ʼಸಾಹಿತ್ಯ ಯುವಜನತೆಗೆ ತಲುಪದರೆ ಶಾಲು ಹಿಜಾಬು ಹಾಕಲ್ಲʼ ‘ಸಿಂಗಾರಿ’ ಲೋಕಾರ್ಪಣೆ ಸಮಾರಂಭದಲ್ಲಿ ಎಲ್.ಎನ್. ಮುಕುಂದರಾಜ್

ʼಸಾಹಿತ್ಯ ಯುವಜನತೆಗೆ ತಲುಪದರೆ ಶಾಲು ಹಿಜಾಬು ಹಾಕಲ್ಲʼ ‘ಸಿಂಗಾರಿ’ ಲೋಕಾರ್ಪಣೆ ಸಮಾರಂಭದಲ್ಲಿ ಎಲ್.ಎನ್. ಮುಕುಂದರಾಜ್,ln-mukundaraj-singali-book-release

ʼಸಾಹಿತ್ಯ ಯುವಜನತೆಗೆ ತಲುಪದರೆ ಶಾಲು ಹಿಜಾಬು ಹಾಕಲ್ಲʼ ‘ಸಿಂಗಾರಿ’ ಲೋಕಾರ್ಪಣೆ ಸಮಾರಂಭದಲ್ಲಿ ಎಲ್.ಎನ್. ಮುಕುಂದರಾಜ್ʼಸಾಹಿತ್ಯ ಯುವಜನತೆಗೆ ತಲುಪದರೆ ಶಾಲು ಹಿಜಾಬು ಹಾಕಲ್ಲʼ
‘ಸಿಂಗಾರಿ’ ಲೋಕಾರ್ಪಣೆ ಸಮಾರಂಭದಲ್ಲಿ ಎಲ್.ಎನ್. ಮುಕುಂದರಾಜ್


ತಿಪಟೂರು: ಇಂದಿನ ಸಾಹಿತ್ಯ ಕೃತಿಗಳು ಏನಾದರೂ ಸರಿಯಾದ ಕ್ರಮದಲ್ಲಿ ಯುವಜನತೆಯ ಕೈಗೆ ತಲುಪಿದರೆ ಯಾವ ಕೇಸರಿಶಾಲು, ಹಿಜಾಬು ಹಾಕಿಕೊಳ್ಳುವುದಿಲ್ಲ. ದುರಂತವೆAದರೆ ಯಾರಿಗೂ ಸಹ ಸಾಹಿತ್ಯ ಕೃತಿಗಳು ತಲುಪುವಲ್ಲಿ ವಿಫಲವಾಗಿದ್ದು ಪ್ರಸ್ತುತ ಜಿಜ್ಞಾಸೆಗೆ ಕಾರಣವಾಗಿದೆ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಎಲ್.ಎನ್. ಮುಕುಂದರಾಜು ತಿಳಿಸಿದರು.
