್ಜೆಯ ಗುಂಗುರಮಳೆ ಮುರಳಿಧರ್, ಗುರುಮೂರ್ತಿ, ಆನಂದ್ ಬೆಳಗರಹಳ್ಳಿ ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದ್ದು ಮಕ್ಕಳಿಗೆ ಶಿಕ್ಷಕರನ್ನು ಹುಡುಕಿ ಪ್ರಶ್ನೆ ಕೇಳುವ ಅಭ್ಯಾಸ ಬರಬೇಕು. ಅದು ಈಗ ಗುರುದೇವೋಭವ ಹೋಗಿ, ಗೂಗಲ್ ದೇವೋಭವವಾಗಿದೆ. ಇದನ್ನು ಬಳಸಿಕೊಂಡು ಉತ್ತಮ ಜ್ಞಾನವನ್ನು ಪಡೆದುಕೊಳ್ಳುವಂತಾಗಬೇಕಿದೆ.
- ಸೋಮಶೇಖರ್, ಅಧ್ಯಕ್ಷ, ಚೌಡೇಶ್ವರಿ ಪತ್ತಿನ ಸಹಕಾರ ಸಂಘ