ಕೋಲಾರ ನ್ಯೂಸ್- ಬೀದಿ ಬದಿ ವ್ಯಾಪಾರಿಗಳಿಗೆ ಸೌಕರ್ಯ , ಅತಿಥಿ ಉಪನ್ಯಾಸಕರ ಪ್ರತಿಭಟನೆ, ಕ್ರಿಸ್ಮಸ್‌ ಆಚರಣೆ

kolar-news-road-side-vendors-basic-amenities-ashwath-narayan-gowda-pat-time-lecturers-protest-christmas-celebration

ಕೋಲಾರ ನ್ಯೂಸ್- ಬೀದಿ ಬದಿ ವ್ಯಾಪಾರಿಗಳಿಗೆ  ಸೌಕರ್ಯ , ಅತಿಥಿ ಉಪನ್ಯಾಸಕರ ಪ್ರತಿಭಟನೆ, ಕ್ರಿಸ್ಮಸ್‌ ಆಚರಣೆ

ಬೀದಿ ಬದಿ ವ್ಯಾಪಾರಿಗಳ ಸರ್ವೆ ಮಾಡಿ ಜೀವನ 
ಕಟ್ಟಿಕೊಳ್ಳಲು ಸೌಕರ‍್ಯ ಕಲ್ಪಿಸಿ: ಗೋವಿಂದರಾಜು


ಬೀದಿ ಬದಿ ವ್ಯಾಪಾರಿಗಳು ಸಬಲೀಕರಣಕ್ಕೆ ಸರ್ಕಾರ ಬದ್ಧ: ಡಾ.ಅಶ್ವಥ್ ನಾರಾಯಣ

ಕೋಲಾರ: ರಸ್ತೆ ಬದಿ ಮತ್ತು ತಳ್ಳುವ ಗಾಡಿ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಅವರ ಸರ್ವೇ ಮಾಡಿರುವುದು ಇಲಾಖೆ ತಪ್ಪಾಗಿದೆ. ಸರ್ಕಾರ ಕುಲಂಕುಶವಾಗಿ ಪರಿಶೀಲನೆ ನಡೆಸಿಲ್ಲ. ಇನ್ನಾದರು ಸರಿಯಾದ ರೀತಿ ಸರ್ವೇ ಮಾಡಿ ಅರ್ಹರನ್ನು ಗುರುತಿಸಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸೌಕರ್ಯ ಕಲ್ಪಿಸಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಒತ್ತಾಯಿಸಿದರು.


ಬೆಳಗಾವಿಯ ಅಧಿವೇಶನದ ಕಲಾಪದಲ್ಲಿ ಮಾತನಾಡಿದ ಗೋವಿಂದರಾಜು ಅವರು, ರಸ್ತೆ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದರೆ ಸರ್ಕಾರ ಸಮರ್ಪಕವಾದ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಬಡವರ ಬಂದು ಕಾರ್ಯಕ್ರಮವನ್ನು ಯಾಕೆ ಸ್ಪಷ್ಟ ಉತ್ತರ ನೀಡಿಲ್ಲ. ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯ ಸಮರ್ಪಕವಾಗಿ ಇಲ್ಲ ಎಂದು ದೂರಿದರು.


ಸಚಿವ ಡಾ.ಅಶ್ವಥ್ ನಾರಾಯಣ ಮಾತನಾಡಿ, ಸಣ್ಣ ವ್ಯಾಪಾರಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಸರ್ಕಾರ ಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ರಾಜ್ಯದಲ್ಲಿ ಬೀದಿ ವ್ಯಾಪಾರಿಗಳಿಗಾಗಿ ೪೩ ಮಾರುಕಟ್ಟೆಗಳನ್ನು ನಿರ್ಮಿಸಲು ಕ್ರಮಕೈಗೊಂಡಿದ್ದು, ಅದು ಪ್ರಗತಿಯಲ್ಲಿದೆ. ಜೊತೆಗೆ ಕೌಶಲ್ಯ ತರಬೇತಿ ನೀಡಲಾಗಿದೆ. ೧೫ ಕೋಟಿ ವೆಚ್ಚದಲ್ಲಿ ಪ್ರಗತಿ ಕಾರ್ಯ ನಡೆಯುತ್ತಿದೆ. ಸ್ಥಳೀಯ, ನಗರಮಟ್ಟದಲ್ಲಿ ವ್ಯವಸ್ಥಿತವಾಗಿ ಮಾರುಕಟ್ಟೆ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಸಬಲೀಕರಣ ಆಗುತ್ತಿರುವುದು ಕಾಣಲಾಗುತ್ತಿದೆ ಎಂದು ಹೇಳಿದರು.