ನಗರದ ಕಲ್ಪತರು ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ್ಟೂಡೆಂಟ್ ಬುಕ್ ಕಂಪನಿ, ತುಮಕೂರು ಹಾಗೂ ಕಲ್ಪತರು ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಡಾ. ಸಿದ್ದಗಂಗಯ್ಯ ಹೊಲತಾಳುರ ‘ಸಿಂಗಾರಿ’ ಎಂಬ ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಅತ್ಯಂತ ಕ್ರಿಯಾಶೀಲವಾಗಿದ್ದ ಕಾಲದೊಳಗಡೆ ಇದ್ದ ತರುಣ ಜನಾಂಗದ ಮನಸ್ಥಿತಿಗೂ, ಈಗಿನ ಕಾಲಘಟ್ಟದಲ್ಲಿ ಕ್ರಿಯಾಶೀಲತೆಯನ್ನು ಕಳೆದುಕೊಂಡಿರುವ ತರುಣರ ಮನಸ್ಥಿತಿ, ನಡೆದುಕೊಳ್ಳುವ ರೀತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. 80ರ ದಶಕದಲ್ಲಿ ತೇಜಸ್ವಿ, ಲಂಕೇಶರು, ಕಾರ್ನಾಡರು, ಕಂಬಾರರು ಬರೆಯುತ್ತಿದ್ದ ಸಾಹಿತ್ಯಕೃತಿಗಳನ್ನು ಓದುತ್ತಿದ್ದ ವಿದ್ಯಾರ್ಥಿ ತರುಣರು ಬದಲಾಗುತ್ತಿದ್ದರು. ಮಾನವೀಯತೆ ಮೌಲ್ಯಗಳನ್ನೊಳಗೊಂಡ ಬದುಕಿನ ಕ್ರಮಗಳನ್ನು ಬದಲಿಸಿಕೊಳ್ಳುತ್ತಿದ್ದರು. ಕನ್ನಡ ಸಾಹಿತ್ಯ ಕೃತಿಗಳು ತರುಣ ಮೇಲೆ ಪ್ರಭಾವ ಬೀರಿ ಸಮಾಜದಲ್ಲಿ ಸ್ವಸ್ಥö್ಯ, ಸಾಮರಸ್ಯ, ಸಮಾನತೆಯನ್ನು ಎತ್ತಿ ಹಿಡಿಯುವಂತಹ ಕಾರ್ಯವನ್ನು ಮಾಡುತ್ತಿದ್ದವು. 
ಪ್ರಸ್ತುತ ದೇಶದಲ್ಲಿ ಲೇಖಕರು, ಬುದ್ಧಿಜೀವಿಗಳು, ಸೃಜನಶೀಲರನ್ನು ಅವಹೇಳನ ಮಾಡುತ್ತಿದ್ದರೆ ಕೇವಲ ಪ್ರಶಸ್ತಿಗಾಗಿ ಕೃತಿ, ಕಾದಂಬರಿ ಬರೆಯುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೆ ಸಾವಿರ ವರ್ಷ ಪಂಪ, ಕುಮಾರವ್ಯಾಸ ಹೇಳಿದಂತಹ ವಿಚಾರಗಳನ್ನೇ ಅವರು ಹೇಳಿದಂತಹ ಜಾತ್ಯತೀತ ಮೌಲ್ಯಗಳನ್ನೇ ಮತ್ತೆ ಮತ್ತೆ ಬೇರೆ ಬೇರೆ ರೀತಿಯಾಗಿ ನಿರೂಪಣೆ ಮಾಡಲಾಗುತ್ತಿದೆ. ಪ್ರಪಂಚದ ಒಳಗೆ ಇರುವಂತಹ ಮನುಷ್ಯತ್ವದ ಮೌಲ್ಯವನ್ನು ತಿಳಿಸಲಾಗುತ್ತಿದೆ. ಅಂದಿನ ಪಂಪ, ಕುಮಾರವ್ಯಾಸ, ಅಡಿಗರನ್ನು ಇಷ್ಟಪಟ್ಟವರು ಇಂದಿನ ಕಾಲದ ಲೇಖಕರು, ಬುದ್ಧಿಜೀವಿಗಳನ್ನು ಏಕೆ ಇಷ್ಟಪಡುತ್ತಿಲ್ಲ. ಏಕೆಂದರೆ ಇಡೀ ಕನ್ನಡ ಸಾಹಿತ್ಯದಲ್ಲಿ ಇರುವ ಎಲ್ಲಾ ಲೇಖಕರು ಜಾತಿ, ಮತ, ಧರ್ಮಗಳಲ್ಲಿ ಮನುಷ್ಯದ ಧರ್ಮ ದೊಡ್ಡದು ಎಂದು ಹೇಳಿದ್ದಾರೆ. ತಾರತಮ್ಯಗಳಾದ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ,  ಸ್ಪೃಶ್ಯ-ಅಸ್ಪಶ್ಯ, ಮೇಲು-ಕೀಳು, ಬಡವ-ಶ್ರೀಮಂತ ಸಮಾಜದ ರೋಗಗಳಾದ ದೇವರು, ಜಾತಿ, ಧರ್ಮ, ಮತ, ಕುಲ ಇವೆಲ್ಲವನ್ನು ತೊಡೆದುಹಾಕಬೇಕಿದೆ. ಆದರೆ ಇಂದಿನ ಸಮಾಜದಲ್ಲಿ ಇಡೀ ಸಮಾಜ ಜನರನ್ನೆಲ್ಲಾ ಕೋಮುವಾದದ ಕಡೆಗೆ ಸೆಳೆಯುವ ರಾಜಕಾರಣಿಗಳ ಕಾಲಘಟ್ಟದ ಒಳಗೆ ದೊಡ್ಡ ಪ್ರತಿಭಾವಂತರು, ಲೇಖಕರನ್ನು ತಡೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಏಕೆಂದರೆ ಬರೆಯವಂತಹ ಸಾಹಿತ್ಯದಿಂದ ಜನರು ಜಾಗೃತಗೊಂಡರೆ ರಾಜಕಾರಣಿಗಳ ಮಾತನ್ನು ಯಾರೂ ಕೇಳದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಲೇಖಕರು, ಚಿಂತಕರು, ಬುದ್ಧಿಜೀವಿಗಳ ಬರವಣಿಗೆಯನ್ನು ತಡೆದು ರಾಜಕಾರಣಿಗಳು ಅಪ್ರಸ್ತುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಬೆAಗಳೂರು ವಿವಿಯ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಮಾತನಾಡಿ, ವಿದ್ಯೆಗಾಗಿ ಯುವಕನೊಬ್ಬ ಹಲವು ಹೋರಾಟ ಮಾಡುವಂತಹ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ಸಮರ್ಪವಾಗಿ ವಿದ್ಯೆ ದೊರಕದಂತೆ ಮಾಡುವ ಅಪ್ರಸ್ತುತೆ, ಷಡ್ಯಂತ್ರವನ್ನು ಕೆಲ ಕಾಣದ ಕೈಗಳು ಇಂದಿನ ಸಮಾಜದಲ್ಲಿ ಮಾಡುತ್ತಿವೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಸರ್ಟಿಫಿಕೆಟ್‌ಗಾಗಿ ಮಾತ್ರವೇ ಇದ್ದು ಸಾಹಿತ್ಯಿಕ ವಿಚಾರಗಳನ್ನು ಅರಿಯಲು ವಿದ್ಯಾರ್ಥಿಗಳೇ ಮುಂದಾಗಬೇಕಿದೆ ಎಂದರು.
ಸಮಾರAಭದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ನೆರವೇರಿಸಿದರು. ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜಪ್ಪ ಎಂ. ವಹಿಸಿದ್ದರು. ಈ ಸಂದರ್ಭದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಸಂಗಮೇಶ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಂ.ಎಚ್-ನಾಗರಾಜು,  ಸಂಶೋಧಕ, ಇತಿಹಾಸ ತಜ್ಞ ಡಾ. ಡಿ.ಎಂ. ಯೋಗೀಶ್ವರಪ್ಪ, ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಡಾ. ವಿ. ಮಾಲತಿ, ಪ್ರಾಂಶುಪಾಲೆ ಗೀತಾ ಲಕ್ಷಿö್ಮÃ, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಾಗರಾಜಶೆಟ್ಟಿ, ಲೇಖಕ ಮಾಕಳ್ಳಿ ಗಂಗಾಧರ್, ಸಿಂಗಾರಿ ಕಾದಂಬರಿ ಲೇಖಕ ಡಾ. ಸಿದ್ಧಗಂಗಯ್ಯ ಹೊಲತಾಳ, ನಿವೃತ್ತ ಶಿಕ್ಷಕ ಕೆ.ಆರ್. ಬಸವರಾಜು ಇದ್ದರು.