ಪ್ರಾದೇಶಿಕ ಪಕ್ಷಗಳ ಅವಶ್ಯಕತೆಮತ್ತು ವೈಫಲ್ಯ
regional-parties
ವಿಶ್ಲೇಷಣೆ
ಕೆ.ಪಿ.ಲಕ್ಷ್ಮೀಕಾಂತರಾಜೇಅರಸು,
ಪ್ರಾದೇಶಿಕ ಪಕ್ಷಗಳ ಅವಶ್ಯಕತೆಮತ್ತು ವೈಫಲ್ಯ
ಕರ್ನಾಟಕರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಬಗ್ಗೆ ವಿಚಾರ ಮಾಡುವುದಾದರೆ 60ರ ದಶಕಕಣ್ಮುಂದೆ ಬರುತ್ತದೆ. ಆಗಿನ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸಿ ಹೊರಬಂದ ಪ್ರಬಲ ನಾಯಕರುಗಳೇ ಪ್ರಾದೇಶಿಕ ಪಕ್ಷಗಳ ಉಗಮಕ್ಕೆ ಕಾರಣ ಎನ್ನಬಹುದು.
ನೆಹರು ನಂತರದ ಕಾಂಗ್ರೆಸ್‌ನಲ್ಲಿ ನಾಯಕತ್ವ ದುರ್ಬಲವಾದ ಪರಿಣಾಮಕೇಂದ್ರದಲ್ಲೂಆಯಾ ರಾಜ್ಯಗಳಲ್ಲೂ ಏಕ ವ್ಯಕ್ತಿಯ ನಾಯಕತ್ವದ ಬಗ್ಗೆ ಅಪಸ್ವರಗಳು ಮೂಡಿ ಬಹುವ್ಯಕ್ತಿ ನಾಯಕತ್ವ ಕಂಡು ಬಂದು ಕರ್ನಾಟಕದಲ್ಲಿ ಸಂಸ್ಥಾ ಕಾಂಗ್ರೆಸ್ ಪ್ರಯೋಗ ನಡೆದು ಹೋಗಿತ್ತು. 1972ರ ಚುನಾವಣೆಯ ವೇಳೆಗೆ ವೀರೇಂದ್ರಪಾಟೀಲ್ ಸಂಸ್ಥಾ ಕಾಂಗ್ರೆಸನ್ನುಕಟ್ಟಿದ ಪರಿಣಾಮವಾಗಿ ಅಧಿನಾಯಕಿಯ ಕೆಂಗಣ್ಣಿಗೆ ಗುರಿಯಾಗಿ, ದೇವರಾಜಅರಸ್‌ಅವರಿಗೆ ನಾಯಕತ್ವಒದಗಿಬಂದಿತು. 1972ರಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಅಭೂತಪೂರ್ವ ಸಾಧನೆಗೈದು 1972ರಿಂದ 1977ರವರೆಗೆ ಕರ್ನಾಟಕದಲ್ಲಿಕಾಂಗ್ರೆಸ್ ಸರ್ಕಾರಜನಪರ ಕಾರ್ಯಕ್ರಮಗಳಿಂದ ಗಮನ ಸೆಳೆಯಿತು. ಇದೇಅವಧಿಯಲ್ಲಿರಾಷ್ಟçದಲ್ಲಿ 1975 ರಿಂದ 1977ರವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೂ 1978ರ ಚುನಾವಣೆಯಲ್ಲಿ ಮತ್ತುಅರಸು ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ವಿಶೇಷವೇನೆಂದರೆ1978ರ ಚುನಾವಣೆಯಲ್ಲಿಕಾಂಗ್ರೆಸ್‌ಅಧಿನಾಯಕಿ ಸೋತು ಮೊದಲ ಬಾರಿಗೆಕೇಂದ್ರದಲ್ಲಿ ಕಾಂಗ್ರೇಸ್ಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸೋತು ಸುಣ್ಣವಾಗಿದ್ದಕಾಂಗ್ರೆಸ್‌ಅಧಿನಾಯಕಿ ಇಂದಿರಾಗಾಂಧಿಗೆ ಕರ್ನಾಟಕ ಪುನರ್‌ಜನ್ಮ ನೀಡಿತು. ಆದರೆರಾಜಕೀಯ ಪುನರ್‌ಜನ್ಮ ನೀಡಿದ ಅರಸು ಅವರನ್ನುಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲು ಇಂದಿರಾಗಾಂಧಿ ಬಿಡುವುದಿಲ್ಲ. ಅರಸು ಅವರ ರಾಜಕೀಯ, ಸಾಮಾಜಿಕ ಸುಧಾರಣೆಗಳ ಕಂಡು ಇಂದಿರಾಗಾಂಧಿಯವರಿಗೆ ಹೊಟ್ಟೆ ಕಿಚ್ಚು ತರಿಸುವಂತಾಗುತ್ತದೆ. ಅರಸು ಅವರಿಗೆ ಹೆಚ್ಚುತ್ತಿರುವ ಜನಪ್ರಿಯತೆ ಮುಂದೊಂದು ದಿನ ತನ್ನ ಅಸ್ತಿತ್ವಕ್ಕೆ ಧಕ್ಕೆತರಬಹುದು ಎಂದು ಕಳವಳ ಕಾಡುತ್ತದೆ.
