ಅತಿವೃಷ್ಠಿ ಬೆಳೆಹಾನಿಗೆ 969 ಕೋಟಿ ರೂ. ಪರಿಹಾರ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿದೆ: ಹುಲಿನಾಯ್ಕರ್

hulinaykar-help-to-boost-economy-by-bjp-government

ಅತಿವೃಷ್ಠಿ ಬೆಳೆಹಾನಿಗೆ 969 ಕೋಟಿ ರೂ. ಪರಿಹಾರ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿದೆ: ಹುಲಿನಾಯ್ಕರ್


ಅತಿವೃಷ್ಠಿ ಬೆಳೆಹಾನಿಗೆ 969 ಕೋಟಿ ರೂ. ಪರಿಹಾರ
ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿದೆ: ಹುಲಿನಾಯ್ಕರ್


ತುಮಕೂರು: ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಅತಿವೃಷ್ಟಿಯಿಂದ ಬೆಳೆಹಾನಿ ಸಂಭವಿಸಿ, ಅತಿವೃಷ್ಠಿಯನ್ನು ನಿಭಾಯಿಸುವ ನಿಟ್ಟಿನಲ್ಲಿ 10 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟವಾಗಿದ್ದು, 969 ಕೋಟಿ ರೂ.ಗಳ ಪರಿಹಾರ ನೀಡಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಡಾ. ಎಂ.ಆರ್. ಹುಲಿನಾಯ್ಕರ್ ತಿಳಿಸಿದ್ದಾರೆ.


ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಣಬೇಸಾಯ, ತೋಟಗಾರಿಕೆ ಮತ್ತು ನೀರಾವರಿಯಲ್ಲಿ ಬೆಳೆದಿರುವ ಬೆಳೆಗಳಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಇದರಿಂದ ಸರಕಾರದ ಮೇಲೆ 1200 ಕೋಟಿ ರೂ.ಗಳ ಹೆಚ್ಚಿನ ಅರ್ಥಿಕ ಹೊರೆ ಬೀಳಲಿದೆ ಎಂದು ಡಾ. ಹುಲಿನಾಯ್ಕರ್ ನುಡಿದರು.

ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲಕ್ಕಾಗಿ ರಾಜ್ಯದ ಬಿಜೆಪಿ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದ ಅವರು, ಒಂದು ಹೆಕ್ಟೇರ್‌ಗೆ ಎನ್.ಡಿ.ಆರ್.ಎಫ್.ನಿಂದ ನೀಡುವಷ್ಟೇ ಪರಿಹಾರದ ಹಣವನ್ನು ರಾಜ್ಯ ಸರಕಾರವೂ ನೀಡುವ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದೆ ಎಂದರು.


ಒಣಬೇಸಾಯದಲ್ಲಿ ಎನ್.ಡಿ.ಆರ್.ಎಫ್.ನಿಂದ ಹೆಕ್ಟೇರ್‌ಗೆ 6800 ರೂ.ಗಳ ಪರಿಹಾರ ನೀಡಲು ಮಾತ್ರ ಅವಕಾಶವಿದೆ. ರಾಜ್ಯ ಸರಕಾರ ಕೇಂದ್ರ ನೀಡುವ ಹಣಕ್ಕೆ ಸರಿಸಮನಾಗಿ ಪ್ರತಿ ಹೆಕ್ಟೇರ್‌ಗೆ 6800 ರೂ.ಗಳನ್ನು ನೀಡುವ ಮೂಲಕ ರೈತರಿಗೆ ಒಂದು ಹೆಕ್ಟೇರ್‌ಗೆ 13600 ರೂ.ಗಳು ದೊರೆಯುವಂತೆ ಮಾಡುತ್ತಿದೆ. ಇದರ ಜೊತೆಗೆ 12.69 ಲಕ್ಷ÷ಹೆಕ್ಟೇರ್ ನೀರಾವರಿ ಪ್ರದೇಶದ ಬೆಳೆಗೆ ಕೇಂದ್ರದ 13500 ರೂ.ಗಳ ಜೊತೆಗೆ, ರಾಜ್ಯ ಸರಕಾರ 11500 ರೂ.ಗಳು ಸೇರಿಸಿ ಹೆಕ್ಟೇರ್‌ಗೆ 25 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ತೋಟಗಾರಿಕಾ ಬೆಳೆಗಳಿಗೆ ಕೇಂದ್ರದ 18000 ರೂ. ಪರಿಹಾರದ ಜೊತೆಗೆ, ರಾಜ್ಯ ಸರಕಾರ 10 ಸಾವಿರ ರೂ.ಗಳನ್ನು ನೀಡಿ, ರೈತರಿಗೆ ಒಂದು ಹೆಕ್ಟೇರ್‌ಗೆ 28 ಸಾವಿರ ರೂ.ಗಳು ದೊರೆಯುವಂತೆ ಮಾಡಿದೆ. ಇದರಿಂದ ಕೈಗೆ ಬಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.


