ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ಗೀತೆಗಳ ಗಾಯನ

ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ಗೀತೆಗಳ ಗಾಯನ


ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ಗೀತೆಗಳ ಗಾಯನ


ಚಿಕ್ಕನಾಯಕನಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಲಹೆಯ ಮೇರೆಗೆ ಕನ್ನಡದ ಅಭಿಮಾನವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ತೀನಂಶ್ರೀ ಭವನದಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. 
ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಸಾಮೂಹಿಕವಾಗಿ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡುಗಳನ್ನು ಹರ‍್ಮೋನಿಯಂ ಗಂಗಾಧರ್ ನೇತೃತ್ವದಲ್ಲಿ ವೀಣಾ, ಪದ್ಮ, ನಾಗಮಣಿ, ರಮ್ಯ, ಶಾಂತಮ್ಮ, ಚಂದ್ರಕಲಾ, ಲೋಕೇಶ್, ನವೀನ್ ಹಾಡಿದರು. ಇದಕ್ಕೆ ತಹಸೀಲ್ದಾರ್ ತೇಜಸ್ವಿನಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಹಂಸವಿ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಹಾಗು ಸಭಿಕರು ಧ್ವನಿ ಸೇರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ಪ್ರತಿಜ್ಞಾ ವಿಧಿ ಬೋಧಿಸಿದರು. ಇಓ ವಸಂತ್ ಕುಮಾರ್, ಅಬಕಾರಿ ಸಿಪಿಐ ಗಂಗರಾಜು, ವಲಯ ಅರಣ್ಯಧಿಕಾರಿ ಸುನೀಲ್, ಮುಖಂಡ ಕೃಷ್ಣೇಗೌಡ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ಹೆಜ್ಜೆ ಹಾಕಿದರು. ಕನ್ನಡ ಸಂಘದ ಅಧ್ಯಕ್ಷ ರೇಣುಕಸ್ವಾಮಿ, ನಿಶಾನಿ ಕಿರಣ್, ಪಿಡಬ್ಲೂಡಿ ಎಇಇ ಚಂದ್ರಶೇಖರ್, ಸೋಮಶೇಖರ್, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿದ್ದರು.