ಇದೇ ವೇಳೆ ಅತ್ಯಂತ ಐಶಾರಾಮಿ ವ್ಯಕ್ತಿಯಾಗಿದ್ದ ಆರ್.ಗುಂಡೂರಾವ್ ಮತ್ತು ಇಂದಿರಾಗಾಂಧಿಯ ಮಗ ಸಂಜಯ್ ಗಾಂಧಿ ಆಪ್ತರಾಗಿದ್ದು, ಇಂದಿರಾ ಮತ್ತು ಸಂಜಯ್ ಅವರುದೇವರಾಜಅರಸು ಅವರ ಬಗೆಗಿನ ತಮ್ಮ ಅಸಮಾಧಾನವನ್ನು ಗುಂಡೂರಾವ್ ಮೂಲಕ ನಿಯಂತ್ರಿಸುವ ಪ್ರಯತ್ನ ಮಾಡಿ ಕೊನೆಗೆ ನಾನಾ ಕಾರಣಗಳನ್ನು ಮುಂದಿಟ್ಟು ಅಧಿಕಾರದಿಂದ ಕೆಳಗಿಳಿಸುತ್ತಾರೆ.
ಈ ಸಂದರ್ಭದಲ್ಲಿಅರಸು ಅಭಿಮಾನಿಗಳು ಮನನೊಂದು ಕಾಗ್ರೆಸ್ಸಿನಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ನಿರ್ಧರಿಸುತ್ತಾರೆ. ಈ ಗುಂಪೇ ಕಾಂಗ್ರೆಸ್ (ಯು) ಅಥವಾ ಅರಸು ಅಧಿಕೃತವಾಗಿರಾಜಕೀಯ ಪಕ್ಷವಾಗಿ ನೋಂದಾವಣೆಯಾಗದಿದ್ದರೂ 1980ರಲ್ಲಿ ಮತ್ತೆಎದುರಾಗುವ ಲೋಕಸಭಾಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು ಪ್ರಬಲ ಪೈಪೋಟಿ ನೀಡುತ್ತದೆ. ಆದರೆ ಆ ವೇಳೆಗಾಗಲೇ ಅರಸು ಅವರ ವೈಯಕ್ತಿಕ ಸಮಸ್ಯೆಗಳು ಹದಗೆಟ್ಟು ಆರೋಗ್ಯದ ಪರಿಣಾಮಅರಸುಆವರ ಶಿಷ್ಯಂದಿರಾದ ಎಸ್. ಬಂಗಾರಪ್ಪ, ಬಿ.ರಾಚಯ್ಯ, ನಜೀರ್ ಸಾಬ್,ಎಂ.ಸಿ.ನಾಣಯ್ಯ, ಮೊದಲಾದವರನ್ನೊಳಗೊಂಡAತೆ ಕಾಂಗ್ರೆಸ್ (ಯು) ಬಳಗ ಕ್ರಾಂತಿರಂಗಪ್ರಾದೇಶಿಕ ಪಕ್ಷವಾಗಿ ಪುನರ್‌ಜನ್ಮತಾಳುತ್ತದೆ.
