ಯಾವ ಸರಕಾರ ಎಷ್ಟು ಸಾಲ ಮಾಡಿದೆ? ಟಿವಿ ನ್ಯೂಸ್ ಚಾನೆಲ್‍ನವರೇಕೆ ಸತ್ಯ ಹೇಳುವುದಿಲ್ಲ?!-- ಕುಶಾಲ್ ಬಿದರೆ

ಯಾವ ಸರಕಾರ ಎಷ್ಟು ಸಾಲ ಮಾಡಿದೆ? ಟಿವಿ ನ್ಯೂಸ್ ಚಾನೆಲ್‍ನವರೇಕೆ ಸತ್ಯ ಹೇಳುವುದಿಲ್ಲ?!-- ಕುಶಾಲ್ ಬಿದರೆ

ಯಾವ ಸರಕಾರ ಎಷ್ಟು ಸಾಲ ಮಾಡಿದೆ?  ಟಿವಿ ನ್ಯೂಸ್ ಚಾನೆಲ್‍ನವರೇಕೆ ಸತ್ಯ ಹೇಳುವುದಿಲ್ಲ?!--  ಕುಶಾಲ್ ಬಿದರೆ

 

ಯಾವ ಸರಕಾರ ಎಷ್ಟು ಸಾಲ ಮಾಡಿದೆ?

ಟಿವಿ ನ್ಯೂಸ್ ಚಾನೆಲ್‍ನವರೇಕೆ ಸತ್ಯ ಹೇಳುವುದಿಲ್ಲ?!--

ಕುಶಾಲ್ ಬಿದರೆ

ಕನ್ನಡದ ಟಿವಿ ನ್ಯೂಸ್ ಚಾನೆಲ್ ಒಂದರಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅವರ ಆಡಳಿತಾವಧಿಯಲ್ಲಿ ರೂ. 2.42 ಲಕ್ಷ ಕೋಟಿ ಸಾಲ ಮಾಡಿದ್ದರು ಎಂದು ತೋರಿಸಲಾಗುತ್ತಿತ್ತು ಆದರೆ ಈ ನ್ಯೂಸ್ ಚಾನೆಲ್ ಜವಾಬ್ದಾರಿಯುತ ಮಾಧ್ಯಮವಾಗಿ ನಡೆದುಕೊಳ್ಳದೆ ಹಸಿಸುಳ್ಳುಗಳನ್ನು ಬಿತ್ತರಿಸುತ್ತ ಜನರ ದಾರಿತಪ್ಪಿಸುತ್ತಿದೆ. ಹಾಗಾಗಿ ಈ ಬರಹ.

 

ಕೆಳಗೆ ಒಂದು ಚಿತ್ರವನ್ನು ಲಗತ್ತಿಸಿದ್ದೇನೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಸರ್ಕಾರದ ಸಾಲಗಳ ಬಗ್ಗೆ ನೀಡಿರುವ ಮಾಹಿತಿ. ಯಾರ ಅವಧಿಯಲ್ಲಿ, ಯಾವ್ಯಾವ ವರ್ಷದಲ್ಲಿ ಕರ್ನಾಟಕ ಸರ್ಕಾರಗಳು ಎಷ್ಟೆಷ್ಟು ಸಾಲ ಮಾಡಿದ್ದವು ಎಂಬ ಸಂಪೂರ್ಣ ಮಾಹಿತಿ ಇದರಲ್ಲಿದೆ ಬೇಕಿದ್ದರೆ ಯಾರೂ ಬೇಕಾದರೂ ನೋಡಿ ಕೊಳ್ಳಬಹುದು. ( https://t.co/Jra89lhMs4 ಈ ಲಿಂಕ್ ಗೆ ಹೋಗಿ ಪುಟ 108 ರಲ್ಲಿ RBI ನೀಡಿರುವ ಸಂಪೂರ್ಣ ಚಾರ್ಟನ್ನು ಓದಿಕೊಳ್ಳಿ)

 

ಸಿದ್ದರಾಮಯ್ಯ ಅವಧಿಯಲ್ಲಿ ಆದ ಸಾಲ ರೂ. 2.42 ಲಕ್ಷ ಕೋಟಿ ಅಲ್ಲ ಬದಲಿಗೆ ರೂ.1.33ಕೋಟಿ (ರೂ.1,33,284 ಕೋಟಿ) ಆದರೆ ಈ ಚಾನೆಲ್ ನವರು ಈ ಮೂರು ವರ್ಷದ ಅವಧಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಸಾಲ ಮಾಡಿದೆ ಎಂದು ತೋರಿಸಲಿಲ್ಲ ಹಾಗಾಗಿ ನಾನೇ ಅದನ್ನು ಹೇಳುತ್ತಿದ್ದೇನೆ. ನೋಡಿ ಕೇವಲ ಈ ಮೂರು ವರ್ಷದ ಅವಧಿಯಲ್ಲಿ ಬಿಜೆಪಿ ಮಾಡಿರುವ ಸಾಲ ರೂ. 1.75 ಕೋಟಿ (ರೂ. 1,75,504 ಕೋಟಿ).  ಇಷ್ಟು ಸಾಲ ಮಾಡಿ ಇವರು ಯಾವುದಾದರೂ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರಾ ಎಂದು ನೋಡಿದರೆ ಕಾಣುವ ಉತ್ತರ ಶೂನ್ಯ.

