ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಆದ್ಯ ಕರ್ತವ್ಯ: ತಹಸೀಲ್ದಾರ್ ಮಹಾಬಲೇಶ್ವರ್

ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ
ಆದ್ಯ ಕರ್ತವ್ಯ: ತಹಸೀಲ್ದಾರ್ ಮಹಾಬಲೇಶ್ವರ್
ಕುಣಿಗಲ್: ಕನ್ನಡಿಗರಾದ ನಾವು ಅನೇಕ ಅನ್ಯ ಭಾಷೆಗಳ ಪ್ರಭಾವಕ್ಕೊಳಗಾಗಿ ಭಾಷೆಗಳ ಪದಗಳನ್ನ ಬಳಸುವುದು ಸಹಜವಾಗಿಯೇ ಕಡಿಮೆಯಾಗುತ್ತಿದೆ, ಕನ್ನಡವನ್ನ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಮಹಾಬಲೇಶ್ವರ್ ತಿಳಿಸಿದರು.
ಗುರುವಾರ ಮಹಾತ್ಮಗಾಂಧಿ ಕಾಲೇಜು ಆವರಣದಲ್ಲಿ ನ. 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ಅ. 28 ರಂದು ಕನ್ನಡದ ಶ್ರೇಷ್ಟತೆ ಸಾರುವ ಸಲುವಾಗಿ ಮತ್ತು ಮಕ್ಕಳಿಗೆ ಕನ್ನಡವನ್ನ ಹೆಚ್ಚು ಹೆಚ್ಚು ಬಳಸುವ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಕುವೆಂಪು ಅವರ ಭಾರಿಸು ಕನ್ನಡ ಡಿಂಡಿಮವ, ಡಾ|| ಕೆ.ಎಸ್. ನಿಸಾರ್ ಅಹಮ್ಮದ್‌ರವರ ಜೋಗದ ಸಿರಿ ಬೆಳೆಕಿನಲ್ಲಿ, ಹಂಸಲೇಖರವರ ಹುಟ್ಟಿದರೇ ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಗೀತೆಯನ್ನು ಹಾಡಲು ನಿರ್ದೇಶಿಸಿರುವುದರಿಂದ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ನೂರಾರು ವಿದ್ಯಾರ್ಥಿಗಳನ್ನೊಳಗೂಡಿ ಹಾಡಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನವನ್ನ ಕೈಗೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬಿ.ಇ.ಒ. ತಿಮ್ಮರಾಜು, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ಇ.ಸಿ.ಒ. ಧನಂಜಯ, ಮಹಾತ್ಮಗಾಂಧಿ ಶಾಲಾ ಮುಖ್ಯೋಪಧ್ಯಾಯರಾದ ಸೋಮಶೇಖರ್, ಗೋಪಾಲಕೃಷ್ಣ, ಅಬಕಾರಿ ಇಲಾಖೆ, ಪುರಸಭಾ ಇಂಜಿನಿಯರ್ ಮಮತಾ, ಕಾಲೇಜು ಹಾಗೂ ಪ್ರೌಢಶಾಲಾ ಸಿಬ್ಬಂದಿ ಭಾಗವಹಿಸಿದ್ದರು.