ಪ್ರತಿ ವ್ಯಾಪಾರಿಗೂ ಸೌಕರ್ಯ ಕಲ್ಪಿಸಲು ೮ ಯೋಜನೆಗಳನ್ನು ವಿಸ್ತರಿಸಲಾಗಿದೆ. ಬ್ಯಾಂಕಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಯಾವ ರೀತಿ ಸಾಲ ಸಿಗುತ್ತಿತ್ತು ಎಂಬುದು ತಿಳಿಸಿದೆ. ಹಿಂದೆ ವ್ಯಾಪಾರಿಗಳು ಖಾಸಗಿ ಬಡ್ಡಿ ಲೇವಾದೇವಿದಾರರಿಂದ ಸಾಲ ಪಡೆಯುತ್ತಿದ್ದರು. ಅವರು ವ್ಯಾಪಾರ ಮಾಡಿದ ಹಣದಲ್ಲಿ ಸಂಜೆ ಬಡ್ಡಿ ಕಟ್ಟಬೇಕಾಗಿತ್ತು. ಆದರೆ ಈಗ ಉತ್ತಮವಾಗಿ ಬಾಳಿ ಬದುಕಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ೧೦ ಸಾವಿರ ಸಾಲ ಕೊಟ್ಟಿರುವುದು ಶೇ.೭ರಷ್ಟು ಬಡ್ಡಿ ದರದಲ್ಲಿ. ಇತರೆ ಚಟುವಟಿಕೆ ನಡೆಸುತ್ತಿರುವವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಅದೇ ರೀತಿ ಇವರಿಗೂ ಬಡ್ಡಿರಹಿತ ಸಾಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಬೀದಿ ಬದಿ ವ್ಯಾಪಾರಿಗಳ ಹಿತ ರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಬಗ್ಗೆ ಸರ್ಕಾರಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಡವರ ಬಂದು ಯೋಜನೆಯಡಿ ಸಾಲ ಕಲ್ಪಿಸಲಾಗುತ್ತಿತ್ತು. ಅದನ್ನು ಮುಂದುವರೆಸಿದೀಯೆ ಎಂದು ಪ್ರಶ್ನಿಸಿದರು.


ಇದಕ್ಕೆ ಉತ್ತರ ನೀಡಿದ ಸಚಿವ ಡಾ.ಅಶ್ವಥ್ ನಾರಾಯಣ, ರಾಜ್ಯ ಸರ್ಕಾರದಿಂದ ೧,೬೦,೦೦೦ ಮಂದಿಗೆ ತಲಾ ೨೦೦೦ ರೂ ನೀಡಲಾಗಿದೆ. ಇದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿ ಜೊತೆಗೆ ಗುರುತಿನ ಚೀಟಿ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇನ್ನು ೮ ಕಾರ್ಯಕ್ರಮಗಳನ್ನು ವ್ಯಾಪಾರಿಗಳ ಅಭಿವೃದ್ಧಿ ವಿಸ್ತರಿಸಲಾಗುತ್ತಿದೆ. ಆತ್ಮ ನಿರ್ಮಲ ನಿಧಿಯಿಂದ ೧೦ ರಿಂದ ೨೦ ಸಾವಿರತನಕ ಸಾಲ ನೀಡಲಾಗುತ್ತಿದೆ ಎಂದರು. 


ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ, ಬಡ್ಡಿ ದರದಲ್ಲಿ ಎಂತಹವರಿಗೂ ಸಾಲ ದೊರೆಯುತ್ತದೆ. ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸುಲಭದ ರೀತಿಯಲ್ಲಿ ದೊರೆಯುವುದಿಲ್ಲ. ಈ ವ್ಯಾಪಾರಿಗಳು ಯಾರ ಹಂಗು ಇಲ್ಲದೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರ ಅವರ ಹಿತಕಾಯಲಯಲು ಮುಂದಾಗಬೇಕು ಎಂದು ಆಗ್ರಹಿಸಿದರು.


