ಕೋಲಾರ ಅಮಾನಿಕರೆಯಲ್ಲಿ ಬೆಳೆದಿರುವ ಬುಡ್ಡೆಗಿಡಗಳ ತೆರವಿಗೆ ಮನವಿ

ಕೋಲಾರ ಅಮಾನಿಕರೆಯಲ್ಲಿ ಬೆಳೆದಿರುವ ಬುಡ್ಡೆಗಿಡಗಳ ತೆರವಿಗೆ ಮನವಿ

ಕೋಲಾರ ಅಮಾನಿಕರೆಯಲ್ಲಿ ಬೆಳೆದಿರುವ ಬುಡ್ಡೆಗಿಡಗಳ ತೆರವಿಗೆ ಮನವಿ

ಕೋಲಾರ : ನಗರದ ಅಮಾನಿಕೆರೆಯಲ್ಲಿ ಮೇಲ್ಭಾಗವನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಾನಿಕಾರಕ ಬುಡ್ಡೆ ಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮತ್ತೆ ಬೆಳೆಯದಂತೆ ರಾಸಾಯನಿಕಗಳನ್ನು ಸಿಂಪಡಿಸುವAತೆ ಸಂಬAಧಪಟ್ಟ ಅಧಿಕಾರಿಗಳಲ್ಲಿ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ರವೀಂದ್ರನಾಥ್ ಅವರು ಮನವಿ ಮಾಡಿದ್ದಾರೆ. 
ಈ ಬಗ್ಗೆ ಮನವಿ ಪತ್ರಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್,  ಸಣ್ಣ ನೀರಾವರಿ ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಮಂತ್ರಿ ಜೆ.ಸಿ.ಮಾಧುಸ್ವಾಮಿ, ತೋಟಗಾರಿಕಾ ಸಚಿವ ಮತ್ತು ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ರವರುಗಳಿಗೆ ಮನವಿ ಪತ್ರವನ್ನು ಇ-ಮೇಲ್‌ಗಳ ಮೂಲಕ ಸಲ್ಲಿಸಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಕೋಲಾರ ನಗರ ಭಾಗದಲ್ಲಿರುವ ಏಕೈಕ ನೀರಾವರಿ ಮೂಲವಾದ ಕೋಲಾರದ ಅಮಾನಿಕೆರೆಯ  ಸುಮಾರು ೬೯೯ ಎಕರೆ ನೀರು ಮುಳಗಡೆ ಪ್ರದೇಶವನ್ನು ಹೊಂದಿರುವAತಹ ದೊಡ್ಡ ಕೆರೆಯಾಗಿದೆ ಸದಾ ಸಮರ್ಪಕ ಮಳೆಗಳು ಆಗದೆ ಬರಕ್ಕೆ ತುತ್ತಾಗುತ್ತಿರುವ ಪ್ರದೇಶವು ಸಹಾ ಆಗಿರುತ್ತದೆ. ೨೦೦೩ರಲ್ಲಿ ಕೆರೆ ತುಂಬಿ ಕೋಡಿ ಹರಿದ ನಂತರ ಕಳೆದ ೧೯ ವರ್ಷಗಳಿಂದ ಸದರಿ ಕೆರೆ ತುಂಬದೆ ಇದ್ದ ಪರಿಣಾಮವಾಗಿ ಸುತ್ತಮುತ್ತಲಿನ ಕೊಳವೆ ಬಾವಿಗಳ ಆಳ ೧೫೦೦ ರಿಂದ ೧೮೦೦ ಅಡಿಗಳ ಆಳಕ್ಕೆ ಕುಸಿದಿರುತ್ತದೆ. ಇದರ ಪರಿಣಾಮವಾಗಿ ಕೃಷಿಯನ್ನೆ ಪ್ರಧಾನವಾಗಿ ತಮ್ಮಜೀವನದ ಉಪಯೋಗಕ್ಕಾಗಿ ನಂಬಿಕೊAಡಿರುವAತಹ ರೈತರ ಬದುಕು ಮೂರು ಬಟ್ಟೆಯಾಗಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಸರ್ಕಾರದ ಹಾಗೂ ಕೆಲವು ಸ್ಥಳೀಯ ಚುನಾಯಿತ ಜನ ಪತ್ರಿನಿದಿಗಳು ಹಾಗೂ ಹೋರಾಟಗಾರರು ಪರಿಶ್ರಮದಿಂದಾಗಿ ಕೊಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸುತ್ತಿರುವುದು. ೧೯ ವರ್ಷಗಳ ನಂತರ ಕೋಲಾರ ಅಮಾನಿಕೆರೆ ತುಂಬಿ ಕೋಡಿ ಹರಿಯುತಿದ್ದು ರೈತರಿಗೆ ಆಶಾಕಿರಣವಾಗಿದೆ ಎಂದಿದ್ದಾರೆ.
ಸದರಿ ಕೆರೆಯು ಸಂಪೂರ್ಣ ಮೇಲ್ಬಾಗವನ್ನು ಉಡ್ಡೆಗಿಡಗಳು ಆವರಿಸಿಕೊಂಡಿದ್ದು, ಕೆರೆಯ ನೀರು ಗೋಚರಿಸದೆ. ಕೇವಲ ಇದೇ ಡಿಗಳು ಕಾಣುತ್ತಿವೆ. ಈ ಗಿಡಕ್ಕೆ  ಸುಮಾರು ಒಂದು ಲೀಟರ್ ನಿರನ್ನು ಕುಡಿಯುತ್ತದೆ ಒಂದು ದಿನದಲ್ಲಿ ಒಂದು ಗಿಡ ಹತ್ತು ಹೊಸ ಗಿಡಗಳ ಉತ್ಪತ್ತಿಗೆ ಕಾರಣವಾಗಿದೆ ಎಂದು ಕೆಲವು ನುರಿತ ತಜ್ಞರ ಅಭಿಪ್ರಾಯವಾಗಿದೆ. 
ಕೆರೆಯ ತುಂಬಾ ಲಕ್ಷಾಂತರ ಗಿಡಗಳು ಬೆಳೆದಿದ್ದು, ಇವುಗಳಿಂದ ಪ್ರತಿದಿನ ಎಷ್ಟು ನೀರು ವ್ಯರ್ಥವಾಗಿ ಹಾಳಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಭಯಂಕರವಾಗುತ್ತದೆ ಇದೇ ಪರಿಸ್ಥತಿ ಕೆಲವು ತಿಂಗಳು ಮುಂದುವರೆದರೆ ಕೆರೆಯಲ್ಲಿ ಈಗ ಸಂಗ್ರಹವಾಗಿರುವAತಹ ಸಂಪೂರ್ಣ ನೀರು ಖಾಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿ ಸಂಭವಿಸಿದ್ದಲ್ಲಿ ಸರ್ಕಾರವು ಕೆ.ಸಿ.ವ್ಯಾಲಿ ಯೋಜನೆ ಮುಖಾಂತರ ಕೋಲಾರದ ಅಮಾನಿಕೆರೆಗೆ ಹರಿಸಿದ ನೀರು ಸದ್ಬಳಕೆಯಾಗದೆ ವ್ಯರ್ಥವಾಗಿ ಕೆ.ಸಿ. ವ್ಯಾಲಿ ನೀರು ಹರಿಸುವ ಯೋಜನೆಯೇ ನಿಸ್ಪಲವಾದಂತೆ ಆಗುತ್ತದೆ ಎಂದರು.
ಕೆರೆಯ ತುಂಬಾ ಆವರಿಸಿಕೊಂಡAತಹ ಎಲ್ಲಾ ಬುಡ್ಡೆ ಗಿಡಗಳನ್ನು ತೆಗೆಸುವ ಮತ್ತು ಸದರಿ ಗಿಡಗಳು ಮತ್ತೆ ಬೆಳೆಯದಂತೆ ತಡೆಯಲು ತಜ್ಞರು ಮತ್ತು ವಿಜ್ಞಾನಿಗಳು ಸೂಚಿಸುವಂತಹ ರಾಸಾಯನಿಕ ಸಿಂಪಡನೆ ಮಾಡುವ ಕಾರ್ಯಕ್ಕೆ ಆದಷ್ಟು ಶೀಘ್ರವಾಗಿ ಚಾಲನೆಯನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.