1983ರ ವೇಳೆಗೆ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದಕ್ರಾಂತಿರಂಗ-ಜನತಾ ಪಕ್ಷಗಳು ಮೊದಲ ಬಾರಿಗೆರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರವೊಂದು ಅಧಿಕಾರಕ್ಕೆ ಬರಲುಕಾರಣವಾಗುತ್ತವೆ. ದುರಂತ ಎಂದರೆತಾವುಕಟ್ಟಿ ಬೆಳೆಸಿದ ಮತ್ತು ಇಂದಿರಾಕಾಂಗ್ರೆಸ್ ವಿರೋಧಿ ರಾಜಕಾರಣ ಯಶಸ್ವಿಯಾಗಿ ಅಧಿಕಾರಕ್ಕೆ ಬಂದ ಸನ್ನಿವೇಶದಲ್ಲಿಅದನ್ನು ನೋಡಲು ಅರಸು ಅವರೇ ಜೀವಂತರಾಗಿರಲಿಲ್ಲ.
ಆನಂತರದ ವಿದ್ಯಮಾನದಲ್ಲಿಕಾಂಗ್ರೆಸ್ ಹಿರಿಯಧುರೀಣಆರ್. ಗುಂಡೂರಾವ್‌ಕಾಂಗ್ರೆಸ್‌ನಿಂದ ಹೊರಬಂದು ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಆದರೆ ಸೈದ್ದಾಂತಿಕ ನೆಲಗಟ್ಟಿಲ್ಲದೆ, ಸ್ವಂತ ಬಲವಿಲ್ಲದೆಅದುಕ್ಷಿಪ್ರವಾಗಿ ನೆಲಕಚ್ಚುತ್ತದೆ. ನಂತರದಲ್ಲಿ ಎಸ್.ಬಂಗಾರಪ್ಪನವರು 1994ರಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ಬಂಡೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ( ಕೆಸಿಪಿ) ಕಟ್ಟಿರಾಜ್ಯಾದ್ಯಂತ ಸಂಚರಿಸಿದರು. ಆದರೆ ಪಕ್ಷ ಬದಲಿಸುವ ಅವರಹವ್ಯಾಸದಿಂದ ಆ ಪಕ್ಷವೂಕೂಡ ಗಟ್ಟಿಗೊಳ್ಳಲಿಲ್ಲ.
1989ರ ವೇಳೆಗೆ ಕಾಂಗ್ರೆಸ್ಸಿಗೆ ಪ್ರಬಲ ವಿರೋಧಿ ಶಕ್ತಿಯಾಗಿದ್ದ ಜನತಾ ಪಕ್ಷ ತನ್ನಆಂತರಿಕ ಕಚ್ಚಾಟದಿಂದ ಒಡೆದುಹೋಳಾಗಿ ಜನತಾದಳವಾಗಿ ರೂಪುಗೊಂಡು ಆಗತಾನೇ ಕಾಂಗ್ರೆಸ್ಸಿನಿಂದ ಹೊರಬಂದ ವಿ.ಪಿ.ಸಿಂಗ್‌ರವರನ್ನು ಜನತಾದಳಕ್ಕೆ ಸೇರಿಸಿಕೊಂಡು ಜನತಾದಳ ಉದಯವಾಗುತ್ತದೆ. ಇದೇ ವೇಳೆ ಮೂಲ ಜನತಾ ಪಕ್ಷದಿಂದ ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಸಿಡಿದು ಬಂದ ಒಂದು ಗುಂಪು ಸಮಾಜವಾದಿ ಜನತಾ ಪಕ್ಷವಾಗಿ ರೂಪುಗೊಳ್ಳುತ್ತದೆ. ಈ ಗುಂಪುಗಳಿಗೆ 1989ರ ಲೋಕಸಭಾಚುನಾವಣೆಯಲ್ಲಿಉತ್ತಮ ಪ್ರತಿಕ್ರಿಯೆದೊರೆತು