 

ಹಾಗಿದ್ದರೆ ಸಿದ್ದರಾಮಯ್ಯ ಅವಧಿಯಲ್ಲಿ ಅಷ್ಟು ಸಾಲ ಮಾಡಿ ಏನು ಮಾಡಿದರು ಅದನ್ನೂ ಕೂಡ ನೋಡೋಣ.

* ಸಿದ್ದರಾಮಯ್ಯ ನವರು ಅಧಿಕಾರಕ್ಕೆ ಬರುವಾಗ 2013ರಲ್ಲಿ ಕರ್ನಾಟಕದ GSDP 6,43,292 ಕೋಟಿ. 2018ರಲ್ಲಿ ಅವರು ಅಧಿಕಾರವನ್ನು ತ್ಯಜಿಸುವ ವೇಳೆಗೆ ಈ ರಾಜ್ಯದ GSDP 14,08,112 ಕೋಟಿಯಾಗಿತ್ತು.

 

* ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುವಾಗ ಈ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ತಲಾದಾಯ 77,309 ರೂಗಳಾಗಿತ್ತು. 2018ರಲ್ಲಿ ಅವರು ಅಧಿಕಾರ ಬಿಡುವ ವೇಳೆಗೆ ಈ ರಾಜ್ಯದ ವ್ಯಕ್ತಿಯೊಬ್ಬನ ತಲಾದಾಯವನ್ನು  1,74,551 ರೂಗಳಿಗೆ ಏರಿಸಿದ್ದರು. ಇದು ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗಿತ್ತು.

 

* ಆರೋಗ್ಯ ಭಾಗ್ಯ ಯೋಜನೆ ಮುಖಾಂತರ 1.4 ಕೋಟಿ ಕುಟುಂಬಗಳ ಆಧಾರಸ್ತಂಭವಾಗಿ ನಿಂತರು.

 

* ಅವರ ಅವಧಿಯಲ್ಲಿ ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವಲಯವಾಗಿ ಬದಲಾಯಿಸಿದರು. ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವಲಯ  ಸ್ಥಾಪನೆಗಾಗಿ ರೂ. 31,000 ಕೋಟಿ ಬಂಡವಾಳವನ್ನು ಸಹ ತೆಗೆದುಕೊಂಡು ಬಂದರು.

 

* ಕರ್ನಾಟಕವನ್ನು ಭಾರತದ ಐಟಿ ಹಬ್ ಎಂದು ಕರೆಯುತ್ತಾರೆ. ಕರ್ನಾಟಕ 3500 ಕ್ಕೂ ಹೆಚ್ಚು ಐಟಿ ಕಂಪನಿಗಳನ್ನು ಹೊಂದಿದೆ.  ಜಾಗತಿಕವಾಗಿ, ಕರ್ನಾಟಕವು ನಾಲ್ಕನೇ ಅತಿದೊಡ್ಡ ಟೆಕ್ ಕ್ಲಸ್ಟರ್‌ನ ಸ್ಥಾನವನ್ನು ಆಕ್ರಮಿಸಿಕೊಂಡಿದೆ.  ರಾಜ್ಯವು 2017 ರಲ್ಲಿ INR 3 ಲಕ್ಷ ಕೋಟಿ ರಫ್ತು ಮೌಲ್ಯವನ್ನು ತಲುಪಿತ್ತು. ಇದು IT ವಲಯದಲ್ಲಿ ಭಾರತದ ಒಟ್ಟು ರಫ್ತು ಮೌಲ್ಯದ 38 % ಆಗಿತ್ತು.ಐಟಿ ರಫ್ತಿನಲ್ಲಿ ಕರ್ನಾಟಕವನ್ನು ನಾಯಕನ ಸ್ಥಾನದಲ್ಲಿ ಕೂರಿಸಿದ್ದರು ಸಿದ್ದರಾಮಯ್ಯ.

 

* ಕರ್ನಾಟಕವನ್ನು ಸ್ಟಾರ್ಟ್ ಅಪ್ ಕಂಪನಿಗಳ ತಾಣವಾಗಿಸಲು ಸಿದ್ದರಾಮಯ್ಯನವರು ಬಹುವಲಯ ಸ್ಟಾರ್ಟ್ ಅಪ್ ನೀತಿಯನ್ನು ತಂದರು. ಇದು ಸ್ಟಾರ್ಟ್ ಅಪ್ ಕಂಪನಿಗಳನ್ನು ತನ್ನೆಡೆಗೆ ಸೆಳೆದಿದ್ದಲ್ಲದೆ 2020ರ ವರ್ಷವನ್ನು ಗುರಿಯಾಗಿಸಿಕೊಂಡು 20,000 ಸ್ಟಾರ್ಟ್ ಅಪ್ ಕಂಪನಿಗಳನ್ನು ಸ್ಥಾಪಿಸಿ 18 ಲಕ್ಷ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಯೋಜನೆ ರೂಪಿಸಿದರು.

