ಜನರ ಬಳಿಗೆ ತೆರಳಿ ಅಧಿಕಾರ ಪಡೆಯಬೇಕು ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿ.

dks-tipatur-congress, ಜನರ ಬಳಿಗೆ ತೆರಳಿ ಅಧಿಕಾರ ಪಡೆಯಬೇಕು ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿ.

ಜನರ ಬಳಿಗೆ ತೆರಳಿ ಅಧಿಕಾರ ಪಡೆಯಬೇಕು ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿ.

ಜನರ ಬಳಿಗೆ ತೆರಳಿ ಅಧಿಕಾರ ಪಡೆಯಬೇಕು
ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿ.


ತಿಪಟೂರು: ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕಾರಕ್ಕೆ ತರಬೇಕೆಂದು ಜನರೇ ತೀರ್ಮಾಸಿದ್ದು, ಜನರ ಬಳಿಗೆ ತೆರಳುವ ಕೆಲಸವನ್ನು ನಾವು ಮಾಡಿ ಅಧಿಕಾರ ಪಡೆದುಕೊಳ್ಳಬೇಕಿದೆ ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.


ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಹಾಗೂ ಮೇಕೆದಾಟು ಪಾದಯಾತ್ರೆಯ ಜನ ಜಾಗೃತಿಗಾಗಿ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡುವ ಸಲುವಾಗಿ ತಿಪಟೂರಿಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಾಂಗ್ರೆಸ್ ಪಕ್ಷವು ಇತಿಹಾಸವನ್ನು ಹೊಂದಿರುವ ಪಕ್ಷವಾಗಿದ್ದು, ಮೊದಲು ನಾವೆಲ್ಲರೂ ಪಕ್ಷದ ಕಾರ್ಯಕರ್ತರು ಎಂಬುದನ್ನು ಮರೆಯಬಾರದು. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನರೇ ನಿರ್ಧಾರ ಮಾಡಿದ್ದಾರೆ. ಅದರ ಸದ್ಬಳಕೆ, ಅಭಿವೃದ್ಧಿ ಕಾರ್ಯಗಳ ಯೋಜನೆ, ಜನರ ನಂಬಿಕೆ, ವಿಶ್ವಾಸವನ್ನು ಗಳಿಸುವ ಕೆಲಸ ನಮ್ಮಿಂದ ಆಗಬೇಕಿದೆ. ಪಕ್ಷದ ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದ್ದು ಪಕ್ಷದ ಬಲವರ್ಧನೆಗಾಗಿ 12 ವರ್ಷಗಳ ನಂತರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅದರಲ್ಲಿಯೂ ಡಿಜಿಟಲ್ ಸದಸ್ಯತ್ವ ನೊಂದಣಿಗೆ ಪ್ರಥಮ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಬೂತ್ ಮಟ್ಟದಲ್ಲಿ 2-3 ಆಯ್ಕೆ ಮಾಡಿ ಸದಸ್ಯತ್ವ ನೊಂದಣಿಗೆ ಶೀಘವೇ ಮುಂದಾಗಬೇಕು. ಜನರ ಬಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಕಾರ್ಯ, ಸಾಧನೆ, ಇತಿಹಾಸವನ್ನು ಮನಮುಟ್ಟುವಂತೆ ತಿಳಿಸಿ ನೊಂದಣಿಗೆ ಮುಂದಾಗಬೇಕು ಎಂದರು.


ಮೇಟೆದಾಟು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಬೆಂಗಳೂರಿಗರಿಗೆ ನೀರು ಒದಗಿಸುವ ಸಲುವಾಗಿ ಯೋಜನೆ ರೂಪಿಸಿದ್ದು ಅದರ ಅನುಷ್ಠಾನಕ್ಕಾಗಿ ಹೋರಾಟಕ್ಕೆ ಮುಂದಾಗಿದ್ದೇವೆ. ನಾಡು, ನುಡಿ, ಜಲದ ವಿಚಾರದಲ್ಲಿ ಪಕ್ಷದ ತಾರತಮ್ಯ ಮಾಡದೇ ಎಲ್ಲರೂ ಒಗ್ಗಟ್ಟಾಗಿ ಬಂದು ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಗಬೇಕಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು ಅವುಗಳಲ್ಲಿ 5 ಲಕ್ಷ ಮಂದಿ ಸದಸ್ಯರ ನೊಂದಣಿ ಕಾರ್ಯವು ಮಾರ್ಚ್ ಅಂತ್ಯದ ವೇಳೆಗೆ ಮುಗಿಯಬೇಕಿದೆ. ತಿಟಪೂರು ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಸದಸ್ಯತ್ವ ನೋಂದಣಿಯಾಗಬೇಕಿದೆ. ಅತೀ ಹೆಚ್ಚು ನೊಂದಣಿ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಬಹುಮಾನ ನೀಡಲಾಗುವುದು. ತಾಲ್ಲೂಕಿನ ನೊಂದಣಿಯನ್ನು ಪರಿಶೀಲಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಗರ ಅಧ್ಯಕ್ಷರಿಗೆ ತ್ವರಿತ ನೊಂದಣಿಗೆ ತಾಕೀತು ಮಾಡಿದರು. ಶ್ರಮ ಪಟ್ಟರೆ ಮಾತ್ರವೇ ಪ್ರತಿಫಲ, ಇಲ್ಲದಿದ್ದರೆ ಸಾಧ್ಯವಿಲ್ಲ ಎಂಬ ಖಡಕ್ ಸಂದೇಶವನ್ನು ಕಾರ್ಯಕರ್ತರು, ಮುಖಂಡರಿಗೆ ರವಾನಿಸಿದರು.


ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ, ಕಾಂಗ್ರೆಸ್ ಸದಸ್ಯತ್ವದ ಪ್ರಾಮುಖ್ಯತೆ ಏನೆಂದರೆ ಸ್ವಾತಂತ್ರö್ಯ ತಂದು ಕೊಡುವ ಜೊತೆಗೆ ಭಾರತೀಯನಿಗೆ ಸಮಾನತೆ ಹಕ್ಕು ಸಿಗಬೇಕು, ಸಮಾಧಾನವಿರಬೇಕು ಎಂಬ ಚಿಂತನೆ ಹೊಂದಿ ಜಾರಿಗೆ ತಂದಿದೆ. ಸ್ವಾತಂತ್ರö್ಯಕ್ಕಾಗಿ ಅನೇಕರು ಪ್ರಾಣ ತೆತ್ತಿದ್ದಾರೆ. ಇಂದಿನ ದಿನಗಳಲ್ಲಿ ಅನೇಕರು ಕಾಂಗ್ರೆಸ್ ಬಗ್ಗೆ ಟೀಕೆ ಟಿಪ್ಪಣಿ ಮಾಡಿದರೂ ದೇಶ, ಜನರ ಉಳಿವಿಗಾಗಿ ಕಾಂಗ್ರೆಸ್ ಶ್ರಮಿಸುತ್ತಾ ಬಂದಿದೆ. ಭಾರತವನ್ನು ಕಾಂಗ್ರೆಸ್ ಒಗ್ಗೂಡಿಸದಿದ್ದರೆ ನಮ್ಮ ದೇಶವೇ ರಚನೆ ಆಗುತ್ತಿರಲಿಲ್ಲ, ಕಾಂಗ್ರೆಸ್ ಪಕ್ಷದ ಬಗ್ಗೆ ಯಾರೇ ಟೀಕೆ, ಟಿಪ್ಪಣಿ ಮಾಡಿದರೂ ಒಂದು ದೇಶ, ಒಂದು ರಾಷ್ಟç ಎಂಬ ವಿವಿಧತೆಯಲ್ಲಿ ಏಕತೆಯನ್ನು ತರುಲು ಕಾಂಗ್ರೆಸ್ ಕಾರಣವಾಗಿದೆ. ಅದ್ದರಿಂದ ಐತಿಹಾಸಿಕ ಪಕ್ಷದ ನೊಂದಣಿ ಪಡೆಯುವುದೇ ಹೆಮ್ಮೆಯ ಸಂಗತಿ ಎಂದರು.


ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಿವೃತ್ತ ಎಸಿಪಿ ಲೋಕೇಶ್ವರ ತಮ್ಮ ತಾಲ್ಲೂಕು ಮಟ್ಟದ ಚುನಾಯಿತಿ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರೊಂದಿಗೆ ರಾಜ್ಯ ಘಟಕದ ಅಧ್ಯಕ್ಷ ಡಿಕೆಶಿ ಉಪಸ್ಥಿತಿ ಸಾರಥ್ಯದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಮಾಜಿ ಶಾಸಕ ಟಿ.ಬಿ. ಜಯಚಂದ್ರ, ರಫೀಕ್ ಅಹಮದ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಕಾಂಗ್ರೆಸ್ ವಕ್ತಾರ ಮುರುಳೀಧರ್ ಹಾಲಪ್ಪ, ಮಾಜಿ ಶಾಸಕ ಕೆ. ಷಡಕ್ಷರಿ, ಕೆಪಿಸಿಸಿ ಸದಸ್ಯ ಯೋಗೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ಕಾಂತರಾಜು, ನಗರ ಘಟಕದ ಅಧ್ಯಕ್ಷ ಟಿ.ಎನ್. ಪ್ರಕಾಶ್, ನಿವೃತ್ತ ಎಸಿಪಿ ಲೋಕೇಶ್ವರ, ಮುಖಂಡ ಕೆ.ಟಿ. ಶಾಂತಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ವೇದಿಕೆಯಲ್ಲಿ ಗರಂ ಆದ ಕೆ. ಷಡಕ್ಷರಿ