ಸಂಯುಕ್ತರಂಗದ ಹೆಸರಿನಲ್ಲಿ ತೃತೀಯ ರಾಜಕೀಯ ಶಕ್ತಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ. ಆದರೆಎರಡೇ ವರ್ಷಗಳಲ್ಲಿ ಸಂಯುಕ್ತರಂಗ ಅಧಿಕಾರ ಕಳೆದುಕೊಳ್ಳುತ್ತದೆ. ಮತ್ತೆಆಂತರಿಕ ಭಿನ್ನಮತ ಸ್ಟೋಟಗೊಂಡು ಸಂಯುಕ್ತರಂಗದ ನೇತಾರರಾಷ್ಟ್ರೀಯ ಜನತಾದಳವಾಗಿ ಒರಿಸ್ಸಾದಲ್ಲಿ ಬಿಜು ಜನತಾದಳವಾಗಿ, ಕರ್ನಾಟದಲ್ಲಿ ಜನತಾದಳ ಸಂಯುಕ್ತವಾಗಿ, ಪಂಜಾಬ್‌ನಲ್ಲಿ ಲೋಕದಳವಾಗಿ ಚಿಕ್ಕಚಿಕ್ಕ ಘಟಕಗಳಾಗಿ ಮತ್ತು ಸಮಾನ ಮನಸ್ಕ ಗುಂಪುಗಳಾಗಿ ಉಳಿಯುತ್ತವೆ. ಆದರೆಚಂದ್ರಶೇಖರ್, ಹೆಚ್.ಡಿ.ದೇವೇಗೌಡ ಮತ್ತುದೇವಿಲಾಲ್‌ರವರ ನೇತೃತ್ವದ ಸಮಾಜವಾದಿ ಜನತಾ ಪಕ್ಷ ಜನತಾದಳದ ಗುಂಪುಗಳಿಂದ ದೂರವಾಗಿಯೇ ಉಳಿದಿದ್ದು, 1994ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾಚುನಾವಣೆಯ ವೇಳೆಗೆ ಜನತಾದಳದೊಂದಿಗೆ ವಿಲೀನವಾಗುತ್ತದೆ. ಈ ವೇಳೆಗೆ ರಾಜ್ಯದಲ್ಲಿಕಾಂಗ್ರೆಸ್ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡು ಜನತಾದಳ ದೇವೇಗೌಡರ ನೇತೃತ್ವದಲ್ಲಿ ಸಂಪೂರ್ಣ ಬಹುಮತದೊಂದಿಗೆಅಧಿಕಾರಕ್ಕೆ ಬರುತ್ತದೆ.
ಇನ್ನೊಂದು ಕಡೆ ದೇವೇಗೌಡರೊಂದಿಗೆ ವೈಮನಸ್ಸು ಕಟ್ಟಿಕೊಂಡು ರಾಮಕೃಷ್ಣ ಹೆಗಡೆಯವರು ನವ ನಿರ್ಮಾಣ ವೇದಿಕೆಯನ್ನು ಹುಟ್ಟು ಹಾಕಿದರು. ನಂತರತಮ್ಮ ಹಿಂಬಾಲಕರ ಒತ್ತಾಸೆಯಿಂದ ಲೋಕಶಕ್ತಿ ಎಂಬ ರಾಜಕೀಯ ಪಕ್ಷವಾಗಿ ಬದಲಾಯಿತು. ಆದರೆ ಲೋಕಶಕ್ತಿ ರಾಜ್ಯಜನತಾ ಪರಿವಾರದ ವಿರುದ್ಧಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇಷ್ಟೆಲ್ಲ ವಿಫಲತೆಗಳ ನಂತರವೂ ವಿ.ಆರ್.ಎಲ್. ಸಮೂಹ ಸಂಸ್ಥೆಯ ಮುಖ್ಯಸ್ಥ ಬಿಜೆಪಿ ಸಂಸದರೂಆಗಿದ್ದ ವಿಜಯಸಂಕೇಶ್ವರ್ ಬಿಜೆಪಿಯಿಂದ ಹೊರಬಂದು 2004ರಲ್ಲಿ ಕನ್ನಡ ಪಕ್ಷವನ್ನುಕಟ್ಟಿದರು. ಆದರೆ ವೈಯಕ್ತಿಕ ಹಿತಾಸಕ್ತಿಯಿಂದಾಗಿಅದು ವಿಫಲಗೊಂಡಿತು.