ಇಂದು ಅತಿಥಿ ಉಪನ್ಯಾಸಕರ ವಿಶಿಷ್ಟ ಪ್ರತಿಭಟನೆ


ಕೋಲಾರ: ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳು ರಾಜ್ಯಾದ್ಯಂತ ಡಿಸೆಂಬರ್ ೧೦ ರಿಂದ ಸಾಮೂಹಿಕವಾಗಿ ಅನಿರ್ಧಿಷ್ಟಾವಧಿಯವರೆಗೆ ತರಗತಿಗಳನ್ನು ಬಹಿಷ್ಕರಿಸಿ ಬೆಳಗಾವಿಯ ಸುವರ್ಣಸೌಧದ ಮುಂದೆ ಆಹೋರಾತ್ರಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಅದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಕೋಲಾರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಡಿಸೆಂಬರ್ ೨೨ ರಂದು ಬುಧವಾರ ಬೆಳಗ್ಗೆ ೧೦-೩೦ ಗಂಟೆಗ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಯನ್ನು ಶಾಶ್ವತ ನೀರಾವರಿ ಹೋರಾಟ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. 


 ಎಲ್ಲಾ ಅತಿಥಿ ಉಪನ್ಯಾಸಕರು ತಪ್ಪದೇ ಭಾಗವಹಿಸುವಂತೆ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.


ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಸೇವಾ ಭದ್ರತೆ ಮತ್ತು ಖಾಯಂ ಮಾಡುವಂತೆ ಕೋಲಾರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ನೂರ್ ಅಹ್ಮದ್ ರವರು ಒತ್ತಾಯಿಸಿದರು.


 ಗೌರವಾಧ್ಯಕ್ಷ ಡಾ.ಲಕ್ಷಿö್ಮÃನಾರಾಯಣ, ಖಾಯಂ ಮಾಡಬೇಕು. ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು. ಖಾಯಂ ಮಾಡುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದರು. 


ಕ್ರೈಸ್ತರ ರಕ್ಷಣಾ ವೇದಿಕೆಯಿಂದ ಕ್ರಿಸ್ಮಸ್ ಆಚರಣೆ


ಚಿಕ್ಕಬಳ್ಳಾಪರ: ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ವತಿಯಿಂದ ಎರಡನೇ ವಾರ್ಷಿಕೋತ್ಸವದ ಕ್ರಿಸ್ಮಸ್ ಆಚರಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಸುಮಾರು ೪೦ ಜನರಿಗೆ ಆಹಾರದ ಕಿಟ್ಟು ವಿತರಣೆ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರೆವರೆಂಡ್ ಕೆ ಎ ವರ್ಗೀಸ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೈವ ಸಂದೇಶ ನೀಡಿದರು. 


ಕಾರ್ಯಕ್ರಮದಲ್ಲಿ ಕಾರ್ಮಿಕರ ಸಂಘದ ಅಧ್ಯಕ್ಷ ರವಿ ಪ್ರಕಾಶ್,  ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಜಿ. ವಿನ್ಸೆಂಟ್, ಖಜಾಂಜಿ ಜೊಬ್ ಪದಾಧಿಕಾರಿಗಳಾದ ಆನಂದ್ ಕುಮಾರ್, ಕ್ರಿಸ್ಟಫರ್, ವೆಂಕಟೇಶ್, ಮಾರ್ಕ್, ಜೋಸೆಫ್ ಇದ್ದರು.

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಜಿಲ್ಲಾ ಪ್ರವಾಸ


ಕೋಲಾರ:  ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರು ಡಿಸೆಂಬರ್ ೨೨ ರಂದು ಕೋಲಾರ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿರುತ್ತಾರೆ.
 ಅAದು ಬೆಳಿಗ್ಗೆ ೧೦.೦೦ ಗಂಟೆಗೆ ಕೋಲಾರಕ್ಕೆ ಆಗಮಿಸಿ, ೧೦.೩೦ ಗಂಟೆಗೆ ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವರು ಎಂದು ಅವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯಭಾರ ಸ್ವೀಕಾರ


ಕೋಲಾರ:  ಎನ್. ನರೇಂದ್ರ ಬಾಬು ಅವರು ಕೋಲಾರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ವರ್ಗಾವಣೆಯಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಗಮಿತ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್ ಅವರಿಂದ ಡಿಸೆಂಬರ್ ೨೦ ರಂದು ಅಪರಾಹ್ನ ಕಾರ್ಯಭಾರವನ್ನು ಸ್ವೀಕರಿಸಿರುತ್ತಾರೆ.