ಸಿಎಂ ಕಾರ್ಯಕ್ರಮಕ್ಕೆ ವಾರ್ಡಿನ ಸದಸ್ಯರಿಗೇ ಆಹ್ವಾನವಿಲ್ಲ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಆಕ್ಷೇಪ

ಸಿಎಂ ಕಾರ್ಯಕ್ರಮಕ್ಕೆ ವಾರ್ಡಿನ ಸದಸ್ಯರಿಗೇ ಆಹ್ವಾನವಿಲ್ಲ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಆಕ್ಷೇಪ

ಸಿಎಂ ಕಾರ್ಯಕ್ರಮಕ್ಕೆ ವಾರ್ಡಿನ ಸದಸ್ಯರಿಗೇ ಆಹ್ವಾನವಿಲ್ಲ
ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಆಕ್ಷೇಪ


ತುಮಕೂರು : ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಆಗಮಿಸಿದ್ದರು.
ಮುಖ್ಯಮಂತ್ರಿಗಳು ಆಗಮನದಿಂದ ರಸ್ತೆಗೆ ಡಾಂಬರೀಕರಣ ಕೆಲಸಕ್ಕೆ ಮುಂದಾಗಿದ್ದರೂ ಈ ವಾರ್ಡಿನ ಕಾರ್ಪೋರೇಟರ್ ಆದ ತಮಗೆ ಯಾವುದೇ ರೀತಿಯಾದ ಮಾಹಿತಿ ನೀಡಿಲ್ಲ ಎಂದು ಗಿರಿಜಾ ಧನಿಯಾ ಕುಮಾರ್ ಆಕ್ಷೇಪಿಸಿದ್ದಾರೆ.  
ತಮ್ಮ ವಾರ್ಡ್ನಲ್ಲಿ ನಡೆದಿರುವ ಯಾವುದೇ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಪತ್ರ ನೀಡಿಲ್ಲ. ಕಾರ್ಯಕ್ರಮದ ಮಾಹಿತಿಯನ್ನೂ ನೀಡಿಲ್ಲ. ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಯಾಕೆ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಗಿರಿಜಾ ಧನ್ಯಕುಮಾರ್ ಪ್ರಶ್ನಿಸಿದ್ದಾರೆ. ಇನ್ನು ಮುಂದಾದರೂ ತಮ್ಮ ಸ್ಥಾನವನ್ನು ಗೌರವಿಸಬೇಕು ಎಂದು ವಿನಯಪೂರ್ವಕವಾಗಿ ಆಗ್ರಹಿಸಿದ್ದಾರೆ. 
ಸಿ.ಎಂ. ಆಗಮನದ ಹಿನ್ನೆಲೆಯಲ್ಲಿ ತಮ್ಮ ವಾರ್ಡಿನ ಕೆಲ ರಸ್ತೆಗಳು ಡಾಂಬರೀಕರಣವಾಗಿದೆ. ಇದು ಕಳಪೆಯಾಗಿದ್ದು, ಮುಂಚೆ ಹಾಕಲಾಗಿದ್ದ ಡಾಂಬರು ತೆಗೆಯದೇ ಅದರ ಮೇಲೆಯೇ ಡಾಂಬರು ಹಾಕಲಾಗಿದೆ. ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ವಾರ್ಡಿನ ಜನರು ನಮ್ಮನ್ನು ದೂರುತ್ತಾರೆ. ಆದರೆ ಇದು ತಮ್ಮ ಗಮನಕ್ಕೆ ಬರದೆ ನಡೆದಿರುವ ಕಾಮಗಾರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.