2008 ರಿಂದ 2013ರವರೆಗೆ ಕರ್ನಟಕದಲ್ಲಿ ಮೊದಲ ಬಾರಿಗೆಆಡಳಿತ ನಡೆಸಿದ ಬಿ.ಜೆ.ಪಿ ಹಲವು ಅದ್ವಾನಗಳಿಂದಾಗಿ 2013ರ ಚುನಾವಣೆ ವೇಳೆಗೆ ಮತ್ತೆರಡು ಹೊಸ ಪಕ್ಷಗಳ ಉದಯಕ್ಕೆಕಾರಣವಾಯಿತು. ಬಿಜೆಪಿಯಿಂದ ಹೊರಬಂದ ಶ್ರೀರಾಮುಲು ಬಿಎಸ್ಸಾರ್‌ಕಾಂಗ್ರೆಸ್ ಪಕ್ಷವನ್ನುಕಟ್ಟಿದರು. ಅದೇ ಸಮಯದಲ್ಲಿ ಮತ್ತೊಬ್ಬ ಪ್ರಮುಖಧುರೀಣ ಬಿ.ಎಸ್.ಯಡಿಯೂರಪ್ಪನವರುಕರ್ನಾಟಕಜನತಾ ಪಕ್ಷವನ್ನುಕಟ್ಟಿದರು. ಯಡಿಯೂರಪ್ಪನವರಕೆಜೆಪಿ ಗೆಲ್ಲದೇ ಹೋದರೂ ಬಿಜೆಪಿಯನ್ನು ಸೋಲಿಸಿ ಪಾಠ ಕಲಿಸುವಲ್ಲಿ ಯಶಸ್ವಿಯಾಯಿತು. ಉದ್ದೇಶಈಡೇರಿದಒಂದು ವರ್ಷದೊಳಗೆ ಮೋದಿ ಜಪ ಮಾಡತೊಡಗಿದ ಈ ನಾಯಕರುಕಟ್ಟಿದ ಪಕ್ಷವನ್ನುಅಲ್ಲಿಗೇ ಬಿಟ್ಟು ಮತ್ತೆ ಬಿಜೆಪಿಗೆಮರಳಿದರು.
ಪ್ರಾದೇಶಿಕ ಪಕ್ಷಗಳ ಹುಟ್ಟು ಸಾವಿನ ನಡುವೆ ವಾಟಾಳರ ಕನ್ನಡ ಚಳವಳಿ ಪಕ್ಷ, ರೈತ ಸಂಘದ ಸರ್ವೋದಯ ಪಕ್ಷತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳದೇ ಹೋದರೂತಮ್ಮ ಮೂಲ ಉದ್ದೇಶಕ್ಕೆಚ್ಯುತಿ ಬಾರದೆ ಉಳಿಸಿಕೊಂಡಿದೆ. ಈ ಮಧ್ಯೆಅಶೋಕ್‌ಖೇಣಿಕನ್ನಡ ಮಕ್ಕಳ ಪಕ್ಷವನ್ನು ಹುಟ್ಟು ಹಾಕಿ ಪಕ್ಷದಿಂದ ಬೀದರ್‌ನಿಂದ ವಿಧಾನಸಭೆಗೆಆಯ್ಕೆಯಾಗಿ ಪ್ರಾದೇಶಿಕ ಪಕ್ಷಗಳ ದಾಖಲೆಪಟ್ಟಿಗೆ ಹೊಸ ಸೇರ್ಪಡೆಯಾಯಿತಾದರೂ ಈ ಸಲ ಅವರುಕಾಂಗ್ರೆಸ್‌ಅಭ್ಯರ್ಥಿ!.
