`ನಮ್ಮ ಶಾಲೆ-ನಮ್ಮ ಕೊಡುಗೆ' ಆ್ಯಪ್ ಬಿಡುಗಡೆ: ಸಚಿವ ಬಿ.ಸಿ.ನಾಗೇಶ್

`ನಮ್ಮ ಶಾಲೆ-ನಮ್ಮ ಕೊಡುಗೆ' ಆ್ಯಪ್ ಬಿಡುಗಡೆ: ಸಚಿವ ಬಿ.ಸಿ.ನಾಗೇಶ್

`ನಮ್ಮ ಶಾಲೆ-ನಮ್ಮ ಕೊಡುಗೆ' ಆ್ಯಪ್ ಬಿಡುಗಡೆ: ಸಚಿವ ಬಿ.ಸಿ.ನಾಗೇಶ್


`ನಮ್ಮ ಶಾಲೆ-ನಮ್ಮ ಕೊಡುಗೆ' ಆ್ಯಪ್ ಬಿಡುಗಡೆ: ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಯಾವುದೇ ದಾನಿಗಳು ಅಥವಾ ಸಂಸ್ಥೆಗಳು ಹಣವನ್ನು ದೇಣಿಗೆ ನೀಡುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಹಾಯವಾಗುವಂತೆ ಅಬಿವೃದ್ಧಿ ಪಡಿಸಿರುವ `ನಮ್ಮ ಶಾಲೆ-ನಮ್ಮ ಕೊಡುಗೆ'  ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.


ಅವರು ಬುಧವಾರ ಖಾಸಗಿ ಹೋಟೆಲ್ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ 'ನಮ್ಮ ಶಾಲೆ ನನ್ನ ಕೊಡುಗೆ' ಸೊಸೈಟಿ ಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಕುರಿತಾದ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.


ರಾಜ್ಯದಲ್ಲಿ ಒಟ್ಟು 77,000 ಶಾಲೆಗಳಿದ್ದು, ಅವುಗಳಲ್ಲಿ 48,000  ಸರ್ಕಾರಿ ಶಾಲೆಗಳಾಗಿವೆ. ರಾಜ್ಯದಲ್ಲಿ 23 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು  ಸರ್ಕಾರದ ಸವಾಲಾಗಿದೆ ಅಲ್ಲದೆ ಸರ್ಕಾರ ಶಿಕ್ಷಕರ ನೇಮಕಾತಿಗೆ ಸಹ ಒತ್ತು  ನೀಡಿದೆ. ರಾಮನಗರದಲ್ಲಿ ಕಣ್ವದವರು ಅಭಿವೃದ್ಧಿಪಡಿಸಿರುವ ಕರ್ನಾಟಕ ಪಬ್ಲಿಕ್ ಶಾಲೆ ಒಂದು ಮಾದರಿ ಶಾಲೆ ಎನಿಸಿದೆ. ಹೀಗೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅನೇಕ ಶಾಲೆಗಳಿಗೆ  ಕಟ್ಟಡ ಮೂಲಭೂತ ಸೌಕರ್ಯ ಶಿಕ್ಷಕರ ತರಬೇತಿ ಮುಂತಾದವುಗಳನ್ನು  ಕಲ್ಪಿಸಲಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಡಾ.ಆರ್. ವಿಶಾಲ್,  'ನಮ್ಮ ಶಾಲೆ ನಮ್ಮ ಕೊಡುಗೆ' ಆ್ಯಪ್‌ಗೆ ಸದ್ಯದಲ್ಲಿಯೇ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಚಾಲನೆ ನೀಡಲಿದ್ದು ಇದರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಧನ ಕ್ರೂಢೀಕೃತಗೊಂಡು ನಂತರ ವಿನಿಯೋಗಗೊಳ್ಳಲಿದೆ. ಅಷ್ಟೇ ಅಲ್ಲದೆ ಡಿಜಿಟಲ್ ಕಲಿಕೆಗೆ ಸಹ ಪ್ರೋತ್ಸಾಹ ಸಿಗಲಿದೆ ಎಂದರು.


ನAತರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಾರ್ಯದರ್ಶಿಗಳಾದ ಡಾ.ಎಸ್. ಸೆಲ್ವಿಕುಮಾರ್,  ಖಾಸಗಿ ಸಂಸ್ಥೆಗಳು ಸರಿಯಾದ ಕ್ರಮದಲ್ಲಿ ತಮ್ಮಲ್ಲಿರುವ ಅನುದಾನವನ್ನು ಸರಕಾರಿ ಶಾಲೆಗಳಿಗೆ ಉಪಯೋಗಿಸಿದರೆ ಶಾಲೆಯ ಪೂರಕ ಅಭಿವೃದ್ಧಿ ಸಾಧ್ಯ. ಸರ್ಕಾರ ಸಹ ವಿದ್ಯಾರ್ಥಿಗಳ ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್ಗಳಿಗೆ  ಶಿಕ್ಷಣ ನೀಡುತ್ತಿದೆ. ಇನ್ಫೋಸಿಸ್, ಟಾಟಾ ಅಂತಹ ಕಂಪನಿಗಳು ಸಾಕಷ್ಟು ಅನುದಾನ ಒದಗಿಸಿದೆ ಎಂದರು.


ಸಂವಾದದಲ್ಲಿ ಖಾಸಗಿ ಸಂಸ್ಥೆಗಳಾದ ಎಂಬೆಸಿ, ಅಕ್ಷರ, ಅಮೆಜಾನ್ , ಒಸಾಟ್ ಹಾಗೂ ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅನುಭವ ಹಂಚಿಕೊಂಡರು.