ಕಾರ್ಯಕ್ರಮ ಪ್ರಾರಂಭದಲ್ಲಿ ತಿಪಟೂರಿನ ಮಾಜಿ ಶಾಸಕ ಕೆ. ಷಡಕ್ಷರಿ ಸ್ವಾಗತ ಮಾಡುವಾಗ ಲೋಕೇಶ್ವರ, ಕೆ.ಟಿ. ಶಾಂತಕುಮಾರ್ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಜನರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುವ ಮೂಲಕ ಸಂಭ್ರಮಿಸಿದರು. ಇದಕ್ಕೆ ಗರಂ ಆದ ಅವರು ಕಾಂಗ್ರೆಸ್ ಪಕ್ಷ ಶಿಸ್ತಿಗೆ ಹೆಸರಾದ ಪಕ್ಷ. ಇಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲ. 40 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದೂ ಈ ರೀತಿ ವರ್ತಿಸಿಲ್ಲ ಎಂದು ಪರೋಕ್ಷವಾಗಿ ಬೇಸರ ಹೊರಹಾಕಿದರು.

ಬಣಗಳ ಮಾತೇ ಇಲ್ಲ. ಓನ್ಲಿ ಕಾಂಗ್ರೆಸ್ ಬಣ ಅಷ್ಟೆ: ಡಿ.ಕೆ.ಶಿವಕುಮಾರ್


ತುರುವೇಕೆರೆ: ನಮ್ಮಲ್ಲಿ ಯಾವುದೇ ಬಣಗಳ ಮಾತೇ ಇಲ್ಲ. ಓನ್ಲಿ ಕಾಂಗ್ರೆಸ್ ಬಣ ಅಷ್ಟೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.


ತಿಪಟೂರಿನ ಪಕ್ಷದ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ತಾಲೂಕಿನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನೀಡಿದ ಸತ್ಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ ತುರುವೇಕೆರೆ ಕಾಂಗ್ರೆಸ್‌ನಲ್ಲಿ ಬಣಗಳು ಇವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಎಲ್ಲವನ್ನೂ ಒಂದು ಮಾಡ್ತೀವಿ. ಅದು ಕಾಂಗ್ರೆಸ್ ಬಣ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. 


ತಿಪಟೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಿದೆ. ಅಲ್ಲಿ ಇದೇ 27 ರಿಂದ ಪುನರಾರಂಭಗೊಳ್ಳಲಿರುವ ಮೇಕೆದಾಟು ನೀರಿಗಾಗಿ ಪಾದಯಾತ್ರೆ ಸಂಬAಧ ಚರ್ಚೆ ನಡೆಯಲಿದೆ. ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.


ಮುಂದಿನ ಮುಖ್ಯಮಂತ್ರಿ – ಡಿ.ಕೆ. ಶಿವಕುಮಾರ್ ಕಾರಿನಿಂದ ಇಳಿಯುತ್ತಿದ್ದಂತೆ ಕೆಲವು ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಘೋಷಣೆ ಕೂಗಿದರು. ಕೆಲ ನಿಮಿಷಗಳು ಘೋಷಣೆ ಮುಂದುವರೆಯುತ್ತಿದ್ದAತೆ ಡಿ.ಕೆ. ಶಿವಕುಮಾರ್ ಕೈಯನ್ನು ಮೆಲಕ್ಕೆತ್ತಿ ಹೀಗೆ ಕೂಗಬಾರೆಂಬAತೆ ಸನ್ನೆ ಮಾಡಿದರು. ಎಚ್ಚೆತ್ತುಕೊಂಡ ಕಾರ್ಯಕರ್ತರು ಘೋಷಣೆ ಕೂಗುವುದನ್ನು ನಿಲ್ಲಿಸಿದರು.


ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಎಂ.ಡಿ. ಲಕ್ಷಿö್ಮÃನಾರಾಯಣ್, ಕಾಂಗ್ರೆಸ್‌ನ ಹಿರಿಯ ಮುಖಂಡ ಚೌದ್ರಿ ರಂಗಪ್ಪ, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಹೆಚ್.ಕೆ. ನಾಗೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್. ಜಯರಾಮ್, ಬೆಸ್ಕಾಂನ ಮಾಜಿ ನಿರ್ದೇಶಕ ಬಿ.ಎಸ್. ವಸಂತಕುಮಾರ್, ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಟಿ.ಎನ್. ಶಿವರಾಜ್, ಬುಗುಡನಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಸಾಮಾಜಿಕ ತಾಣ ಸಂಚಾಲಕ ದಬ್ಬೇಘಟ್ಟ ವೇಣುಗೋಪಾಲ್, ತಾಲೂಕು ಅಧ್ಯಕ್ಷ ಕೀರ್ತಿರಾಜ್, ಸ್ವರ್ಣಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಇದ್ದರು.