ಕೋವಿಡ್‌ನಿAದ ರಾಜ್ಯದ ಹಣಕಾಸು ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಆದರೂ ದೇಶದ ಬೆನ್ನೆಲುಬಾಗಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಒಟ್ಟು 1200 ಕೋಟಿ ರೂ.ಗಳ ಪರಿಹಾರವನ್ನು ವಿತರಿಸಲು ಮುಂದಾಗಿದೆ. ಈ ಸಂಬAಧ ಶೀಘ್ರವೇ ಸರಕಾರಿ ಆದೇಶ ಹೊರಡಲಿದ್ದು, ನೇರವಾಗಿ ರೈತರ ಖಾತೆಗಳಿಗೆ ಪರಿಹಾರದ ಹಣ ಜಮಾವಣೆಯಾಗಲಿದೆ ಎಂದು ಡಾ. ಹುಲಿನಾಯ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಕೊಪ್ಪಲ್ ನಾಗರಾಜು, ಶಿವಕುಮಾರ್, ಜಗನ್ನಾಥ್ ಇದ್ದರು.


ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಷ್ಯ ವೇತನ


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ಅಧಿಕಾರ ವಹಿಸಿಕೊಂಡ ಮೊದಲನೇ ದಿನ ಘೋಷಿಸಿದಂತೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಷ್ಯ ವೇತನ ನೀಡಲು ಮುಂದಾಗಿದೆ. ಪಿಯುಸಿ, ಡಿಪ್ಲಮೋ ಹಾಗೂ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವವರಿಗೆ ಬಾಲಕರಿಗೆ ವಾರ್ಷಿಕ 2500 ರೂ. ಬಾಲಕಿಯರಿಗೆ 3000, ಪದವಿ, ವೃತ್ತಿಪರ ಕೋರ್ಸುಗಳಾದ ಎಂ.ಬಿ.ಬಿ.ಎಸ್., ಇಂಜಿನಿಯರಿAಗ್ ಪದವೀಧರರು ಹಾಗೂ ಪದವಿ ಸಮಾನ ಕೋರ್ಸುಗಳಲ್ಲಿ ಕಲಿಯುತ್ತಿರುವ ಗಂಡು ಮಕ್ಕಳಿಗೆ 5000 ರೂ., ಹೆಣ್ಣು ಮಕ್ಕಳಿಗೆ 5500 ರೂ.ಗಳು, ಕಾನೂನು, ಅರೆ ವೈದ್ಯಕೀಯ, ಬಿ.ಫಾರ್ಮ ನರ್ಸಿಂಗ್ ಇನ್ನಿತರ ವೃತ್ತಿಪರ ಕೋರ್ಸುಗಳ ಗಂಡು ಮಕ್ಕಳಿಗೆ 7500 ರೂ., ಹೆಣ್ಣು ಮಕ್ಕಳಿಗೆ 8000 ಸಾವಿರ ರೂ.ಗಳು, ಸ್ನಾತಕೋತ್ತರ ವೈದ್ಯಕೀಯ, ಇಂಜಿನಿಯರಿAಗ್ ಪದವಿಯಲ್ಲಿ ಕಲಿಯುತ್ತಿರುವ ಗಂಡು ಮಕ್ಕಳಿಗೆ 10 ಸಾವಿರ, ಹೆಣ್ಣು ಮಕ್ಕಳಿಗೆ 11 ಸಾವಿರ ರೂ.ಗಳ ಶಿಷ್ಯ ವೇತನ ಘೋಷಿಸಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ. ಎ.ಆರ್. ಹುಲಿನಾಯ್ಕರ್ ತಿಳಿಸಿದರು.