ಕುಪ್ಪೂರು: ಪ್ರಸಾದ ನಿಲಯ ನಿರ್ಮಾಣಕ್ಕೆ ಅಡಿಗಲ್ಲು

ಕುಪ್ಪೂರು: ಪ್ರಸಾದ ನಿಲಯ ನಿರ್ಮಾಣಕ್ಕೆ ಅಡಿಗಲ್ಲು

ಕುಪ್ಪೂರು: ಪ್ರಸಾದ ನಿಲಯ ನಿರ್ಮಾಣಕ್ಕೆ ಅಡಿಗಲ್ಲು


ಕುಪ್ಪೂರು: ಪ್ರಸಾದ ನಿಲಯ ನಿರ್ಮಾಣಕ್ಕೆ ಅಡಿಗಲ್ಲು


ಚಿಕ್ಕನಾಯಕನಹಳ್ಳಿ: ಕುಪ್ಪೂರು ಗದ್ದಿಗೆ ಮಠದ ಆವರಣದಲ್ಲಿ ಬಹುಕೋಟಿ ವೆಚ್ಚದ ಪ್ರಸಾದ ನಿಲಯದ ನಿರ್ಮಾಣಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಡಿಗಲ್ಲು ಹಾಕಿದರು.


ನಂತರ ಮಾತನಾಡಿದ ಅವರು ದಾಸೋಹದ ಮಹಾಮನೆ ನಿರ್ಮಾಣಕ್ಕೆ ಮೂರು ಕೋಟಿ ವೆಚ್ಚವಾಗಲಿದ್ದು ಸರಕಾರದ ವತಿಯಿಂದ 1 ಕೋಟಿ ಅನುದಾನ ನೀಡಲಾಗಿದೆ. ಯಡಿಯೂರಪ್ಪನವರು ಮುಖ್ಯ ಮಂತ್ರಿಗಳು ಆಗಿದ್ದ ಸಮಯದಲ್ಲಿ ಕುಪ್ಪೂರು ಜಾತ್ರೆಗೆ ಆಗಮಿಸಿದ್ದಾಗ ದಾಸೋಹದ ಮಹಾಮನೆ ನಿರ್ಮಾಣಕ್ಕೆ 3 ಕೋಟಿ ಅನುದಾನ ನೀಡುವಂತೆ ಯತೀಶ್ವರರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ನಮ್ಮ ನಾಯಕರು ಸಕರಾತ್ಮಕವಾಗಿ  ಸ್ಪಂದಿಸಿದ್ದರು. ಆದರೆ ನೆರೆ ಹಾವಳಿ ಮತ್ತು ಕೋವಿಡ್‌ನಿಂದ ಸರಕಾರ ಅಷ್ಟು ಹಣ ನೀಡಲು ಸಾಧ್ಯವಾಗಿಲ್ಲ ಎಂದರು.


ಪ್ರಸ್ತುತ ಯತೀಶ್ವರರು ದೈವಾಧೀನರಾಗಿದ್ದಾರೆ ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ಹೇಳಿ ಮೌನವಾದರು. ನಂತರ ಸಾವರಿಸಿಕೊಂಡು ಮೊದಲು ಪ್ರಸಾದ ನಿಲಯದ ಕೆಲಸ ಆರಂಭಗೊಳ್ಳಲಿ ತದನಂತರ ಸರಕಾರದಿಂದ ಅನುದಾನ ಪಡೆಯಲು ಪ್ರಯತ್ನಿಸುವ ಭರವಸೆ ನೀಡಿದರು.


ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠದ ಅಭಿವೃದ್ಧಿಗೆ ಯತೀಶ್ವರರ ಕೊಡುಗೆ ಅಪಾರವಾಗಿದೆ. ಪ್ರಸಾದ ನಿಲಯದ ಮಹಾಮನೆಗೆ 3 ಕೋಟಿ ಹಣದ ಅಗತ್ಯವಿದ್ದು ಒಂದು ವೇಳೆ ಶ್ರೀಗಳು ಬದುಕಿದ್ದರೆ ಆ ಹಣವನ್ನು ಸುಲಭವಾಗಿ ತರುತ್ತಿದ್ದರು ಎಂದು ಯತೀಶ್ವರರನ್ನು ನೆನಪಿಸಿಕೊಂಡರು. ಭಕ್ತರ ಸಹಕಾರದಿಂದ ಈ ಕಾರ್ಯವನ್ನು ಮುಗಿಸಬೇಕಿದ್ದು ಸರಕಾರವು ಅಗತ್ಯ ನೆರವನ್ನು ನೀಡಬೇಕೆಂದು ಮನವಿ ಮಾಡಿಕೊಂಡರು.


ಈ ವೇಳೆ ತಹಸೀಲ್ದಾರ್ ತೇಜಸ್ವಿನಿ, ಮಠದ ಆಢಳಿತಾಧಿಕಾರಿ ವಾಗೀಶ್, ಡಾ. ಅಭಿಜ್ಞಾ ಮಾಧುಸ್ವಾಮಿ, ಹಾಗು ಭಕ್ತಾದಿಗಳು ಉಪಸ್ಥಿತರಿದ್ದರು.