ಜಗತ್ತಿನಲ್ಲಿ ಗಾಂಧಿಯವರನ್ನು ತಿಳಿಯದವರಿಲ್ಲ: ಡಿಸಿ ವೈ.ಎಸ್. ಪಾಟೀಲ

ಜಗತ್ತಿನಲ್ಲಿ ಗಾಂಧಿಯವರನ್ನು ತಿಳಿಯದವರಿಲ್ಲ: ಡಿಸಿ ವೈ.ಎಸ್. ಪಾಟೀಲ


ಜಗತ್ತಿನಲ್ಲಿ ಗಾಂಧಿಯವರನ್ನು ತಿಳಿಯದವರಿಲ್ಲ: ಡಿಸಿ ವೈ.ಎಸ್. ಪಾಟೀಲ

ತುಮಕೂರು : ಸತ್ಯ, ಅಹಿಂಸೆ, ಸರಳಜೀವನ, ಮಾನವೀಯತೆಯನ್ನು ಜೀವನ ಮಂತ್ರವಾಗಿಸಿಕೊAಡಿದ್ದ ಮಹಾತ್ಮ ಗಾಂಧೀಜಿಯವರ ಬಗ್ಗೆ ತಿಳಿಯದವರು ಈ ಜಗತ್ತಿನಲ್ಲಿ ಯಾರೂ ಇಲ್ಲವೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿçÃಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿಯವರದು ಎಲ್ಲರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವ.  ಗಾಂಧಿಯನ್ನು ವಿರೋಧಿಸುತ್ತಿದ್ದ ಪಾಶ್ಚಿಮಾತ್ಯರೇ ಗಾಂಧೀಜಿಯವರ ಬಗ್ಗೆ ಬರೆದಿರುವ ಕೃತಿಗಳು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೆöÊನ್ ತಮ್ಮ ಕೃತಿಯಲ್ಲಿ ಮುಂದೊAದು ದಿನ ಗಾಂಧಿಯAತಹ ಆದರ್ಶ ವ್ಯಕ್ತಿ ಈ ಭೂಮಿ ಮೇಲೆ ಜನಿಸಿ ಪಾರದರ್ಶಕತೆ, ಪ್ರಾಮಾಣಿಕತೆ, ಸತ್ಯ, ಅಹಿಂಸೆ ಮಾರ್ಗದಲ್ಲಿಯೇ ನಡೆದಾಡಿದ್ರಾ? ಎಂಬ ಪ್ರಶ್ನೆ ಜನರಲ್ಲಿ ಮೂಡುವ ಸಾಧ್ಯತೆ ಬರಬಹುದೆಂದು ಉಲ್ಲೇಖಿಸಿದ್ದಾರೆ. ಇದರಿಂದ ಗಾಂಧಿಯವರು ತಮ್ಮ ಉತ್ತಮ ಧ್ಯೇಯೋದ್ದೇಶಗಳಿಂದ ಎಲ್ಲರ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂದು ತಿಳಿಯುತ್ತದೆ ಎಂದು ಹೇಳಿದರು.
ಗಾಂಧೀಜಿಯವರ ವೈಯಕ್ತಿಕ ಹಾಗು ಸಾರ್ವಜನಿಕ ಜೀವನ ಸಂಪೂರ್ಣವಾಗಿ ಪಾರದರ್ಶಕತೆಯಿಂದ ಕೂಡಿತ್ತು. ಪಾರದರ್ಶಕತೆಯಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದೆಂದು ಅವರು ಮನಗಂಡಿದ್ದರು. ಪಾರದರ್ಶಕತೆಯನ್ನು ತಲುಪುವ ಸಲುವಾಗಿಯೇ ಸರ್ಕಾರ ಎಲ್ಲ ಕಾಯಿದೆ ಕಾನೂನುಗಳನ್ನು ರೂಪಿಸಿದ್ದು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಜನಸಾಮಾನ್ಯರೆಲ್ಲರೂ ತಮ್ಮ ಜೀವನದಲ್ಲಿ ಪಾರದರ್ಶಕತೆಯನ್ನು ರೂಢಿಸಿಕೊಳ್ಳಬೇಕೆಂದರು.
ಅತ್ಯAತ ಸರಳ ಜೀವನ ಹಾಗೂ ಉತ್ತಮ ಚಿಂತನೆ ಗಾಂಧೀಜಿಯವರ ಮತ್ತೊಂದು ವಿಶೇಷ. ಬದುಕನ್ನು ಸುಂದರವಾಗಿಸಿಕೊಳ್ಳಲು ಸರಳತೆ ಇರಬೇಕು.  ನಮ್ಮ ಮುಂದಿನ ಪೀಳಿಗೆಗೂ ಸರಳತೆ ಹಾಗೂ ಉತ್ತಮ ಚಿಂತನೆಯ ಶ್ರೇಷ್ಟತೆ ಬಗ್ಗೆ ತಿಳಿಸಬೇಕು. ಖಾದಿ ಧರಿಸಿದ ಕೂಡಲೇ ಗಾಂಧಿ ಆದರ್ಶಗಳನ್ನು ರೂಢಿಸಿಕೊಂಡAತಾಗುವುದಿಲ್ಲ. ಅವರ ತತ್ವಾದರ್ಶಗಳನ್ನು ಪಾಲಿಸಿದಾಗ ಮಾತ್ರ ಗಾಂಧೀಜಿಯವರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದು ತಿಳಿಸಿದರು.
ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣಗಳಿಲ್ಲದ ಕಾಲದಲ್ಲಿಯೂ ಗಾಂಧೀಜಿಯವರ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸೇರುತ್ತಿದ್ದರು. ಇವರ ಶಿಸ್ತಿನ ಬದುಕಿನಿಂದ ಅಂತರಾಷ್ಟಿçÃಯ ಮಟ್ಟದಲ್ಲೂ ಪ್ರಖ್ಯಾತಿ ಹೊಂದಿದ್ದರು. ಗಾಂಧೀಜಿಯವರ ಆತ್ಮಚರಿತ್ರೆ, ಗಾಂಧೀಯವರ ಬಗ್ಗೆ ಬರೆದಿರುವ ಕೃತಿಗಳನ್ನು ಓದಿ ಅವರ ಬದುಕಿನಾದರ್ಶಗಳನ್ನು ಅರಿತು ಶ್ರೇಷ್ಠ ವ್ಯಕ್ತಿಗಳಾಗಬೇಕೆಂದರು.
ಆದರ್ಶಪ್ರಾಯರಾಗಿದ್ದ ಮತ್ತೊಬ್ಬ ಮಹನೀಯ ಲಾಲ್ ಬಹಾದ್ದೂರ್ ಶಾಸ್ತಿçÃಜಿ ಅವರನ್ನು ಸ್ಮರಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಅಧಿಕಾರವಿದ್ದರೂ ಪ್ರಾಮಾಣಿಕವಾಗಿ ಹೇಗೆ ಅಧಿಕಾರ ಚಲಾಯಿಸಬೇಕು? ಅಧಿಕಾರಿಯ ಜವಾಬ್ದಾರಿಗಳೇನು? ಜನಪರವಾಗಿ ಹೇಗೆ ಕೆಲಸ ಮಾಡಬಹುದೆಂಬುದನ್ನು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ಗಾಂಧಿ ಜಯಂತಿ ಆಚರಣೆ ದಿನ ವಿಶ್ವದ ಅತ್ಯಂತ ಶ್ರೇಷ್ಟದಿನ. ಗಾಂಧೀಜಿಯವರು ಸತ್ಯದ ಪ್ರತೀಕ. ಸತ್ಯ ನಿರಂತರ. ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಪ್ರತಿಪಾದನೆಯಾಗಿತ್ತು. ಬಲಿಷ್ಟರಾದ ಬ್ರಿಟೀಷರನ್ನು ಹೊಡೆದೋಡಿಸಿ ಸತ್ಯ ಮತ್ತು ಅಹಿಂಸೆಯಿAದ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟರೆAದು ಪಠ್ಯಗಳಿಂದ ತಿಳಿದಿದ್ದೇವೆ.  ಕತ್ತಿ, ಖಡ್ಗಗಳಿಂದ ಹೋರಾಟ ಮಾಡುವುದು ಸುಲಭ.  ಆದರೆ ಸತ್ಯ ಮತ್ತು ಅಹಿಂಸೆಯೆAಬ ಆಯುಧಗಳಿಂದ ಹೋರಾಡಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟಿರುವುದು ಸುಲಭದ ಮಾತಲ್ಲ ಎಂದರಲ್ಲದೆ, ಅವರನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ, ಬದುಕಿನ ಸಂದೇಶ, ಮಾನವೀಯತೆ ಬಗ್ಗೆ ತಿಳಿಯಬಹುದು ಎಂದು ತಿಳಿಸಿದರು.
ಸರ್ವಶ್ರೇಷ್ಠ ವ್ಯಕ್ತಿ ಗಾಂಧೀಜಿಯವರ ಬಗ್ಗೆ ಪಾಶ್ಚಿಮಾತ್ಯರು ಹೆಚ್ಚು ಕೃತಿಗಳನ್ನು ಬರೆದಿರುವುದು ಹೆಮ್ಮೆಯ ಸಂಗತಿ. ಇತ್ತೀಚಿನ ಕೃತಿ ‘ಗಾಂಧಿ ಕಥನ’ವನ್ನು ಓದಬೇಕು. ಇದರಿಂದ ಶಾಂತಿ, ನೆಮ್ಮದಿ, ಮನಸಿಗೆ ಹಿತವಾದ ಅನುಭವ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಲಲಿತಾಚಲಂ ಮತ್ತು ಸಂಗಡಿಗರಿAದ ಗಾಂಧೀಜಿಯವರಿಗೆ ಪ್ರಿಯವಾದ ‘ವೈಷ್ಣವ ಜನತೋ ತೇನೇ ಕಹಿಯೇ’ ಹಾಗೂ ‘ರಘುಪತಿ ರಾಘವ ರಾಜಾರಾಂ’, ಸರ್ವಧರ್ಮ ಪ್ರಾರ್ಥನೆಗಳಾದ ‘ಓಂ ತತ್ಸಶ್ರೀ ನಾರಾಯಣ ನೀ-ಪುರುಷೋತ್ತಮ ನೀ’, ‘ಭಜಮನ ರಾಮ್’, ರಾಮ ನಾಮವ ನುಡಿ ನುಡಿ-ಕಾಮ ಕ್ರೋಧಗಳ ಬಿಡಿ ಬಿಡಿ ಭಜನೆಗಳನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ನಿರ್ಮಿತಿ ಕೇಂದ್ರದ ರಾಜಶೇಖರ್, ತಹಶೀಲ್ದಾರ್ ಮೋಹನ್‌ಕುಮಾರ್ ಇದ್ದರು.