ರಾಜ್ಯದಲ್ಲಿಅಹಿಂದ ಚಳವಳಿಯನ್ನು ಹುಟ್ಟುಹಾಕಿದ ಸಿದ್ದರಾಮಯ್ಯ ಅವರೂಕೂಡರಾಜ್ಯದಲ್ಲಿ ಹೊಸದೊಂದು ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಪ್ರಯತ್ನಿಸಿದರು. ರಾಷ್ಟಿçÃಯ ಮುಖಂಡರನ್ನು ಭೇಟಿ ಮಾಡಿ ಹಲವು ಸುತ್ತಿನ ಮಾತುಕತೆ ನಡೆಸಿದರು. ಪ್ರಾದೇಶಿಕ ಪಕ್ಷದ ಸ್ಥಾಪನೆಗೆ ಬೇಕಾಗುವ ಸಂಪನ್ಮೂಲದಕೊರತೆಯಿಂದ ಆ ಆಲೋಚನೆಯನ್ನುಅಲ್ಲಿಗೆಕೈಬಿಟ್ಟರು. ಈ ಎಲ್ಲಾ ಬೆಳವಣಿಗೆಗಳು ಕರ್ನಟಕದಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟಿçÃಯ ಪಕ್ಷಗಳಿಗೆ ಸವಾಲೊಡ್ಡುವ ಮಟ್ಟಕ್ಕೆ ಬೆಳೆಸುವ ಸಂಯಮ ಆತ್ಮವಿಶ್ವಾಸವಿಲ್ಲದೆ ಇಂತಹ ಪಕ್ಷಗಳ ನೇತಾರರು ಪಕ್ಷಕಟ್ಟಿದಷ್ಟೇ ಆತುರವಾಗಿ ಆ ಪಕ್ಷಗಳನ್ನು ವಿಲೀನಗೊಳಿಸಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಹತ್ವವನ್ನು ತಮ್ಮ ಕೈಯಾರೆ ತಾವೇ ಹಾಳು ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ವೈಫಲ್ಯಕ್ಕೆ ಕಾರಣಗಳು ಪಕ್ಕದಆಂಧ್ರ, ತಮಿಳುನಾಡು, ಕೇರಳ ಮಹಾರಾಷ್ಟ್ರ ರಾಜ್ಯಗಳಲ್ಲಿ ಇಂದಿಗೂ ಪ್ರಾದೇಶೀಕ ಪಕ್ಷಗಳೇ ಮೇಲುಗೈ ಸಾಧಿಸಿವೆ. ಇತ್ತೀಚಿನ ವರ್ಷಗಳಲ್ಲಿ ನೆರೆರಾಜ್ಯದ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ರಚನೆಯಲ್ಲಿ ನಿಣಾಯಕ ಪಾಥ್ರವನ್ನು ವಹಿಸುತ್ತಿರುವುದು ಮುಖ್ ಯಕಾರಣ. ಅಲ್ಲನ ಜನನಾಯಕರ ಬದ್ಧತೆ ಅದು ಕರ್ನಾಟಕ ರಾಜ್ಯದಲ್ಲಿ ಕಂಡು ಬರದೆ ಇರುವುದರಿಂದ ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ಸರಿಯಾಗಿ ಆಗಲಿಲ್ಲ. ಅಲ್ಲದೆಯಾವುದೇದೂರದೃಷ್ಟಿ ಇಲ್ಲದೆ ವೈಯಕ್ತಿಕ ವಿಚಾರಕ್ಕಾಗಿ ಪಕ್ಷವನ್ನುಕಟ್ಟಿದ್ದರ ಪರಿಣಾಮವಾಗಿ ಅವು ಅಷ್ಟೇ ಬೇಗ ವಿಫಲವಾದವು.
ನೆರೆರಾಜ್ಯದಲ್ಲಿ ಸಿನಿಮಾತಾರೆಯರ ಪ್ರಭಾವ ಹೆಚ್ಚಿದ್ದು ತಾರೆಗಳ ಸಿನಿಮಾ ನೋಡಿಯೂಕೂಡಅಲ್ಲಿನ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಕಾರಣವಾಗಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾತಾರೆಯರ ರಾಜಕೀಯ ವಿಫಲವಾಗಿದ್ದು ಇಲ್ಲಿನ ಮತದಾರರು ಪ್ರಜ್ಞಾವಂತರಾಗಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯಇರುವುದರಿಂದ ಪ್ರಾದೇಶೀಕ ಪಕ್ಷಗಳು ಬಲವಾಗುತ್ತಿಲ್ಲ. ಪ್ರಮುಖವಾಗಿಕುಟುಂಬ, ಸ್ವಾರ್ಥ, ಸ್ವಜನಪಕ್ಷಪಾತಗಳು ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯನ್ನು ನಿಯಂತ್ರಿಸುವುದರಿಂದ ಇಲ್ಲಿ ರಾಷ್ಟ್ರೀಯ ಪಕ್ಷಗಳು ಮೇಲುಗೈ ಸಾಧಿಸಿವೆ. ಹಾಗಾಗಿ ಯಾರೇ-ಯಾವುದೇ ಪಕ್ಷವನ್ನು ಸ್ಥಾಪಿಸಿದರೂ ಕರ್ನಾಟಕದಲ್ಲಿ ಅವುಗಳ ಭವಿಷ್ಯ ಹಿಂದೆಯೂ ಇರಲಿಲ್ಲ. ಮುಂದೆಯೂ ಇರುವುದಿಲ್ಲ ಎಂಬಂತಹ ಪರಿಸ್ಥಿತಿ ಇದೆ.