 

* ಹೂಡಿಕೆಯ ಕೇಂದ್ರವಾಗಿ ಕರ್ನಾಟಕವನ್ನು ಸತತ ಮೂರೂ ವರ್ಷಗಳ ಕಾಲ ಕೊಂಡೊಯ್ದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.ಹೂಡಿಕೆಯ ಉದ್ದೇಶದಲ್ಲಿ ರಾಜ್ಯವು ದೇಶದಲ್ಲೇ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಜನವರಿ-ಸೆಪ್ಟೆಂಬರ್ 2017 ರ ತಿಂಗಳುಗಳಲ್ಲಿ INR 1.47 ಲಕ್ಷ ಕೋಟಿ ಹೂಡಿಕೆಯ ಉದ್ದೇಶಗಳೊಂದಿಗೆ, ಭಾರತದಲ್ಲಿನ ಒಟ್ಟು ಹೂಡಿಕೆ ಉದ್ದೇಶಗಳಲ್ಲಿ 44% ರಷ್ಟು ರಾಜ್ಯವು ಪಾಲನ್ನು ಹೊಂದಿದತ್ತು. ಪರಿಣಾಮಕಾರಿ ಆಡಳಿತ,ನವೀನ ನೀತಿಗಳು ಮತ್ತು ಅನುಕೂಲಕರ ಪರಿಸರ ವ್ಯವಸ್ಥೆಯು ರಾಜ್ಯವು ಈ ಸ್ಥಾನವನ್ನು ಪಡೆಯಲು ಸಹಾಯ ಮಾಡಿತ್ತು.

 

* 65 ಕ್ಕೂ ಹೆಚ್ಚು ಬಯೋಟೆಕ್ ಸ್ಟಾರ್ಟ್-ಅಪ್‌ಗಳು ಮತ್ತು 228 ಬಯೋಟೆಕ್ ಕಂಪನಿಗಳನ್ನು ಹೊಂದಿರುವ ರಾಜ್ಯವು ಬಯೋಟೆಕ್ ವಲಯದಲ್ಲಿ ದೇಶದ ಆದಾಯದ ಸುಮಾರು 35% ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.ಈ ವಲಯವನ್ನು ಇನ್ನಷ್ಟು ಬಲಪಡಿಸಲು ಮತ್ತು ಭಾರತದಲ್ಲಿ 100 ಬಿಲಿಯನ್ ಡಾಲರ್ ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ರಾಜ್ಯದ ಕೊಡುಗೆಯನ್ನು ಸುಧಾರಿಸಲು, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಕರ್ನಾಟಕ ಬಯೋಟೆಕ್ ನೀತಿ 2017-22 ಅನ್ನು ಮಂಜೂರು ಮಾಡಿತ್ತು.

 

* ಸಿದ್ದರಾಮಯ್ಯನವರ ಆಡಳಿತದಲ್ಲಿ ಉತ್ಪಾದನೆಯ ಉತ್ಕೃಷ್ಟತೆಯ ವಿಷಯದಲ್ಲಿ ಕರ್ನಾಟಕವು ದೇಶದ ಇತರ ರಾಜ್ಯಗಳಿಗಿಂತ ಬಹಳ ಮುಂದಿತ್ತು.ರಾಜ್ಯವು 2.63% ಉತ್ಪಾದನಾ ಪ್ರಕ್ರಿಯೆಯ ಅನುಪಾತವನ್ನು ಹೊಂದಿತ್ತು, ಇದು ಅತ್ಯುತ್ತಮವೂ ಕೂಡ ಹೌದು.  ದೇಶದ ಒಟ್ಟು ಹೂಡಿಕೆಯಲ್ಲಿ ಕರ್ನಾಟಕವು ಉತ್ಪಾದನಾ ವಲಯದಲ್ಲಿ 10% ಅನ್ನು ಪಡೆದುಕೊಂಡಿತ್ತು.ಅಲ್ಲದೆ, ಕರ್ನಾಟಕವು ಉತ್ಪಾದನಾ ವಲಯದಲ್ಲಿ 32% ಹೂಡಿಕೆ ಷೇರುಗಳನ್ನು ಆಕರ್ಷಿಸಿತ್ತು.

 

ಸಿದ್ದರಾಮಯ್ಯನವರ ಆಡಳಿತ ಕಾಲದಲ್ಲಿ ಕರ್ನಾಟಕ ಆರ್ಥಿಕ ಸ್ಥಿತಿ ಗತಿಗಳಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಬಹಳ ಮುಂದಿತ್ತು. ಆದರೆ ಈಗಿನ ಬಿಜೆಪಿ ಆಡಳಿತ ಕಾಲದಲ್ಲಿ ಭ್ರಷ್ಟಾಚಾರವೇ ಮೈದುಂಬಿಕೊಂಡು ಆರ್ಥಿಕ ಅಧಃಪತನದತ್ತ ರಾಜ್ಯ ಸಾಗುತ್ತಿದೆ. ಈಗಲಾದರೂ ಜನ ಎಚ್ಚೆತ್ತುಕೊಳ್ಳಲಿ.