ನ. 1 ರಿಂದ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಒತ್ತಾಯ 

ನ. 1 ರಿಂದ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಒತ್ತಾಯ 


ನ. 1 ರಿಂದ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಒತ್ತಾಯ 

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿನ ಉದ್ದಿಮೆ, ಮಾಲ್, ಹೋಟಲ್, ಮಳಿಗೆಗಳು ಸೇರಿ ಎಲ್ಲಾ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದೊಳಗಾಗಿ ಶೇ. 80 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಂತೆ ಕೋಲಾರ ನಗರಸಭೆಯ ವ್ಯಾಪ್ತಿಗೆ ಬರುವ ಎಲ್ಲಾ ವಾಣಿಜ್ಯ ಕೇಂದ್ರಗಳ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಆದೇಶ ನೀಡಬೇಕೆಂದು ಕನ್ನಡ ಪಕ್ಷ ಮತ್ತು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಕೋಲಾರ ಜಿಲ್ಲಾ ಘಟಕವು ಪೌರಾಯುಕ್ತರಲ್ಲಿ ಮನವಿ ಮಾಡುತ್ತದೆ.
 ಕೋಲಾರ ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆದಿರುವ ಅಂಗಡಿ, ಮುಗ್ಗಟ್ಟುಗಳು, ಹೋಟಲ್‌ಗಳು, ಮಾಲ್‌ಗಳು ಹಾಗೂ ಪರವಾನಗಿಯನ್ನು ಪಡೆದಿರುವ ವ್ಯಾಪಾರಿಗಳು ತಮ್ಮ ಅಂಗಡಿ ಮುಂದೆ ಅಳವಡಿಸಲಾಗಿರುವ ಅಥವಾ ಅಳವಡಿಸುವ ನಾಮಫಲಕದಲ್ಲಿ ಕನ್ನಡ ಭಾಷೆ ಅಗ್ರಸ್ಥಾನದಲ್ಲಿ ಕನಿಷ್ಟ ಶೇ 80 ರಷ್ಟು ಸ್ಪಷ್ಟವಾಗಿ ದಪ್ಪ ಅಕ್ಷರಗಳಲ್ಲಿ ಬರೆಸಬೇಕು. ಈ ನಿಯಮವನ್ನು ಉಲ್ಲಂಘಿಸಿ ಪರಭಾಷೆಯಲ್ಲಿ ಬರೆಸಿರುವ ಅಂಗಡಿ ಮುಂಗಟ್ಟುಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ನಾ.ಮಂಜುನಾಥ್ ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.